ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಮನವೆ ಸಲೆ ನಿನ್ನ ಮರೆವದು ಗುಣವೇ ಪ ಹರಿಯೋ ಮರವಿನ ಮುಸುಕಿದೆ ಮರೆಯೋ | ಸಿರಿ ಸೌಖ್ಯ ಮೃಗಜಳ ಪರಿಯೋ | ಚರವೆಂಬ ಹಂಬಲ ಮರಿಯೋ | ಪರಿ ವಾಸನೆಯ ಜರಿಯೋ | ಪ್ರಾರಬ್ಧ ನಿಜ ವೆಂದರಿಯೋ | ತಾಪ ಮೊನೆ ಮುರಿಯೋ | ಅರವಿನ ನಯನವದೆರಿಯೋ | ಪಾದ ಪದ್ಮಕ ಬೆರೆಯೋ 1 ತಿಳಿಯೋ ಇಳಿಯೊಳು ಸತ್ಪಥ ನೆಲಿಯೋ | ಕಳೇವರ ಸ್ಥಿರ ಬೊಬ್ಬುಳಿಯೋ | ನಲವಾರು ಅರಿಗಳ ನಳಿಯೋ | ಬಲಿತಿಹ ಹಮ್ಮಲ ಕಳಿಯೋ | ಬಳಲಿಪಾಗುಣ ಮಲ ತೊಳಿಯೋ | ಬಲು ಶಾಂತಿ ಹೃದಯದಲಿ ತಳೆಯೋ | ಒಲುವಂತೆ ಗುರುನಡಿ ಕಲಿಯೋ | ಸಲಹುವಾಗರದು ದಯ ಮಳಿಯೋ 2 ಜಡಿಯೋದೃಢ ಭಾವನೆಯನು ಹಿಡಿಯೋ | ಕೆಡುವ ಭಾವ ಮೂಲವ ಕಡಿಯೋ | ತಡಿಯದೆ ಮಹಿಪತಿ ದಯ ಪಡಿಯೋ | ಅಡಿಗಳಾಶ್ರಯವನು ಹಿಡಿಯೋ | ಒಡೆಯನಾಜ್ಞೆಯಂದದಿ ನಡೆಯೋ | ಕಡು ಪ್ರೀತಿಲಿ ಸ್ತುತಿ ನುಡಿಯೋ | ಮಡಿದ್ಹುಟ್ಟುವ ಜನ್ಮದ ಮುಡಿಯೋ | ಒಡನ ಹಾದಿದರಿಂದ ಕಡಿಯೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ರಾಗವ ಮಾಡಲ್ಯಾ ನಾನು ಬ್ಯಾಗನೆ ಸಾನುರಾಗದಿ ಹರಿಯು ತಾನೇ ಮಾಡಿಸುವಾ ಪ ದಾನವ ದ್ವಿಪ ವೃಂದ ಮಾನನದಿ ಕರ್ಚಿದ ಮಾನನಿಧಿ ಕೇಸರಿಯೋ ಶ್ರೀಹರಿಯೋ ಅ.ಪ. ಅಜ್ಞಾನ ತಮದೊಳಗೆ ಸುಜ್ಞಾನಿಗಳು ಬಳಲೆ ತಜ್ಞಾನಪೂರ್ಣ ಸರ್ವಜ್ಞರವತರಿಸಿ ಅಜ್ಞಾನದಿಂದ ಗತಿಯಕ್ಕುದೆಂದರುಹಿಸಿದ ಸುಜ್ಞಾನ ದರ್ಪಣವೋ ಶ್ರೀ ಧನವೊ 1 ಕರ್ಮದಿಂದಲೆ ಭಕ್ತಿ ವೈರಾಗ್ಯ ವಿಜ್ಞಾನ ಧರ್ಮವರಿಯಲು ಮುಕ್ತಿಪಥಕೆ ಸೋಪಾನ ಮರ್ಮವರಿಯದೆ ವಿಷಯ ಕಾನನದಿ ಚರಿಸುವ ನರರಿಗೆ.... ಶ್ರೀವರನೊ 2 ವನರುಹಭವಾಂಡದೊಳು ಕುನರ ಸಸಿಗಳು ಬೆಳೆದು ಸುನರ ಕಮಲವು ತೋರದಂತೆ ಮುಸುಕೆ ವನಜದಂದವ ತೋರೆ ನರಸಿಂಹವಿಠಲಾಖ್ಯ ಮುನಿದು ಸದೆ ಬಡೆÉದಗದವೋ ಶ್ರೀ ಮುದವೊ 3
