ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಬಾ ಮಹೇಶ್ವರ ಮನಮೋಹಿನಿ ಪ ರಮಾವಿನುತ ಹರಿಸಹೋದರೀ ನಮಾಮಿ ಶಂಕರೀ ಲೋಕೇಶ್ವರೀ 1 ಮಾರವೈರಿರಾಣಿ ನೀರಜಾತಪಾಣಿ ಶಾರದೇ ಶರ್ವಾಣಿ ಗೌರಿ ಕಲ್ಯಾಣಿ ಸಾರ ಮಧುರವಾಣಿ ನಾರಿ ಭುಜಗವೇಣಿ ಘೋರದೈತ್ಯ ಸಂಹಾರಿಣಿ ದೇವಿ ರುದ್ರಾಣಿ 2 ಈಶ ಮನೋಹರೆ ಪಾಶಾಂಕುಶಧರೇ ಶ್ರೀಶಿತಿಕಂಠ ವಿಲಾಸ ವಿಹಾರೆ ಕ್ಲೇಶನಾಶಕರೇ ಭಾಸುರ ಮುಕುರೇ ಶ್ರೀಶ ಮಾಂಗಿರಿವಾಸ ತೋಷಣಚತುರೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತೋರುವ ಜಗದಯನೆ ಪ ಕ್ಷೀರಶರಧಿ ಸುಕುಮಾರಿಣಿ ಹರಿಸಹ ಚಾರಿಣಿ ಭುವನ ವಿದಾರಿಣಿ ರುಕ್ಮಿಣಿ ಅ.ಪ ಮಂದಹಾಸ ವಿಜಿತೇಂದುಕಿರಣೆ ಗಜ ಮಂದಗಮನೆ ಸಂಕ್ರಂದನ ವಂದಿತೆ 1 ಮಾರಜನನಿ ಕಂಸಾರಿಯ ರಾಣಿ 2 ಪಾಲಿಸು ಕಲ್ಯಾಣಿ ಲೀಲೆಯಿಂದ ವನಮಾಲಿಯುರದಿ ನಿ ತ್ಯಾಲಯಗೈದಿಹ ಬಾಲೆ ವರದನುತೆ 3
--------------
ವೆಂಕಟವರದಾರ್ಯರು
ಮರೆಯದಿರು ಮಹಾಮಾಯೆ ಮಾರುತನ ತಾಯೆ ಕರುಣಿಕರಕಮಲವನು ಶಿರದೊಳಿರಿಸುತ ಕಾಯೆ ಪ. ಪುಷ್ಟಿಕರಿ ನೀ ಪೂರ್ಣ ದೃಷ್ಟಿಯಿಡಲೀಗಖಿಳ ಕಷ್ಟ ಪರಿಹಾರಗೈವುತಿಷ್ಟಾಪೂರ್ತಿಗಳು ಸ್ಪಷ್ಟವಾಗುವವು ಸಕಲೇಷ್ಟದಾಯಕ ನಮ್ಮ ವಿಠ್ಠಲನ ಸೇವೆಗುತ್ಕøಷ್ಟ ಸನ್ನಹವಹದು 1 ಲೋಕನಾಯಕಿಯೆ ಕರುಣಾಕಟಾಕ್ಷವನಿರಿಸು ಭೀಕರಿಸುತಿಹ ಮನದ ವ್ಯಾಕುಲವ ಹರಿಸು ಪಾಕ ಶಾಸನ ಪೂಜೈ ಪದಕಂಜ ಭಕ್ತಜನ ಶೋಕಸಾಗರ ಶೋಷಣೈಕ ನಿಧಿ ಹರಿಸಹಿತ 2 ಹಿಂದೆ ಬಹು ಥರದಿ ನಾನೊಂದ ಪರಿಯನು ಮನಕೆ ತಂದು ದಯದೋರಿ ನೀ ಬಂದಿರುವಿ ಮನೆಗೆ ಮುಂದೆನ್ನ ಬಿಡದೆ ಗೋವಿಂದ ವೆಂಕಟಪತಿಯ ಹೊಂದಿರುವನಲಿ ಮಮತೆಯಿಂದಿಲ್ಲಿ ನೆಲೆಯಾಗು 3
--------------
ತುಪಾಕಿ ವೆಂಕಟರಮಣಾಚಾರ್ಯ