ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಣ್ಣಿಸಲಳವೆ ನಿನ್ನ |ಪನ್ನಗಶಯನಪ್ರಪನ್ನವತ್ಸಲ ರಂಗ ಪಮಧು ಕೈಟಭಾಂತಕನೆ ಮಧುರಾಪತಿ ಜಿತನೆ |ಮಧುಸಖಜನಕನೆ ಮಧುಮಾಂಶ್ರಿಯಾಂಬಕನೇ1ಋಷಿ ಪತ್ನಿಯರ ಮೋಹಕ, ಋಷಿ ಪತ್ನಿಯತಾರಕ|ಋಷಿ ಪತ್ನಿಯ ನಾಶಕ ಋಷಿ ಪತ್ನೀ ಬಾಲಕ 2ಪದುಮ ಸಂಭವನಯ್ಯ ಪದುಮೇಶಕವಿಗೇಯ |ಪದುಮಾವರದಜೀಯಪದುಮಜಾಂಡದೊಡೆಯ3ಭಾನುಕೋಟಿ ಪ್ರಕಾಶ ಭಾನುಲೋಚನಾಧೀಶ |ಭಾನುಪ ಸುತ ಪೋಷ ಭಾನುಪಾಣಿ ನಿರ್ದೋಷ 4ಹರಿಪ್ರಾಣೇಶ ವಿಠಲಯ್ಯಹರಿಶಯನ ಮತ್ಪ್ರಿಯ |ಹರಿಯಾಸ್ಯ ನರದೇಹ ಹರಿಸುವುದಘ ತ್ವರಿಯಾ 5
--------------
ಪ್ರಾಣೇಶದಾಸರು