ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಗಂಗೆಯು ಹರಿಯುತಿರಲು ತೀರದಲ್ಲಿ ನಾ ಬಾವಿಯನು ತೋಡುತಲಿ ಬಲು ಬಳಲಿದೆ ಪ ಗೋವು ಕರೆಯುವ ಕ್ಷೀರ ಕೊಡಕೊಡದಿ ತುಂಬಿರಲು ಬೇವಿನೆಣ್ಣೆಯ ಬಯಸಿ ಬಳಲಿ ಬೆಂದೆ ಅ.ಪ ಅರಸುತನದಲಿ ಆಳುತಿರುವ ಸ್ಥಾನವನು ನಾ ಮರೆತು ಕಡು ಹೇಡಿಯಂದದಿ ನಡೆದೆನೊ ದುರಿತರಾಶಿಗಳನ್ನು ತರಿವ ಮಂತ್ರಗಳರಿತು ಕುರುಬ ಹೊದ್ದಿರುವ ಕಂಬಳಿ ಬಯಸಿದೆ 1 ವೇದಾಂತ ಸಾಮ್ರಾಜ್ಯದಧಿಕಾರದಲಿ ಕುಳಿತು ಕಾದ ಮರುಭೂಮಿ ರಾಜ್ಯವ ಬಯಸಿದೆ ಆದರದಿ ಕರೆದು ಬಡಿಸುವರ ಭೋಜನ ತೊರೆದು ಮೂದಲಿಸುವರನು ಬೇಡಿದೆನನ್ನವ 2 ನೀಗಿ ಪುಣ್ಯವು ನಿನ್ನ ದಯವು ತಪ್ಪಿದ ಮೇಲೆ ಕೈಗೊಂಬೆ ಕರಡಿಯಾಗುವುದು ಕ್ಷಣದಿ ರಾಗಗಳ ಕಳೆದು ಮನವಚನ ಕಾಯಗಳನ್ನು ಬೇಗ ನಿನ್ನಡಿಗಳಿಗೆ ಸೆಳೆಯಲೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಲಜ್ಜೆ ಲಜ್ಜೆ ನಿನ್ನ ನಂಬಿ ಕೆಟ್ಟೆನಾನು ಮಾಡೊದೇನು ಪ ಗೆಜ್ಜೆ ಕಟ್ಟಿದ್ದೊರೆ ಕೃಷ್ಣ ಭಜನೆಯಲ್ಲಿ ಮಾನದಲ್ಲಿ ಅ.ಪ. ಆರು ವಲಿದು ಮಾಡೊದೇನು ಆರುಮುನಿದು ಮಾಡೊದೇನು ಚಾರು ಚಾರು ಮೆಚ್ಚಲೇನು ಭಾರಿದೇವ ವಿಶ್ವಜನಕೆ ಹರಿಯದಾಸನೆಂದು ಇನ್ನು ಈರ ಮತವ ಸಾರಿಸಾರಿನಲಿದು ನಲಿದು ಸುಖಿಪುದಕ್ಕೆ 1 ದುಡ್ಡು ಕಾಸುಬೇಡ ನಮಗೆ ದೊಡ್ಡತನವು ಬೇಡ ಹಾಗೆ ಹೆಡ್ಡತನನ ಬಿಟ್ಟು ಪಿರಿಯಕೃಷ್ಣನನ್ನು ಭಜಿಸಲಿಕ್ಕೆ ಅಡ್ಡಿಏನು ಕುರುಡು ಮನವೆ ನೆನೆದುನೆನೆದು ನೋಡುನೀನೆ ದೊಡ್ಡತನವೆ ಸತ್ಯವೀದು ದಡ್ಡತನವೆ ದುರಭಿಮಾನ 2 ಹರಿಯದಾಸದೀಕ್ಷೆ ಪಡೆಯೆ ಸುಲಭವಲ್ಲ ಸುಲಭವಲ್ಲ ದುರಿತ ರಾಶಿಪೋಗಿ ಶುದ್ಧ ಚಿನ್ನದಂತೆ ಆಗದೇನೆ ಹಿರಿದು ಕಾಣೊ ಇಂಥಾ ಜನ್ಮ ಬರಿಯ ಮಾತಿಗೊಲಿಯದೇವ ಅರಿವಿನಂತೆ ನಡೆಯದಿರಲು ತೊರೆದು ಎಲ್ಲ ದುರಭಿಮಾನ 3 ಗೆಜ್ಜೆಕಟ್ಟಿ ಕುಣಿದು ಕುಣಿಯೆ ಲಜ್ಜೆನಾಶವಾಹುದೈಯ್ಯ ಲಜ್ಜೆನಾಶವಾಗಿ ಭಕ್ತಿಯುಕ್ತಿ ಉಕ್ಕಿಹರಿಯುತಿರಲು ಅಬ್ಜಪೀಠ ಪಿತನುತಾನೆ ಅಪ್ಪಿಕೊಂಡು ನಲಿದುನಲಿವ ಅಬ್ಜನಾಭ ನಲಿದು ವಲಿಯೆ ಹೆಚ್ಚುಉಂಟೆ ಅದರಕ್ಕಿಂತ 4 ಮೆರೆಯುತಿರಲು ದುಷ್ಟಕಲಿಯು ಅನ್ಯಮಾರ್ಗ ಸಾಧ್ಯವಿಲ್ಲ ಹರಿಯ ಭಜನೆ ಒಂದೇ ದಾರಿ ಹರಿಯ ವಲಿಸೆ ಸಿದ್ಧವೀದು ಜರಿದು ವಿಷಯ ಬೆರಸಿ ಭಕ್ತಿ ಸಿರಿಯ ರಮಣ “ಕೃಷ್ಣವಿಠಲ” ಚರಣ ಯುಗವ ಭಜಿಸಿ ನೀನು ಮಾನ್ಯನಾಗೋ ಧನ್ಯನಾಗೊ 5
--------------
ಕೃಷ್ಣವಿಠಲದಾಸರು