--------------
ನರಸಿಂಹವಿಠಲರು
ಒಂದಾನು ಒಂದು ದಿನ ಶಿಂಧುವಿನೊಳ್ ನೆರೆದು ಬಂದಾರು ದೇವತೆಗಳುವೃಂದಾವು ದುಷ್ಟ ಜನರಿಂದಾಲೆ ಭೂಮಿ ನೊಂದಾಳುಎಂದುಸುರಿತಾ ಪ ಕಂದರ್ಪತಾತ ನಿನಗೊಂದಿಸಿ ಬೇಡುವೆನು ಛಂದಾದಸೂರ್ಯಸುತನಾಮಂದಿರದೋಳ್ ಜನಿಸಿ ನಂದಾದಿ ಗೋಕುಲದಿ ನಿಂದಾತ್ಮಲೀಲೆ ತೋರೊ ಅ.ಪ. ಅಂದಾಡಿದೂತ ಸುರವೃಂದಾರ ವಾಕ್ಯಗಳ ಕಿವಿಯಿಂದಾಲೆಕೇಳಿ ಹರಿಯುಛಂದಾದಿ ನೀವುಗಳು ಮುಂದಾಗಿ ಜನಿಸುವದು ಹಿಂದಾಗಿನಾ ಜನಿಸುವೇಅಂದಾಡಿದಂಥ ಹರಿ ಸುಂದರಾ ಮಾತವನು ತಂದಾನುಬ್ರಹ್ಮ ಮನದೀಇಂದ್ರಾದಿಗಳಿಗೆಲ್ಲ ಅವನಂದದ್ದು ಪೇಳೆ ನಿಜಮಂದಿರಖೋಗಿರೆಂದಾ 1 ಎಲ್ಲಾ ಅಮರರೂ ನಿಜವಲ್ಲಾಭಿಯರು ಸಹ ಅಲ್ಲಲ್ಲೆಜನಿಸುತಿಹರೂಫುಲ್ಲಾಕ್ಷತಾ ಮಥುರೆಯಲಿಟ್ಟು ಗೋಕುಲದಿ ಮೆಲ್ಲಾನೆಬೆಳೆಯುತಿರಲುಅಲ್ಲಿದ್ದ ಗೋಪಿಯರು ಯಲ್ಲಾರು ತಾವು ನಿಜವಲ್ಲಾಭೆರೆಂದು ಹರಿಯೋಳ್‍ಎಲ್ಲಾನು ಬಿಟ್ಟು ಅವನಲ್ಲಿಗೆ ಸ್ನೇಹವನು ಉಲ್ಹಾಸಮಾಡುತಿರಲು 2 ವ್ರಜ ಕರ ವೃಂದಾವನದಲ್ಲಿಳುಹಿದಾ 3 ವಂದೀನ ರಾತ್ರಿ ರವಿನಂದಿನಿಯೋಳ್ ಹರಿಯುನಿಂದೂದಲಾಗ ಕೊಳಲುವೃಂದಾದರಾಗಗಳಿಂದಾಲೆ ಕೇಳಿ ವ್ರಜದಿಂದಾವರಾನಿಹರೂಮಂದೀರದೊಳಗೆ ನಿಜ ಕಂದಾರು ನಾಥಗಳು ಛಂದಾದವಸ್ತ್ರಂಗಳುವಂದಾನು ನೋಡದಲೆ ವಂದಾರು ಯಮುನೆಯಲಿಂದಾರುಮೈಯ್ಯ ಮರೆತು 4 ಬಂದೇವು ನಾವು ನಿಜ ಮಂದೀರ ಬಿಟ್ಟು ನಿಮ್ಮ ಸುಂದರಕೊಳಲ ಧ್ವನಿಗೇಛಂದಾದ ಸ್ಮರಣೆ ಸುಖದಿಂದಿತ್ತು ನಮಗೆ ದ್ವಿಜೇಂದ್ರೇತಕಾಯೋ ಯನಲುಅಂದಾವರಾಮಾತು ನಂದಾನುಸೂನ ದಯದಿಂದಾಲೆಕೇಳಿ ಹರಿಯೂಮುಂದಣಿಯಾಗ ಅವರಿಂದಾಲೆ ಕೂಡಿ ದಯದಿಂದಾಲೆನಲಿದು ಮರೆದೂ 5 ಬಂದಾನು ಮಥುರೆಯಲಿ ಕೊಂದಾನು ಮಾತುಳನೆತಂದೀಯಾ ಬಂಧನವ ಬಿಡಿಸೀಸಾಂದೀಪಗಿತ್ತು