ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಿ ಪಿಡಿಯಾ ಕೈಯ್ಯಾ | ಗುರುರಂಗವೊಲಿದರಾಯ ಪ ನಂಬಿದೆ ನಿನ್ನ ಚರಣ | ಬೆಂಬಿಡದೆ ಕಾಯೋ ಸತತ ಸ್ತಂಭದಲಿ ನೆಲಸಿದಂಥ | ಕುಂಭಿಣಿಪ | ದಾಸವರ್ಯ 1 ದೀನರ್ಗೆ ದಿವಿಜಧೇನು | ನೀನೆಂದು ಕ್ಷೋಣಿ ತಳದಿ ಜ್ಞಾನಿಗಳು ಪೇಳಿದಂಥ ವಾಣಿಯನು ಸತ್ಯಮಾಡೊ 2 ನಿನ್ನ ಸ್ಥಳವು ಪುಣ್ಯಕ್ಷೇತ್ರ | ನಿನ್ನಲ್ಲಿ ಸಕಲ ತೀರ್ಥ ನಿನ್ನ ಕವನ ಮಧ್ವಶಾಸ್ತ್ರ | ನಿನ್ನವನು ನಿಜಕೃತಾರ್ಥ3 ಹರಿದಾಡುವಂಥ ಮನಸು | ಹರಿಯಲ್ಲಿ ಸ್ಥಿರವಗೊಳಿಸೊ ಹರಿನಾಮ ಸುಧೆಯ ಕುಡಿಸೊ | ಹರಿವರನ ಮತವ ಪಿಡಿಸೊ 4 ಮತಿಭ್ರಷ್ಟನಾಗಿ ನಿನ್ನ ಕೃತಿಗಳನು ಪಾಡದ್ಹೋಗಿ ಕ್ಷಿತಿ ಭಾರನಾದೆ ಮುಂದೆ ಗತಿ ತೋರಿ ಸಲಹೊ ತಂದೆ 5 ಹೆತ್ತವರು ಸುತನ ದೋಷ | ಕೃತ್ಯಗಳ ಕ್ಷಮಿಸದಿಹರೆ ಚಿತ್ತೈಸು ಎನ್ನ ಮಾತ | ಉತ್ತಮರ ಸಂಗವಿತ್ತು 6 ತಳೆದೇಳು ಜನುಮಗಳಲಿ | ಇಳೆಯೊಳಗೆ ಚರಿಪ ಸಮಯ ಸುಳಿದಾಡು ಮತ್ತೊಮ್ಮೆ ಘೋರ ಕಲಿಬಾಧೆ ತಪ್ಪಿಸಯ್ಯ 7 ಮಾನವಿಯ ಸ್ಥಾನದಲ್ಲಿ | ನೀನಿರಲು ನಿನ್ನ ಮರೆದು ಮೋದ 8 ಕಂದರ್ಪಜನಕ ಶಾಮಸುಂದರ ಮೂರ್ತಿಹೃದಯ ಮಂದಿರದಿ ತೋರೋದಾತ ವಂದಿಸುಎ ನಿನ್ನ ಪದಕೆ 9
--------------
ಶಾಮಸುಂದರ ವಿಠಲ
ತೊರವಿ ನರಹರಿ ಸ್ತೋತ್ರ ಹರಿಯು ನಿಂದಿಹ ನೋಡೀ | ಭೂತಳದಿ ತೊರವಿಲಿಹರಿಯು ಇಂದಿರೆಗೂಡಿ | ಒಡವೆರೆಸಿ ಸರ್ವದಶರಣ ಜನರೊಡನಾಡೀ | ಸುಖವೀವ ನೋಡೀ ಪ ಹರಿಯೆ ಪರನೆಂಧ್ಹೇಳ್ಪ ಬಾಲಕೆದುರುಳ ಕಾಶ್ಯಪು ಪರಿಪರೀಯಲಿಕರ ಕೆರೆಯ ಗೊಡಲಾಗ ನರಹರಿತರುಳನುದ್ಧರ ಗೈದ ಶ್ರೀಹರಿ ಅ.