ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವ ಶ್ರೀಗುರುಚರಣವ ಮಾಡುತ ಪೂಜೆಯ ತೋಷದಲಿ ಪ ಬೇಡುತ ನಿಜಸುಖ ಆಜ್ಞಾಚಕ್ರದೊ ಳಾಡುತ ಪರಮನೆ ನೀನಾಗಿ ಅ.ಪ ಸತ್ತು ಹುಟ್ಟಿ ಈ ಪೋಗುವದೇಹವ ನಿತ್ಯವು ಎನ್ನುತ ಪೋಷಿಸದೆ ಸತ್ಯಪ್ರಬಂಧವ ಶ್ರೀಹರಿಪಾದವ ನೆತ್ತಿಲಿ ಪೊತ್ತರ ಮಗನಾಗಿ 1 ಚಿತ್ತವ ಚಲಿಸದೆಸಿದ್ದಾಪುರದೊಳ ಗಿತ್ತರೆ ಬಂಧುರಸಿದ್ಧಿಗಳೂ ಅರ್ಥಿಯಿಂದ ಬಂದೊದಗುವ ಫಲಗಳ ವ್ಯರ್ಥವ ಮಾಡದೆ ಶೀಘ್ರದಲಿ 2 ಹರಿಯಜ ರುದ್ರರು ಈಶ ಸದಾಶಿವ ಪರತರಮೂರ್ತಿಯ ಧ್ಯಾನಿಸುತ ಗುರುವನೆ ಯಜಿಸುತ ಭಜಿಸುತ ಸರ್ವರು ಗುರುವೇಯಾಗಿಹ ತೆರದಲ್ಲಿ 3 ತತ್ವಮಸಿಯ ಬೋಧಾಮೃತ ಸೇವಿಸಿ ಮೃತ್ಯುವ ಜೇಸುತ ಧೈರ್ಯದಲಿ ಪೃಥ್ವಿಯೊಳೀಮಹದೇವನಪುರದೊಳು ಭಕ್ತರ ಪೊರೆಯುವ ದೊರೆಯನ್ನೆ 4
--------------
ರಂಗದಾಸರು
ವಿಘ್ನೇಶ - ವಿಘ್ನೇಶ ಪ ಭಗ್ನ ಗೈಸಿ ದು | ರ್ವಿಘ್ನಗಳನು ಹರಿಯಜ್ಞನಲ್ಲಿ ಮನ | ಲಗ್ನವ ಗೈವುದು ಅ.ಪ. ನಭಕಭಿಮಾನಿಯೆ | ಪ್ರಭುಹರಿ ಭಜನೆಗೆಶುಭ ಅವಕಾಶದ | ವೈಭವ ಪ್ರದನೇ 1 ಆದಿದೇವ ನಿನ | ಗಾದಿ ಪೂಜೆಯನುಮೋದದಿ ವಿಧಿಸುತ | ಸಾಧು ಜನೋದ್ಧಾರ 2 ಕಂತು ಹರನ ಸುತ 3 ಸಂತತ ಸಂಗವ | ಸಂತತ ಕೊಡುತಲಿಪಂಥಾಬಿಧ ಹರಿ | ಚಿಂತೆಯಲಿರಿಸೋ 4 ವಿಶ್ವಂಭರ ಗುರು | ಗೋವಿಂದ ವಿಠಲನವಿಶ್ವರೂಪ ಬಹು | ವಿಶ್ವಾಸಾರ್ಚಕ 5
--------------
ಗುರುಗೋವಿಂದವಿಠಲರು
ವಿಶ್ವೇಶ ವೆಂಕಟೇಶ_ ವಿಶ್ವಾದಿ ಪರರೂಪಿ ಶ್ರೀ ವಿಷ್ಣು ಪರಬ್ರಹ್ಮ_ನಮೋ ನಮೋ ಪ ವಿಶ್ವಾತ್ಮ ಶ್ರೀಗುರು _ ವಿಶ್ವಾನ್ನ ಅನ್ನದ ವಿಶ್ವಸ್ಥ ಶ್ರೀ ಕೃಷ್ಣ _ ನಮೋ ನಮೋ ಅ.ಪ ಕೇಶವಾ ಮಾಧವಾ _ ಗೋವಿಂದ ಅಚ್ಯುತ ವಾಸುದೇವಾನಂತ _ ನಾರಾಯಣಾ1 ಗೋಧರಾ ಶ್ರೀಕರಾ _ ಶ್ರೀಮತ್ಸ್ಯ ಕಚ್ಛಪ ಶುದ್ಧಾನಂದಾತ್ಮಕ _ ನಾರಸಿಂಹ 2 ಶ್ರೀಧರಾ ವಾಮನಾ _ ಪ್ರದುಮ್ನ ಹೃಷಿಕೇಶ ಆದ್ಯಂತ ವರ್ಜಿತ _ ತ್ರಿವಿಕ್ರಮಾ 3 ಭಾರ್ಗವಾ ರಾಘವಾ _ ಶ್ರೀ ಕೃಷ್ಣ ಉಪೇಂದ್ರ ಯೋಗೇಶ ಬುದ್ಧಕಲ್ಕಿ ಜನಾರ್ದನ 4 ಪದ್ಮನಾಭ ಪದ್ಮೇಶ ಅನಿರುಧ್ಧ _ ಸಂಕರ್ಷಣ 5 ದಾಮೋದರಾ ದತ್ತ _ ಕಪಿಲ ಶಿಂಶುಮಾರ ಅಧೋಕ್ಷಜ _ ಸೀಮಾಶೂನ್ಯ 6 ಶ್ರೀ ವಿಷ್ಣುಹರಿಯಜ್ಞ _ ಧನ್ವಂತ್ರಿ ಮಹಿದಾಸ ಶ್ರೀ ವಂದ್ಯ “ಕೃಷ್ಣವಿಠಲ” ಪಾರಾಶರ7
--------------
ಕೃಷ್ಣವಿಠಲದಾಸರು