ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರಾಯ ಪುರಂದರದಾಸರಾಯ ಪ. ಘಾಸಿಗೊಳಿಸದೆ ಇತ್ತು ಕರುಣಿಸಿ ವಾಸುದೇವನ ಕೃಪೆಗೈಸಿರಿ ಅ.ಪ. ದಾಸಕೂಟಕೆ ಮೊದಲನೆ ಗುರು ದೊಷವರ್ಜಿತ ಭಕ್ತರೆನಿಸಿ ಆಶಪಾಶವೆ ತೊರೆದು ಹರಿಯ ದಾಸತನವನು ತೋಷದಲಿ ಕೊಂಡು ಕೇಶವನು ಸರ್ವೋತ್ತಮನು ಎನ್ನುತ ಶ್ರೀಶನ ಗುಣಗಳನೆ ಪೊಗಳುತ ಭೂಸುರರ ರಕ್ಷಿಸುತ ಭಕ್ತರ ಕ್ಲೇಶಗಳೆÉದಂಥ ಗುರುವರ 1 ವೀಣೆ ಕರದಲಿ ಗಾನಮಾಡುತ ಜಾಣತನದಲಿ ಕೃಷ್ಣನೊಲಿಸುತ ಆನಂದದಲಿ ನರ್ತಿಸುತ್ತ ಧ್ಯಾನದಲಿ ಶ್ರೀ ಹರಿಯ ನೋಡುತ ಆನನವ ತೂಗುತ್ತ ವೇದ ವಿ- ಧಾನದಲಿ ಪದಗಳನೆ ರಚಿಸುತ ಮೌನಿವ್ಯಾಸರ ಶಿಕ್ಷೆಯಿಂದಲಿ ದಾನವಾಂತಕ ಹರಿಯನೊಲಿಸಿದ 2 ಪಾಪಿಗಳ ಪಾವನಗೈಸುತ ಶ್ರೀ ಪತಿಯ ಅಂಕಿತವ ನೀಡುತ ಈ ಪರಿಯಲಿ ಮೆರೆದ ಮಹಿಮೆಯ ನಾ ಪೇಳಲಳವಲ್ಲವಿನ್ನು ನಾ ಪಿರಿಯರಿಂ ಕೇಳಿದುದರಿಂ ದೀಪರಿ ನುಡಿದಿರುವೆನಲ್ಲದೆ ಗೋಪಾಲಕೃಷ್ಣವಿಠ್ಠಲನ ರೂಪ ನೋಡುತ ಸುಖಿಸುವಂಥ 3
--------------
ಅಂಬಾಬಾಯಿ
ಪದ್ಮನಾಭರ ಭಜಿಸೋ ಹೇ ಮನುಜಾನೀ ಪ ಮಧ್ವರಾಯರ ಕರಪದ್ಮ ಸಂಭವರಾದ ಅ.ಪ ಮತ್ತ ಮಾಯಿಗಳೆಂಬೊ ಹಸ್ತಿಗಣಕೆ ಪಂಚ ವಕ್ತ್ರರೆಂದೆನಿಸಿದ ಪೃಥ್ವೀಸುರಸೇವಿತ 1 ಪ್ರೀತಿಯಿಂದಲಿ ಗೋಪಿನಾಥನರ್ಚಿಸಿ ಸುಖ ತೀರ್ಥ ಗ್ರಂಥಕೆ ಸವ್ಯಾಖ್ಯಾತ್ರರೆಂದೆನಿಸಿದ 2 ಧರೆಯೊಳು ಶರಣರ ಪೊರಿವ ಕಾರ್ಪರನರ ಹರಿಯನೊಲಿಸಿದಂಥ ಪರಮ ಮಹಿಮರಾದ3
--------------
ಕಾರ್ಪರ ನರಹರಿದಾಸರು
