ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಹುದಹುದು ದೀನ ಬಂಧು ಅಹುದಹುದು ದೀನಬಂಧು|ಶ್ರೀ ಕೃಷ್ಣ| ಸಹಕಾರಿ ಶರಣ ಜನರಾ ಹರಿಯೇ ಪ ಕಪ್ಪೆಮರಿ ಅಂದರೇನು|ಕಾಯ್ದಿರುವಾ| ಅಪ್ಪವಿನೋಳು ಬಳಲುತ|ಹರಿಯೇ| ಸರ್ಪಶಯನೆಂದು ಕರೆಯೆ|ಬಂದೊದಗಿ| ಒಪ್ಪಿಕೊಳ್ಳಬೇಕು ದಯದಿ ಹರಿಯೇ 1 ಪಕ್ಷಿತತ್ತಿಯು ಬೀಳಲು|ಭಾರತ ಮಹಾ| ಅಕ್ಷೋಹಿಣಿ ರಣದಲಿ ಸಲವೆಂದು| ಗಜ ಘಂಟೆಯಾ|ನೀ ಕೆಡಹಿ| ರಕ್ಷಿಸಿದ ಮುಸುಕಿ ಅವರ ಹರಿಯೇ 2 ಕಬ್ಬುಲಿಗ್ಯಾತದ ರೂಪದೀ ಕಪಟದಲೀ| ಒಬ್ಬರಾಯನ ಕನ್ಯೆಯಾ ಭೋಗಿಸುತ| ನಿಬ್ಬುರಕ ನಿನ್ನ ನೆನೆಯೇ|ಗತಿಗೊಟ್ಟು| ಉಬ್ಬುಸವ ಕಳೆಯಲಿಲ್ಲದೇ ಹರಿಯೇ3 ವ್ಯಭಿಚಾರಿ ಗಣಿಕೆ ತಾನು|ಧನವೀವ| ಪ್ರಭುಗಳೊಂದಿನ ಕಾಣದೇ ವಿರಕ್ತಿಯಲಿ| ವಿಭುನಿನ್ನೀ ಕೀರ್ತನೆಗಳಾ ಮಾಡಲಿಕ್ಕೆ| ಅಭಯ ಪದವಿತ್ತೆ ಬೇಗ ಹರಿಯೇ4 ಹಿಂದಾದ ಕಥಿಗಳಿವನು|ಅಹುದಲ್ಲೋ| ಎಂದಾರು ಬಲ್ಲರಯ್ಯಾ ಮಹಿಪತಿ| ಕಂದರೊಡೆಯನೇ ಎನ್ನ ಕೈ ಪಿಡಿದ| ರಿಂದು ನಿಜವೆಂಬೇ ನಾನು ಹರಿಯೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನ ಸಲಹೋ ಚರಣವನ್ನು ದೋರಿ ಪರಮ| ನಿನ್ನ ಕಿಂಕರನೆಂದು ಘನ್ನದಯವನು ಬೀರಿ ಎನ್ನಾ ಪ ಶರಣ ಜನ ಮಾನ ರಕ್ಷಕನೇ ವರಕಮಲ ಕರಕಮಲ ಪದವಿಮಲ ಮಹಿಮನೇ ಸಕಲ ಗುಣಧಾಮ ಘನಶ್ಯಾಮ ಸುರ ರಿಪು ಮಥನ| ಗೋಕುಲರಿ ಸೋದರಾನಂತ ಗುಣಾ ಶ್ರೀ ಹರಿ ಭಕ್ತರ ವಸರಕೊದಗುವೆ ನೀ ಪರೋಪರಿ| ಸುಕಲ್ಪತರು ದನುಜ ಕುಲಸಂಹಾರ ಸರ್ವದುರಿತ ನಿವಾರಾ 1 ಅಖಿಳ ಶೃತಿ ಸ್ಮøತಿ ನಿಕರಲಿಂದ ನುತಿಸಿಕೊಂಬೆ| ವಿಕಸಿತನುಪಮ ವದನಬ್ಜ ಕುಲ ಅಬ್ಜರವಿ ಪ್ರಕಟದೊಳೊದಗಿ ಬಂದೆ ಸರಸೀರುಹ ನಯನ ಜಗದ ತಂದೇ| ಸಿರಿನಂದ ನಂದನ ಪರಮುದಾರೇ| ಸುರವೃಂದ ರಕ್ಷಕ ವರ ಮುರಾರೇ 2 ಶರಣಾಗತ ಜನರ ಪಾಲಾ| ಸಿರಿ ಉರಗಾರಿಗಮನ ಸೂರಾರಿ ಸಿಬಿಕುಲ| ಶೌರಿ ನರಸಹಕಾರಿ ಗಿರಿಧರನೇ| ಕರುಣಾಕರ ತ್ರಯದಿ ಸ್ಮರಣ ಮಾಳ್ಪರ ಭಯವ| ಹರಣ ಶರಣ ಕೌಸ್ತುಭಾಭರಣ ನೀಲವರಣಾನಂದ3 ವರ ಶ್ರೀರಮಣ ದೇವ ಜಗಜೀವ ಮಹಿಪತಿ ನಂದ ನೊಡಿಯ| ಪರಮಾನಂದ ಜೀವದೊರಿಯೇ| ಭವ ವಿನುತ ಮತಿ ಚರಿತಾ ಸಿಂಧೂರ| ನವನೀತ ಚೋರ ಜಗದೀಶ ಹರಿಯೇ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭೀಮಾ ತಟಗ ವಿಠಲ | ಕಾಪಾಡೊ ಇವಳಾ ಪ ಸನ್ನುತ ದೇವಾ | ಪ್ರಾರ್ಥಿಸುವೆ ಹರಿಯೇ ಅ.ಪ. ಮರುತದಲ್ಲಿಹಳು | ತರುಣಿ ಬಹು ಭಕ್ತಿಯಲಿಹರಿದಾಸ್ಯ ಕುಂಕ್ಷಿಪಳು | ಕರಿವರದ ದೇವಾ |ಗುರುಕರುಣ ಸ್ವಪ್ನದಲಿ | ಹರಿದಾಗಿ ಪಡೆದಿಹಳುತರಳೆಜ್ರಪತಿ ವರದ | ಪರಿಪಾಲಿಸಿವಳಾ 1 ಪಂಚ ಪಂಚಿಕೆಯ ಪ್ರ | ಪಂಚ ಸತ್ಯತ್ವವನುಪಂಚ ಭೇದಗಳರುಹಿ | ಕಾಪಾಡೊ ಹರಿಯೇ |ಅಂಚೆ ವಹ ಪಿತನೆ ಸ | ತ್ತರತ ಮತ ತಿಳಿಸುತ್ತಪಂಚರೂಪಾತ್ಮಕನೆ | ಕೈಪಿಡಿಯೊ ಇವಳಾ 2 ಭೋಗಗಳ ಉಂಬಾಗ | ಭೋಗಿರಥೀ ಪಿತನಜಾಗುಮಾಡದೆ ಸ್ಮರಿಪ | ಭಾಗ್ಯವನೆ ಕೊಟ್ಟೂ |ಆಗುಹೋಗುಗಳೆಂಬ | ದ್ವಂದ್ವ ಸಹನೆಯನಿತ್ತುನೀಗೊ ಭವಸಾಗರವ | ಕಾರುಣ್ಯಮೂರ್ತೇ 3 ಪತಿಯೇ ಪರದೈವವೆಂ | ಬತುಳ ಶುಭಮತಿಯಿತ್ತುಗತಿಗೋತ್ರ ನೀನೆಂದು | ಸತತ ಚಿಂತಿಸುತಾ |ಮತಿವರಾಂ ವರರಂಘ್ರಿ | ಶತಪತ್ರಸೇವೆಯನುರತಿಯಿಂದ ಗೈವಂಥ | ಮತಿನೀಡೊ ಹರಿಯೇ4 ಸಂತಾನ ಸಂಪತ್ತು | ಶಾಂತಿಪತಿ ನೀನಿತ್ತುಕಾಂತುಪಿತ ಸೇವೆನೈ | ರಂತರದಿ ಗೈವಾ |ಪಂಥದಲಿ ಇರಿಸು ಗುರು | ಗೋವಿಂದ ವಿಠ್ಠಲನೆಇಂತಪ್ಪ ಪ್ರಾರ್ಥನೆಯ | ಸಲಿಸೋ ಶ್ರೀ ಹರಿಯೇ5
