ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದ್ಧರಿಸಿರೋ ನೀವು ನಿಮ್ಮ ತಿಳಿಯಬೇಕು ಪರಬೊಮ್ಮ ಪ ಮನುಜ ಜನ್ಮಕೆ ಬಂದು ಮರೆತರೆ ಕಷ್ಟವು ಮುಂದುಇನಿತು ವಿಚಾರವಿಲ್ಲ ಇದುವೆ ವಿವೇಕವದಲ್ಲ 1 ಕೊನಬುಗಳೆಲ್ಲವ ಬಿಡಿರೋ ಕೋಪವನೆಲ್ಲವ ಸುಡಿರೋತನು ಸುಖವಾಗಿಹುದಲ್ಲ ತಪ್ಪಿದರೆ ಬಳಿಕೆಲ್ಲ 2 ಭ್ರಮೆಯೆಲ್ಲವ ಬಿಡಬೇಕು ಬಂಧನ ಹರಿಯಲು ಬೇಕುನಮಗಿದು ನೀತಿಯಿದಲ್ಲ ನಾಚಿಕೆ ಕಿಂಚಿತ್ತು ಇಲ್ಲ 3 ತನ್ನ ತಿಳಿದರೆ ತಾ ಬಂಧು ತನ್ನ ಮರೆತರೆ ಶತ್ರುವಹಸನ್ನುತವಚನವಿದೀಗ ಸಾಧಿಸುವುದು ಬಹುಬೇಗ4 ಚೆನ್ನಾಗಿ ಶ್ರವಣದ ಕೇಳಿ ಚಿತ್ತ ಶುದ್ಧಿಯ ತಾಳಿಚಿನ್ಮಯನನು ನೀವು ಧರಿಸಿ ಚಿದಾನಂದ ತಾವೆಂದು ಸ್ಮರಿಸಿ5
--------------
ಚಿದಾನಂದ ಅವಧೂತರು
ಎದ್ದಳೀಗಿದಕೋ ಶ್ರೀರಮಣಿ || ಎದ್ದಳೀಗಿದಕೋ ಪ ಮುದ್ದು ಶ್ರೀ ಹರಿಯಾ ತೋಳ ತೆಕ್ಕೆಯಾನುಸಳಿ ಶುದ್ಧ ರಾತ್ರಿಲಿ ಹರಿ ರತಿಯೊಳು ಮಲಗಿ ಅ.ಪ. ಸರಸಿಜ ಸಖನ ಮುಂಬೆಳಗವ ಹರಿಯಲು | ಭರದಲಿ ಹಕ್ಕಿಯು ಕಲಕಲವೆನಲು 1 ನಾರದ ತುಂಬುರ ಮಾಡುವ ಪ್ರಾತ:| ಸ್ಮರಣೆಯ ಗಾಯನ ಧ್ವನಿಯನು ಕೇಳಿ 2 ಕರತಳದಲಿಯವಿಗಳನು - ವರೆಸುತಲಿ | ತೆರೆವುತ ಮುಚ್ಚುತ ಅರೆಗಣ್ಣ ನೋಟದಿ 3 ಬಾಯೊಳಗಿನ ತಂಬುಲವ ನುಗುಳುತ | ಅಧರ ವಕೆಂಪವ ನಡಗಿಸುತ 4 ಕಿರಿಬೆಮರವ ಕೊನೆ ಯುಗುರದಿ ಹಾರಿಸಿ | ಕುರುಳು ಗೂದಲು ಬೈತಲು ನೀಟಾಮಾಡುವ5 ಸಡಲಿದ ಅಲರ ಮುಡಿಯಾತಿದ್ದಿ ಬಿಗಿವುತಾ | ಒಡನೆ ಕೊರಳಾ ಭರಣವ ತಿರುಹುತಲಿ 6 ಎಡಬಲ ಕೊಲದ ವಡ್ಯಾಣ ಸರಿಸಿ ಉಟ್ಟಾ | ಉಡಿಗಿಯಾ ನಿರಯಾ ಮುಂದಕ sಸಾಂವರಿಸುತ7 ಪ್ರಕಟದಿದೋರ್ವ ಕುಚದ ನಖಕ್ಷತಗಳ | ಯುಕುತಿಲಿ ಅಡಗಿಸಿ ಪುಟವನು ಬಿಗಿವುತ 8 ತನ್ನನಂಬಿದ ಬಾಲರ ಹೊರಿಯಲುದಯ | ಕಮಠ ನ್ಯಾಯದಲಿ9 ಈರೇಳು ಜಗದ ಜೀವನ ಪಡೆದ ಜನನಿ | ಗುರುಮಹಿ ಪತಿಸುತ ಪ್ರಭುವಿನ ಅರಸಿ10
