ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಕಾಮಹರ ನಿನ್ನಂಘ್ರಿ ತಾಮರಸಯುಗಳ ಭಜಿಸುವೆ | ಭಜಿಸಿ ಬಿನ್ನೈಸುವೆ ಶ್ರೀ ಮನೋಹರನ ತೋರಯ್ಯ 1 ಕೃತ್ತಿವಾಸನೆ ಎನ್ನ ಚಿತ್ತದಲಿ ಹರಿಯಪದ ನಿತ್ಯದಲಿ ಭಜಿಪ ಮತಿ ನೀಡೊ | ಮತಿ ನೀಡೊ ಪಾರ್ವತಿ ಚಿತ್ತದೊಲ್ಲಭನೆ ನಮಿಸುವೆ 2 ಸುವರ್ಣಮುಖರಿಯ ತೀರದಲಿ ನೆಲಸಿರುವೆ ಶ್ರೀ ವರಾಹನಂಘ್ರಿ ಭಜಿಸುತ್ತ | ಭಜಿಸುತ್ತ ನೆಲಸಿರುವ ಪಾವನರೂಪ ಸಲಹಯ್ಯ 3 ಕಾಳಸ್ತಿನಿಲಯನೆ ಪೇಳಲಿನ್ನೇನು ನಾ ತಾಳಲಾರೆನು ಈ ಭವಬಂಧ | ಭವಬಂಧ ಬಿಡಿಸುವ ವ್ಯಾಳ ಶಯನನ್ನ ತೋರೈಯ್ಯ 4 ಭಕ್ತರಿಗೊಲಿದು ಅಪಮೃತ್ಯು ಪರಿಹರಿಸಿದೆ ಸತ್ಯ ಸಂಕಲ್ಪ ನಿನ್ನಂಘ್ರಿ | ನಿನ್ನಂಘ್ರಿ ಕಮಲಗಳ ಚಿತ್ತದಲಿ ತೋರಿ ಸಂತೈಸು 5 ಮನಕೆ ಗುರು ನೀನಹುದು ಮನವ ಹರಿಯಲಿ ನೆಲಸೊ ವೈರಿ ಮಮತೆಯಿಂ | ಮಮತೆಯಿಂದಲಿ ನಿತ್ಯ ಮನಶುದ್ಧಿಗೈದು ಕಾಯಯ್ಯ 6 ಶಂಖಚಕ್ರವ ಪಿಡಿದ ಸಂಕರ್ಷಣನ ರೂಪ ನಿತ್ಯ ಭಜಿಸುವೆ | ಭಜಿಸುವೆ ಕೈಲಾಸ ಅಂಕದಲಿ ನೆಲಸಿ ಹರುಷದಿ 7 ನರಸಿಂಹ ರೂಪವನು ಸ್ಮರಿಸುತ್ತ ಮೈಮರೆವೆ ಉರುತರ ಭಾವ ಭಕ್ತಿಯಲಿ | ಭಕ್ತಿಯಲಿ ಭಜಿಪ ನಿನ್ನ ಸ್ಮರಿಸುವರ ಭಯವ ಹರಿಸುವೆ 8 ಶ್ರೀ ರಾಮನಾಮವನು ಪ್ರೇಮದಿಂದುಮೆಗರುಹಿ ಆರಾರು ಅರಿಯದಾನಂದ | ಆನಂದವಿತ್ತೆ ಭವ ತಾರಕವೆಂದು ಕರುಣಾಳೂ 9 ಅಜನ ಭ್ರೂಮಧ್ಯದಲಿ ಜನಿಸಿದೆಯೊ ಜಗದಲ್ಲಿ ಭಂಜನ | ಭಂಜನಗೊಳಿಸಿದೆ ತ್ರಿಜಗದಲಿ ನಿನಗೆ ಸರಿಯುಂಟೆ 10 ಶೇಷ ಪರ್ಯಂಕನಿಗೆ ಹಾಸಿಗೆಯಾಗಲು ತೋಷದಲಿ ತಪವಾಚರಿಸಿದೆ | ಚರಿಸಿ ಸಾಧಿಸಿದೆ ನೀ ಶೇಷ ಪದವಿಯನು ತ್ರಿನೇತ್ರ 11 ಶರಧಿ ಮಥಿಸಲು ಗರಳ ಉದ್ಭವಿಸಿ ಭಯವಾಗೆ | ಭಯವಾಗಿ ಪರಿಹರಿಸಿ ಗರಳವನೆ ಕುಡಿದೆ ಶ್ರೀ ಕಂಠ 12 ಅಸುರರ ವಂಚಿಸಿದ ವಶವಲ್ಲದ ಹೆಣ್ಣು ವಶವಾಗಲೆಂದು ಹಾರೈಸಿ | ಹಾರೈಸಿ ಬಳಲುತಿರೆ ಬಿಸಜಾಕ್ಷ ನಿನ್ನ ಸಲಹಿದ 13 ತಾರಕಾಸುರನಿಂದ ಘೋರಪಡುತಿರೆ ಜಗವು ಮಾರ ಪೂಅಸ್ತ್ರ ಎಸೆಯಲು | ಎಸೆಯಲು ದಹಿಸಿ ಕು- ಮಾರನನು ಪಡೆದೆ ಗಿರಿಜೇಶ 14 ಸ್ತುತಿಪ್ರಿಯ ನಿನ್ನ ನಾ ಸ್ತುತಿಸಲಾಪೆನೆ ಮಂದ ಮತಿ ಎಂದು ನೀನೆ ಸಂತೈಸೊ | ಸಂತೈಸಬೇಕಿನ್ನು ಮತಿಯಿತ್ತು ಹರಿಯ ಪದದಲ್ಲಿ 15 ಶಿರದಲ್ಲಿ ಗಂಗೆ ಚಂದ್ರನ ಮೆರೆಯುವ ಉರಗ ಭೂಷಣನೆ ಕೇಳಿನ್ನು | ಕೇಳಿನ್ನು ಎನ್ನ ಮನ ಮರೆಯದೆ ಹರಿಯ ನೆನೆಯಲಿ 16 ವಿಷ್ಣು ಭಕ್ತರೊಳಗೆ ಶ್ರೇಷ್ಠ ನೀನಹುದಯ್ಯ ಜಿಷ್ಣುವಿಗೆ ಮೆಚ್ಚಿ ಧನುವಿತ್ತೆ | ಧನುವಿತ್ತೆ ಗೋಪಾಲ- ಕೃಷ್ಣವಿಠ್ಠಲನ ತೋರಯ್ಯ 17
--------------
ಅಂಬಾಬಾಯಿ
ಲಕ್ಷ್ಮೀ ಮನೋಜ್ಞ ವಿಠಲ | ಕಾಪಾಡೊ ಇವಳಾ ಪ ಪಕ್ಷೀಂದ್ರವಹ ಹರಿಯೆ | ಇಕ್ಷುಶರ ಪಿತನೇ ಅ.ಪ. ಸುಕೃತ | ದಿಂದ ಫಲ ತೊರೆತಿಹುದುಮಂದಾಕೀನಿ ಜನಕ | ಇಂದಿವಳ ಪೊರೆಯೆ 1 ಹರಿಯೆ ಪರತರನೆಂಬ | ಸುರರ ಮನೊ ಭಾವದಲಿಹರಿ ಗುರು ಹಿರಿಯರಲಿ | ವರಭಕ್ತಿಯುತಳೂತರತಮದ ಸುಜ್ಞಾನ | ವರಭೇದ ಪಂಚಕದಅರಿವಿತ್ತು ಪೊರೆ ಇವಳ | ಮರುತಾಂತರಾತ್ಮ 2 ಕಂಸಾರಿ ಪೂಜೆ ಎಬಂಶವನು ತಿಳಿಸುತ್ತ | ಕಾಪಾಡೊ ಹರಿಯೇಸಂಶಯವುರಹಿತ ತ | ತ್ವಾಂಶ ದರಿವಿತ್ತು