ಆರತಿಯಾಡುವೆನು ಸದ್ಗುರುವಿಗೆಆರತಿಯಾಡುವೆನು ಪ
ಕಾಯವ ಜರೆಯುತ್ತಲಿಕೈಯನೆ ಮುಗಿಯುತಲಿಮಾಯವ ಹರಿಯುತಲಿಬಾಯಿ ಕೊಂಡಾಡುತಲಿ ಸದ್ಗುರುವಿಗೆ 1
ಕುಣಿ ಕುಣಿದಾಡುತಲಿಮನವನೆ ನೀಡುತಲಿಘನಮುಕ್ತಿ ಬೇಡುತಲಿಅನುಮಾನವ ಬಿಡುತಲಿ ಸದ್ಗುರುವಿಗೆ 2
ಅರಿವನೆ ಅರಿತುಗುರಿಯನೆ ಮರೆತುಪೂರವನೆ ಬೆರೆತುಗುರು ಚಿದಾನಂದನರಿತು ಸದ್ಗುರುವಿಗೆ 3