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚಲಿಸದಂದದಿ ಮಾಡು ಎನ್ನನು ಶೈಲೇಂದ್ರವರ್ಯಾ ಪ ನಿನ್ನಾಣೆ ನಿನ್ನಾಣೆ ಸಹಿಸಲಾರದೆ ನಿನ್ನ ಶರಣು ಬಂದೆನೊರಾಯಾ ಅ.ಪ. ಪರಿ ನಗುತಿಪ್ಪುದು ಥರವೇ 1 ಸೂತ್ರ ಏನು ಸರಿಯಾದ ಕಾಲದಲಿ ಹರಿಯಲು ಸರಿದೋರುವುದೇ ರಸಿಕರಿಗೆ2 ಭಾರ ತಾಳೆನೊಬೇಗ ಬರುವಂತೆ ಮಾಡಿ ಪಾಂಡುರಂಗ ಪ್ರಾಯ ಗುರುಕೃಷ್ಣತಂದೆವರದಗೋಪಾಲವಿಠ್ಠಲನಾಣೆ ಪೊರೆಯದಿರೆ 3
--------------
ತಂದೆವರದಗೋಪಾಲವಿಠಲರು
ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದುದುಃಖದ ಶರಧಿಯಿಂದ ಪರಮಾತ್ಮನ ಸ್ಮರಣೆಗೆ ವಿಘ್ನವಹುದು ಪ ಮಗ ಬುದ್ಧಿವಂತನಾಗಲಿಲ್ಲವೆಂದೆಂಬಮಗಳಿಗೊದಗಲಿಲ್ಲ ಅಳಿಯ ಎಂದೆಂಬಹಗರಣವಾಯಿತು ಮನೆಯೀಗ ಎಂದೆಂಬ ದುಃಖವೊಂದುಜಗಳಗಂಟಿಯು ಎನ್ನ ಹಿರಿಯ ಸೊಸೆ ಎಂದೆಂಬ ದುಃಖವೊಂದು1 ಹೆಂಡತಿ ವ್ಯಭಿಚಾರಿಯಾದಳು ಎಂದೆಂಬ ದುಃಖವೊಂದುಉಂಡೆನೆಂದರೆ ಅನ್ನವಿಲ್ಲ ಎಂದೆಂಬ ದುಃಖವೊಂದುಕಂಡಕಡೆಗೆ ಹೋಗೆ ಕೈ ಹತ್ತದೆಂದೆಂಬ ದುಃಖವೊಂದುಮುಂಡೆಯಾದಳು ಎನ್ನ ಮೊಮ್ಮಗಳು ಎಂದೆಂಬ ದುಃಖವೊಂದು 2 ನೆಂಟರಿಗೆ ಮಾಡಲೆನ್ನೊಳಿಲ್ಲವೆಂದೆಂಬ ದುಃಖವೊಂದುಒಂಟಿ ಬಯಲಿನ ಹೊಲವು ಬೆಳೆಯದು ಎಂದೆಂಬ ದುಃಖವೊಂದುಕಂಟಕಿ ನಾದಿನಿ ಹಡೆಯಲಾರಳು ಎಂದೆಂಬ ದುಃಖವೊಂದುಎಂಟು ವರಹ ಎಮ್ಮೆ ಸತ್ತಿತು ಎಂದೆಂಬ ದುಃಖವೊಂದು3 ಎದೆ ಮೇಲೆ ಕುಳಿತಿಹರು ದಾಯಾದಿಗಳೆಂದೆಂಬ ದುಃಖವೊಂದುಮುದುಕಿಗೆ ಗೆಲುವು ತಾನಿಲ್ಲವೆಂದೆಂಬ ದುಃಖವೊಂದು ಮದುವೆಗೆ ಹಾದಿಲ್ಲ ಹಾವಳಿ ಎಂದೆಂಬ ದುಃಖವೊಂದುಸದನ ಒಳ್ಳೇದಲ್ಲ ಏಳು ಮಕ್ಕಳ ತಾಯಿ ಎಂಬ ದುಃಖವೊಂದು 4 ಜೋಡಿಪೆ ಧೈರ್ಯವೆಂದರೆ ನಿಶ್ಚಯಾಗಲಿಕೆ ಕೊಡದು ಒಂದುನೋಡುವೆ ಚಿಂತಿಸಿ ಎನೆ ಚಿಂತೆ ಹರಿಯಲು ಕೊಡದು ಒಂದುಮಾಡುವೆ ಮಂತ್ರ ಪೂಜನ ಪೂಜೆ ಮಾಡಲು ಕೊಡದು ಒಂದುಕೊಡುವೆ ಗುರು ಚಿದಾನಂದನೆನೆ ಕೂಡಗೊಡದು ಎಂದು 5
--------------
ಚಿದಾನಂದ ಅವಧೂತರು
