ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡುಮನವೆ ಬಿಡದಿಹ್ಯ ಸಂಸಾರ ಪಡಕೊಂಬುದು ಮಾಡು ನೀ ಸುವಿಚಾರ 1 ವಿಚಾರದೊಳಗದ ಬಲು ವಿವೇಕ ಸೂಚಿಸಿಬಾಹುದು ಸ್ವಾತ್ಮದ ಸುಖ2 ಸ್ವಾತ್ಮದ ಸುಖ ತಿಳಿದವ ಸ್ವತ:ಸಿದ್ಧ ಮತ್ತೆಲ್ಲಿಹದವಗೆ ಭವಬಂಧ 3 ಭವಬಂಧವ ತಿಳಿಯಲುಪಾಯ ಭುವನದಲ್ಯದ ಶುಕನಳಿಕನ್ಯಾಯಾ 4 ನ್ಯಾಯವ ತಿಳಿದರೆ ನೋಯವನೆಂದು ಶ್ರಯ ತಿಳಿಯಲು ತಾ ಬಂಧು 5 ಬಂಧು ಹಗೆಯು ತನಗೆ ತಾಯೆಂದು ಸಂಧಿಸಿ ಪಾರ್ಥಗ್ಹೇಳಿದ ಹರಿ ಬಂದು 6 ಹರಿವಾಕ್ಯವೆ ಗುರುಗುಹ್ಯದ ಗುಟ್ಟು ಪರಮಾನಂದದ ಹೆಜ್ಜೆಯ ಮೆಟ್ಟು 7 ಹೆಜ್ಜೆಲೆ ನಡೆವನು ಕೋಟಿಗೊಬ್ಬವನು ಸಜ್ಜನ ಶಿರೋಮಣೆನಿಸಿಕೊಂಬುನು 8 ಶಿರೋಮಣೆನಿಕೊಂಬುದು ಗುರುಕರುಣ ಗುರುಚರಣಕೆ ಬ್ಯಾಗನೆಯಾಗು ಶರಣು 9 ಶರಣ ಹೊಕ್ಕವಗೆಲ್ಲಿಹುದು ಮರಣ ಮರಣಕ ಮರಣವ ತಂದವ ಜಾಣ 10 ಜಾಣನೆ ಜನ್ಮರಹಿತ ವಾದವನು ಜನವನ ಸಕಲ ಸಮವಗಂಡವನು 11 ಸಮಗಂಡವಗಳದಿಹ್ಯ ಶ್ರಮವೆಲ್ಲಾ ರಾಮ ವಸಿಷ್ಠರೊಳಾಡಿದ ಸೊಲ್ಲ 12 ಸೊಲ್ಲಿಗೆ ಮುಟ್ಟಿದವ ಪ್ರತಿಯಿಲ್ಲ ಎಲ್ಲರೊಳಗ ವಂದಾದವ ಬಲ್ಲ 13 ಬಲ್ಲವನೆ ಬಲ್ಲನು ಬಯಲಾಟ ಎಲ್ಲರಿಗಿದೆ ಅಗಮ್ಯದ ನೋಟ 14 ನೋಟಕ ನೀಟ ಮಾಡಿದವನು ಧನ್ಯ ನೀಟಿಲೆ ನಡೆದವ ಕೋಟಿಗೆ ಮಾನ್ಯ 15 ಕೋಟಿಗೆ ಒಬ್ಬನು ತತ್ವಜ್ಞಾನಿ ನೋಟವಗಂಡಿಹ್ಯ ಮಹಾ ಸುಜ್ಞಾನಿ 16 ಸುಜ್ಞಾನಿಗೆ ಘನಮಯ ಸುಕಾಲ ಸುಗಮ ಸುಪಥವಾಗಿಹುದನುಕೂಲ 17 ಅನುಕೂಲದ ನಿಜ ಮಾತನೆ ಕೇಳು ಅನುದಿನ ಘನಗುರು ಸೇವಿಲೆ ಬಾಳು 18 ಪರಿ ಲೇಸು ಕಳೆವುದು ಮಿಕ್ಕಿನ ಭ್ರಾಂತಿಯ ಸೋಸು 19 ಸೋಸ್ಹಿಡಿದರ ಇದೊಂದೇ ಸಾಕು ವೇಷವದೋರುವದ್ಯಾತಕೆ ಬೇಕು 20 ಬೇಕೆಂಬ ಬಯಕೆಯ ಈಡ್ಯಾಡು ಸೋಕಿ ಶ್ರೀ ಸದ್ಗುರು ಪಾದದಿ ಕೂಡು 21 ಪಡೆವುದಿದೇ ಸ್ವಸುಖ ಸಾಧನ 22