ವಿಪಾಂಸಗನು ಹರಿಯಪದ | ಪಾಂಸುವನೆ ತೊಡಿಸೋ 3 ಅಕ್ಷಯ ಫಲದಾತಈಕ್ಷಿಸೋ ಇವಳ ಕರು | ಣೇಕ್ಷಣದಿ ಹರಿಯೇ 4 ಗೋವತ್ಸ ದನಿಕೇಳಿ | ಧಾವಿಸುವ ಪರಿಯಂತೆಶ್ರೀವರನೆ ನೀನಾಗಿ | ಓವಿ ಪೊರೆ ಎಂಬಾಆವ ಈ ಬಿನ್ನಪವ | ನೀವೊಲಿದು ಸಲಿಸುವುದುಗೋವಿದಾಂಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀ ಮದಾಚಾರ್ಯ ಮುನಿ ಪ್ರೇಮದಲಿ ಸಲಹೊ ಪ. ಕಾಮಪೂರ್ಣನೆ ಎನ್ನ ಕಾಮಿತವನೀಯೊ ಅ.ಪ. ದ್ವಿತೀಯಯುಗದಲಿ ವಾಯುಸುತನಾಗಿ ಅವತರಿಸಿ ಕ್ಷಿತಿಸುತೆಗೆ ಉಂಗುರವ ಹಿತದಿಂದಲಿತ್ತೆ ತೃತಿಯುಗದಲಿ ಕುಂತಿಸುತನಾಗಿ ಕೌರವರ ಹತಗೊಳಿಸಿ ಹರಿಯಪದ ಹಿತದಿ ಧ್ಯಾನಿಸಿದೆ 1 ಕಲಿಯುಗದೊಳವತರಿಸಿ ಕಲಿಕಲ್ಮಷವ ಕಳೆದು ಒಲಿಸಿ ಹರಿಯನು ತುರಿಯ ಆಶ್ರಮದಲಿ ಸುಲಭಮಾರ್ಗವ ತೋರಿ ಸುಜನರನು ರಕ್ಷಿಸಿದೆ ಕಲಿಕಾಲ ಸಲಹೆನ್ನ ನೆಲಸಿ ಹೃದಯದಲಿ 2 ಆಚಾರ್ಯರೂಪದಲಿ ಗೋಚರಿಸಿ ಸ್ವಪ್ನದಲಿ ಸೂಚಿಸಿದೆ ದಾಸತ್ವ ಸಿದ್ಧಿಸಲಿ ಎಂದು ಯಾಚಿಸೆನೊ ಅನ್ಯರನು ನಾಚಿಕೆಯ ತೊರೆದಿನ್ನು ನೀಚತನವನೆ ಬಿಡಿಸಿ ಗೋಚರಿಸೊ ಸತತ 3 ಉಪದೇಶವನೆ ಇತ್ತೆ ಗುಪಿತದಿಂ ಸ್ವಪ್ನದಲಿ ಚಪಲತನದಲಿ ನಾನು ಅರಿಯಲಿಲ್ಲ ಅಪರಿಮಿತ ಮಹಿಮ ಶ್ರೀ ಗುರುಗಳಲಿ ನೀ ನಿಂತು ತಪ್ಪನೆಣಿಸದೆ ಎನ್ನ ನಮನ ಸ್ವೀಕರಿಸೊ 4 ವೇದವ್ಯಾಸರ ಪ್ರಿಯನೆ ಮೋದದಲಿ ಶಿಶುವಾದೆ ಶ್ರೀ ದುರ್ಗೆ ತಾ ಬಂದು ಎತ್ತಿದಳೊ ನಿನ್ನ ವಾದಿಗಳ ಗೆದ್ದ ಅನಾದಿ ಮುನಿ ನಮಿಸುವೆನೊ ಶ್ರೀದ ಗೋಪಾಲಕೃಷ್ಣವಿಠ್ಠಲನ ತೋರೊ 5
--------------
ಅಂಬಾಬಾಯಿ