ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನೀತಿ ಎಲ್ಲಿಗೇತಕೆ ಪೋಗಿ ತಲ್ಲಣಿಸುವೆಯೊ ಮನವೆ ಇಲ್ಲೆ ಶ್ರೀಹರಿಯಿಲ್ಲವೆ ಪ ಬಲ್ಲವರ ಹೃದಯಗುಹೆಯಲ್ಲಿ ಪ್ರಕಟಿಸುತ ಜನ ತುಂಬಿ ಸೂಸುತಲಿರುವ ಅ.ಪ ಕಾಶಿ ರಾಮೇಶ್ವರ ಬದರಿ ತಿರುಪತಿಯೆಂದು ಘಾಸಿಗÉೂಳ್ಳುವೆ ಏತಕೋ ವಾಸನೆಯ ನೀಗದವನಾಶೆಪಾಶಗಳಿಂದ ಬೇಸತ್ತು ಚರಿಸಲೇಕೋ ಈಶನಾವಾಸವೀಜಗವೆಲ್ಲವಿಲ್ಲಿಲ್ಲ ವಲ್ಲಿರುವನೆಂಬುದೇಕೋ ಶ್ರೀಶ ಶ್ರೀಹರಿಯ ನೀನಿರುವಲ್ಲೆ ಶೋಧಿಸುವ ಆಸೆಯುದಯಿಸಲಿಲ್ಲವೇಕೋ 1 ಅಣುಮಹತುಗಳಲ್ಲಿ ತೃಣಜೀವಕೋಟಿಯಲಿ ಗುಣ ಮಹಿಮನರಿಯ ಬಯಸೋ ಎಣಿಸಲಾಗದನಂತಗುಣನ ಪ್ರಾಣಿ ಸಮೂಹ ಗಣಗಳೊಳು ಕಾಣಬಯಸೋ ಅಣುವಿಗಣುವೆನಿಸಿ ಮಹತಿಗೆ ಮಹತ್ತಹನ ಕಣ್ದಣಿಯೆ ಕಾಣುತ ಭಾವಿಸೊ ಗುಣನಿಧಿಯು ನಿನ್ನ ಶ್ರದ್ಧಾಭಕ್ತಿಗಳಿಗೊಲಿದು ಕ್ಷಣದಿ ಕಾಣಿಸುವನಿದನರಿತು ನೀ ಚರಿಸೋ 2 ವ್ರತನಿಯಮಗಳ ಕಾಮ್ಯ ಫಲದಾಸೆಯಿಂ ಮಾಡೆ ಫಲವೇನು ವ್ಯರ್ಥಶ್ರಮವೋ ಸತತ ನಿನ್ನಯ ವ್ಯಾಪ್ತ ಮಹಿಮೆಯರಿಯದೆ ಪೂಜೆ ಮಾಡಿದರು ವ್ಯರ್ಥಶ್ರಮವೋ ಮತಿವಿಕಳ ಕೋಪ ತಾಪದ ದಾಸನವ ಮಾಳ್ಪ ದಾನವದು ವ್ಯರ್ಥಶ್ರಮವೋ ಅಕಳಂಕಮಹಿಮ ರಘುರಾಮವಿಠ್ಠಲನೆಂದು ನಂಬಿ ನಡೆವುದೆ ಸಾರ್ಥಕವೋ 3
--------------
ರಘುರಾಮವಿಠಲದಾಸರು
ಸುಜ್ಞಾನ ಸಮುದ್ರ ಮಧ್ವಮುನಿರಾಯ || ನಿವಾರಿಸಿದ | ಮಧ್ವ ಮುನಿರಾಯಾ ಪ ಸಂಕರನಾದಾ | ಮಧ್ವರಾಯಾ || ಗುಣಗಳಲ್ಲ ಕೆಡಿಸಿದಾ | ಮಧ್ವರಾಯಾ 1 ಹರಿಯಿಲ್ಲ ಗುರುವಿಲ್ಲ ಹರನು ಪುಸಿ ಎಂದು || ಮಧ್ವ | ಅವ | ಪರದೈವ ತಾನೆ ಎಂದು ಧರೆಯೊಳು ತಿರುಗಿದ | ಮಧ್ವ 2 ಮಿಥ್ಯ ಅಹಂ ಬ್ರಹ್ಮ ಜಗಕೆಂದ | ಮಧ್ವ || ಅವ | ಸತಿ ಒಂದೆ ಎಂದು ಮಧ್ವ 3 ಜಾತಿಧರ್ಮವೆಲ್ಲ ತೊರೆದು | ಜಾತಿ ಸಂಕರವಾಗೆ ಮಧ್ವ || ಮಿಥ್ಯ ಪಾತಕವೆ ತುಂಬಿತು | ಮಧ್ವರಾಯ 4 ಪೇಳಲು | ಮಧ್ವ ||ಬೊಮ್ಮ | ಪರಿಹರ ಕಾಣದೆ ಹರಿಗೆ ಬಿನ್ನೈಸಿದ | ಮಧ್ವ5 ಜಯ ತನಯನ್ನ ಕರೆದು | ದಯದಿಂದ ಪೇಳಲು | ಮಧ್ವ || ವೇಗ | ಪ್ರಿಯದಲ್ಲಿ ಬಂದು ಮಧ್ಯಗೇಹನಲ್ಲಿ ಅವತರಿಸಿದ | ಮಧ್ವ 6 ಮುಖ್ಯ ಶಿಷ್ಯ ತಿಪ್ಪಣ್ಣ ಅವಧಾನಿ ಸೋತು ವೈಷ್ಣವನಾಗೆ | ಮಧ್ವ || ಸಂಕರ ಮೂಲಿಯ ಪೊಕ್ಕ | ಮಧ್ವ 7 ಶುಂಠ ಮಿಕ್ಕ ರಕ್ಕಸರ ಗಂಟಲ ಮುರಿದುವಟ್ಟಿ | ಮಧ್ವ || ಉಂಟು ಮಾಡಿದನು ವೈಕುಂಠ ಪತಿದೇವವೆಂದು | ಮಧ್ವ8 ಮರುತ ಮತ ಉಧ್ಧರಿಸಿ | ಗುರುಕುಲ ತಿಲಕನಾದ | ಮಧ್ವ ||ಶಿರಿ ವಿಜಯವಿಠ್ಠಲನ್ನ ಚರಣಾಬ್ಜ ಭೃಂಗನಾದ ಮಧ್ವ 9
--------------
ವಿಜಯದಾಸ
ಹರಿದಾಸನಾದರೆ ಹ್ಯಾಂಗಿರಲಿ ಬೇಕು ನರಲೋಕದ ಚಿಂತೆ ಬಿಟ್ಟುಕೊಡಬೇಕು ಪ ಇಂದ್ರಿಯಗಳನ್ನೆಲ್ಲ ಗ್ರಹಿಸಬೇಕು ಬಂದದೆಲ್ಲ ಬರಲಿ ಈಗಲೇ ಎನಬೇಕು ಅಂದವರು ಎನಗೆ ಬಂಧುಗಳು ಎನಬೇಕು 1 ಸ್ನಾನವನು ಬಿಟ್ಟು ಹರಿಕಥೆಯ ಕೇಳಲಿ ಬೇಕು ಮಾನಾಭಿಮಾನಕ್ಕೆ ಹರಿತಾನೆ ಎನಬೇಕು ಏನಾದರಾಗಲಿ ಸುಖಬಡಲಿಬೇಕು 2 ಇರಳು ಹಗಲು ಹರಿಸ್ಮರಣೆ ಮಾಡಲಿ ಬೇಕು ಪರಲೋಕದ ಗತಿ ಬಯಸಬೇಕು ಗುರುಹಿರಿಯರಿಗೆ ವಂದನೆಯ ಮಾಡಲಿ ಬೇಕು ದುರುಳರನ ಕಂಡರೆ ದೂರಾಗಬೇಕು 3 ತಾವರೆಮಣಿ ತುಲಸಿಸರವ ಧರಿಸಲಿಬೇಕು ಭಾವಶುದ್ಧನಾಗಿ ತಿರುಗಬೇಕು ಕೋವಿದರೆ ಸಂಗಡ ಕೂಡ್ಯಾಡುತಿರಬೇಕು ಪಾವಕನಂತೆ ಇಂಪವ ಕಾಣಬೇಕು 4 ಅನ್ನಪಾನಾದಿಗಳಿಗವಸರ ಬೀಳದಿರಬೇಕು ಕಣ್ಣಿದ್ದು ಕುರುಡನೆಂದೆನಿಸಬೇಕು ಚೆನ್ನಾಗಿ ವಾಯುಮತದಲ್ಲಿ ನಿಂದಿರಬೇಕು ತನ್ನೊಳಗೆ ತಾ ತಿಳಿದು ನಗುತಲಿರಬೇಕು 5 ಬಿಂಬ ಮೂರುತಿಯ ಹೃದಯದಲಿ ನಿಲಿಸಲಿ ಬೇಕು ಡಂಭಕ ಭಕುತಿಯ ಜರಿಯ ಬೇಕು ಡಿಂಬುವನು ದಂಡಿಸಿ ವ್ರತವ ಚರಿಸಲಿ ಬೇಕು ನಂಬಿ ನರಹರಿಪಾದವೆನುತ ಸಾರಲಿ ಬೇಕು6 ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು ಮರುತನೆ ಜಗಕೆ ಗುರುವೆನಲಿ ಬೇಕು ಪುರಂದರದಾಸರೇ ದಾಸರೆಂದನ ಬೇಕು ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು 7
--------------
ವಿಜಯದಾಸ
ಸುರನರರ ಸಹಸಕ್ಹರಿ ಸಹಾಯ ಬೇಕುನರಹರಿಯು ಕೊಡದನಕ ದೊರೆವುದೇನು ಪ.ಹರಿಕೊಡದೆ ಅಜಭವರಿಗರಸುತನವೆಲ್ಲಿಯದುಹರಿಕೊಡದೆ ಸಿರಿಸಂಪದೆರವು ತನಗೆಹರಿಕೊಡದೆ ಸಕಳ ಜೀವರಿಗಶನ ದುರ್ಲಭವುಹರಿಕೊಡುವನಿರಲು ಅನ್ಯರಿಗೆ ಸ್ವಾತಂತ್ರ್ಯಿಲ್ಲ 1ಹರಿಯೆ ಜಡಚೇತನರ ಹೊರೆದುದ್ಭವಿಸಿ ಅಳಿವಹರಿಯಾವ ಕಾರ್ಯಕ್ಕೆ ಬೆರೆದು ಬರುವಹರಿಅಂತರ್ಬಹಿರದೊಳು ಭರಿತನಾಗಿಹ ತತ್ವಹರಿಯಿಲ್ಲದಾವ ತಾಣಿಲ್ಲ ನಂಬು ಹರಿಯ 2ಹರಿನುಡಿಯದಾರಿಗುತ್ತರಗುಡಲು ಬಲವಿಲ್ಲಹರಿನುಡಿಯನಾಲಿಪರು ಸಿರಿದಿವಿಜರುಹರಿನುಡಿಯೆ ಗತಿಮತಿಯು ಹರಿಯೆನ್ನ ದಾತಾರಹರಿಪ್ರಸನ್ವೆಂಕಟಪ ನಿರುತ ಬಿಡನೆನ್ನ3
--------------
ಪ್ರಸನ್ನವೆಂಕಟದಾಸರು