ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮೋ ನಮೋ ನಾರದವಂದ್ಯ ನಮೋ ನಮೋ ನಿಗಮನಿಕರವೇದ್ಯ ಪ ಭವಭಯರೋಗವೈದ್ಯ ಅ.ಪ ಹರಿಚರನಾಗಿ ವೇದವ ತಂದೆ ಹರಿಪತಿಯನು ಮೇಲಾಂತು ನಿಂದೆ ಹರಿವಂಶಜರನೆಲ್ಲರ ತರಿದೆ ಹರಿವಾಹಿನಿಯ ನೀನಾಳ್ದೆ ಹರಿಸುತಗೊಲಿದು ಹೆಂಗಳ ವ್ರತಕೆಡಿಸಿದೆ ಹರಿವಾಹನ ಜಯತು 1 ಶಿವವಾಹನ ಧ್ವಜರೂಪ ಶಿವಧರನೆನಿಪ ಯುಗ ಪ್ರತಾಪ ಶಿವಭಕ್ತನ ಕೊಂದೆ ಶಿವನ ರೂಪಾದೆ ನೀಂ ಪದಕಡಿಯನಿಟ್ಟೆ ಶಿವವೈರಿಯ ರಿಪುವೆನಿಸಿದೆ ಶಿವನ ಬಿಲ್ಲನು ಬಾಗಿಸಿ ಮುರಿದೆ ಶಿವನ ತುಳಿದೆ ನೀ ಶಿವನಿಗೆ ಸಖನಾದೆ ಶಿವವಾಹನ ಜಯತು2 ಸುರಜ್ಯೇಷ್ಠನಿಗೆ ಶ್ರುತಿಯನಿತ್ತೆ ಸುರರಿಗೆ ಸುಧೆಯನು ಕರೆದೆರೆದೆ ಸುರನಗವರ್ಣ ಹಿರಣ್ಯಾಕ್ಷನ ಕೊಂದೆ ಸುರಸಿಂಧುವಪಡೆದೆ ಸುರಭಿಯ ನೆವದಿ ಭೂಪರನೆಲ್ಲ ತರಿದೆ ಸುರರಿಪು ದಶವದನನ ತರಿದೆ ಸುರನಗವರ್ಣ ಸರ್ವಜ್ಞ ಹಯಾರೂಢ ಸುರಪುರ ಲಕ್ಷ್ಮೀಶ 3
--------------
ಕವಿ ಲಕ್ಷ್ಮೀಶ
ಮಂಗಳ ಪದ್ಯಗಳು ಜಯ ಜಯ ಶ್ರೀ ಮಹಾಕಾಳಿ ಗೋಕರ್ಣೆ ಮಹಾಬಲ ಪೂಣ್ಯವಧು ಭಯವಿರಹಿತ ಭವನಾಶಿನಿ ಸುಲಲಿತೆÀ ಭಕ್ತ ಜಿಹ್ವಾಗ್ರ ಮಧು ಪ ಪರಮೇಶ್ವರಿ ಪರಿಪೂರ್ಣಾಂಬಿಕ ನಿಜ ಪರಮಾನಂದ ಪರೇ ಪರತರವಸ್ತು ಪರಾತ್ಪರ ಶಾಂಭವಿ ಸುರಮುನಿ ಅಭಯಕರೇ ಜಯಜಯ 1 ವೀಣಾ ಪುಸ್ತಕಧಾರಿಣೆ ಅಗಣಿತ ಪಾನಪಾತ್ರಪ್ರಿಯೇ ವಾಣಿನಿತ್ಯಕಲ್ಯಾಣಿ ವಂದಿತಗುಣ ಶ್ರೇಣಿ ಮುನೀ ಸಾಹ್ಯೇ ಜಯಜಯ 2 ಹರಿಮೋಹಿನಿ ಹರಿವಾಹಿನಿ ಗಿರಿಸುತೆ ಹರಿಣಾಂಕಿಣಿ ಭವ್ಯಮುಖೆ ಹರಿಸಖ ಪ್ರಾಣಸಖೇ ಜಯಜಯ 3 ಸರ್ವಗುಣನಿಲಯೇ ಸರ್ವಾತ್ಮಕಿ ಸರ್ವಯಂತ್ರರೂಪೇ ಶರ್ವಾಣೆ ಸರ್ವೇಶ್ವರಿ ಸದಾಶಿವೇ ಸರ್ವ ಮಂತ್ರರೂಪೇ ಜಯಜಯ 4 ಮೂಲಾಧಾರೇ ಮುಕುಂದಾರ್ಚಿತ ಪದ ಬಾಲಾ ತ್ರಿಪುರಹರೇ ಮಾಲಿನಿ ಮಂತ್ರಾತ್ಮಕಿ ಮಹಾದೇವಿ ತ್ರಿ ಶೂಲಿನಿ ಶಶಿಶಿಖರೇ ಜಯಜಯ 5 ನಿತ್ಯಾರ್ಚನಿ ಸುಖಭೋಗಿನಿ ಸುಲಲಿತೇ ನಿತ್ಯಾನಂದಮಯೇ ನಿತ್ಯಾನಿತ್ಯ ಸ್ವರೂಪಿಣಿ ನಿರ್ಗುಣೆ ಸತ್ಯ ಸಾಧು ಹೃದಯೇ ಜಯಜಯ 6 ಶಂಭಾಸುರಮಹಿಷಾ ಸುರಮೇಕ್ಷಕ ದಂ¨ ಮುಕುಟಧರೇ ಅಂಬಾ ಶ್ರಿ ಮಹಾಕಾಳಿ ವಿಮಲಾನಂದ ಸುಖ ಶರೀರೇ ಜಯ ಜಯ 7 ಇತಿ ಶ್ರೀ ಮಹಾಕಾಳ್ಯಷ್ಟಕ ಸ್ತೋತ್ರಂ ತ್ರಿಕಾಲಪಠತೆ ನಿತ್ಯಂ ನಿತ್ಯಂ ನತಿಸುತಧನ ಪೌತ್ರಾದಿ ಕೃತಾರ್ಥಂ ಭವತಿ ಸತ್ಯಂ ಸತ್ಯಂ ಜಯಜಯ 8
--------------
ಭಟಕಳ ಅಪ್ಪಯ್ಯ