ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

373ಶಿವನು ನೀನಾದರೆ ಶಿವನ ರಾಣಿ ನಿನಗೇನೊ ಅವಿವೇಕ ಮನುಜ ಈ ಮಾತು | ಈ ಮಾತು ಕೇಳಿದರೆ ಕವಿಜನರು ನಗರೆ ಕೈ ಹೊಡೆದು 1 374ಎಲ್ಲ ಬಂದೇ ಎಂಬ ಖುಲ್ಲ ಮಾನವ ನಿನ್ನ ವಲ್ಲಭೆಯ ಬೆರೆದು ಸಂತಾನ | ಸಂತಾನ ಪಡೆವೇಕೆ ಇಲ್ಲವೇ ಜನನಿ ಭಗಿನೇರು 2 375ಬಿಂಬವೊಂದೆ ಪ್ರತಿಬಿಂಬ ವೊಂದೆಂಬಿ ಈಶು ದ್ಧಾಂಬರದ ನೆರಳು ಕಪ್ಪಾಗೆ | ಕಪ್ಪಾದ ಬಳಿಕ ನೀ ನೆಂಬೊ ಈ ಮಾತು ಪುಸಿಯಲ್ಲಿ 3 376 ಎಲ್ಲ ಒಂದೆ ಎಂಬ ಸೊಲ್ಲು ಖರೆಯೆಂತೆನಲು ಖರೆಯೆಂಬ ಮಾತುಗಳು ಸುಳ್ಳೆನ್ನರೇನೊ ಸುಜನಾರು 4 377 ನಿಮ್ಮ ನಾ ಬೈದರೆ ನಮ್ಮ ನೀವ್ ಬೈದರೆ ಅದ್ವೈತ ಸುಮ್ಮನಿರಬೇಕು ಎಲೊ ಭ್ರಾಂತ 5 378 ಶುದ್ಧ ಬ್ರಹ್ಮನ ಸುಂಗುಣವ ಕದ್ದ ಪ್ರಯುಕ್ತ ಪ್ರ ಸಿದ್ಧ ಚೋರತ್ವ ನಿನ್ನಲ್ಲಿ | ನಿನ್ನಲ್ಲಿ ಪೊದ್ದಿತೊ ಉದ್ಧಾರವೆಲ್ಲೊ ಭವದಿಂದ 6 379 ಮಾಯವಾದಿಯ ಮತವು ಹೇಯವೆಂಬುದು ಸಿದ್ದ ತಾಯಿತಂದೆಗಳು ಸತಿಪುತ್ರ | ಸತಿಪುತ್ರರಗಲಿದರೆ ಬಾಯಿ ಬಿಟ್ಯಾಕೊ ಆಳುತಿದ್ದಿ 7 380 ಸುಳ್ಳಿಗಿಂತಧಿಕ ಮತ್ತಿಲ್ಲವೋ ಮಹಪಾಪ ಸುಳ್ಳು ಕಳ್ಳತನವು ನಿನ್ನಲ್ಲಿ | ನಿನ್ನಲ್ಲಿ ಉಂಟಾಯಿ ತಲ್ಲೊ ಜಾರತ್ವ ಇದರಂತೆ 8 381ಮೇ ಮಾತೆ ವಂಧ್ಯೆಯೆಂಬ ಈ ಮಾತಿನಂತೆ ಮು ಅಪುಸಿಯಿಂಬೀ ಮಾತುಗಳು ಭ್ರಾಮಕವೆ ಖರೆಯೊ ನಿಜವಲ್ಲ 9 382 ಶಶವಿಷಾಣಗಳೆಂದು ಒಪ್ಪುವರೆ ಬಲ್ಲವರು ಮೊಲೆಹಾಲು ಉಂಡಿತೋ ರಿಸೊ ಮಿಥ್ಯೆ ಸತ್ಯವಹುದೇನೊ 10 383ಸತ್ಯವೆಂದರೆ ಖರೆಯು