ಪ. ಉದರ ಪೋಷಕ ಬೋಧಾ ಗುರುಶಂಡಮರ್ಕರು ಮುದದಿ ತಿಳುಹಲ ಗಾಧ | ಸರಿಸುತ್ತ ದೂರದಿಹದನ ಪೇಳಿದ ವೇದ | ಪ್ರತಿಪಾದ್ಯ ಶ್ರೀಹರಿವಿಧ ವಿಧವು ಕಾರ್ಯಗಾಧ | ಸೃಷ್ಠಿ ಲಯ ಮೊದಲಾದಅದುಭೂತವು ಎನೆ ಕಾರ್ಯ ಬಹಳವಗೈದು ಲೀಲೆಯ ತೋರಿ ಜಗದೊಳುಮುದವ ಬೀರುತ ಸಾಧು ಸಜ್ಜನಮೋದ ಬಡಿಸುವೆ ನೆಂದು ಪೇಳಿದ 1 ಕರಿಯಪದತಳ ತುಳಸೀ | ಪ್ರಹ್ಲಾದ ಬಾಲನಹಿರಿದು ಶರಧಿಯೊಳಿರಿಸೀ | ಮತ್ತವನು ಉಳಿದಿರೆಧರೆಯ ಗುಹೆಯೊಳಗಿರಿಸೀ | ಮೇಲ್ಕಿಲೆಯ ಮುಚ್ಚಲುಮರಳಿ ಬಂದನು ಜೀವಿಸೀ | ಹರಿಯ ವಿಶ್ವಾಸೀ ತರಳನಿಗೆ ಅಹಿಯಿಂದ ಕಚ್ಚಿಸಿಕರುಣಿ ಮಾತೆಯು ವಿಷವನೂಡಿಸೆಗರಸಹೋದರಿ ಪೊರೆಯಲವನನುತರಳನಿಂಧ್ಹರಿವರನುಯೆಂದ 2 ಬಂದ ಚಿಮ್ಮಲಿಗಿಂದ | ಭಕುತಂಗೆ ಪೇಳುತನಂದ ಹುಲ್ಲೆಸೆಯಂದ | ಅದು ಹತ್ತಿ ಉಳಿಯಲುನಿಂದಿಹೆ ತಾ ನಲ್ಲೆಂದ | ಅದರಂತೆ ಗೈಯಲುನಿಂದ ತೋರವಿಲಿ ಛಂದ | ಹರಿಯು ಬಹು ಆನಂದನಂದ ನಂದನನಾದ ಗುರು ಗೋ-ವಿಂದ ವಿಠಲನ್ನಕೇಸರಿಯುಚಂದದಿಂ ದೂವ್ರ್ಯಾಸ ಪೂಜಿತನಂದ ಕಂದ ಮುಕುಂದ ಶ್ರೀಹರಿ 3
--------------
ಗುರುಗೋವಿಂದವಿಠಲರು
ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ ಮಂದಭಾಗ್ಯಳ ಜೀವೇಶ ಪ. ಅಂದು ಶ್ರೀ ರಾಮರ ಸಂದೇಶವನ್ನೆ ಭೂ- ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ. ಶೌರಿ | ಭಕ್ತರ ಕಾಯ್ವ ದುರಿತದೂರನೆ ಉದಾರಿ ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ ದುರಿತ ತರಿಯುತ ಪೊರೆಯೊ ಗುರುವರ ರಾಮಕಿಂಕರ 1 ಗುರುಕರುಣದ ಬಲದಿ | ಅರಿತೆನೊ ನಿನ್ನ ಚರಣ ನಂಬಿದೆ ಮನದಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ ಹರಿವರನೆ ದಯಮಾಡು ಶ್ರೀ ಹರಿ ದರುಶನವನನವರವಿತ್ತು 2 ಕಾಂತನ ಅಗಲಿರಲು | ಚಿಂತೆಯಲಿ ಭೂ ಕಾಂತೆ ವನದೊಳಗಿರಲು ಸಂತೋಷದಿಂ ರಾಮನಂತರಂಗವನರುಹಿ ಸಂತಸವಪಡಿಸುತಲವನಿಸುತೆಯ ನಿಂತೆ ರಾಮರಿಗ್ಹರುಷ ತೋರಿ 3 ದ್ರುಪದ ಸುತೆಯಳ ಕೀಚಕ | ದುರ್ಮನದಲಿ ಅಪಮಾನಪಡಿಸೆ ದುಃಖ ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ ಕುಪಿತದಿಂದಲಿ ಖಳನ ಕೊಂದೆ ಅಪರಿಮಿತ ಬಲಭೀಮ ಪ್ರೇಮ 4 ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್ ಅತ್ಯಂತ ತಪಿಸುತಿರೆ ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ ಘಾತುಕರ ಮತ ಮುರಿದ ಮಧ್ವನೆ ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5 ಪ್ರಾಣಪಾನವ್ಯಾನ | ಉದಾನ ಸ ಮಾನ ಭಾರತಿ ಕಾಂತನೆ ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ ದೀನಜನ ಮಂದಾರ ಕಾಯೊ ದೀನಳಾಗಿಹೆ ಕೈಯ ಮುಗಿವೆ 6 ನೋಯಲಾರೆನೊ ಭವದಿ | ಬೇಗನೆ ತೋರೊ ಧ್ಯೇಯ ವಸ್ತುವ ದಯದಿ ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ ಕಮಲ ದ- ಳಾಯತಾಕ್ಷನ ಮನದಿ ತೋರಿ7 ಹರಣ ನಿನಗೊಪ್ಪಿಸಿದೆ | ಸುರವಂದಿತ ಕರೆದು ಮನ್ನಿಸಿ ಕಾಪಾಡೊ ಸಿರಿವರನನು ಹೃತ್ಸರಸಿಜದಲಿ ತೋರೊ ಧರೆಯ ವಸ್ತುಗಳ್ ಮಮತೆ ತೊರೆಸು ಹರಿಯ ನಾಮಾಮೃತವನುಣಿಸು 8 ಈ ಪರಿಬಂದೆ ಅನಿಲ | ನಿನ್ನೊಳು ವಾಸ ಗೋಪಾಲಕೃಷ್ಣವಿಠ್ಠಲ ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ ಕೈಪಿಡಿದು ಸಂತೈಸು ಕರುಣದಿ ಭಾಪುರೇ ಕದರುಂಡಲೀಶ 9
--------------
ಅಂಬಾಬಾಯಿ
ಮಂಗಳಾರತಿಯಾ ತಂದೆತ್ತಿರೇ ಮಂಗಳವದನೆಯರೆಲ್ಲಾ ಅಮಂಗಜನಪಡದಾ ಮಂಗಳಾತ್ಮಗ ಪ ಪೊಂಬ್ಹರಿವಾಣದೊಳಗ | ಕೆಂಬ್ಹವಳದಾರತಿ ನಿಲಿಸಿ ಮುಂಬ್ಹರಿವರನ್ನ ಜ್ಯೋತಿಯಲಿ ಬೆಳಗಿರೆ 1 ಉತ್ತಮ ಪುರುಷ ಶ್ರೀ ಹರಿಗೆ ಮತ್ತ ಜಗನ್ಮಾತೆ ಸಿರಿಗೆ | ಮುತ್ತಿನ ಶಾಶೆಯನಿಟ್ಟು ಬೆಳಗಿರೆ 2 ಜಯ ಜಯ ಶಿಷ್ಟ ರಕ್ಷಕನೇ ಜಯ ಜಯ ದುಷ್ಟಶಿಕ್ಷಕನೇ | ಜಯವೆಂದು ಬೆಳಗಿ ಮಹಿಪತಿ ಸುತಪ್ರೀಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು