ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದೇ ಮತ ಹರಿಯ ಮತ ಒಂದೇ ಭಾವ ಸಿರಿಯರಸನ ಭಾವ ಸಲಹಿದ ನರಹರಿ ಒಂದೇ ಮನದಂಬರೀಷನ ಕಾಯ್ದ ಹರಿ ಒಂದೇ ಮನದಿ ಧ್ರುವನ ಕಾಯ್ದ ಹರಿ ಒಂದೇ ಗಳಿಗೆಯಲಿ ತನ್ನುಂಗುಟದಿ ಸೋಕಿಸೆ ಕಲ್ಲಾಗಿದ್ದಹಲ್ಲೆಯ ಪೆಣ್ ಮಾಡಿದ ತಂದೆಯಂದದಿ ಭಕ್ತರ ಹಿಂದೆ ಕಾದಿದ್ದು ಕರುಣಾಸಿಂಧು ಭಕ್ತರ ಬಂಧು ಸುಂದರಿ ಸಿಂಧುಸುತೆಯರಸನ ನಿತ್ಯ ನೆನಯಿರಿ ಹರಿ ಭಕ್ತರು 1 ಸಾರ ನಾಲ್ಕು ಯುಗದಾಧಾರ ನಾಲ್ಕು ಮುಖದಲಿ ನೆಲಸಿ ಸೃಷ್ಟಿಕಾರ್ಯವ ನಡೆಸಿ ನಾಲ್ಕು ಮುಖ ಬೊಮ್ಮನಲಿ ನಾನಿಲ್ಲವೆನಿಸಿ ನಾಲ್ಕು ಯುಗದಲಿ ಜನಿಸಿದ ರಕ್ಕಸರಿಗೆ ತಿಳಿಸಿ ನಾಲ್ಕು ಲೋಕದಿ ಮೆರೆದ ನಾಕಚಾರ ವಂದ್ಯ ನಾಲ್ಕು ಹಸ್ತದಿ ನಾಲ್ಕು ವೇದತಂದಾ ಮೂರ್ತಿ ನಾಲ್ಕು ವೇದದ ಸಾರದಮೃತ ಭಕ್ತರಿಗಿತ್ತು ಹದಿನಾಲ್ಕು ಲೋಕಕೆ ನಾನೇ ಕರ್ತನೆಂದರಿಸಿ ನಾಲ್ಕು ವಿಧದಲಿ ಕಾವ ಶ್ರೀ ಶ್ರೀನಿವಾಸನ ಭಕ್ತರಾದರೆ ಈ ಕಲಿಯುಗದಿ ನಾಲ್ಕು ಜನರು ಮೆಚ್ಚುವರು ನಿಮ್ಮ ಹರಿ ಭಕ್ತರೆ ಕೇಳಿ2 ನಿನ್ನ ಸಹವಾಸ ಸೈ ನಿನ್ನ ಒಡನಾಟ ಸೈ ನಿನ್ನ ರೂಪ ಚತುರ ಬುದ್ಧಿ ಎನ್ನ ಸೈ ಎನ್ನಲಾಪರೆ ನಿನ್ನ ಕೈ ಚಳಕವಿಲ್ಲದಲೆ ಜೈಸುವದೆಂತೀ ಕಲಿಕಾಲದಿ ಸ್ವಾಮಿ ಜೈಲುವಾಸದಿ ಕೂತು ನಿನ್ನ ಕಲ್ಯಾಣವ ಕಟ್ಟಿದರೊ ನಿನ್ನ ಭಕ್ತರು ಜೈ ಕರುಣಾಕರ ನಿನ್ನ ಭಕ್ತರ ಮಹಿಮೆ ನಾ ಪೊಗಳುವದೆಂತೊ ಜೈ ಎನಿಸಿಕೊಳ್ಳಲು ನಿನ್ನೊಲುಮೆ ಕಾರಣವಲ್ಲವೆ ಜೈವೆಂಕಟ ಶ್ರೀಶಾ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಗೆ ಜಯ ಅಪಜಯವೆಲ್ಲಿ ನಿನ್ನ ಭಕ್ತರಿಗೆ ಎಂದೆಂದಿಗೂ ಜೈ ಹರಿಭಕ್ತರ ನೆನೆಯಿರಿ ಹರಿಭಕ್ತರು 3 ಯನ್ನ ಯತ್ನವೇನಿಲ್ಲಿದರೋಳು ಪನ್ನಗಾದ್ರಿ ನಿವಾಸನಲ್ಲದೇ ಯನ್ನ ಯತ್ನ ಸಲ್ಲುವುದೇ ಎನ್ನ ಮನಸಿಲಿ ಬಂದು ನಿಂದು ತಾನೇ ನುಡಿಸಿದನಿಂದು ಚೆನ್ನಗಿರಿಯರಸ ಭಕ್ತ ಜನ ಬಂಧು ಬಂದು ನಿಂದು ಎನ್ನ ಮನದಭಿಲಾಷೆ ಸಲಿಸೆ ದೀನ ವತ್ಸಲನು ಎನ್ನ ಕರದಲಿ ಬರೆಸಿ ನಲಿದಾಡಿದ ತನ್ನ ವಾಣಿಯನಿತ್ತು ಎನ್ನ ಕುಲದೈವ ಶ್ರೀ ಶ್ರೀನಿವಾಸನ ಕೃಪೆ ಎನ್ನ ಮೇಲೆಂತುಟೊ ಕಾಣೆ ಇನ್ನು ಈ ವಾಣಿ ಹರಿಯದೆಂದು ನುಡಿವುದು ಹರಿಭಗವದ್ಭಕ್ತರು 4 ಪಾಮರರಿಗೆ ಕಲ್ಪತರು ಪಾಮರರಿಗೆ ಜಗದ್ಗುರು ವರವ ತೋರಿ ಪಾಮರರ ಪುನೀತರನು ಮಾಡೆ ಹರಿ ಪಾಮರೆಂದು ಲೆಕ್ಕಿಸದೇ ತಾವಲಿದು ನುಡಿಸಿದ ಪತಿತ ಪಾವನ್ನ ಶ್ರೀ ಶ್ರೀನಿವಾಸನದೇ ಈ ಉಕ್ತಿಯಲ್ಲರ ನೃತ್ರವಿಲ್ಲೆಂದು ತಿಳಿದು ಪಾಮರರನ್ನುದ್ಧರಿಸಲು ಹರಿಭಕ್ತರು ಪಠಿಸುವುದು ಈ ನುಡಿಯ 5 ಜತೆ ಶರಣು ಭಕ್ತರ ಪಾಲ ಶರಣು ಶ್ರೀಲೋಲಾ ಶರಣು ನಿನಗೆ ಸದಾ ಶ್ರೀ ಶ್ರೀನಿವಾಸ
--------------
ಸರಸ್ವತಿ ಬಾಯಿ
ಸುಳಾದಿ ಧ್ರುವತಾಳ ಜಿಹ್ವೆ ಸಿರಿ ಗೋಪಾಲವಿಠಲಮೂರ್ತಿಮಂತನಾಗಿ ಇಪ್ಪ ಎಲ್ಲ ಸ್ಥಳದಿ 1 ಮಠ್ಯತಾಳ ಧನವೋದನವು ಇನ್ನು ಧನದೊಳಗಿಪ್ಪನ್ನನೆನೆದು ತೆಗೆದುಕೊ ಶೋಧನಮಾಡಿ ನೋಡಿತನುವಿಗೆ ಕೆಲಸವಿಡು ತನುಬಂಧುಗಳ ನೋಡುಎಣಿಕೆಗೆ ತಂದು ಭಾಗವನು ಮಾಡು ನಾಲ್ಕುಎಣಿಸುತಲ್ಲಲ್ಲಿ ನೆನೆ ಎಲ್ಲ ಸ್ಥಳದಿಗುಣ ಹರಿಯದೆಂದು ಗುಪ್ತನಾಗಿ ಇನ್ನುಅಣುಘನಪರಿಪೂರ್ಣ ಗೋಪಾಲವಿಠಲಅನಿಮಿತ್ತ ಬಂಧ್ವೆಂಬ ಗುಣವುಂಟವನಿಗೆ2 ರೂಪಕತಾಳ ಒಂದು ಅರ್ಥವು ನಿನಗೆ ದೊರಕಿದಡಾಯಿತೆಚಂದದಿ ಚಿಂತಿಸು ಅನಂತಪರಿಯಲ್ಲಿಒಂದುಭಾಗ ದೇವಸಮುದಾಯಕ್ಕೆ ಕೊಡುಒಂದುಭಾಗ ಪಿತೃಗಳಿಗೆ ಇನ್ನು ಮಾಡುಒಂದುಭಾಗ ಪರಿವಾರ ಬಂಧುಗಳಿಗೆಚಂದದಿ ಕೊಟ್ಟು ಆನಂದ ಉಣುಕಂಡ್ಯನಂದಗೋಪನ್ನ ಕಂದ ಗೋಪಾಲವಿಠಲನ್ನಚಂದದಿ ನಿನ್ನ ಮನಮಂದಿರದೊಳು ತಿಳಿ 3 ಝಂಪೆತಾಳ ಜ್ಞಾನವೆ ಮುಖ್ಯಸಾಧನ ನಿನಗೆ ನೋಡುಏನು ಧನದಿಂದಾಗೊ ಕರ್ಮವದರೊಳಗುಂಟುಪ್ರಾಣಹಿಂಸರಹಿತಕರ್ಮ ಮಾಡು ನಿತ್ಯಶ್ರೀನಿವಾಸನು ಅದಕೆ ಮೆಚ್ಚುವನುಜ್ಞಾನಮಯಕಾಯ ಗೋಪಾಲವಿಠಲರೇಯಕಾಣಿಸುವ ನಿನಗೆ ಕರುಣವಮಾಡಿ ನಿರುತ 4 ತ್ರಿಪುಟತಾಳ ತನುವು ಮಂಟಪಮಾಡು ಮನವೆ ಪೀಠವ ಇಡುನೆನೆದು ಕುಳ್ಳಿರಿಸು ನಿನ್ನ ಒಳಗಿದ್ದ ಮೂರ್ತಿಯಧ್ಯಾನ ಆವಾಹನಾದಿಗಳ ನೆನೆದು ಅಲ್ಲಿಪ್ಪಅಣುಮಹಾಮೂರ್ತಿಗೆ ಅಭಿಷೇಕ ಮಾಡಿಸುಗುಣಮೂರರೊಳಗಿದ್ದ ಹರಿಯ ನೆನೆದುಜಿನಸು ವಸನಾಭರಣ ಧೂಪದೀಪವ ಮಾಡಿನೆನಸು ಗಂಧ ಪುಷ್ಪವನು ಮಿಕ್ಕಾದದ್ದೆಲ್ಲಗುಣ ಮೂರುವಿಧದ ಪದಾರ್ಥಗಳನ್ನೆಲ್ಲನಿನಗೆ ಒಂದು ಉದಕಮಾತ್ರ ದೊರಕಿದರೆಇನಿತು ಪರಿಯು ಎಲ್ಲ ಅದರಿಂದ ಚಿಂತಿಸೊಧನದ ಪೂಜೆಗೆ ಅತ್ಯಾಯಾಸಪಡಲಿಬೇಡಘನದೈವ ನಮ್ಮ ಗೋಪಾಲವಿಠಲರೇಯನಿನಗೆಷ್ಟುಪರಿಯಲ್ಲಿ ಪೊರೆವನವನ ತಿಳಿ 5 ಅಟ್ಟತಾಳ ಒಳಗೆ ಬಂದರೆ ನಿನ್ನ ಒಳಗೆ ಇರುತಲಿಪ್ಪಸುಳಿಯುತಿಪ್ಪ ನಿನ್ನ ಸುತ್ತ ಬಿಡದೆ ಬೆನ್ನಹಲವುಪರಿಕರ್ಮ ನಿನಗಾಗಿ ಮಾಡುತ್ತಚೆಲುವ ನಿರ್ಲಿಪ್ತನ್ನ ತಿಳಿಯದೆ ಕೆಡುವಿ ಯಾಕೆಸುಲಭವಾಗಿ ಕರತಳದಲ್ಲಿದ್ದಂಥಫಲವ ನೀ ಕಾಣದೆ ಬಲು ದಣಿಸುವುದೇನೊಗೆಳೆಯನಾಗಿ ಪಾರ್ಥಗೊಲಿದ ನಮ್ಮ ಸ್ವಾಮಿಚೆಲುವ ಗೋಪಾಲವಿಠಲರೇಯನ ನೀನುಗಳಿಗೆ ಮರೆಯಬೇಡ ಬಲುಪ್ರಿಯಾ ಬಲುಪ್ರಿಯಾ 6 ಆದಿತಾಳ ಸೂರ್ಯ ಅಧಿಷ್ಠಾನದಲ್ಲಿದ್ದುದೇವನ ಸ್ಮರಣೆಯು ಬರುತಿರಲಿ ಕಂಡ್ಯಾಕಾವನು ಬಿಡನಿನ್ನು ಗೋಪಾಲವಿಠಲ 7 ಜತೆ ಗೃಹಮೇಧಿ ಮಾಡಿ ನಿನ್ನ ಗೃಹದೊಳಗಿಪ್ಪಂಥಶ್ರೀಹರಿ ಗೋಪಾಲವಿಠಲನ್ನ ನೆನೆಕಂಡ್ಯಾ
--------------
ಗೋಪಾಲದಾಸರು