ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೂಗಿರೆ ಗುರುಗಳ ತೂಗಿರೆ ಯತಿಗಳ ತೂಗಿರೆ ದಾಸಗ್ರೇಸರರ ನಾಗಶಯನನು ರಾಗವ ಪಡೆದಂಥ ಯೋಗಿವರೇಣ್ಯರ ತೂಗಿರೆ ಪ ಈ ಮಹಿಯೊಳು ಪುಟ್ಟಿ ಶ್ರೀಮುದತೀರ್ಥ ಸು- ನಾಮದಿ ಕರೆಸುವರ ತೂಗಿರೆ ಆ ಮುದತೀರ್ಥ ಪದ್ಮನಾಭ ನಾಮದಿಂದಿರುವರ ತೂಗಿರೆ1 ರಾಮನ ತಂದಿತ್ತ ನರಹರಿ ಮುನಿಪರ ಮಾಧವ ತೀರ್ಥರ ತೂಗಿರೆ ಆಮ- ಹಾವಿದ್ಯಾರಣ್ಯರನ ಗೆಲಿದಂಥ ಶ್ರೀ ಮದಕ್ಷೋಭ್ಯರ ತೂಗಿರೆ 2 ಕಾಕಿಣಿತೀರಸ್ಥ ಟೀಕಾಚಾರ್ಯರೆಂಬೊ ನಾಕಪಾಂಶಜರನ ತೂಗಿರೆ ಶ್ರೀಕೃಷ್ಣ ತಟದಿ ಜಿತಾಮಿತ್ರರೆಂಬೊ ಪಿ- ನಾಕಿ ಅಂಶಜರನ ತೂಗಿರೆ 3 ರಾಜರಂದದಿ ಸುಖಭೋಜನ ಕೃದ್ಯತಿ ರಾಜ ಶ್ರೀಪಾದರ ತೂಗಿರೆ ವ್ಯಾಜದಿ ವಿಜಯ ಸಾಮ್ರಾಜ್ಯರೆನಿಸಿ ವ್ಯಾಸರಾಜರು ಮಲಗ್ಯಾರ ತೂಗಿರೆ 4 ವಾದಿಗಳನು ಯುಕ್ತಿವಾದದಿ ಗೆಲಿದಂಥ ವಾದಿರಾಜರನ್ನ ತೂಗಿರೆ ಮೇದಿನಿಯೊಳು ಕೃಷ್ಣದ್ವೈಪಾಯನರೆಂಬೊ ವೇದವ್ಯಾಸಾತ್ಮಜರ ತೂಗಿರೆ 5 ಪರಿಮಳ ರಚಿಸಿದ ವರಹಜ ತೀರಸ್ಥ ಇರುಳು ಕಾಲದಲಿ ತರಣಿಯ ತೋರಿದ ಗುರುಸತ್ಯ ಬೋಧರ ತೂಗಿರೆ 6 ಪರಮತ ಖಂಡನ ನಿರುತದಿ ಮಾಡಿದ ಗುರುವರದೇಂದ್ರರ ತೂಗಿರೆ ಗುರು ಭುವನೇಂದ್ರರ ಕರಜವ್ಯಾಸತತ್ವ ವರಿತ ಯತೀಶರ ತೂಗಿರೆ 7 ವರಭಾಗವತಸಾರ ಸರಸದಿ ರಚಿಸಿದ ಗುರುವಿಷ್ಣು ತೀರ್ಥರ ತೂಗಿರೆ ಪರಮ ಕ್ಷೇತ್ರಕೂಡಲಿಯೊಳಗಿರುವಂಥ ಗುರುರಘುವೀರರ ತೂಗಿರೆ 8 ಹರಿಯ ಮಹಿಮೆಯನ್ನು ಸರಸದಿ ಪೇಳಿದ ಪುರಂದರ ದಾಸರ ತೂಗಿರೆ ಹರಿಸರ್ವೋತ್ತಮನೆಂದು ಸುರಮುನಿ ಗರುಹಿದ ಗುರು ವಿಜಯದಾಸರ ತೂಗಿರೆ 9 ಬನ್ನವ ಬಿಡಿಸಿ ಶಿಷ್ಯನ್ನ ಪಾಲಿಸಿದ ಭಾಗಣ್ಣ ದಾಸರನ್ನು ತೂಗಿರೆ ಘನ್ನ ಹರಿಯಗುಣ ವರ್ಣಿಸಿದಂಥ ಜ ಗನ್ನಾಥ ದಾಸರ ತೂಗಿರೆ 10 ಮಾನವಿರಾಯರ ಪ್ರಾಣಪದಕರಾದ ಪ್ರಾಣೇಶದಾಸರ ತೂಗಿರೆ ವೇಣುಗೋಪಾಲನ್ನ ಗಾನದಿ ತುತಿಸಿದ ಆನಂದದಾಸರ ತೂಗಿರೆ 11 ವಾಸ ಆದಿಶಿಲಾಧೀಶನ್ನ ಭಜಿಸಿದ ಶೇಷ್ಠ ದಾಸರನ್ನ ತೂಗೀರೆ ಶ್ರೇಷ್ಠ ಕಾರ್ಪರ ನರಕೇಸರಿಗತಿಪ್ರೀಯ ದಾಸೋತ್ತಮರನ್ನ ತೂಗೀರೆ 12
--------------
ಕಾರ್ಪರ ನರಹರಿದಾಸರು
ದಯದಿ ವರಗಳ ನೀಡು ಮಮಸ್ವಾಮಿ ಸರ್ವಂತರ್ಯಾಮಿ ನಯದಿ ಬೇಡುವೆ ಭಕುತಜನ ಪ್ರೇಮಿ ಮಮ ಸರ್ವಸ್ವಾಮಿ ಪ ಸವಿನಯದಿ ಪ್ರಾರ್ಥಿಸುತ ಬೇಡುವೆ ಸುಮನರಸರ ಪ್ರಿಯ ಚಿತ್ಸುಖಪ್ರದ ಅಮಿತ ವಿಕ್ರಮ ಅಪ್ರಮೇಯನೆ ರಮೆಯರಮಣನೆ ರಕ್ಷಿಸೆನ್ನನು ಅ.ಪ ತೀರ್ಥ ಕ್ಷೇತ್ರಗಳನು ಚರಿಸುತಲೆ ಶ್ರೀ ಹರಿಯಗುಣ ಸ- ತ್ಪಾತ್ರರಿಂದನವರತ ತಿಳಿಯುತಲೆ ಶ್ರೋತ್ರಿಯನ ಸಂಗದೊಳು ನಲಿಯುತ್ತಾ ಮನನಲಿದು ನಿನ್ನಯ ಕೀರ್ತನೆಗಳನುದಿÀನದಿ ಕೀರ್ತಿಸುತ ಪಾರ್ಥಸಾರಥೆ ನಿನ್ನ ಪೊಗಳುತ ರಾತ್ರಿ ಹಗಲೆಡಬಿಡದೆ ಸ್ತುತಿಪರ ಗಾತ್ರಮರೆಯುತಲವರ ಸೇವಿಪ ಸಾರ್ಥಕದ ಸೇವೆಯನೆ ನೀಡೈ 1 ಗೋಕುಲಾಪತಿ ಹರಿಯೆ ಗೋವಿಂದ ನೀ ಕಡಿಯೋ ಬಂಧ ನೂಕಿ ಉದ್ಧರಿಸೆನ್ನ ಭವದಿಂದ ಕಾಕುಮತಿಗಳ ಬಿಡಿಸು ದಯದಿಂದ ನೀ ಪೊರೆಯದಿರಲು ಯಾತಕೀ ನರದೇಹ ಮುಕುಂದ ಮಾತುಮಾತಿಗೆ ನಿನ್ನ ಸ್ಮರಿಸದ ಮಾತುಗಳ ಫಲವೇನು ಕೇಶವ ಮದನ ಜನಕ ಮಾಧವ ಮುರಮರ್ದನ ಹರೇ 2 ಕರುಣಿಗಳೊಳು ದೇವನಿನಗೆಣೆಯೆ ದಯ ಮಾಡು ಹರಿಯೆ ಕರಿಯ ಪೊರೆದವನಲ್ಲೆ ನರಹರಿಯೆ ಕರೆಕರೆಯ ಸಂಸಾರ ಇದು ಖರೆಯ ಇದರೊಳಗೆ ಬಳಲಿದೆ ಕರೆದು ರಕ್ಷಿಪುದೆಂದು ಮೊರೆ ಇಡುವೆ ಕಮಲ ಮುಖಿ ಶ್ರೀ ಭೂಮಿ ಸಹಿತದಿ ಕಮಲನಾಭ ವಿಠ್ಠಲನೆ ಭಕುತರÀ ಮಮತೆಯಲಿ ಕೈ ಪಿಡಿದು ಪೊರೆಯುವ ಮನ್ಮಥನ ಪಿತ ಮನ್ನಿಸುತ ಪೊರೆ 3
