ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ಚಿಂತಿಪೆ ನೀ ಎಲೆ ಕೋತಿಮನವೆ ಪಾದ ಗಟ್ಟ್ಯಾಗಿ ನಂಬದಲೆ ಪ ಹಿತದ ಭಕ್ತನು ಎಂದು ಮತಿಹೀನ ಭಸ್ಮಗುರಿ ಹಸ್ತವರವಿತ್ತ್ಹರನು ಮತಿದಪ್ಪೋಡುತಿರೆ ಗತಿನೀನೆ ಹರಿಯೆನಲು ಅತಿದಯದಿಂ ಶಿವನ್ನುಳಿಸಿ ಕೃತ್ತಿಮನ್ನಳದ ಹರಿ ಪತಿತಮಹಾತ್ಮರಿಯೆ 1 ಘುಡುಘುಡಿಸಿ ಹಿರಣ್ಯನು ಜಡಮತಿ ಹರಿಯೆಲ್ಲಿ ಗಡ ತೋರೀ ಕಂಬದಿ ಎಂದಾರ್ಭಟಿಸಿ ಬರಸೆಳೆಯೆ ನಡುನಡುಗಿ ಪ್ರಹ್ಲಾದ ಜಡಜಾಕ್ಷ ಪೊರೆಯೆನಲು ಮೂಡಿ ಕಂಬದಿ ಖಳನ ಒಡಲ ಬಗೆದದ್ದರ್ಹಿಯೆ 2 ಕುರುಪನ ಸಭೆಯೊಳಗೆ ಮೊರೆಯಿಟ್ಟ ದ್ರೌಪದಿಗೆ ಕರುಣದಕ್ಷಯವಿತ್ತು ಪೊರೆದ ಪರಮಾತ್ಮ ಕರುಣಾಳು ಶ್ರೀರಾಮ ಚರಣದಾಸರ ನೆರ ಅರೆಘಳಿಗೆ ಬಿಟ್ಟಿರನು ನಿರುತ ನೀ ಸ್ಮರಿಸೋ 3
--------------
ರಾಮದಾಸರು
ಧನ್ಯನಲ್ಲವೇ ಇವನು ಧನ್ಯನಲ್ಲವೇ ಪ ಧನ್ಯನಲ್ಲವೇ ಪನ್ನಂಗಶÀಯನ ನುನ್ನತ ಮಹಿಮೆ ತನ್ನೊಳ್ತಿಳಿದವ ಅ.ಪ ಕರಿ ಮೊಸಳಿಗೆ ಸಿಲ್ಕಿ ಪೊರೆಯೊ ಹರಿಯೆನಲು ಕರುಣದಿಂದಲಿ ಬಂದು ಪೊರೆದನೆಂದರಿತವ 1 ದುರುಳ ದುಶ್ಯಾಸನನು ಸೀರೆ ಸೆಳೆಯುತಿರೆ ತರುಣಿಗ್ವರದ ಶ್ರೀಪರಮನೆಂದರಿತವ 2 ಬಲಿಯನು ರಸಾತಳಕಿಳಿಸಿ ತಾ ಪಾದದಿ ಒಲಿದು ಮನೆಯ ಬಾಗಿಲ ಕಾಯ್ದೆಂದರಿತವ 3 ಮಲತಾಯಿ ಧ್ರುವನೊದೆದು ಛಲದಿ ನೂಕಲು ಕಂದ ನಳಿನಾಕ್ಷ ಗತಿಯೆನಲು ಒಲಿದು ಸಲಹಿದ್ದರಿತವ 4 ನೀನೆಗತಿಯೆನಗೀ ಭುವನದಾರು ಗತಿಯಿಲ್ಲ ಪಾದ ನೆನವಿನೊಳಿರ್ದವ 5
--------------
ರಾಮದಾಸರು
ನಿರುತದಿ ನೆನೆ ನರಹರಿಯ ನರಹರಿಯ ಶಿರಿಧೊರೇಯ ಪ ಪೋತ ಧ್ರುವನು ತಾ ತಾತನ ತೊಡಿಯಲಿ ಪ್ರೀತಿಲಿ ಕುಳಿತಿರೆ ಮಾತೆ ದೂಡಲತಿ ಸೋತು ಮನದಿ ಹರಿ ಸ್ತೋತ್ರವ ಗೈಯ್ಯಲಾತಗೆ ಪದ ನೀಡಿದಾ 1 ಕಡಿಗ್ಯಾದ ದ್ರೌಪದಿ ಮುಡಿಯ ಪಿಡಿದು ಖಳ ಬಿಡÉಳೆದೊಯ್ಯೊ ಕಡುದುರುಳ ಸಭೆಗೆ ಸಿಡಿದೆಳೆಯೆ ಶೀರೆಯನು ಒಡನೆ ಹರಿಯೆನಲುಡುವಾಸವಕ್ಷೈಸಿತು 2 ದುರುಳ ಹಿರಣ್ಯಕಶು- ಪಿರದೆ ಪೀಡಿಸಲು ಪರಿಪರಿಯಿಂದಲಿ ಹರಿಗೆ ಮೊರೆಯಿಡಲು ಕರುಳು ಬಗೆದ ನರಸಿಂಹವಿಠಲನು 3