ಕಂದಾನಸೂನ ಕುರು ನಂದಾರಕೊಲ್ಲಿಸಿದನೂಇಂದ್ರತ್ವ ಜ್ವಾಲೆಗಳೂ ಅಂತಿತ್ತು ರಾಜ ಸುಖ ಸಂದೇಹ ಸಂತೋಷದೀಇಂದ್ರಾದಿ ಸರ್ವಸುರ ಸಂದೇಹ ಪ್ರಾರ್ಥಿಸಿದ ಒಂದೊಂದೆ ಮಹಿಮೆಗಳನೂ 6 ಛಂದಾಗಿ ಮಾಡಿದ್ವಶ ಮಡುಹಿಕರ ವೃಂದಾವಪಾಲಿಸಿದನೂನಂದಾತ್ಮ ಜಾತವು ಒಂದೊಂದೆ ಮಹಿಮೆಗಳ ತಂದೊಮ್ಮೆಮನದಿ ಸ್ಮರಿಸೀಬೆಂದಾವು ಪಾಪಗಳು ಬಂದಾವು ಸೌಖ್ಯಗಳುಸಂದೇಹವಿಲ್ಲನಿದರೋಳ್‍ಕಂದಾರ ಕೊಡುವ ಧನ ವೃಂದಾವು ಪೊರೆವಾ ಮಂದೀರವಿತ್ತು ಸಲಹುವ 7 ಇಂದೆನ್ನ ಮಾನಸದಿ ತಂದಾತ್ಮ ರೂಪವನೂ ಛಂದಾಗಿ ಸಂತೈಸಲೀನಂದಬಾಲಾಷ್ಟಕವನೂ ಇಂದುವಾವರು ಪಠಿಸುವಾ ಇಂದಿರೇಶನು ಪಾಲಿಸುವನೂ 8
--------------
ಇಂದಿರೇಶರು
ಜೀವಾ ತಿಳಿ ತಿಳಿ ನಿಜದರಿವಾ ಪ ಶಾಂತಮಯಾ ಆನಂದನಿಕಾಯ ಮನಸಿನ ಮೂಲದಾ ಘನಪದವಾ ಅ.ಪ. ಕಲ್ಪನಾಜಾಲದಾ ನಾಶದ ಸ್ಥಿತಿಯೇ ಪರಮಸೌಖ್ಯದಾ ನಿಧಿಯನು ನೀನೇ ಮನದಲಿ ಯೋಚಿಸಿ ತಿಳಿನಿನ್ನಾ 1 ಜನನಮರಣದಾ ಸಂಕಲೆ ಹರಿಯೋ ಘನವಿವೇಕದಾ ಬಲದಲಿ ತಿಳಿಯೋ ಸನ್ನುತ ಶಂಕರಗುರುಬೋಧಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ನಾ ನಿಮ್ಮ ದಾಸನಯ್ಯಾ ಸೀತಾರಾಮಾ ಪ ನಾನು ನಿಮ್ಮಯದಾಸನಹುದೊ ನೀನು ಯೀಜಗದೀಶನಹುದೊ ಭಾನು ಕೋಟಿ ಪ್ರಕಾಶನೇ ಸಂಗೀತ ಗಾನ ವಿನೋದರಂಗಾ 1 ಮತಿಹೀನ ನಾನಾದೆನೈ ಶಾಶ್ವತನಾ ಸ ದ್ಗತಿಯ ನೋಡದೆ ಹೋದೆನೈ ಹಿತವ ಪಾಲಿಸಬೇಕೊ ವೋ ಶ್ರೀ ಪತಿತಪಾವನ ರಂಗನಾಯಕ ಸತಿ ಶಿರೋಮಣಿ ಪರಮಸೀತಾ ಪತಿಯೆ ನಾನಿನ್ನ ಸುತನು ಕಾಣೈ 2 ಕಂದಯ್ಯಗಾರುಗತಿ ನಿನ್ನಯ ಚಲ್ವ ಚಂದಗಾದವೆ ಶೃತೀ ಹಿಂದೆ ಮಾಡಿದ ಕೊಲೆಗಳಂ ಬೆನ್ನ ಮುಂದೆ ಬಾರದಂತದ ಹರಿಯೋ ಇಂದಿರೇಶ ಮುಕುಂದ ಪರಮಾ ನಂದ ತುಲಸೀರಾಮ ದೇಶಿಕಾ 3
--------------
ಚನ್ನಪಟ್ಟಣದ ಅಹೋಬಲದಾಸರು
