ಒಟ್ಟು 9 ಕಡೆಗಳಲ್ಲಿ , 4 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲಾಭಿಮಾನಿಯೇ ಕೇಳೆನ್ನ ಬಿನ್ನಪವಾ ಪ ಕೀಲಿಸಿತು ಯೆನ್ನಾಯು | ಕಾಲಾತ್ಮಕನ ತೋರೋ ಅ.ಪ. ಖೇಟಪತಿ ನೀ ನನ್ನ ಪಾ | ಪಾಟವಿಯ ಕುಡಿನೋಟದಿಂದಲೆ ದಹಿಸಿ | ಶ್ರೇಷ್ಠ ನೆನಿಸೋ |ಸಾಟಿಯುಂಟೇ ನಿನಗೆ ಮೂ | ರ್ಕೋಟಿ ರೂಪಧರಖೇಟ ಮುಖ್ಯ ಪ್ರಾಣ | ಪ್ರೇಷ್ಟ ಸುತನೆನಿಸಿ 1 ಬಲಿಯು ವಂಚನೆಯಿಂದ | ಹರಿಯ ಮುಕುಟಾಭರಣಸುಲಭದಲಿ ಕದ್ದು ತಾ | ಕೆಳ ಲೋಕ ಪೊಗಲು |ಬಲದೊಳವನನ ನೂಕಿ | ಕಲಿತನವ ತೋರ್ಯವಗೆಲಲಿತ ವಹ ಶಿರದೊಡವೆ | ಸುಲಭದಲಿ ತಂದೇ 2 ವರ ಕಶ್ಯಪಾತ್ಮಜನೆ | ಹರಿಗೆ ವಾಹನನಾಗಿಚರಿಪೆ ತ್ರೈಜಗವನ್ನು | ಶರಣ ಪರಿಪಾಲಾ |ಗುರು ಗೋವಿಂದ ವಿಠಲನ | ಕರುಣ ನಿನ್ನೊಳಗೆಂತೊಹರಿಯೊಡನೆ ನೀನಾಗಿ | ದರುಶನವನೀಯೊ 3
--------------
ಗುರುಗೋವಿಂದವಿಠಲರು
ಕೊಲ್ಹಾಪುರದ - ವಾಸಿನೀ | ಹೇ ಮಹಾಲಕ್ಷ್ಮಿಸೊಲ್ಲ ಲಾಲಿಸೇ ಮಾನಿನೀ ಪ ಬಲ್ಲವರಲ್ಲಿಗೆ ನಿಲ್ಲದೆ ತೆರಳಿಸೆಖುಲ್ಲರ ದಲ್ಲಣ | ನಲ್ಲರಿಸೆ ಮನ ಅ.ಪ. ಭೃಗುಮುನಿಯೂ ತಾ ಬರುತಾ | ವಕ್ಷಘಾತವಾಗಲು ತವ ತಾಣ - ತಾಡಿತ |ಅಗಡ ಮುನೀಗೆ ಪ್ರೀತಾ | ನಾಗುತಲಕುಮಿಗೆ ಅವನು - ಆದ್ರುತದೃಗಜಲಜಿಗಿಸುತ | ಹಗರಣಗೆಯ್ಯುತಜಗಳವ ನಟಿಸುತ | ನಗಧರನಲಿ ನೀನುಜಗದೊಡೆಯನ ಮನ | ಬಗೆಯನು ತಿಳಿಯುತಸೃಗಾಲ ಪುರಕಾಗಿ ಆಗಮ ನಿನ್ನದೂ 1 ಇಂಥಹ ನಿಮ್ಮ ಆಟವೂ | ಭಕ್ತರ ಮುಕ್ತಿಪಂಥವೆನಿಪ - ಮಾರ್ಗವೂಸಂತರ ಅಂತರಂಗವೂ | ನಿರ್ಮಲಿನ ಮುಕ್ತಿಕಾಂತೆಯೊಡನೆ ಆಟವೂ |ಅಂತರಂಗದಲಿಪ್ಪ ಗ್ರಂಥಿಸು ಭೇದನಸಂಚಿತಗಳು ನಾಶ | ಮುಂಜೆನ ನಿರ್ಲೇಪಅಂತರಂಗದಿ ಹರಿ | ಕಾಂತಿಯ ದರ್ಶನಎಂತು ನಾ ಪೇಳಲಿ | ಪಂಥಕೀರ್ತಾಳೀ 2 ಕುಂಡಲ ಕಪೋಲೆ | ಕಿರೀಟ ಮೌಳೇತಿಲಾಲಜ ಕರೆ ಕೋಮಲೇ ||ಕೇಳಿಲಿ ಯಮುನಾ ಕೂಲೇ | ಹರಿಯೊಡನೆ ಲೀಲೇತೂಳಿದಾನಂದ ಸುಜಾಲೇ ||ಕಾಲಕೂಟ ಸಮ | ಕೀಳು ವಿಷಯದಲಿಬೀಳುವುದೆನ ಮನ | ಲಾಲಿಸು ಹೇ ತಾಯೇಶೀಲನೆನ ಹರಿ ಗುರು | ಗೋವಿಂದ ವಿಠಲನ ||ಲೀಲೆಯ ತೋರು | ವಿಶಾಲ ಹೃದಯಳೇ 3
--------------
ಗುರುಗೋವಿಂದವಿಠಲರು
ಲಕ್ಷ್ಮೀದೇವಿ ಕಮಲಾಕ್ಷಿ ತಾಯೆ ಸೂಕ್ಷ್ಮಮತಿಯನಿತ್ತು ಪೊರೆದು ರಕ್ಷಿಪದೇವಿ ಪ ಹರಿಯರಾಣಿ ಭುಜಗವೇಣಿ ಪರಿಪರಿಯ ಕ್ಲೇಶಗಳಳಿವ ದುರಿತದೂರನ ಕರಪಿಡಿಯುತ ಬಾ ಪರಿ ವೈಭವದಿ 1 ವಂದಿಸುವೆ ನಿನ್ನ ಪದಕೆ ಅಂಬುಜಾಕ್ಷಿ ಕರುಣವ ಮಾಡಿ ಕಂಬು ಕಂಧರನೊಡಗೂಡುತ ಬಾ ಸಂಭ್ರಮ ಸೂಸುತಲಿ 2 ಗೆಜ್ಜೆ ಪೈಜನಿ ಪಾಡಗರುಳಿಯು ಸಜ್ಜಾಗಿಹ ಕಾಲುಂಗುರ ಧ್ವನಿಯ ಮೂರ್ಜಗದೊಡೆಯನ ಕರಪಿಡಿಯುತ ಬಾ ಸಜ್ಜನ ರಕ್ಷಕಳೆ 3 ನಡುವಿಗೆ ನವರತ್ನದ ಪಟ್ಟಿ ಬಿಡಿಮುತ್ತುಗಳುದುರುವ ಪೀತಾಂಬರ ಬಡನಡÀು ಬಳುಕುತ ಅಡಿ ಇಡು ಬಾ ನಿ- ನ್ನೊಡೆಯನ ಕೂಡುತಲಿ 4 ಕರದಲಿ ಕಂಕಣ ಹಾಸರ ಬಳೆಗಳು ಬೆರಳಲಿ ಉಂಗುರ ಥಳಥಳಿಸುತಲಿ ಗರುಡಗಮನ ನೊಡಗೂಡುತ ಬಾ ಬಾ ಗರುವವು ಮಾಡದಲೆ5 ವಂಕಿನಾಗಮುರುಗಿ ಕರದಲಿ ಬಿಂಕದಿ ಪಿಡಿದಿಹ ತಾವರೆ ಕುಸುಮವು ಪಂಕಜಾಕ್ಷನೊಡಗೂಡುತ ಮನ ಶಂಕೆಯು ಮಾಡದಲೆ6 ಕಠ್ಠಾಣಿಸರ ಪದಕಗಳ್ಹೊಳೆಯುತ ಕಟ್ಟಿದ ಉಂಗುರಡ್ಡಿಕಿ ಶೋಭಿಸುತ ಚಿತ್ತಜನಯ್ಯನನೊಡಗೂಡುತ ಬಾ ಮತ್ತೆ ಹರುಷದಲಿ 7 ಥಳಥಳಿಸುವ ಗಲ್ಲಕೆ ಅರಿಶಿನವು ನಲಿಯುವ ಮೂಗುತಿ ಮುಖುರ ಬುಲಾಕು ಹೊಳೆವ ಮೀನು ಬಾವಲಿ ಚಳತುಂಬುಗಳ್ಹೊಳೆಯುತ ಘಳಿಲನೆ ಬಾರಮ್ಮ 8 ಕುರುಡಿ ಬಾವಲಿ ಬುಗುಡಿ ಚಂದ್ರ ಮುರುವಿನ ಕಾಂತಿ ಮುಗುಳ್ನಗೆ ಮುಖವು ಉರುಗಾದ್ರೀಶನ ಕರಪಿಡಿಯುತ ಬಾ ಕರೆ ಕರೆ ಮಾಡದಲೆ 9 ಘಣೆಯಲಿ ಕುಂಕುಮ ಬೈತಲೆ ಬಟ್ಟು ಥಳಥಳಿಸುವ ಕಣ್ಣಿಗೆ ಕಪ್ಪಿಟ್ಟು ಎಳೆಬಾಳೆಯ ಸುಳಿಯಂದದಿ ಬಳುಕುತ ಘಳಿಲನೆ ಬಾರಮ್ಮ10 ಕೆಂಪಿನ ರಾಗುಟಿ ಜಡೆ ಬಂಗಾರವು ಸಂಪಿಗೆ ಮಲ್ಲಿಗೆ ಸರಗಳ ಮುಡಿದು ಸೊಂಪಿಲಿ ಶ್ರೀ ಹರಿಯೊಡನಾಡುತ ನಲಿಯುವ ಸಂತಸ ತೋರಮ್ಮ11 ಇಂದಿರೆ ಶ್ರೀರಮೆ ಭಾರ್ಗವಿಯೆ ನಂದತ್ರಯಾ ಸದಾಸುಶೀಲೆ ಸುಗಂಧಿ ಸುಂದರಿ ಮಂದಗ ಮನೆಯೆ ಚಂದದಿ ಬಾರಮ್ಮ 12 ಸುತ್ತೆಲ್ಲ ಸುರಸ್ತ್ರೀಯರು ಮುತ್ತಿನ ಛತ್ರ ಚಾಮರದರ್ಪಣ ಪಿಡಿದು ನೃತ್ಯಗಾಯನ ಮಾಡುತ ಕರೆವರು ಸತ್ವರ ಬಾರೆನುತ 13 ಶ್ರಮ ಪರಿಹರಿಸೆನುತಲಿ ಬೇಡುವೆನು ಮಮತೆಲಿ ಕರಗಳ ಮುಗಿಯುತ ಬೇಡಲು ಕಮಲನಾಭ ವಿಠ್ಠಲನೊಡನೆ ಶ್ರೀ- ಕಮಲೆಯು ಬರುತಿಹಳು14
--------------
ನಿಡಗುರುಕಿ ಜೀವೂಬಾಯಿ
