ನಮ್ಮ ಗೋವಿಂದನ ಭಜಿಸುವೆ ಸತ್ಯ
ನಿತ್ಯ ಪ
ಹಿಂದಿನ ಜನ್ಮದಿ ಕಾಯ್ದ ಶ್ರೀಧರನ
ಚಂದದಿ ನರಜನ್ಮಕ್ಕೆಳತಂದ ಪರಿಯ 1
ಜನನಿಯ ಜಠರದಿ ಕಾಯ್ದ ಶ್ರೀಧರನ
ಜನನ ಕಾಲಕೆ ಬಂದೊದಗಿದ ಪರಿಯ 2
ಕಾಲಕಾಲಕೆ ಬಂದು ಸಲಹಿದ ಪರಿಯ 3
ದುಷ್ಟ ಜನರ ಕಾಟ ಬಿಡಿಸುವ ಪರಿಯ4
ದೀನರಿಗೊದಗುತ್ತ ಕಾಯ್ವ ಶ್ರೀಧರನ
ಚನ್ನಕೇಶವ ದೇವನೆಂಬ ಶ್ರೀ ಹರಿಯ5