--------------
ನರಸಿಂಹವಿಠಲರು
ಭವ ಭಯ ವಿನಾಶ ಭೋ ಭಕ್ತವಿಲಾಸ ಭೋ ಪಾ-ಪವಿನಾಶ ಭೋ ಬಾಡದ ರಂಗೇಶ ಭೋ ಪ ಹರಿಯ ಸುತನಿಗೆ ಅಭಯವನಿತ್ತೆ ಹರಿಯ ಮಗನಾ ಕೊಂದೆಹರಿಯೆನಲು ಹರಿರೂಪ ತಾಳಿದೆಹರಿಯೊಳಡಗಿದೆ ಮತ್ತೆಹರಿಯನಗ್ರಜ ಕೋಟಿ ತೇಜನಹರಿಯ ವದನನೆಂಬ1 ಶಿವನ ಮಗಳೊಡಗೂಡಿ ಮತ್ತೆಶಿವಮಗಳನು ಮಾವನಿಗಿತ್ತೆಶಿವನ ಉಪಟಳಕಳುಕಿ ಗೋಕುಲಶಿವನ ಕರದಲಿ ಪೊತ್ತೆಶಿವನ ಧನುವನು ಖಂಡಿಸಿ ಮತ್ತೆಶಿವನ ತಲೆಯೇರಿ ನಿಂದೆಶಿವನ ಭೋಜನವಾಹನ ಸುತನಿಗೆಶಿವನ ಪ್ರತಿಪಾಲನೆಂಬ 2 ಕಮಲವನು ಈರಡಿಯ ಮಾಡಿದೆಕಮಲ ಮೊರೆಯಿಡಲಂದುಕಮಲದಲಿ ಬ್ರಹ್ಮಾಂಡ ತೋರಿದೆಕಮಲಧರ ನೀನೆಂದು ಕಮಲವನು ಕದ್ದೊಯ್ದ ಕಳ್ಳನ ಸದೆದುಕಮಲವ ತಂದೆಕಮಲಮುಖಿಯಳ ಕಾಯ್ದ ಕಾಗಿನೆಲೆವಿಮಲ ಆದಿಕೇಶವನೆಂಬ 3
--------------
ಕನಕದಾಸ
ಮುಂಜಾನೆ ಎದ್ದು ಮುರಹರನ ಸ್ಮರಿಸೆಲೆ ಮನವೆ ಅಂಜುವ ಭವದುರಿತ ಹಿಂಗಿಸುವನು ಧ್ರುವ ಕ್ಲೇಶ ಪರಿಹರಿಸುವನು ಭವ ನಾರಾಯಣೆನಲು ಮೀಸಲು ಮನದಲೊಮ್ಮೊ ಮಾಧವೆಂದೆನಲು ತಾ ಭಾವಿಸುವ ಹೃದಯದೊಳು ಗೋವಿಂದನು ವಾಸನೆಯ ಪೂರಿಸುವ ವಿಷ್ಣು ಯೆಂದೆನಲು ತಾ ದೋಷ ಛೇದಿಸುವ ಮಧುಸೂದನೆನಲು ಲೇಸುಗೈಸುವ ಜನುಮ ವಾಮನೆನಲು 1 ಸಿರಿ ಸಕಲ ಪದವೀವ ಶ್ರೀಧರಂದೆನಲು ತಾ ಹರುಷಗತಿನೀವ ಹೃಷೀ ಕೇಶನೆನಲು ಪಾತಕ ದೂರ ಪದ್ಮಾನಾಭೆಂದೆನಲು ಭಂಜನ ದಾಮೋದರೆನಲು ಸುರಿಸುವ ಅಮೃತವ ಸಂಕರುಷಣೆಂದೆನಲು ಹೊರೆವ ಧರೆಯೊಳು ವಾಸುದೇವೆನಲು ಪರಿಪರಿಯ ಸಲುಹುವ ಪ್ರದ್ಯುಮ್ನನೆಂದೆನಲು ಅರಹುಗತಿನೀವ ಅನಿರುದ್ದನೆನಲು 2 ಪೂರಿಸುವ ಭಾವ ಪರುಷೋತ್ತಮೆಂದೆನಲು ತಾ ತಾರಿಸುವ ಜನುಮ ಅಧೋಕ್ಷಜೆನಲು ನರಜನ್ಮುದ್ಧರಿಸುವ ನಾರಸಿಂಹೆಂದೆನಲು ಕರುಣ ದಯ ಬೀರುವ ಅಚ್ಯುತನೆನಲು ಜರಿಸುವ ದುವ್ರ್ಯಸನ ಜನಾರ್ದನೆನಲು ಊರ್ಜಿತಾಗುವುದು ಉಪೇಂದ್ರ ಎನಲು ತರಳ ಮಹಿಪತಿ ಪ್ರಾಣದೊಡೆಯ ಶ್ರೀಹರಿಯೆನಲು ಕರುಣದಿಂದದೊಗುವ ಗುರುಕೃಷ್ಣನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು