ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ನಾರಾಯಣ ನಾರಾಯಣ ನಾರಾಯಣ ಪ. ದೇವರದೇವನೆ ಬಾರೊ ದೇವಕಿನಂದನ ಬಾರೊ ದೇವೇಂದ್ರನ ಸಲಹಿದ ದೇವ ಬಾರೊ ಹರಿಯೆ ಅ.ಪ. ಮಚ್ಚನಾಗಿ ಶ್ರುತಿಯ ತಂದಿತ್ತ ಭಕ್ತವತ್ಸಲನೆ ಭೃತ್ಯ ಸತ್ಯವ್ರತನಿಗೊಲಿದ ಮಚ್ಚಬಾರೊ ಹರಿಯೆ 1 ಸಾರಿದ ಸುರರಿಗಾಗಿ ನೀರೊಳಗೆ ಮುಳುಗಿ ಕೂರ್ಮ ಬಾರೊ ಹರಿಯೆ 2 ಧsÀರೆಯನುದ್ಧರಿಸಲು ವರಾಹನಾದವನೆ ಹಿರಣ್ಯಾಕ್ಷನ ಸೀಳ್ದ ಧೀರ ಬಾರೋ ಹರಿಯೆ 3 ನಂಬಿದ ಭಕ್ತರ ಕಾವ ನಂಬೆ ಕರುಣದಿ ಕಲ್ಲ- ಡಿಂಬ ಬಾರೊ ಹರಿಯೆ 4 ಮಾಣವಕವೇಷನಾಗಿ ಕ್ಷೋಣಿ ಅಳೆದವನೆ ದಾನವನ ಸೋಲಿಸಿದ ಜಾಣ ಬಾರೊ ಹರಿಯೆ5 ಕಡಿ[ದು] ದುಷ್ಟನೃಪರ ಬಿಡದೆ ಚಪ್ಪೆಕೊಡಲಿಯ ಪಿಡಿದುಗ್ರ ಒಡೆಯ ಬಾರೊ ಹರಿಯೆ 6 ವೃಂದಾರಕವಂದ್ಯ ಸೇತುಬಂಧದಿ ದಶಕಂಧರನ ಕೊಂದ ರಾಮಚಂದ್ರ ಬಾರೊ ಹರಿಯೆ 7 ಮಲ್ಲರ[ನೆಲ್ಲ] ಸೀಳಿ ಬಲ್ಲಿದ ಮಾವನ ಕೊಂದೆ ಎಲ್ಲರ ವಲ್ಲಭ ಎಂಬೊ ಮಲ್ಲ ಬಾರೊ ಹರಿಯೆ 8 ಬೌದ್ಧನಾಗಿ ದೈತ್ಯರಿಗೆ ಶುದ್ಧಬುದ್ಧಿಯ ತೋರಿ ರುದ್ರನ್ನ ಸೋಲಿಸಿದ ಸುಭದ್ರ ಬಾರೊ ಹರಿಯೆ 9 ಕರ್ಕಶದ ಖಳರನ್ನು ಕಲ್ಕಿರೂಪನಾಗಿ [ಮೂಲೆ ಲಿಕ್ಕಿಸುವ ಸುಜನರ ಚೊಕ್ಕ ಬಾರೊ ಹರಿಯೆ 10 ವಿಜಯ ಹಯವದನ ಭಜಕರ ಭಾಗ್ಯನಿಧಿ ಸುಜನಾಬ್ಧಿ ವಾದಿರಾಜನ ತೇಜ ಬಾರೊ ಹರಿಯೆ 11
--------------
ವಾದಿರಾಜ
ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನುಏನೆಂದು ಸ್ತುತಿ ಮಾಡಲರಿಯೆ ಪ ದುರುಳ ಕರ್ಮಿಯು ನಾನುಪರಂಜ್ಯೋತಿಯು ನೀನು ಪಾಮರನು ನಾನು 1 ಅಣುರೇಣು ತೃಣ ಕಾಷ್ಠ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕರ್ಮಿ ನಾನುವನಜಸಂಭವನಯ್ಯ ವೈಕುಂಠಪತಿ ನೀನುತನುವು ಸ್ಥಿರವಲ್ಲದ ನರಬೊಂಬೆ ನಾನು 2 ದುರಿತ ಮಾಯಾ ಶರೀರಿ ನಾನು 3 ಭೂರಿ ಕಾರುಣ್ಯಪತಿ ನೀನುಘೋರತರ ಕಾಮಕ್ರೋಧಿಯು ನಾನುಈರೇಳು