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು ವಿಷ್ಣುನರಿತವನೆ ವೈಷ್ಣವನು| 1 ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ ಯುಕ್ತಿ ತಿಳಿದವನೆ ವೈಷ್ಣವನು 2 ಹರಿ ಪರಂದೈವೆಂದು ಹರಿಯ ಕೊಂಡಾಡುತಲಿ ಹರಿಯ ನೆನೆಯುವನೆ ವೈಷ್ಣವನು 3 ಹರಿ:ಓಂ ತತ್ಸದಿತಿಯೆಂಬ ಹರಿವಾಕ್ಯವನು ಅರಿತವನೆ ಪರಮ ವೈಷ್ಣವನು 4 ಹರಿಧ್ಯಾನ ನೆಲೆಗೊಂಡು ಹರಿನಾಮ ಬಲಗೊಂಡು ಹರಿಯ ಸ್ಮರಿಸುವವನೆ ವೈಷ್ಣವನು 5 ಪರದೆ ಇಲ್ಲದೆ ಪಾರ ಬ್ರಹ್ಮಸ್ವರೂಪನು ಗುರುತ ಕಂಡವನೇ ಪರಮ ವೈಷ್ಣವನು6 ಗುರುಕೃಪೆಯಿಂದ ಪರಗತಿ ಸಾಧನವು ಮುಟ್ಟಿ ಅರಿತು ಬೆರೆದನೆ ಪರಮ ವೈಷ್ಣವನು 7 ಮೂಲ ಮೂರುತಿಗ್ಯಾಗಿ ಮೇಲಗಿರಿಯನೇರುವ ಕೀಲ ತಿಳಿದವನೆ ವೈಷ್ಣವನು 8 ಉಂಟಾಗಿ ಇರುಳ್ಹಗಲಿ ಗಂಟ್ಹಾಕಿ ಹರಿಪಾದ ಬಂಟನಾದವನೆ ವೈಷ್ಣವನು 9 ಕಂಟಕ ನೀಗಿ ಮೂರು ಬಲೆಯನು ದಾಟಿ ಮೀರಿ ನಿಂದವನೇ ವೈಷ್ಣವನು 10 ಆಶಿಯನೆ ಜರಿದು ನಿರಾಶೆಯನು ಬಲಿದು ಹರಿದಾಸನಾದವನೆ ವೈಷ್ಣವನು 11 ದ್ವಾದಶನಾದವನು ಸಾಧಿಸಿ ಕೇಳುತಲಿ ಭೇದಿಸಿದವನೆ ವೈಷ್ಣವನು 11 ಅನುದಿನ ಘನಸುಖವು ಅನುಭವಿಸುವನೆ ವೈಷ್ಣವನು 12 ವಿಷ್ಣುಭಕ್ತಿಯ ಸುಖವು ಮುಟ್ಟಿ ಮುದ್ರಿಸಿ ಪುಷ್ಟವಾಗಿದೋರುವನೆ ವೈಷ್ಣವನು 13 ವಿಷ್ಣುಮೂರ್ತಿಯ ಧ್ಯಾನ ದೃಷ್ಟಾಂತ ಮಹಿಪತಿಗೆ ಕೊಟ್ಟಾ ಗುರು ಪರಮ ವೈಷ್ಣವನು 14
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಸಾರ ಚಿಂತೆ ನಮ್ಮ ಸ್ವಾಮಿ ಶ್ರೀ ಹರಿಗುಂಟು ಸಂಸಾರಿ ಕೃಷ್ಣ ಕರುಣಿಸುವ ಇದರಿಟ್ಟು ಧ್ರುವ ತುತ್ತಾಯತವ ಮಾಡಿ ಹೊತ್ತು ನಡೆಸುವ ಒಡಿಯ ಮತ್ತೆ ಚಿಂತಿಸಲ್ಯಾಕೆ ಹತ್ತು ಕಡೆಯ ಭಕ್ತವತ್ಸಲ ಸ್ವಾಮಿ ಚಿಂತ್ಯಾಕೆನ್ನೊಡಿಯ ಗ್ರಾಸ ಭಕ್ತರೊಡಿಯ 1 ಅನೆ ಮೊದಲಿರುವೆ ಕಡೆ ತಾಂ ನಡೆಸುತಿರಲಿಕ್ಕೆ ಜನಕೊಡ್ಡಿ ಕೈಯ ನಾ ದಣಿಯಲೇಕೆ ಅನುದಿನ ಹರಿವಾಕ್ಯ ಅನುಭವಿಸುತಿರಲಿಕ್ಕೆ ಅನುಮಾನವಿಡಿದು ನಾ ಹೆಣಗಲ್ಯಾಕೆ 2 ಭಾರ ವಹಿಸಿ ಕೊಂಡಿರಲು ಮಾರಪಿತ ಪರಿಪೂರ್ಣ ಸಾರಾಂಶ ವಿತ್ತು ವರಕೃಪೆಯ ಙÁ್ಞನ ಆರ್ಹಂಗವೆನಗ್ಯಾಕೆ ತೋರುತಿದೆ ನಿಧಾನ ತರಳ ಮಹಿಪತಿ ಹೊರೆವ ಗುರು ಕರುಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು