ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ಜಯತೀರ್ಥರು) ಜಯತೀರ್ಥರೇ ನಮ್ಮ ಸುಮತೋದ್ಧಾರಕರು ಮಳಖೇಡ ನಿಲಯರು ಪ ಪೂರ್ಣಪ್ರಜ್ಞರಲಿ ಪಶುರೂಪ ತಾಳಿ ಭಾಷ್ಯಗಳ ಪೇಳಿ ಜೀರ್ಣಮಲಿನ ಮೂಢಮತಗಳಿಗೆ ದಾಳಿ ಈ ಗ್ರಂಥಗಳ್ಹೇಳಿ ಪೂರ್ಣಬೋಧ ಗುರುಮತವಾರ್ವವ ಪೇಳಿ ಸುಜ್ಞರಾದರು ಮುದ ತಾಳಿ 1 ಇದೇ ದೇಶಪಾಂಡೆರೊಳುದ್ಭವಿಸೆ ನರಜನ್ಮ ವಹಿಸಿ ಪದಪಿನಿಂದ ಗೃಹಸ್ಥಾಶ್ರಮವನುಸರಿಸಿ ಸಂಸಾರದಿ ಬೆರಸಿ ಕುದರಿ ಏರಿ ಪೊಳೆ ನೀರಿಗೆ ಬಾಯಿ ಸರಿಸಿ ಬಹು ನೀರಡಿಸಿ ಸದಮಲಕ್ಷೋಭ್ಯರು ಪಶುವೆಂದುಚ್ಚರಿಸಿ ಪೂರ್ವ ಜನ್ಮ ಸ್ಮರಿಸಿ 2 ಕ್ಷಿಪ್ರದಿ ಯತ್ಯಾಶ್ರಮವೆ ತಾಳಿದರು ಟೀಕವ ಕೈಗೊಂಡರು ಸುಪ್ರಸಿದ್ಧ ಹರಿಮತವನುದ್ಧರಿಸಿದರು ವ್ರತಗಳ ಪೇಳಿದರು ವಿಪ್ರವರ್ಗಕೆ ಹರಿಮಾರ್ಗವ ತೋರಿದರು ಹರಿಮತ ತತ್ವಜ್ಞರು ಸುಪ್ರಸಿದ್ಧ ನರಸಿಂಹವಿಠಲತರು ಶತಪತ್ರ ಶೇಷಾಲಂಕೃತರು 3
--------------
ನರಸಿಂಹವಿಠಲರು
ವಾಯು ಕುಮಾರ ಸುಜನೋದ್ಧಾರ ಮಾ ರಮಣ ಪ್ರಿಯ ಭಕುತವರ ಪ ಪಾರಾವಾರದಂತಿಹ ಈ ಘೋರ ಸಂಸಾರದ ಪಾರವಗಾಣಲುಪಾಯವ ತೋರೊಅ.ಪ ಇನಕುಲ ತಿಲಕನ ಅನವರತದಿ ದರು ಶನದಲಿ ಹಿಗ್ಗುವ ಅನುಭವವು ಸನಕ ಸನಂದನ ಮುನಿಜನಗಳಿಗುಂಟೆ ವಿನಯದಿ ಬೇಡುವೆ ಅನುಗ್ರಹವ 1 ಈ ಮಹಿಯೊಳು ಬಲ ಭೀಮನೆಂಬ ದಿವ್ಯ ನಾಮದಿ ಪರಿಪರಿ ಸೇವಿಸುತ ಸತ್ಯ ಭಾಮಾಕಾಂತನ ಪ್ರೇಮ ಪಾತ್ರನೆಂದು ಕಾಮಿಸುವೆನು ನಿನ್ನ ವರ ದಯುವ 2 ವರ ಯತಿ ವೇಷದಿ ಹರಿಮತವನು ಬಲು ಹರಡುತ ಧರೆಯೊಳು ಸುಜನರಿಗೆ ನರ ಹರಿ ಲೋಕಕೆ ಮಾರ್ಗವರುಹಿದ ಗುರುಗಣ ಗುರು ಮಧ್ವರಾಯ ಪ್ರಸನ್ನನಾಗೊ 3
--------------
ವಿದ್ಯಾಪ್ರಸನ್ನತೀರ್ಥರು