ವಾರಿಜ ನಯನಳಿಗೇ | ನಾರೇರುಆರುತಿಯನು ಬೆಳಗೇ ಪ ಕ್ಷೀರಸಾಗರ ಭವೆ | ಹಾರ ಪಿಡಿದು ಕೈಲಿಮಾರ ಪಿತನು ಹರಿ | ಸರ್ವೋತ್ತಮಗ್ಹಾಕಿದಅ.ಪ. ಪಟುತರಾಂಗ ಹರಿಯ | ಪ್ರಳಯದಿಎಟಪದದುಂಗುಟ ಸವಿದೂ ||ನಟನೆಗೈಯ್ಯೆ ನಿದ್ರೆ | ವಟದೆಲೆ ಹಾಸಿಕೆತೃಟಿಯಲಿ ಜಲನಿಧಿ | ಕಟುತರ ತಮರೂಪಿ 1 ಕೃತಿ ಶಾಂತೇ | ರೂಪದಿಭಾರ್ಯಳಾಗಿ ವ್ಯಕ್ತೇ ||ಕಾರ್ಯವ್ಯೂಹ ಆ | ಯಾಯ ಸೃಷ್ಟಿಯಲಿಗೈಯ್ಯುತ ಹರಿಯೊಡ | ಕಾರ್ಯ ಸಾಧಕೆಗೇ 2 ಇಂಬಿನೊಳ್ ಪತಿ ಗುರು | ಗೋವಿಂದ ವಿಠಲಾ3
--------------
ಗುರುಗೋವಿಂದವಿಠಲರು
ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ ಯದುಪತಿಯನಗಲಿಸಿದ ಒಮ್ಮಿಂದಲೊಮ್ಮೆ ಅ.ಪ. ಎವೆಯ ಮರೆಯ ಮಾತನಾಡಿ ಪೋದ ಯಾಕೋ ವಿಧಿಯೇಸುಳಿಗುರುಳು ಕಡೆಗಣ್ಣ ನೋಟದಿಂದಲಿಕವಕವಿಸಿ ನಗುವ ಮುದ್ದು ಮುಖವನುತವಕದಿಂದ ಮರಳಿ ಮರಳಿ ನೋಡದ್ಹೋದೆವೆ 1 ಹಕ್ಕಿಯ ಮ್ಯಾಲುಳ್ಳ ದಯ ನಮ್ಮ ಮ್ಯಾಲೆಇಕ್ಕದೇಕೆ ಹೋದ್ಯೋ ವಿಧಿಯೇರೆಕ್ಕೆ ಎರಡುಳ್ಳರೆ ಮಧುರೆಗೆ ಪೋಗಿಫಕ್ಕನೆ ಶ್ರೀ ಹರಿಯೊಡನೆ ಕೂಡುತಿದ್ದೆವಲ್ಲ 2 ತಂಗೀ ನಮ್ಮೆದೆಯು ಕಲ್ಲಾಗಿ ಇದ್ದೇವೆಹಿಂಗುವರೆ ಸಖಿಯರು ಒಮ್ಮಿಂದಲೊಮ್ಮೆರಂಗವಿಠಲನ್ನ ಅಂಗ ಸಂಗವ ಬಿಟ್ಟು ಇಂಥಭಂಗ ಜೀವ ಸುಡ ಸುಡ ಸುಡಲ್ಯಾತಕೋ 3
--------------
ಶ್ರೀಪಾದರಾಜರು
ಹರಿಹರರು ಸರಿಯೆಂಬ ಮರುಳು ಜನರುಹರಿಹರರ ಚರಿತೆಯನು ತಿಳಿದು ಭಜಿಸುವುದು ಪ ಸುರರು ಮುನಿಗಳು ಕೂಡಿ ಪರದೈವವಾರೆಂದುಅರಿಯಬೇಕೆಂದೆರಡು ವರಧನುಗಳಹರಿಹರರಿಗಿತ್ತು ಸಂಗರವ ಮಾಡಿಸಿ ನೋಡೆಮುರಹರನು ಪುರಹರನ ಗೆಲಿದುದರಿಯಾ 1 ಕರವ ಶಿರದ ಮ್ಯಾಲಿರಿಸಿ ಖಳ-ನುರುಹಿ ಹರನನು ಕಾಯಿದ ಕಥೆಯ ನೀನರಿಯಾ 2 ದೂರ್ವಾಸರೂಪ ಹರನಂಬರೀಷನ ಮುಂದೆಗರ್ವವನು ಮೆರೆಸಿ ಜಡೆಯನು ಕಿತ್ತಿಡೆಸರ್ವಲೋಕದೊಳವನ ಚಕ್ರನಿಲಲೀಯದಿರೆಉರ್ವೀಶನನು ಸಾರಿ ಉಳಿದನರಿಯಾ 3 ಹರನಂಶ ದ್ರೋಣಸುತನು ಪಾಂಡವಾ ಎಂದುಉರವಣಿಸಿ ನಾರಾಯಣಾಸ್ತ್ತ್ರವನು ಬಿಡಲು ಹರಿ ಬಂದು ಬೇಗ ತನ್ನಸ್ತ್ರವನು ತಾ ಸೆಳೆದುಶರಣಾಗತರ ಕಾಯಿದ ಕಥೆಯನರಿಯಾ 4 ನರನಾರಾಯಣರು ಬದರಿಕಾಶ್ರಮದಲಿರೆಹರನು ಹರಿಯೊಡನೆ ಕದನವನು ಮಾಡೆಹರಿ ಹರನ ಕಂಠವನು ಕರದಲಿ ಪಿಡಿದು ನೂಕೆಕೊರಳ ಕಪ್ಪಾದ ಕಥೆ ಕೇಳಿ ಅರಿಯಾ 5 ಹರಿ ಸುರರಿಗಮೃತವನು ಎರೆದ ರೂಪವನೊಮ್ಮೆಹರ ನೋಡುವೆನೆಂದು ಸಂಪ್ರಾರ್ಥಿಸೆಪರಮ ಮೋಹನ ರೂಪಲಾವಣ್ಯವನು ಕಂಡುಹರ ಮರಳುಗೊಂಡ ಕಥೆ ಕೇಳಿ ಅರಿಯಾ 6 ಹರಿಯ ಮೊಮ್ಮನ ಬಾಣಾಸುರನು ಸೆರೆವಿಡಿಯೆಗರುಡವಾಹನನಾಗಿ ಕೃಷ್ಣ ಬಂದುಹರನ ಧುರದಲಿ ಜಯಿಸಿ ಅವನ ಕಿಂಕರನ ಸಾ-ವಿರ ತೋಳುಗಳ ತರಿದ ಕಥೆಯ ನೀನರಿಯಾ 7 ಸುರತರುವ ಕಿತ್ತು ಹರಿ ಸುರಲೋಕದಿಂದ ಬರೆಹರನು ಹರಿಯೊಡನೆ ಕದನವನು ಮಾಡೆತರಹರಿಸಲಾರದೋಡಿದ ಕಥೆಯ ನೀನೊಮ್ಮೆಹಿರಿಯರ ಮುಖದಿ ಕೇಳಿ ನಂಬು ಹರಿಯಾ 8 ಹರಸುತನು ತಪದಿಂದ ಹರಿಯ ಚಕ್ರವ ಬೇಡೆಪರಮ ಹರುಷದಲಿ ಚಕ್ರವನೀಯಲುಭರದಿಂದ ಧರಿಸಲಾರದೆ ಚಕ್ರವನಂದುಹರನು ಭಂಗಿತನಾದನೆಂದರಿಯಲಾ 9 ರಾವಣಾಸುರ ಕುಂಭಕರ್ಣ ನರಕಾದಿಗಳುಶೈವತಪವನು ಮಾಡಿ ವರವ ಪಡೆಯೆಅವರುಗಳನು ವಿಷ್ಣು ನರರೂಪಿನಿಂದರಿದುದೇವರ್ಕಳನು ಕಾಯಿದ ಕಥೆಯ ನೀನರಿಯಾ 10 ಗಂಗಾಜನಕನÀ ಸನ್ಮಂಗಲ ಚರಿತ್ರ್ರೆಗಳಹಿಂಗದಲೆ ಕೇಳಿ ಸುಖಿಸುವ ಜನರಿಗೆಭಂಗವಿಲ್ಲದ ಪದವನಿತ್ತು ಸಲಹುವ ನಮ್ಮರಂಗವಿಠ್ಠಲರಾಯನ ನೆರೆ ನಂಬಿರೋ11
