ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ಅನ್ನದಾ[ಸೆ]ಗೆ ಪರರ ಮ[ನೆ]ಯ ಬಾಗಿಲ ಕಾಯ್ದುನೇಕ ಬಗೆಯಿಂದ ನೊಂದೆನೋ ಹರಿಯೆಅನ್ಯಥಾ ಪೊರಮಟ್ಟ್ಟು ಪೋಗಲೀಸರು ಅವರುಮನ್ನಿಸಿ ಕೃಪೆಯಿಂದ ಕೂಡಿಕೊಂಡಿಹರೊಅನಾಥಬಂಧು ಶ್ರೀಹಯವದನ ನಿನ್ನಮ[ನೆ]ಯ ಕುನ್ನಿಗೆಂಜಲನಿಟ್ಟಂತೆ ಎನ್ನ ರಕ್ಷಿಸೊ
--------------
ವಾದಿರಾಜ
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ಪ ನೀ ದೇಹದೊಳಗೊ ನಿನ್ನೊಳು ದೇಹವೊ ಹರಿಯೆಅ ಬಯಲೊಳಗೆ ಆಲಯವೊ ಆಲಯದೊಳಗೆ ಬಯಲೊಬಯಲು ಆಲಯವೆರಡು ನಯನದೊಳಗೊನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ1 ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊಸವಿಯು ಸಕ್ಕರೆ ಎರಡು ಜಿಹ್ವೆಯೊಳಗೊಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ 2 ಕುಸುಮದಲಿ ಗಂಧವೋ ಗಂಧದಲಿ ಕುಸುಮವೋಕುಸುಮ ಗಂಧಗಳೆರಡು ಆಘ್ರಾಣದೊಳಗೊಅಸಮಭವ ಕಾಗಿನೆಲೆಯಾದಿಕೇಶವರಾಯಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ 3
--------------
ಕನಕದಾಸ
ಸಾಕು ಸಾಕಿನ್ನು ಸಂಸಾರ ಸುಖವು ಪ ಶ್ರೀಕಾಂತ ನೀನೊಲಿದು ಕರುಣಿಸೈ ಹರಿಯೆಅ ಉದಿಸಿದುವು ಪಂಚಭೂತಗಳಿಂದ ಓಷಧಿಗಳುಉದಿಸಿದುದು ಓಷಧಿಗಳಿಂದನ್ನವುಉದಿಸಿದುವು ಅನ್ನದಿಂ ಶುಕ್ಲ ಶೋಣಿತವೆರಡುಉದಿಸಿದುವು ಸ್ತ್ರೀ ಪುರುಷರಲ್ಲಿ ಹರಿಯೆ 1 ಮಾಸ ಪರಿಯಂತ ಹರಿಯೆ2 ಮಾಸ ನಖ ರೋಮ ನವರಂಧ್ರಮಾಸ ಏಳರಲಿ ಧಾತು ಹಸಿವು ತೃಷೆಯು 3 ತಿಂಗಳೆಂಟರಲಿ ಪೂರ್ವಾನುಭವ ಕರ್ಮಗಳಗುಂಗಿನಲಿ ನಾನಿಂತು ಭವಭವದೊಳುಅಂಗನೆಯರುದರದಲಿ ಮತ್ತೆಮತ್ತೆ ಬಂದುಭಂಗಪಡೆನೆಂದು ಧ್ಯಾನಿಸುತ ದಿನಗಳೆದೆ 4 ಮಾಸ ಪರಿಯಂತರದಿತನು ಸಿಲುಕಿ ನರಕದಲಿ ಆಯಾಸಗೊಂಡುಘನ ಮರುತ ಯೋಗದಿಂ ನರಳುತಿಲ್ಲಿಗೆ ಬಂದುಜನಿಸುವಲ್ಲಿ ಮೃತಭಾವದಿಂದ ನೊಂದೆನೈ ಹರಿಯೆ 5 ಧರೆಯ ಮೇಲುದಿಸಿ ಬಹು ವಿಷ್ಣು ಮಾಯಕೆ ಸಿಲುಕಿಪರವಶದೊಳಿರಲು ನೀರಡಿಕೆಯಾಗಿಹೊರಳಿ ಗೋಳಿಡುತ ಕಣ್ದೆರೆದು ಹರಿಯನು ಮರೆವದುರಿತ ರೂಪದ ತನುವ ಧರಿಸಲಾರೆ6 ಶಿಶುತನದೊಳಗೆ ಸೊಳ್ಳೆ ನೊಣ ಮುಸುಕಿ ಅತ್ತಾಗಹಸಿದನಿವನೆಂದು ಹಾಲನೆ ಎರೆವರುಹಸಿವು ತೃಷೆಯಿಂದಳಲು ಹಾಡಿ ತೂಗುವರಾಗಪಶು ತೆರದಿ ಶಿಶುತನದೊಳಿರಲಾರೆ ಹರಿಯೆ 7 ನಡೆಯಲರಿಯದ ದುಃಖ ಮನಸಿನಲಿ ಬಯಸಿದುದನುಡಿಯಲರಿಯದ ದುಃಖ ವಿಷಯದಿಂದಅಡಿಯಿಡುತ ಮೆಲ್ಲನೇಳುತ ಬೀಳುತಲಿ ತೊದಲುನುಡಿವ ಬಾಲ್ಯದೊಳಿರಲಾರೆ ಹರಿಯೆ 8 ಬಾಲ್ಯದೊಳು ಕೆಲವು ದಿನ ಬರಿದೆ ಹೋಯಿತು ಹೊತ್ತುಗೋಳಿಡುತ ವಿದ್ಯೆ ಕರ್ಮಗಳ ಕಲಿತುಮೇಲೆ ಯೌವನದ ಉಬ್ಬಿನೊಳು ಮದುವೆಯಾಗಿಬಾಲೆಯರ ಬಯಸಿ ಮರುಳಾದೆ ಹರಿಯೆ9 ಜ್ವರದ ಮೇಲತಿಸಾರ ಬಂದವೊಲು ಯೌವನದಿತರುಣಿಯೊಡನಾಟ ಕೂಟದ ವಿಷಯದಿತರುಣಿ ಸುತರ್ಗನ್ನ ವಸ್ತ್ರಾಭರಣವೆನುತಪರರ ಸೇವೆಯಲಿ ಘಾಡ ನೊಂದೆ ಹರಿಯೆ10 ನೆತ್ತರು ತೊಗಲು ಮೂಳೆ ಮಜ್ಜೆ ಮಾಂಸದ ಹುತ್ತುಜೊತೆಗಿಂದ್ರಿಯಗಳ ರೋಗ ರುಜಿನದಲಿಮತ್ತೆ ಕಾಲನ ಬಾಯ ತುತ್ತಾಗುವ ಕರ್ಮದಕತ್ತಲೆಯೊಳೀ ದೇಹ ಕರಡಾಯಿತು 11 ದಿಟ್ಟತನದಲಿ ಗಳಿಸಿ ತರುವಾಗ ಸತಿಸುತರುಕಟ್ಟಿ ಕಾದಿಹರು, ಮುಪ್ಪಡಿಸಿದಾಗತಟ್ಟನೆ ಬಲು ಕೆಟ್ಟ ನುಡಿಗಳಲಿ ಬೈಯುತ್ತಕಟ್ಟಕಡೆಗೆ ಕಣ್ಣೆತ್ತಿ ನೋಡರೈ ಹರಿಯೆ12 ತುಂಬಿ ಮೃತವಾಗಲುಕುಟ್ಟಿಕೊಂಡಳಲುತ್ತ ಹೋಯೆಂದು ಬಂಧುಗಳುಮುಟ್ಟರು ಹೆಣನೆಂದು ದೂರವಿಹರು 13 ಸತ್ತ ಹೆಣಕಳಲೇಕೆ ಎಂದು ನೆಂಟರು ಸುಯ್ದುಹೊತ್ತು ಹೋಯಿತೆನ್ನುತ ಕಸಕೆ ಕಡೆಯಾಗಿಹೊತ್ತು ಕೊಂಡಗ್ನಿಯಲಿ ತನುವನಿದ ಬಿಸಡುವರುಮತ್ತೆ ಬುವಿಯಲಿ ಜನಿಸಲಾರೆ ಹರಿಯೆ 14 ಯೋನಿ ಮುಖದಲಿ ಬಂದುಬನ್ನವನು ಪಡಲಾರೆ ಭವಭವದೊಳುಜನನ ಮರಣಾದಿ ಸರ್ವ ಕ್ಲೇಶಗಳ ಪರಿಹರಿಸಿಸನ್ಮತಿಯೊಳಿರಿಸೆನ್ನ ಆದಿಕೇಶವರಾಯ 15
--------------
ಕನಕದಾಸ
ಹಯಾಸ್ಯ ವಿಠಲ ಸಲಹೊ |ಶುದ್ಧ ಭಕ್ತನ ಪೊರೆಯೆ ಭಿನ್ನವಿಪೆ ಸತತ ಪ ಮಧ್ವವಿಜಯದಿ ಸದ್ಬುದ್ಧಿ ಪ್ರದನೀನೆನಿಸಿಮಧ್ವಗುರು ಸತ್ಕರುಣ ಕವಚವನೆ ತೊಡಿಸೀ |ಸಿದ್ಧಾಂತ ಜ್ಞಾನದಲಿ ಶುದ್ಧ ಬುದ್ಧಿಯ ನಿತ್ತುಉದ್ಧರಿಸ ಬೇಕಿವನ ಉದ್ಧವನ ಪ್ರಿಯನೇ 1 ಪಾದ ಭವ ಹರಿಸೋ 2 ಗುಣರೂಪ ಕ್ರಿಯ ನಿನ್ನ ಧ್ಯಾನುಪಾಸಾನೆ ಇತ್ತುತನುಸದನ ಹೃದ್ಗಹದಿ ಕಾಣಿಸೀ ಕೊಳುತಾ |ಘನವೆನಿಪ ಸಂಚಿತಾಗಾಮಿಗಳ ಪರಿಹರಿಸಿಅಣುಗನನ ಸಲಹೆಂಬ ಪ್ರಾರ್ಥನೆಯ ಸಲಿಸೋ3 ಕ್ಲೇಶ ನಿಸ್ಸಂಶಯದಿ ಕಳೆಯುತಿಹಕಂಸಾರಿ ತವಪಾದ ಪಾಂಸು ಭಜಿಪನಿಗೇ |ವಂಶ ಉದ್ಧರಿಸಿ ಸಂತೈಸು ಶ್ರೀ ಹರಿಯೆಅಂಶುಮಾಲೀಕುಲಜ ಶ್ರೀರಾಮಚಂದ್ರಾ 4 ದೀಕ್ಷೆದಾಸತ್ವದಲಿ ಕಾಂಕ್ಷಿತಗೆ ತೈಜಸನುಈಕ್ಷಿಸುತ ಕರುಣಾಕಟಾಕ್ಷದಲಿ ಪೇಳೇ |ಸಾಕ್ಷಿ ಮೂರುತಿ ಗುರು | ಗೋವಿಂದ ವಿಠಲ - ಅಪೇಕ್ಷೆ ಪೂರ್ತಿಸಿಹೆ | ಋೂಕ್ಷ ಸನ್ನುತನೇ 5
--------------
ಗುರುಗೋವಿಂದವಿಠಲರು
ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ ಎನಗೆದೊರಕಿತೀ ಗುರುಸೇವೆ ಹರಿಯೆ ಪ ಮೂರ್ತಿ ನೀನಾಗಿಕರೆಯ ಸೇರಿಸಿದೆ ಶ್ರೀಹರಿಯೆಅ ಭವ ಬಂಧನವ ಬಿಡಿಸಿಹದನಕ್ಕೆ ನಿಲ್ಲಿಸಿದೆ ಹರಿಯೆ 1 ದೊರೆತನವ ಬಿಡಿಸಿ ಸುಸ್ಥಿರ ಮಾರ್ಗ ತೋರಿಸಿದೆನರಮಾತ್ರದವನೆನದೆ ಹರಿಯೆಗರುವದೊಳಗಿಹನೆಂದು ಅರಿತು ತವದಾಸರಿಗೆಇರದೆ ಅಡಿಯಾಗಿಸಿದೆ ಹರಿಯೆ 2 ಕನಕ ದಳದಲಿ ಬಂದು ಕಲೆತನೆಂದರೆ ಫೌಜುಕನುಕುಮನುಕಾಗುವುದು ಹರಿಯೆಮೊನೆಗಾರತನವೆಂಬ ಶನಿ ಬಿಡಿಸಿ ತವಪಾದವನಜವನು ಸೇರಿಸಿದೆ ಹರಿಯೆ 3 ಮನದೊಳಗೆ ಎರಡಿಲ್ಲ ಮದದಾನೆ ಮೇಲ್ಕಡಿವಮನವ ಹಿಮ್ಮೆಟ್ಟಿಸಿದೆ ಹರಿಯೆಘನವು ತಾಮಸಾಹಂಕಾರ ದುರ್ಮತಿ ದುರಿತಕನಜವನು ಕಿತ್ತೆಸೆದೆ ಹರಿಯೆ4 ಮದರೂಪು ಬಿಡಿಸಿ ಸನ್ಮುದ ರೂಪು ಧರಿಸೆಂದುಹೃದಯದೊಳು ನೀ ನಿಂತೆ ಹರಿಯೆಇದು ರಹಸ್ಯವು ಎಂದು ಹಿತವ ಬೋಧಿಸಿ ಎನಗೆಬದುಕಿಸಿದೆ ಬದುಕಿದೆನು ಹರಿಯೆ5 ದುರದಲ್ಲಿ ನಾಲ್ಕು ದಿಕ್ಕಲಿ ಹೊಕ್ಕು ಹೊಳೆವಂಥಬಿರುದು ಬಿಂಕವ ಕಳೆದೆ ಹರಿಯೆಪರಬಲವ ಕಂಡರೆ ಉರಿದು ಬೆಂಕಿಯಹ ಮನವಸೆರೆ ಹಾಕಿ ನಿಲ್ಲಿಸಿದೆ ಹರಿಯೆ6 ಪರಮ ಮೂರ್ಖನು ನಾನು ವರ ವೀರ ವೈಷ್ಣವರಚರಣವನು ಸೇರಿಸಿದೆ ಹರಿಯೆಕರೆ ಕಳಿಸಿ ಎನ್ನಲ್ಲಿ ಅಳವಿಲ್ಲದಿಹ ನಾಮಸ್ಮರಣೆ ಜಿಹ್ವೆಗೆ ಬರೆದೆ ಹರಿಯೆ 7 ಸ್ವಾರಿ ಹೊರಡಲು ಛತ್ರ ಭೇರಿ ನಿಸ್ಸಾಳಗಳುಭೋರೆಂಬ ಭೋಂಕಾಳೆ ಹರಿಯೆಧೀರ ರಾಹುತರಾಣ್ಯ ಭಾರಿ ಪರಿವಾರದಹಂ-ಕಾರ ಭಾರವ ತೊರೆದೆ ಹರಿಯೆ8 ಪಾದ ಹರಿಯೆಆರಿಗಂಜೆನು ನಾನು ಅಧಿಕಪುರಿ ಕಾಗಿನೆಲೆಸಿರಿಯಾದಿಕೇಶವ ದೊರೆಯೆ 9
--------------
ಕನಕದಾಸ