ಭೂಷಣಕೆ ಭೂಷಣ ಇದು ಭೂಷಣಶೇಷಗಿರಿವಾಸ ಶ್ರೀವರ ವೆಂಕಟೇಶ ಪ
ನಾಲಿಗೆಗೆ ಭೂಷಣ ನಾರಾಯಣ ನಾಮಕಾಲಿಗೆ ಭೂಷಣ ಹರಿಯಾತ್ರೆಯುಆಲಯಕೆ ಭೂಷಣ ತುಲಸಿ ವೃಂದಾವನ ವಿಶಾಲ ಕರ್ಣಕೆ ಭೂಷಣ ವಿಷ್ಣು ಕಥೆಯು 1
ದಾನವೇ ಭೂಷಣ ಇರುವ ಹಸ್ತಂಗಳಿಗೆಮಾನವೇ ಭೂಷಣ ಮಾನವರಿಗೆಜ್ಞಾನವೇ ಭೂಷಣ ಮುನಿಯೋಗಿವರರಿಗೆಮಾನಿನಿಗೆ ಭೂಷಣ ಪತಿಭಕ್ತಿಯು 2
ಮಣಿ ಕೊರಳಿಗೆ ಭೂಷಣರಂಗವಿಠಲ ನಿಮ್ಮ ನಾಮ ಅತಿ ಭೂಷಣ 3