--------------
ಗುರುಗೋವಿಂದವಿಠಲರು
ಶ್ರೀ ಶ್ರೀನಿವಾಸ ಹರಿ ವಿಠಲ | ಜ್ಞಾನ ರೂಪೀ ಪ ದಾಸನನ ಮಾಡಿವನ | ಪೋಷಿಸಲಿ ಬೇಕೋ ಅ.ಪ. ಸಾಧನಜೀವಿಗಳ | ಕಾದು ಕೊಳ್ಳುವ ಭಾರಮಾಧವನೆ ನಿನದಲ್ಲೆ | ಯಾದವೇಶಾ |ಆದರದಿ ಕೈಪಿಡಿದು ಭೋಧಿಸು ಸುಜ್ಞಾನಮೋದ ಮುನಿ ಸದ್ವಂದ್ಯ | ಬಾದರಾಯಣನೇ 1 ಪರಮಾತ್ಮ ನರಹರಿಯ | ದರುಶನಕೆ ಮುಮ್ಮೊದಲುಪರಿಸರನು ಪ್ರಾಣನ್ನ | ಪರಮಗುರುದ್ವಾರಾದರುಶನನ ಗೈಸುತ್ತ | ಹರುಷವನೆ ನೀಡಿರುವೆಕರುಣಾ ಪಯೋನಿಧಿಯೆ | ಸರ್ವಾಂತರಾತ್ಮ 2 ಕಾಕು ಜನ ಸಂಗವನು | ಸೋಕಿಸದೆ ಸತ್ಸಂಗನೀ ಕೊಟ್ಟು ಲೌಕೀಕದಿ | ಸತ್ಕೀರ್ತಿಲಿರಿಸೋಮಾಕಳತ್ರನೆ ಸಕಲ | ಪ್ರಾಕ್ಕು ಕರ್ಮವ ಕಳೆದುಲೌಕೀಕಗಳೆಲ್ಲ ವೈ | ದೀಕ ವೆಂದೆನಿಸೋ 3 ಸಿರಿ | ಪದ್ಮನಾಭನೆ ದೇವಶ್ರದ್ಧೆಯಿಂದರುತಿಹನ | ಉದ್ಧರಿಸೊ ಹರಿಯೇ4 ಸರ್ವವ್ಯಾಪ್ತಸ್ವಾಮಿ | ನಿರ್ವಿಕಾರನೆ ದೇವದರ್ವಿ ಜೀವಿಯ ಮೊರೆಯ | ಶರ್ವಾದಿ ವಂದ್ಯಾನಿರ್ವಿಘ್ನ ಪೂರೈಸೆ | ಪ್ರಾರ್ಥಿಸುವೆ ಶ್ರೀ ಹರಿಯೆಸರ್ವ ಸುಂದರ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸುಳಾದಿ ಧ್ರುವತಾಳ ಶ್ರೀನಿವಾಸನೆ ನೀನು ಬ್ಯಾಗನೆ ಬಂದು ಸಾನುರಾಗದಿ ಸಂಸಾರ ಬಿಡಿಸೋ ಭಾನುಕೋಟಿ ಪ್ರಕಾಶಭಾಗ್ಯನಿಧಿಯೆನ್ನ ಮಾನವ ಕಾಯ್ವುದು ಮಂಗಳಾಂಗನೆ ಏನೇನು ಕಾರ್ಯಗಳು ನಿನ್ನಾಧೀನವಾಗಿರಲು