ಬಲು ರಮ್ಯವಾಗಿದೆ ಹರಿಯ ಮಂಚ ಪ ಎಲರುಣಿಕುಲ ರಾಜ ರಾಜೇಶ್ವರನ ಮಂಚಅ.ಪ. ಪವನತನಯನ ಮಂಚ ಪಾವನತರ ಮಂಚ ಭುವನತ್ರಯನ ಪೊತ್ತ ಭಾರಿಮಂಚ ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ 1 ನೀಲಾಂಬರವನುಟ್ಟು ನಳನಳಿಸುವ ಮಂಚ ನಾಲಗೆ ಎರಡುಳ್ಳ ನೈಜಮಂಚ ನಾಲ್ವತ್ತು ಕಲ್ಪದಿ ತಪವ ಮಡಿದ ಮಂಚ ತಾಲ ಮುಸಲ ಹಲವ ಪಿಡಿದಿರುವ ಮಂಚ 2 ರಾಮನನುಜನಾಗಿ ರಣವ ಜಯಿಸಿದ ಮಂಚ ತಾಮಸ ರುದ್ರನನು ಪಡೆದ ಮಂಚ ಭಿಮಾವರಜನೊಳು ಆವೇಶಿಸಿದ ಮಂಚ ಜೀಮೂತ ಮಂಡಲವ ತಡೆಗಟ್ಟಿದ ಮಂಚ 3 ಜೀವನಾಮಕನೆನಿಸಿ ವ್ಯಾಪ್ತನಾದ ಹರಿಯ ಸೇವಿಸಿ ಸುಖಿಸುವ ದಿವ್ಯ ಮಂಚ ಸಾವಿರ ಮುಖದಿಂದ ತುತ್ತಿಸಿ ಹಿಗ್ಗುವ ಮಂಚ ದೇವಕೀಜಠರದಿ ಜನಿಸಿದ ಮಂಚ4 ವಾರುಣೀ ದೇವಿ ವರನೆನಿಸಿದ ಮಂಚ ಸಾರುವ ಭಕುತರ ಸಲಹೊ ಮಂಚ ಕಾರುಣ್ಯನಿಧಿ ಜಗನ್ನಾಥ ವಿಠಲನ ವಿ ಹಾರಕ್ಕೆ ಯೋಗ್ಯವಾದ ವಿಮಲ ಶೇಷ ಮಂಚ5
--------------
ಜಗನ್ನಾಥದಾಸರು
ವ್ಯಾಸಕೂಟ-ದಾಸಕೂಟದ ಇತರ ಗುರುಗಳ ವರ್ಣನೆ ಮುನಿವರ್ಯ ಶ್ರೀಕಾರ್ಪರ ಮುನಿವರ್ಯ ಪ ಗೃಂಥಾರ್ಥ ಜ್ಞಾನ ವಿಷಯವ ನೆನೆಸದಂದದಿ ಮಾಡೋ ವನಜನಾಭನ ಪ್ರೀಯ ಅ.ಪ ಮುನಿವರ್ಯ ಮನವಾಚಾಕಾಯಾ ದಿಂದ ಅನುದಿನ ನಡೆಯುವ ಕ್ರಿಯಾ ಶ್ರೀ ಕೃಷ್ಣನೆ ಮಾಡಿಸುವನೆಂಬೊ ಮತಿಯಾ ಕೊಡು ಯನಗೆಂದು ಮುಗಿವೆನು ಕೈಯಾ ಆಹಾ ಭವ ವನಧಿ ದಾಟಿಸುವ ಸಜ್ಜನರ ಸಂಗವ ಕೊಡು 1 ಶ್ರೀಕಾಂತನಶ್ವತ್ಥ ರೂಪ ದಿಂದ ಒಲಿದು ಬಂದು ನಿಂತು ಭಕ್ತ ವೃಂದವ ಪಾಲಿಪ ನಿರುತ ಆಹ ಇಂದುಮೌಲಿ ಮುಖರಿಂದ ಸಹಿತನಾಗಿ ಮಂದ ಜಾಸನನಿಲ್ಲಿ ಬಂದು ಪೂಜಿಪನಿತ್ಯ 2 ಶ್ರೀ ಕಾರ್ಪರಾಗಾರ ಬಹುಶರಣು ಜನರಿಗೆ ಮಂದಾರ ನರಹರಿಯನೊಲಿಸಿದಂಥ ಧೀರಾ ಆಹಾ ಕರುಣ ಶರಧೆಯನ್ನ ದುರಿತಗಳೋಡಿಸಿ ಹರಿಗುರು ಚರಣದಿ ಪರಮಭಕ್ತಿಯ ಕೊಡೊ 3
--------------
ಕಾರ್ಪರ ನರಹರಿದಾಸರು