ವಾಸುದೇವನ ಭಜಿಸೊ ಪ ವೇಷಹಾಕಿದರೇನು ವೇದಾರ್ಥ ತಿಳಿದೀತೆ ಅ.ಪ ಉದರಂಭರಣಕ್ಕಾಗಿ ಪದ ಪದ್ಯಗಳ ಹೇಳಿ ತುದಿಮೊದಲಿಲ್ಲದ ದೋಷಕೆ ಗುರಿಯಾಗಿ ಸದಮಲನೆಂದರೆ ಸರ್ವರು ನಗರೇನೊ 1 ದುರಿತ ಪರಿಹರವೆಂದು ಆಡುತಲಿದೆ ಶೃತಿಯು ಕರಣತ್ರಯವು ಶುದ್ಧಿಯಿರ ಬೇಕದಕೆ ಮುಖ್ಯ ಕಾರಣ ಬಾಯಿಂದ ನುಡಿದರೇನಾಯಿತು2 ಪಂಚಸದ್ವರ್ಣಾವು ಪರಮಾತ್ಮನ ನಾಮ ವಂಚನೆ ಇದರೊಳಿಲ್ಲಾ ಸರ್ವರು ನುಡಿವರು ಗರ್ವವೇತಕೆ ನಿನಗೆ 3 ಕಾಲಕಾಲಕೆ ಹರಿಯೋಲಗವ ಮಾಡಿ ವೇಳೆಗೆ ದೊರೆತದ್ದು ಭುಂಜಿಸುತಲಿ ಲಕ್ಷ್ಮೀ- ಲೋಲನ ಕಂಡ ಕಂಡಲಿ ಸ್ಮರಣೆಗೈದೂ 4 ಹೊರಗೆ ಡಂಭವ ಬಿಡು ಒಳಗೆ ನಿಶ್ಚಲನಾಗು ಪರರಿಗೆ ಹಿತವ ತೋರು ಗುರುರಾಮವಿಠಲನು ಕರುಣದಿ ಕೈಪಿಡಿದು ಪರಮಸೌಖ್ಯವನೀವ ನಿಜಭಕ್ತನಾದರೆ 5
--------------
ಗುರುರಾಮವಿಠಲ
ರಾಯನ ನೋಡಿರೋ - ಮಧ್ವ - ರಾಯನ ಪಾಡಿರೊ ಪಅಂಜನೆಯಲಿ ಹುಟ್ಟಿ ಅಂಬರಕಡರಿದಹರಿಯೋ - ಸಿಂಹದ - ಮರಿಯೋ |ಕಂಜಾಕ್ಷಿಯ ಸುದ್ದಿಗೆ ಶರಧಿಯ ಲಂಘಿಸಿದ-ಪುರ- ಸಂಧಿಸಿದಅಂಜದೆ ವನವನು ಕಿತ್ತಿದ ಪುರವನುಸುಟ್ಟ - ತಾ ಬಲು - ದಿಟ್ಟಾ |ಸಂಜೀವನ ಗಿರಿ ತಂದು ವಾನರರಪೊರೆದಾ - ರಾಮನ - ಬೆರೆದಾ 1ಕುಂತಿ ಕುಮಾರನು ಶೀಮೆಗೆ ಹರುಷದಿಬೆಳೆದ - ಖಳರನು - ತುಳಿದ |ಅಂತ ಕೌರವ - ದುಶ್ಯಾಸನರಾ ಶಿರತರೆದಾ - ಚಲವನು - ಮೆರೆದ |ಸಂತಾಪವ ಪಡಿಸಿದ ಕುಜನಕೆ ಭೀಮ -ನಾದ -ಸನ್ನುತ- ನಾದ |ಕಂತುಜನಕಶ್ರೀ ಕೃಷ್ಣನ ಪಾದದಿಬಿದ್ದ - ಮದಗಜ - ಗೆದ್ದ 2ಮುನಿಕುಲದಲಿ ಉದಿಸಿದ ಗುರುಮಧ್ವ ತಾನಾದ - ಧರೆಯಲಿ - ಮೆರೆದ |ಅನಿಮಿಷರೊಡೆಯ ಶ್ರೀವೇದವ್ಯಾಸರಚರಣ-ಅನುದಿನ- ಸ್ಮರಣ |ಕನಸೊಳು ಕಾಣದ ಅದ್ವೈತಂಗಳಮುರಿದ - ತತ್ತ್ವ - ತೋರಿದ |ಘನಮಹಿಮ ಶ್ರೀಪುರಂದರವಿಠಲನದಾಸ - ಪಡೆದ - ಸನ್ಯಾಸ 3
--------------
ಪುರಂದರದಾಸರು