ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾಢದಿಂ ಹರಿಯೇ ಪ ಹರಿಸದನಕ್ಕೆ ಹೋಗದ ತಪ್ಪು ಅಗ್ರೋದಕ ತಾರದೇ ಬಿಟ್ಟ ತಪ್ಪು ಸದಮಲಸುಜ್ಞಾನದಿ ಹರಿ ಕೀರ್ತನೆ ಕೇಳದೆ ಬಿಟ್ಟೆನ್ನ ತಪ್ಪು 1 ಸ್ನಾನ ಜಪವನು ಬಿಟ್ಟು ಕುಪಿತನಾಗಿ ಕಪಿಯಂತೆ ತಿರುಗಿದ ತಪ್ಪು ಅಪರಿಮಿತ ದ್ರವ್ಯ ಅಪಹರಿಸಿ ಕೆಟ್ಟ ಅಪಕೀರ್ತಿ ಹೊತ್ತೆನ್ನ ತಪ್ಪು ಅನುದಿನ ಸ್ನಾನ ಸಂಧ್ಯಾದಿಗಳನು ಬಿಟ್ಟ ತಪ್ಪು 2 ಮನಿ ಮನಿ ತಿರುಗಿದ ತಪ್ಪು ತನು ಸುಖಕಾಗಿ ವನಿತೇರ ರಮಿಸಿನಾ ಘನ ಪಾಪ ಮಾಡಿದ ತಪ್ಪು ಅನುದಿನದಲಿ ಹನುಮೇಶ ವಿಠಲನ ನೆನೆಯದೆ ಬಿಟ್ಟ ತಪ್ಪು 3
--------------
ಹನುಮೇಶವಿಠಲ
ನದೀದೇವತೆಗಳು ಕಂಗಳಿಂದಲಿ ನಿನ್ನ ಕಂಡೆ ನಾನೀಗ ಹಿಂಗಿತೇ ಎನ್ನ ಅಘದ್ಹಿಂಡು ಕಾವೇರಿ ಪ. ಮಂಗಳಾಂಗಿಯೆ ಶ್ರೀ ರಂಗನಾಥನ ಪದ ಭೃಂಗಳೆನಿಸಿ ಜನರ ಪಾವನಗೈವೆ ತುಂಗವಿಕ್ರಮ ಹರಿಗೆ ಮೂಲರೂಪಳಾಗಿ ಅಂಗ ಶುದ್ಧಿಯಗೈವೆ ಪಾಪಿಗಳ ಸತತ 1 ಎಲ್ಲೆಲ್ಲಿ ನೋಡೆ ಶ್ರೀರಂಗನ್ನ ಸೇವಿಸುವೆ ಪುಲ್ಲಲೋಚನೆ ನಿನ್ನ ಬಗೆಯರಿವೆನೆ ಬಲ್ಲ ಭಕ್ತರು ಬಂದು ನಿನ್ನಲ್ಲಿ ಸ್ನಾನವಗೈದು ಉಲ್ಲಾಸದಿಂದ ಆನಂದಪಡುತಿಹರೆ 2 ನೊರೆಸುಳಿಗಳಿಂದ ಭೋರ್ಗರೆಯುತ್ತ ಹರಿ ಇರುವ ಅರಮನೆಯೆ ವೈಕುಂಠವೆಂದು ಸೂಚಿಸುತ ಹರಿಸದನ ಸುತ್ತಿರುವೆ ವಿರಜೆ ನಾನೆಂದೆನುತ ಅರುಹುವಾ ತೆರದಿ ಬಹು ರಭಸದಿಂ ಪರಿವೆ 3 ನಿನ್ನ ಧ್ವನಿ ಇಂಪೆಂದು ಆನಂದದಿಂದಾಲಿಸುತ ಚನ್ನ ಶ್ರೀರಂಗ ತಾ ಪವಡಿಸಿಹನೆ ಘನ್ನ ಮಹಿಮಳೆ ಸಕಲ ಜೀವರಾಶಿಯ ಪೊರೆವೆ ಎನ್ನ ಮನ ಹರಿಪದದಿ ನಲಿವಂತೆ ಮಾಡೆ 4 ನಿನ್ನನೇ ವಿರಜೆ ಎಂತೆಂದು ಭಾವಿಸಿ ಈಗ ಎನ್ನ ಗುರುಗಳ ದಯದಿ ಸ್ನಾನಗೈದೆ ಇನ್ನು ಶ್ರೀ ವೈಕುಂಠದೊಡೆಯನಾ ತೋರಮ್ಮ ಘನ್ನ ಶ್ರೀ ಗೋಪಾಲವಿಠ್ಠಲನ 5
--------------
ಅಂಬಾಬಾಯಿ