--------------
ನಿಡಗುರುಕಿ ಜೀವೂಬಾಯಿ
ಬರದು ಬಂದು ದೂರಬ್ಯಾಡರೇ ನೀವೆಲ್ಲಾ ಹರಿಯಾ ನೆಲೆ ತಿಳಿಯಲು ಅಳವಲ್ಲಾ ದುರಳತನ ನಡಿಗೆಂದು ಇವಸಲ್ಲಾ 1 ಮುನಿನೆಂದು ಗುರುತ ವಿಡ ಬ್ಯಾಡಿರಮ್ಮಾ ಮನುಜರಂತೆ ಲೀಲೆ ದೋರುವ ರೀಗಮ್ಮಾ ಮುನಿಮನೋಹರ ದಾಯಕ ಪರಬೊಮ್ಮ ಘನ ಪುಣ್ಯದಿಂದ ಶಿಶು ವಾದನಮ್ಮ 2 ಹುಟ್ಟುತಲಿ ಸ್ವಹಿತದ ನುಡಿಯಾಡಿ ನೆಟ್ಟ ನೆವೆಯ ಮುನಿಗೆ ಹಾದಿಬೇಡಿ ಮುಟ್ಟಿ ಗೋಕುಲಕ ಬಂದದಯ ಮಾಡಿ ಇಷ್ಟರೊಳು ತಿಳಿಯ ಬಾರದಿನ್ನು ನೋಡಿ 3 ಚಿಕ್ಕತನದಲಿ ಮೊಲೆಗುಡ ಬಂದಾ ರಕ್ಕಸಿಯ ಅಸು ಹೀರಿದಾವ ಕೊಂದಾ ಕಕ್ಕಸದ ಕಾಳಿಂಗ ನೆಳೆದು ತಂದಾ ಮಕ್ಕೂಳಾಟಿಕೆ ಇದೇನು ನೋಡಿಛಂದಾ4 ನಿರುತ ತಮ್ಮಾ ತಮ್ಮ ಮನಿಯೊಳಿಹನೆಂದು ಹರಿಯಗುಣ ಹೇಳುವಿರಿ ಎಲ್ಲ ಬಂದು ಅರಿತು ನೋಡಲು ಒಬ್ಬ ಬಹುರೂಪ ವಿಡಿದು ಚರಿಪಗುರು ಮಹಿಪತಿಸ್ವಾಮಿಯಿಂದ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅವನೆ ಜೀವಾಂಕಿತ ಪ್ರೇತ ನೋಡಿಭುವಿಗೆ ಭಾರನು ಅವನುಹರಿಹಗೆಯನುಪ.ಹರಿಕಥೆಗೆ ಬೇಸತ್ತು ಹರಟೆಯನೆ ಕೇಳುವವಹರಿಯಗುಣ ಹೊಗಳದೊಣಪಂಟ ಬಡಿವವಹರಿಮರೆದು ಮಲಭಾಂಡವನು ತುಂಬಿಕೊಳುವವಹರಿಭಟರ ನಡೆನುಡಿಗೆ ಸೈರಿಸದವ 1ಹರಿಪ್ರಿಯರ ನೆರೆಗಾರದತ್ತತ್ತ ಜಾರುವವಹರಿಯವರಿಗುಣಿಸದೆ ಧನ ಕಳೆವವಹರಿಯಾತ್ರೆಗಂಜಿ ಬಲವನೆ ಕೊಳುವವಹರಿವ್ರತವ ಬಿಟ್ಟಿತರ ವ್ರತ ಕೊಳುವವ 2ಹರಿಪದಾಂಬುಜವಜರಿದುಹಲವು ನೀರ್ಕುಡಿವವಹರಿಲಾಂಛನಿಲ್ಲದ ಚೆಲುವಿಕೆಯವಹರಿಪ್ರಸನ್ವೆಂಕಟೇಶನ ಪಾದಾಬ್ಜವ ಭಜಿಸಿಹರಿಪರದೈವವೆನ್ನದ್ಹೊಲೆಮನದವ3
--------------
ಪ್ರಸನ್ನವೆಂಕಟದಾಸರು