ಮಿಥ್ಯೆಯೆಂದರೆ ಸುಳ್ಳು ನ್ಮತ್ತ ಈ ಮಾತು ನಿಜವೆಲ್ಲಿ 11 384ಭೀತಿ ನಿರ್ಭೀತಿ ಶೀತತಾಪಗಳೊತ್ತಟ್ಟು ನೀತವಾಗಿಹವೆ ಜಗದೊಳು |ಜಗದೊಳಿದ್ದರೆ ತೋರು ಜಾತಿ ಭೇದಗಳು ಇರಲಾಗಿ 12 385 ಜೀವೇಶರೊಂದೆಂಬ ಈ ಮಾತು ಕೇಳ್ವರಿಗೆ ಕೇವಲ ಶ್ರಾವ್ಯವೆಂದೆಂದು | ಎಂದೆಂದು ಬುಧರು ಪಶು ಗಾವಿ ನೀನೆಂದು ಕರೆಯಾರೆ 13 386 ಗುಣವಂತನೆಂಬ ಈ ಮಾತನು ಕೇಳಿ ಸುಖಿಸದವ ಮನುಜ ಪಶುಸಿದ್ಧ ಪುಸಿಯಲ್ಲ | ಪುಸಿಯಲ್ಲ ನಿನ್ನ ಮತ ಗಣನೆ ಮಾಡದಲೆ ಬಯ್ವೋರ 14 387ಮಲದ ಗರ್ತಕೆ ಶುದ್ಧ ಜಲಧಿ ಸಮಯವೆಂತೆಂಬಿ ಕಲುಷವರ್ಜಿತಕೆ ತೃಣಜೀವ | ತೃಣಜೀವ ಸರಿಯೆ ಸಿಂ ಬಳಕ ಗೋಘೃತವು ಸಮವಹುದೆ 15 388 ಐರಾವತಕೆ ಸರಿಯೆ ಕೂರಿಹೇನಿನ ಮರಿಯು ತೋರಿತೊ ನಿನ್ನ ಅಜ್ಞಾನ 16 389 ದ್ವಾಸುಪರ್ಣಾ ಎಂಬ ಈ ಶ್ರುತಿಗಳಲ್ಲಿ ವಿ ಶ್ವಾಸ ಮಾಡದಲೆ ಜೀವೇಶ | ಜೀವೇಶಕೈಕ್ಯೋಪ ದೇಶ ಮಾಡಿದವ ಚಂಡಾಲ 17 390ಅಜರಾಮರಣ ಬ್ರಹ್ಮ ಭುಜಗಭೂಷಣ ಪೂಜ್ಯ ತ್ರಿಜಗ ದೇವೇಶ ಹರಿಯೆತ್ತ | ಹರಿಯೆತ್ತ ನೀನೆತ್ತ ಅಜಗಜನ್ಯಾಯ ಪುಸಿಯಲ್ಲ 18 391 ಪಾಲುಗಡಲೊಳಗಿಪ್ಪ ಶ್ರೀ ಲೋಲ ಹರಿಯೆಲ್ಲಿ ಹೇಲುಚ್ಚೆವೊಳಗೆ ಹೊರಳುವ | ಹೊರಳಾಡಿ ಬಳಲುವ ಖೂಳ ಮಾನವನೆ ನೀನೆಲ್ಲಿ 19 392 ಕ್ಷೀರಾಂಬುಧಿಗೆ ಸರಿಯೆ ಕಾರಿಕೆಯ ಶ್ಲೇಷ್ಮ ಭಾ ಗೀರಥಿಗೆ ಸಮವೆ ಖರಮೂತ್ರ | ಖರಮೂತ್ರ ಜೀವ ಲ ಕ್ಷ್ಮೀರಮಣಗೆಣೆಯೆ ಜಗದೊಳು 20 393ಗುಣಪೂರ್ಣ ಸರ್ವಜ್ಞ ಅಣುಮಹದ್ಗತನ ನಿ ರ್ಗುಣ ಅಲ್ಪನೆನುತಿದ್ದಿ | ಎನುತಿದ್ದಿ ಹರಿಗೆ ದೂ ಷಣೆಯು ಬೇರುಂಟೆ ಇದಕಿಂತ 21 394 ಈಶ ನಾನೆನಲು ಕೀನಾಶನಿಂದಲಿ ದಣಿಪ ದಾಸನೆಂಬುವಗೆ ದಯದಿಂದ | ದಯದಿಂದ ತನ್ನಯಾ ವಾಸದೊಳಿಟ್ಟು ಸಲಹೂವ 22 395ಈಶತ್ವ ವೆಂಬುದು ಲಕುಮೀಶಗಲ್ಲದೆ ಜೀವ ರಾಶಿಗಳಿಗುಂಟೆ ಈ ಶಕ್ತಿ | ಈ ಶಕ್ತಿ ಸತ್ವಗುಣ ಈಶ ಬಿಟ್ಟಿಹನೆ ಜಗದೊಳು 23 396 ಉದ್ಗೀಥಶ್ರೀ ಪ್ರಾಣ ಹೃದ್ಗತನು ಜಗದೇಕ ಸದ್ಗುರುವರೇಣ್ಯನೆನುತಿಪ್ಪ | ಎನುತಿಪ್ಪರಿಗೆ ಯಮ ಗದ್ಗದನೆ ನಡುಗಿ ನಮಿಸುವ 24 397 ಸ್ವಾಮಿ ಭೃತ್ಯನ್ಯಾಯ ಈ ಮಾತಿನೊಳಗುಂಟು ಗ್ರಾಮಧಾಮಗಳು ಇದರಂತೆ | ಇದರಂತೆ ನೋಡಿಕೊ ನೀ ಮಾತ್ರ ನುಡಿಯೆ ಸಾಕೆಂಬೆ 25 398ಈಶ ನಾನೆಂದವನ ಶ್ವಾಸ ಬಿಡಗೊಡದೆ ಯಮ ಸೆಳೆದೊಯಿದು ನರಕದೊಳು ಘಾಸಿಗೊಳಿಸುವನೊ ಬಹುಕಾಲ 26 399 ಮಾತಾ ಪಿತರ ದ್ರೋಹಿ ಬಂಧು ಘಾತಕ ಬ್ರಹ್ಮ ಘಾತಕನು ನೀನು ಪುಸಿಯಲ್ಲ | ಪುಸಿಯಲ್ಲ ಶ್ರೀ ಜಗ ನ್ನಾಥ ವಿಠಲನೆ ನಾನೆಂಬಿ 27
--------------
ಜಗನ್ನಾಥದಾಸರು
ಮುಟ್ಟದಿರಿಗೋಪವನಿತೆಯರು ಗಲಭೆಯದೇನುತೊಲಗಿರೇ ತೊಟ್ಟಿಲಂ ತೂಗದಿರಿ ಕೃಷ್ಣನೆದ್ದರೆ ಕಾಡದಿರನೆನ್ನಾ ಪ ಮಿಸುನಿದೊಟ್ಟಿಲೊಳಂತೆ ದುಪ್ಪದುಪ್ಪಳಿನ ಹಾಸಿನಲಿ ಮಂದಾರ ಕುಸುಮಗಳ ಜಾಜಿ ಮಲ್ಲಿಗೆ ಸೇವಂತಿಗೆ ಪಂಕೇರುಹದಾ ಎಸಳುಗಳ ಪಸರಿಸಿಯೆ ಮಲಗಿಸಿದೆ ಪಾಲೆರದು ಮೊಲೆಯೂಡಿ ಪೀತಾಂಬರವನೆ ಹೊದ್ದಿಸೀ | ಹಸುಳೆಯನಮಲ ಕೋಮಲಾಂಗನನಂಗಕೋಟಿಗಳ ನಾ ಚಿಸಿ ಚಿತ್ತಿನ ಪುತ್ಥಳಿಯ ಸಚ್ಚಿದಾನಂದ ಮೂರುತಿಯಾ ಬಿಸಜಾಕ್ಷನಂ ಕೃಷ್ಣನಂ ಬಲದೇವಸಹಜಾತನಂ ಕುಸುಮನಾಭನಂ ಜಲದನೀಲನಂ ದಿವಿಜಪಾಲನಂ 1 ಬಿಡದೊತ್ತಿಯಪ್ಪಿ ಪರಮಾನಂದ ಜಲಧಿಯೊಳಗೋಲಾಡಿ ಸಂತುಷ್ಟಿಯಿಲ್ಲವಲ್ಲಾ ಒಡೆಯನೋ [ಇವ]ಯೆಮ್ಮೊಡನೆ ಪೊಡವಿಗೆ ಜೀವಂಗಳಿಗೆ ಒಡೆಯನೆಂಬಿರಿ ಪರಲೋಕದಾನಂದಕ್ಕೆ ಒಡೆಯನೇ ನಿಮಗೆನ್ನ ಕಂದ ಮುದ್ದು ಭಾಗ್ಯದ ಬೆಳಸು ಮಡಗಿ ತೊಟ್ಟಿಲೊಳಚ್ಯುತನನಂತನಂ ಮುಕುಂದನ 2 ನೋಡಲಿಹೆವೆಂತು ಲಾವಣ್ಯಸಿಂಧುವನೊಲಿದು ಸರವೆತ್ತಿ ನಾಡ ಹೆಂಗಳ ದೃಷ್ಟಿದೋಷದಿಂ ಪಾಲ್ಗುಡಿದು ನಲವಿಂದ ಲಾಡಲೊಲ್ಲನು ವಸುಂಧರೆಯ ತೊಟ್ಟಿಲಶಿಶುಗಳಂದದಿ ಮೊಲೆಯ ನೂಡಿದರೆ ಬಾಯ್ದೆರೆಯಲೊಲ್ಲ ಮಂತ್ರದಿಯಂತ್ರದಿಂದೊಮ್ಮೆ ಯೂಡಿ ಮಲಗಿಸಿದೆ ವಿಶ್ವನಂ ತ್ರೈಜಗಪ್ರಾಜ್ಞಮೂರುತಿಯಂ3 ರವಿಯಹುದು ಬಿಸಿಗದಿರದೆಲ್ಲಿ ಚಂದಿರನಹುದು ಹಿಮವೆಲ್ಲಿ ನವದೆಲ್ಲಿ ಇಂದುಧರನಹುದು ಫಣೆಗಣ್ಣೆಲ್ಲಿಯೆಂದು ಬರಿದೇಕೆ ಮರುಳಾಗುವಿರಿ ಅವಿರಳನದ್ವಯನನಾದಿಮಧ್ಯಾಂತರಹಿತನ ಧರ್ಮಸ್ಥಾಪನಾಚಾರ್ಯ ನ[ವಂ] ಮಹೀಭಾರವ ತವಿಸಲೆಂದವÀತರಿಸೆ ಜನನವಂ ಪಡೆದ ತಂದೆಯಂ ಭುವನಪಾವನ ಸುಪ್ರಗಧಾಮೂರ್ತಿಯಂ ಶ್ರವಣಮಂಗಳಸತ್ಕೀರ್ತಿಯಂ4 ನಿಗಮವೀ ಹರಿಯ ಮಹಿಮಾ ಸಮುದ್ರದ ತಡಿಯ ತೆರೆಗಳಲಿ ಮಿಗೆ ಸಿಲುಕಿ ಮುಳುಗಲರಿಯದೆ ಬೀಳುತೇಳುತಾಳುತಲಿವೇಕೋ ಮೊಗನಾಲ್ಕನಯ್ಯನ ಸಾಸಿರದೈವವಂ ಪಡೆದ ತಂದೆಯಂಅದೆಂತಲೆಂದಾರರಿವರೂ ಸುಗುಣ ಸರ್ವಜ್ಞನಂ ಸರ್ವಭೂತರಾತ್ಮಕನಂ ಜಗದೊಳ್ ಹೊರಗೆ ಪೂರ್ಣನಾಗಿ ಭುವನವ ಜಠರದೊಳಗಿಟ್ಟ ಅಗಣಿತನ ವೈಕುಂಠ ಪತಿಯ ಘನತೆಯನರಿತು ಪೊಗಳುವರೇ ಮುಗುದೆಯರು ನೀವೆತ್ತ ಮಾಯೆಯ ಕುಣಿಸಿ ನಗುವ ಹರಿಯೆತ್ತಾ 5
--------------
ಬೇಲೂರು ವೈಕುಂಠದಾಸರು