ಲೋಕವನು ಪೊಡೆಯಲಿಟ್ಟವ ನೀನುಸಾರಿ ಭಜಿಸದ ದುಷ್ಟ ಕರ್ಮಿ ನಾನು 4 ತಿರುಪತಿಯೊಳು ನೆಲಸಿದ ವೆಂಕಟೇಶನು ನೀನುಚರಣಕೆರಗುವ ಕನಕದಾಸನು ನಾನುಬಿರಿದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ ನಾನುಮರಣ ಕಾಲಕೆ ಬಂದು ಕಾಯೊ ಹರಿಯೆ5
--------------
ಕನಕದಾಸ
ಬಾರೊ ಬಾರೊ ರಂಗ-ಬಾರೊ ನಮ್ಮನೆಗೆ ಪ ಬೋರನ್ಹಾಕುವೆ ನಡೆಮುಡಿಯ ನಿಮ್ಮಡಿಗೆ ಅ.ಪ ಪರಿಮಳಾಂಬುವಿನಿಂದ-ಪದವ ತೊಳೆಯುವೆನೊ ವರಗಂಧಾಕ್ಷತೆಯನು-ಭರದಿ ಧರಿಸುವೆನೋ 1 ಹೊಸಪಟ್ಟೆಯನು ತಂದು-ಹೊಂದಿಸಿ ರಾಜಿಸುವೆ ಕುಸುಮದಿಂದರ್ಚಿಸಿ ಕೂಡೆ ಸಂತಸವ 2 ಕುಂಕುಮಾಗಿಲು ದಿವ್ಯ ಗುಗ್ಗುಲಹೊಗೆಯ ಬಿಂಕದಿಂದರ್ಪಿಸುವೆನು ಭೋಗಿಸಯ್ಯಾ 3 ಮೇಲೆ ಸದ್ಭಕ್ಷ್ಯ ತಾಂಬೂಲವರ್ಪಿಸುವೆ ಲಾಲಿತ ಮಹಮಂಗಳಾರತಿಯೀವೆ 4 ಬಿಡದೆ ಸಾಷ್ಟಾಂಗವ ನಿಡುವೆ ರಮೇಶ ಪೊಡವಿಯೊಳ್ ಮಹದೇವಪುರದ ಶ್ರೀಹರಿಯೆ5
--------------
ರಂಗದಾಸರು
ಯಾಕೆನಗೆ ವೈರಾಗ್ಯ ಪುಟ್ಟಲಿಲ್ಲವೊ ದೇವ ಏನು ಪಾಪಿಯೊ ಜಗದಲಿ ಪ. ಸಾಕು ಸಾಕೀ ವಿಷಯ ಚಿಂತನೆಯ ಬಿಡಿಸಿನ್ನು ಲೋಕನಾಯಕನೆ ಸ್ವಾಮಿ ಅ.ಪ. ಅಸನವಸನಗಳಿಗೆ ಆಲ್ಪರಿದು ಅನ್ಯರಿಗೆ ಬಿಸಜನಯನನೆ ಕಾಲಹರಣೆಯನೆಗೈದೆ ವಸುದೇವಸುತ ನಿನ್ನ ಅರಘಳಿಗೆ ನೆನೆಯದಲೆ ಹಸಿವು ತೃಷೆಯಿಂ ಬಳಲಿ ಬೆಂಡಾದೆನಯ್ಯಾ 1 ಇಂದ್ರಿಯಗಳೆಲ್ಲವನು ಬಂಧನದೊಳಗೆ ಇರಿಸಿ ಇಂದಿರೇಶನೆ ನಿನ್ನ ಧ್ಯಾನಿಸದಲೆ ಮಂದಮತಿಯಿಂದ ನಾ ಮಮಕಾರದಲಿ ಬಿದ್ದು ಮಂದ ಜನರೊಡನಾಡಿ ಮಾಯಕೊಳಗಾದೆ 2 ಭಕ್ತಿಮಾರ್ಗವ ಕಾಣೆ ಜ್ಞಾನ ಮೊದಲೆ ಅರಿಯೆ ಮುಕ್ತಿಗೊಡೆಯನೆ ಎನ್ನ ಮುದದಿಂದ ಸಲಹೊ ಯುಕ್ತಯುಕ್ತಿಗಳರಿಯೆ ಸುತ್ತುತಿಪ್ಪೆನೊ ಭವದಿ ಶಕ್ತ ನೀ ಒಳಗಿದ್ದು ಎನ್ನ ಕಾಡುವರೆ 3 ಕರ್ಮಮಾರ್ಗವ ತೊರೆದು ನಿರ್ಮಲದಲಿ ನಿನ್ನ ಒಮ್ಮೆಗಾದರೂ ಮನದಿ ನೆನೆಯಲಿಲ್ಲ ರಮೆಯರಸನೆ ಶ್ರೀ ಗುರುಗಳಂತರ್ಯಾಮಿ ಕರ್ಮತ್ರಯಗಳ ಕಡಿದು ಕರುಣದಲಿ ಕಾಯೊ4 ಪಾಪರಹಿತನೆ ಎನ್ನ ಪಾಪ ಕರ್ಮಗಳೆಲ್ಲ ಪರಿ ನುಡಿದೆ ನೀ ಪರಿಹರಿಸಿ ಕಾಯೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಈ ಪಾಪಿಯನು ಕಾಯ್ವರಾರೊ ಶ್ರೀ ಹರಿಯೆ5
--------------
ಅಂಬಾಬಾಯಿ
ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ ಎನಗೆದೊರಕಿತೀ ಗುರುಸೇವೆ ಹರಿಯೆ ಪ ಮೂರ್ತಿ ನೀನಾಗಿಕರೆಯ ಸೇರಿಸಿದೆ ಶ್ರೀಹರಿಯೆಅ ಭವ ಬಂಧನವ ಬಿಡಿಸಿಹದನಕ್ಕೆ ನಿಲ್ಲಿಸಿದೆ ಹರಿಯೆ 1 ದೊರೆತನವ ಬಿಡಿಸಿ ಸುಸ್ಥಿರ ಮಾರ್ಗ ತೋರಿಸಿದೆನರಮಾತ್ರದವನೆನದೆ ಹರಿಯೆಗರುವದೊಳಗಿಹನೆಂದು ಅರಿತು ತವದಾಸರಿಗೆಇರದೆ ಅಡಿಯಾಗಿಸಿದೆ ಹರಿಯೆ 2 ಕನಕ ದಳದಲಿ ಬಂದು ಕಲೆತನೆಂದರೆ ಫೌಜುಕನುಕುಮನುಕಾಗುವುದು ಹರಿಯೆಮೊನೆಗಾರತನವೆಂಬ ಶನಿ ಬಿಡಿಸಿ ತವಪಾದವನಜವನು ಸೇರಿಸಿದೆ ಹರಿಯೆ 3 ಮನದೊಳಗೆ ಎರಡಿಲ್ಲ ಮದದಾನೆ ಮೇಲ್ಕಡಿವಮನವ ಹಿಮ್ಮೆಟ್ಟಿಸಿದೆ ಹರಿಯೆಘನವು ತಾಮಸಾಹಂಕಾರ ದುರ್ಮತಿ ದುರಿತಕನಜವನು ಕಿತ್ತೆಸೆದೆ ಹರಿಯೆ4 ಮದರೂಪು ಬಿಡಿಸಿ ಸನ್ಮುದ ರೂಪು ಧರಿಸೆಂದುಹೃದಯದೊಳು ನೀ ನಿಂತೆ ಹರಿಯೆಇದು ರಹಸ್ಯವು ಎಂದು ಹಿತವ ಬೋಧಿಸಿ ಎನಗೆಬದುಕಿಸಿದೆ ಬದುಕಿದೆನು ಹರಿಯೆ5 ದುರದಲ್ಲಿ ನಾಲ್ಕು ದಿಕ್ಕಲಿ ಹೊಕ್ಕು ಹೊಳೆವಂಥಬಿರುದು ಬಿಂಕವ ಕಳೆದೆ ಹರಿಯೆಪರಬಲವ ಕಂಡರೆ ಉರಿದು ಬೆಂಕಿಯಹ ಮನವಸೆರೆ ಹಾಕಿ ನಿಲ್ಲಿಸಿದೆ ಹರಿಯೆ6 ಪರಮ ಮೂರ್ಖನು ನಾನು ವರ ವೀರ ವೈಷ್ಣವರಚರಣವನು ಸೇರಿಸಿದೆ ಹರಿಯೆಕರೆ ಕಳಿಸಿ ಎನ್ನಲ್ಲಿ ಅಳವಿಲ್ಲದಿಹ ನಾಮಸ್ಮರಣೆ ಜಿಹ್ವೆಗೆ ಬರೆದೆ ಹರಿಯೆ 7 ಸ್ವಾರಿ ಹೊರಡಲು ಛತ್ರ ಭೇರಿ ನಿಸ್ಸಾಳಗಳುಭೋರೆಂಬ ಭೋಂಕಾಳೆ ಹರಿಯೆಧೀರ ರಾಹುತರಾಣ್ಯ ಭಾರಿ ಪರಿವಾರದಹಂ-ಕಾರ ಭಾರವ ತೊರೆದೆ ಹರಿಯೆ8 ಪಾದ ಹರಿಯೆಆರಿಗಂಜೆನು ನಾನು ಅಧಿಕಪುರಿ ಕಾಗಿನೆಲೆಸಿರಿಯಾದಿಕೇಶವ ದೊರೆಯೆ 9
--------------
ಕನಕದಾಸ