ಬೃಂದಾವನದಿ ನೋಡುವ ಬಾರೆ ಗೋ-ಪ ವಿಂದನಾಡುವ ಸಂದಣಿ ಸಾಲದೆ ಸಖಿ ಅ.ಪ. ಮುನಿಗಳು ತರು ಪಕ್ಷಿ ಮೃಗಂಗಳಾಗಿರೆಸನಕಾದಿಗಳು ಗೋವುಗಳಾಗಿರೆಅನಿಮಿಷರೆಲ್ಲರು ಗೋಪಾಲರಾಗಿರೆದನುಜಾಂತಕನು ಮನುಜನಂತಾಗಿರೆ 1 ತಳಿತ ತೋರಣದಿಂ ತಂಪಿನ ನೆಳಲಿಂಮಳೆಯಾಗಿ ಸುರಿವಾ ಮಕರಂದ ಜಲದಿಂಫಲ ಪುಂಜಗಳಿಂ ಶುಕಚಾಟುಗಳಿಂನಳಿನನಾಭನನುಪಚರಿಪ ವೃಕ್ಷಗಳುಳ್ಳ 2 ತಳಿತ ತರುಗಳೆಲ್ಲ ತಂತಮ್ಮ ಜಾತಿಯಉಲುಹನುಳಿದು ಕಣ್ಣುಮುಚ್ಚಿ ತೆರೆಯುತ್ತನಳಿನನಾಭನ ವೇಣುಗೀತೆಯ ರಸದಲ್ಲಿಮುಳುಗಿ ಮುನಿಗಳಂತಿಪ್ಪ ಪÀಕ್ಷಿಗಳುಳ್ಳ 3 ಚಿತ್ತಜನೈಯನ ವೇಣುನಾದವಎತ್ತಿದ ಕಿವಿಯಿಂದ ಸವಿಯುತಲಿಮತ್ತಾದ ಸುಖಜಲ ಕಡಲಾಗಿ ಹರಿಯಲುಚಿತ್ತರದಂತಿಪ್ಪ ತುರುವಿಂಡುಗಳುಳ್ಳ 4 ನಖ ತಿಂಗಳ ಬೆಳಕಿಗೆತುಂಗ ಚಂದ್ರಕಾಂತ ಶಿಲೆ ಒಸರಿಹಿಂಗದೆ ಹರಿದು ಕಾಳಿಂದಿಯ ಕೂಡಲುಗಂಗೆ ಯಮುನೆಯರ ಸಂಗಮದಂತಿಪ್ಪ 5 ಚಕೋರ ಚಕ್ರವಾಕಇರುಳು ಹಗಲು ಎಂದು ಹೋಗುತಲಿರುತಿಪ್ಪ6 ಹರಿಯ ಕೊಳಲ ಸ್ವರದತಿ ಮೋಹನಕೆತರುಮೊಗ್ಗೆಗಳಿಂ ಪುಳುಕಿತವಾಗೆಗಿರಿಯು ಝರಿಯಾ ನೆವದಿಂ ಕರಗಲುತೊರೆಯು ಸುಳಿಯ ನೆವದಿಂದ ತಾ ನಿಲ್ಲುವ7 ಕುಂಡಲ ತಾಳಮೇಳದ ರಭಸಕ್ಕೆನಲಿನಲಿದಾಡುವ ನವಿಲ ಹಿಂಡುಗಳುಳ್ಳ 8 ನಳನಳಿಸುವ ವನಮಾಲೆ ಇಂದ್ರಚಾಪಪೊಳೆವ ಪೊಂಬಟ್ಟೆ ಮಿಂಚು ವೇಣುಗಾನಎಳೆಯ ಗರ್ಜನೆ ಶ್ಯಾಮಮೇಘ ಕೃಷ್ಣಮಳೆಯ ಮೇಘವೆಂದು ಚಾತಕ ನಲಿಯುತ9
--------------
ವ್ಯಾಸರಾಯರು
ಮಾರುತನೆ ಏಳೆಂದು ಎಬ್ಬಿಸಿದಳಂಜನೆಯುಶ್ರೀ ರಾಮ ಸೇವೆಗೆ ತಡವಾಯಿತೇಳು ಪ.ಸೇತುಗಟ್ಟಲು ಬೇಕುಶರಧಿ ದಾಟಲು ಬೇಕುಮಾತೆಗೆ ಉಂಗುರವ ಕೊಡಲು ಬೇಕು ||ಪಾತಕಿ ರಾವಣನ ಶಿರವನ್ಹರಿಯಲು ಬೇಕುಸೀತೆಪತಿ ರಾಮರಿಗೆ ನಮಿಸಬೇಕು 1ಇಂತು ಕಳಿಯಲು ಬೇಕು ಅಙ್ಞÕತವಾಸವನುಪಂಥದಲಿ ಕೀಚಕರ ಒದೆಯಬೇಕು ||ತಂತ್ರದಲಿ ಗೆಲಬೇಕು ಶಕುನಿ ದುರ್ಯೋಧನರಕುಂತಿನಂದನನೆಂದು ಹೆಸರಾಗಬೇಕು 2ಮಧ್ವರಾಯರು ಎಂದು ಪ್ರಸಿದ್ಧರಾಗಲು ಬೇಕುತಿದ್ದಿ ಹಾಕಲು ಬೇಕು ಸಕಲಗ್ರಂಥಗಳ ||ಅದ್ವೈತವಾದಿಗಳ ಗೆದ್ದು ಕೆಡಹಲು ಬೇಕುಮುದ್ದು ಪುರಂದರವಿಠಲ ದಾಸನೆನಿಸಲು ಬೇಕು 3
--------------
ಪುರಂದರದಾಸರು