--------------
ಶ್ರೀಪಾದರಾಜರು
ಹೆಜ್ಜೆ ತೋರೆ ಕಾಲಗೆಜ್ಜೆ ತೋರೆ ಸಾರಥಿ ಪಟ್ಟದ ರಾಣಿ ಹೆಜ್ಜೆ ತೋರೆ ಪ ಕಾಲಲಂದಿಗೆ ನೂಪುರವಿಟ್ಟ ಹೆಜ್ಜೆ ತೋರೆ ಕಾಳಿಮರ್ದನ ಕೃಷ್ಣನರಸಿಯೆ ಹೆಜ್ಜೆ ತೋರೆ ಕಾಲಸರವು ಪಾಡಗನಿಟ್ಟ ಹೆಜ್ಜೆ ತೋರೆ ಕಾಳಿಂದಿ ರಮಣನ ಸತಿಯೆ ಹೆಜ್ಜೆ ತೋರೆ 1 ಬಡವರ ಮನೆಗೆ ನಡದು ಬರುವ ಹೆಜ್ಜೆ ತೋರೆ ಬಡನಡು ಬಳುಕುತ ನಡೆಯುವ ಪುಟ್ಟ ಹೆಜ್ಜೆ ತೋರೆ ಸಡಗರದಲಿ ಹರಿಯೊಡನೆ ಬರುವ ಹೆಜ್ಜೆ ತೋರೆ ಪೊಡವಿಗೊಡೆಯ ಶ್ರೀ ಕೃಷ್ಣನರಸಿಯೆ ಹೆಜ್ಜೆ ತೋರೆ2 ಲುಲ್ಲುರುಳಿ ಪೈಜನಗಳು ಹೊಳೆವ ಹೆಜ್ಜೆ ತೋರೆ ಉಲ್ಲಾಸದಿ ಸುರರೆಲ್ಲರು ಸ್ತುತಿಪ ಹೆಜ್ಜೆ ತೋರೆ ಫುಲ್ಲಾಕ್ಷನ ಒಡಗೂಡುತ ಬರುವ ಹೆಜ್ಜೆ ತೋರೆ3 ಪದ್ಮ ರೇಖೆಗಳಿಂದ ಶೋಭಿಪ ಹೆಜ್ಜೆ ತೋರೆ ಪದ್ಮನಾಭನ ಕೂಡಿ ಬರುವ ಹೆಜ್ಜೆ ತೋರೆ ಪದ್ಮದೊಳು ಪುಟ್ಟಿರುವ ಪುಟ್ಟ ಹೆಜ್ಜೆ ತೋರೆ ಪದ್ಮಮುಖಿಯೆ ಶ್ರದ್ಧೆಲಿ ಭಜಿಪರು ಹೆಜ್ಜೆ ತೋರೆ4 ವಿರೋಧಿಕೃತ ಸಂವತ್ಸರ ಬರುತಿರೆ ಹೆಜ್ಜೆ ತೋರೆ ವಿರೋಧಿಗಳ ದೂರೋಡಿಪ ದಿವ್ಯ ಹೆಜ್ಜೆ ತೋರೆ ಸರೋಜದಳದೊಳು ಶೋಭಿಪ ದಿವ್ಯ ಹೆಜ್ಜೆ ತೋರೆ ಸುರರೆಲ್ಲರು ಕೊಂಡಾಡುತ ಸ್ತುತಿಪ ಹೆಜ್ಜೆ ತೋರೆ5 ನಿಗಮವೇದ್ಯಳೆ ನಿನ್ನ ಪೊಗಳುವೆ ಹೆಜ್ಜೆ ತೋರೆ ಅಗಣಿತ ಮಹಿಮನ ಗುಣಗಳ ಪೊಗಳುವೆ ಹೆಜ್ಜೆ ತೋರೆ ಬಗೆ ಬಗೆ ಭಕುತರು ಪೂಜಿಪ ನಿನ್ನ ಹೆಜ್ಜೆ ತೋರೆ ಖಗವಾಹನನೊಡಗೂಡುತ ಬರುವ ಹೆಜ್ಜೆ ತೋರೆ6 ಕಮಲ ಮುಖಿಯೆ ಕರುಣವ ಮಾಡಿ ಹೆಜ್ಜೆ ತೋರೆ ಕಮಲನಾಭ ವಿಠ್ಠಲನ್ನ ರಾಣಿ ಹೆಜ್ಜೆ ತೋರೆ ಕಮಲಾಕ್ಷಿಯರಿಂದ ಪೂಜೆಗೊಳ್ಳುವ ಹೆಜ್ಜೆ ತೋರೆ ಸುಮನಸವಂದ್ಯನ ಸತಿಯೆ ನಮಿಪೆ ಹೆಜ್ಜೆ ತೋರೆ7
--------------
ನಿಡಗುರುಕಿ ಜೀವೂಬಾಯಿ
ಏನು ಭ್ರಮೆ ಮನುಜ ನಿನಗ್ಯಾಕೆ ಹರಿಭಟರಹಗೆಪರಮಾನಿನಿಯ ಸಂಗ ನರಕದೊಳು ಬಲುಭಂಗಪ.ಮಬ್ಬು ಮುಸುಕಿದ ಪರಿಯ ನಿಜಸತಿಯ ನೋಡದೆ ಮತ್ತೊಬ್ಬಳ ಕುಚಕೆ ಕಮಲವ ಹೋಲಿಸಿಕೊಬ್ಬು ಮೈಯವಳ ಸಖವಿಡಿದರದು ಮಹಾಶೋಕತಬ್ಬಿಬ್ಬುಗೊಳುತ ನಿರಯಂಗಳುಂಬೆ 1ಇಂದುಮುಖಿಯಳ ಸಂಗ ಎನಗಿಂದು ಕೈಗೂಡಲೆಂದೊಬ್ಬ ಕುಂಟಣಿಗೆ ಧನವಿತ್ತೆ ನಿನ್ನಸಂದುಗಳ ಕಡಿದು ವೈತರಣಿ ಸಲಿಲದಿ ದೇಹಹೊಂದಿಸುವರುಂಟು ಕಾಲನ ಕುಂಟಣಿಗರು 2ಚಿಕ್ಕಬಲೆಯರ ಕಂಡು ಚಂಚಲಿತನಾಗ್ಯವರವಕ್ರನೋಟದಿ ಹಲವು ಸನ್ನೆಯಿಂದತರ್ಕೈಸಬೇಕೆಂಬ ಲಂಪಟದಿ ತಪ್ತಾದಶರ್ಕರಾಯಸ ಸ್ತಂಭವಪ್ಪಿ ಪೊರಳೇಳುವೆ 3ಹರಿದಾಸರಾಚಾರ ಕೇಳಲಸಿ ಪಳಿದೊರೆದುಒರಟು ಮಾತಿನ ಸರಕಲಾಯುಗಳಿದೆವಿರತಿಜ್ಞಾನಾನ್ವಿತರ ವೆರಸದಂಧಕನಾದೆತರಣಿಯೊಳು ಹೊಂಬುಳವು ಗರುವಿಸಿದ ತೆರದಿ 4ಜಂಬುಕವು ಹರಿಯೊಡನೆ ಸರಸವಾಡಿದ ಪರಿಯೊಳಂಬುಜಾಕ್ಷನ ದಾಸನಿಂದೆ ಮಾಡಸಲ್ಲಕುಂಭಿಪಾಕಿನಿಯಲ್ಲಿ ಮರಳಿಸುವ ಭಯವರಿತುನಂಬು ಪ್ರಸನ್ವೆಂಕಟೇಶನಂಘ್ರಿಯ 5
--------------
ಪ್ರಸನ್ನವೆಂಕಟದಾಸರು