ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೆಟ್ಟು ಹೋಗಬೇಡ ಮನುಜ ಸಾರಿ ಹೇಳುವೆ ಮನವ ಮುಟ್ಟಿ ಭಜಿಸೋ ಹರಿಯ ಶ್ರೀ ಕೃಷ್ಣ ಕಾಯುತಾನೆ ಪ ಆನೆಯಂತೆ ಹರಿವುದೊಂದು ಹೀನ ಮನವ ಹರಿಯಬಿಟ್ಟು ನೀನು ವಿಷಯವನ್ನು ಬಯಸಿ ನಾನಾನರಕದಲ್ಲಿ ಬಿದ್ದು 1 ದಾನ ಧರ್ಮಗಳನು ಬಿಟ್ಟು ಬರಿಯ ತನುವದಂಡಿಸುತ್ತ ಪುಣ್ಯ ತೀರ್ಥಸ್ನಾನಬಿಟ್ಟು ವಿಷ್ಣು ಮೂರ್ತಿಧ್ಯಾನ ತೊರೆದು 2 ಗಂಟು ಗಡಿಗೆ ಇರಲುನಿನಗೆ ನೆಂಟರಿಷ್ಟರೆಂದು ಬಂದು ಪಂಟಿಯನ್ನು ತೆಗೆವರೆಲ್ಲ ಅಂಟಿ ಬೆನ್ನಬರುವರಿಲ್ಲ 3 ಪಂಡಧರನ ದಂಡು ಬಂದು ದಂಡೆಗೆ ದಂಡೆ ಬಿಗಿದು ಕಟ್ಟಿ ಮಕ್ಕಳು ಬರುವನೋ 4 ನಿನ್ನ ನೀನೆ ತಿಳಿದುಕೊಂಡು ಚೆನ್ನಿಗನ ಕೂಟದಲ್ಲಿ ಚಿನ್ಮಯಾತ್ಮಕ ಲಕ್ಷ್ಮೀಪತಿಯ ಮುನ್ನಭಜಿಸೋ ಜನ್ಮವಿಲ್ಲ 5
--------------
ಕವಿ ಪರಮದೇವದಾಸರು