ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಸಂಕೀರ್ತನೆ ಸೇವೆಗೆ ಜನರೊದಗುವರೆ ಪ ದೊರೆತನವಾಗಬೇಕೆನಲಿಲ್ಲ-ಬಲು ಸಿರಿತನವನು ವಾಂಛಿಸಲಿಲ್ಲ ಯೊಂದಿತ್ತರೆ ಸಾಕಲ್ಲ 1 ಅನ್ನವಸ್ತ್ರವಕೇಳುವುದಿಲ್ಲ ಒಳ್ಳೆ-ಚಿನ್ನ ಬಣ್ಣವ ಕೊಡುಎನಲಿಲ್ಲ ನೀನೊಲಿದರೆ ಸಾಕಲ್ಲ 2 ವರದ ವಿಠಲ ಬಲ್ಲೆ ನೀನಿದನೆಲ್ಲ 3
--------------
ಸರಗೂರು ವೆಂಕಟವರದಾರ್ಯರು
ಶ್ರೀಹರಿಸಂಕೀರ್ತನೆ6ಅಚ್ಯುತಅಮರಾರ್ಚಿತ ಮುನಿವಂದಿತಅಚ್ಯುತಅಮರಾರ್ಚಿತಪದಾಸರವಿಜಯ ಭೂಸುರಗಣಪ್ರಿಯಶೇಷಾದ್ರಿಗಿರಿನಿಲಯ 1ಪರಮಪುರುಷಪರಮಪ್ರಕಾಶಕರುಣಾಬ್ಧಿಶಶಿ ರಮೇಶ 2ದುರಿತವಿದೂರ ಶರಣು ಸುಖಂಕರಪುರಂದರಪರಾತ್ಪರ3ಸುಜನಸಂಜಾತ ಕುಜನಕುಠಾರಭಜಿಪರ ಭಯವಿದೂರ 4ಭಕ್ತ ನಿಸ್ಸೀಮ ಮುಕ್ತಿಗೆಸೋಮಭಕ್ತಾಂತರಾತ್ಮ ಶ್ರೀರಾಮ 5
--------------
ರಾಮದಾಸರು
ಸಂತರವರೆ ನೋಡಿರೈ ಕೈವಲ್ಯದಸಂತರವರೆ ನೋಡಿರೈ ಪ.ಸತ್ಯ ರಮೇಶನ ಸೃಷ್ಟಿಯೆ ಸತ್ಯಹತ್ತೆರಡೈದು ತತ್ವವೆ ಸತ್ಯಸತ್ಯಾತ್ಮೇಶರ ಭೇದವೆ ಸತ್ಯಸತ್ಯಾತ್ಮಕನ ಪದ ಸತ್ಯೆನುವ 1ಹರಿಭಕ್ತರ ಕಂಡಪ್ಪುತ ನಿರುತಹರಿಸಲ್ಲಾಪ ಕಥಾಶ್ರಯ ಬಲಿದಹರಿಭೃತ್ಯರಿಗನ್ನೋದಕನೀವರುಹರಿಸಂಕೀರ್ತನೆ ಮನಮನೆಯವರು2ಆನಂದಕೆ ಕವಲಿಲ್ಲದ ಸುಖದು:ಖಾನಂದವನನುಭವಿಸಿ ಬಿಡುವರುಆನಂದಮುನಿಯ ಮತಪ್ರಿಯನಿತ್ಯಆನಂದ ಪ್ರಸನ್ವೆಂಕಟಪತಿಯವರು 3
--------------
ಪ್ರಸನ್ನವೆಂಕಟದಾಸರು
ಹೇಳಿದ ಯಮಧರ್ಮ ತನ್ನಾಳಿಗೆ ಪ.ಹೇಳಿದ ಯಮ ತನ್ನೂಳಿಗದವರಿಗೆಖೂಳದುರಾತ್ಮರಾಗಿ ಬಾಳುವರನು ತರ1ಹರಿಸಂಕೀರ್ತನೆಯನರನಾರಿಯರು ಆದರದಲಿ ಮಾಡಿದವರ ನಿಂದಿಪನ ತರ 2ಹರಿದಾಸರಿಗೆ ಉಣಕರಿಯದೆ ಜನ್ಮಾಂತಒರಟುಮಾತಿನ ಲುಬ್ಧನರನ ನಿಲ್ಲದೆ ತರ 3ಹರಿಕಥಾಮೃತ ಉಪಚಾರಕಾಗಿ ಕೇಳುವಪರನಾರೇರಾಳುವ ದುರುಳನಕಟ್ಟಿತರ4ಗುರುಹಿರಿಯರೊಳು ನೀಚೋತ್ತರವನು ಕೊಡುವಮರುಳಾಗಿ ಮತಿಯ ಸತಿಯರಿಗಿತ್ತವನ ತರ 5ಅಂಬುಜಾಕ್ಷನ ಪೂಜೆ ಸಂಭ್ರಮದಿ ಮಾಡದೆರಂಭೆಯೊಡನಾಡುವ ಡಂಭಕನ ಹಿಡಿ ತರ 6ಒಳ್ಳಿದರ್ಹಳಿದು ತಾ ಬಲ್ಲವನೆನುವಚೆಲ್ವ ಪ್ರಸನ್ವೆಂಕಟ ವಲ್ಲಭನ ವೈರಿಯ ತರ 7
--------------
ಪ್ರಸನ್ನವೆಂಕಟದಾಸರು