ನಾನುನನ್ನದು ಎಂದು ಮಮತೆಯನೆ ಕೊಟ್ಟು ಅನ್ಯಾಯದಿಂದ ಎನ್ನzಣಿಸುವುದು ದಾನವಾಂತಕರಂಗ ಮುದ್ದುಮೋಹನವಿಠಲ ನೀನೆಗತಿಯೆಂದವಗೆ ನಿರ್ಭಯವೊ ಹರಿಯೆ 1 ಮಠ್ಯತಾಳ ಎನ್ನಪರಾಧಗಳು ಅನಂತವಿರುವದನ್ನು ನಿನ್ನಸ್ಮರಣೆ ಒಂದೆ ಸಾಕೊ ಹರಿಯೆ ಬನ್ನ ಬಡಿಸುವದ್ಯಾಕೊ ಮನ್ಮನದಲಿಪೊಳೆದು ಚೆನ್ನಾಗಿ ಸಲಹೋಘನ್ನಮಹಿಮಾ ಮುದ್ದುಮೋಹನವಿಠಲನೇ 2 ತ್ರಿವಿಡಿತಾಳ ಬಿಂಬನೆನೆಸಿಕೊಂಡು ಪ್ರತಿಬಿಂಬಗಳೊಳಗೆಕಾರ್ಯ ಅಂಭ್ರಣಿಸಹಿತವಾಗಿ ನೀಮಾಡಿ ಮಾಡಿ ಸೂವಿ ಅಂಬುಜನಾಭಾನೆ ಎನ್ನಾಡಂಭಕ ಭಕುತಿ ಬಿಡಿಸಿ ಸಂಭ್ರಮದಿಂದ ಕಾಯೊ ಕರುಣಾನಿಧೆ ಶಂಬರಾರಿಯಜನಕ ಮುದ್ದುಮೋಹನವಿಠಲ ಕಂಬದಿಂದಲಿ ಬಂದು ಭಕುತನ್ನಸಲಹಿದ ದೇವ 3 ಅಟ್ಟತಾಳ ಏನೇನುದಾನ ಅನಂತ ಮಾಡಲೇನು ಕಾನನದಲಿ ಪೋಗಿ ತಿರುಗಿತಿರುಗಿದಂತೆ ಜ್ಞಾನದಿಂದಲಿ ತಾರತಮ್ಯಾನುಸಾರ ನಿನ್ನ ಧ್ಯಾನವನ್ನ ಒಂದು ಕ್ಷಣವಾದರೂತೋರಿಸೊ ವಾನರ ವಂದ್ಯ ಮುದ್ದುಮೋಹನವಿಠಲ ನಾನಾವಿಧದಿಂದ ನಂಬಿದೆನೊ ಹರಿಯೇ4 ಆದಿತಾಳ ನೀನೆ ಅನಾಥಬಂಧು ನೀನೆ ಅದ್ಭುತಮಹಿಮ ನೀನೆ ಅಸುರಾಂತಕ ನೀನೆ ಅಮರಾದಿವಂದ್ಯ ನೀನೆ ಭವರೋಗ ವೈದ್ಯ ನೀನೆ ಭಕ್ತವತ್ಸಲ ನೀನೆ ಪರಿಪೂರ್ಣ ಸುಖ ನೀನೆ ಪರಂಜ್ಯೋತಿ ನೀನೆ ಪರಬ್ರಹ್ಮ ನೀನೆ ಪುರುಷೋತ್ತಮ ನೀನೆ ಪುಣ್ಯೈಶ್ವರ್ಯ ನೀನೆ ನಿರ್ಮಲ ಜ್ಞಾನ ನೀನೆ ಶಶಿ ಕೋಟಿಲಾವಣ್ಯ ನೀನೆ ಮುದ್ದುಮೋಹನ ವಿಠಲ ನೀನೆ ವೇಗದಿ ಬಂದು ನೀನೆ ರಕ್ಷಿಸು ಎನ್ನನು 5 ಜೊತೆ ಸ್ವಾಮಿ ಪುಷ್ಕರಣಿವಾಸ ಕಾಮಿತಫಲದಾನೆ ಶ್ರೀಮನೋಹರ ನಮ್ಮ ಮುದ್ದುಮೋಹನ ವಿಠಲ
--------------
ಮುದ್ದುಮೋಹನವಿಠಲದಾಸರು