ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ಜಯತೀರ್ಥರು) ಜಯತೀರ್ಥರೇ ನಮ್ಮ ಸುಮತೋದ್ಧಾರಕರು ಮಳಖೇಡ ನಿಲಯರು ಪ ಪೂರ್ಣಪ್ರಜ್ಞರಲಿ ಪಶುರೂಪ ತಾಳಿ ಭಾಷ್ಯಗಳ ಪೇಳಿ ಜೀರ್ಣಮಲಿನ ಮೂಢಮತಗಳಿಗೆ ದಾಳಿ ಈ ಗ್ರಂಥಗಳ್ಹೇಳಿ ಪೂರ್ಣಬೋಧ ಗುರುಮತವಾರ್ವವ ಪೇಳಿ ಸುಜ್ಞರಾದರು ಮುದ ತಾಳಿ 1 ಇದೇ ದೇಶಪಾಂಡೆರೊಳುದ್ಭವಿಸೆ ನರಜನ್ಮ ವಹಿಸಿ ಪದಪಿನಿಂದ ಗೃಹಸ್ಥಾಶ್ರಮವನುಸರಿಸಿ ಸಂಸಾರದಿ ಬೆರಸಿ ಕುದರಿ ಏರಿ ಪೊಳೆ ನೀರಿಗೆ ಬಾಯಿ ಸರಿಸಿ ಬಹು ನೀರಡಿಸಿ ಸದಮಲಕ್ಷೋಭ್ಯರು ಪಶುವೆಂದುಚ್ಚರಿಸಿ ಪೂರ್ವ ಜನ್ಮ ಸ್ಮರಿಸಿ 2 ಕ್ಷಿಪ್ರದಿ ಯತ್ಯಾಶ್ರಮವೆ ತಾಳಿದರು ಟೀಕವ ಕೈಗೊಂಡರು ಸುಪ್ರಸಿದ್ಧ ಹರಿಮತವನುದ್ಧರಿಸಿದರು ವ್ರತಗಳ ಪೇಳಿದರು ವಿಪ್ರವರ್ಗಕೆ ಹರಿಮಾರ್ಗವ ತೋರಿದರು ಹರಿಮತ ತತ್ವಜ್ಞರು ಸುಪ್ರಸಿದ್ಧ ನರಸಿಂಹವಿಠಲತರು ಶತಪತ್ರ ಶೇಷಾಲಂಕೃತರು 3
--------------
ನರಸಿಂಹವಿಠಲರು
ಅವತಾರತ್ರಯ ಅಕ್ಷಯ ನೀನಾಮೃತಂ ಕುಕ್ಷಿಯೊಳಗೆ ಪೂರ್ಣವಾಗಿಹ ಅಕ್ಷಯಾಂತಕನೀಕ್ಷಿಪುದು ಸುಜನರು ಪ ಇಕ್ವಾಕು ಕುಲಾಧ್ಯಕ್ಷ ರಾಘವನಾ ಶಿಕ್ಷೆಯಲಿ ಪ್ರಾಣ ರಕ್ಷಕನೆÉಂದರುಹಲು ಧರೆಗೆ ತಕ್ಷಣದಿ ಮರುದ್ವಾಕ್ಷ ಮರಕಟ ಕೃತಿಯ ತೋರಿ ಜಲಧಿಯನೆ ಪಾರಿ ರಕ್ಷಕೇಂದ್ರನ ಪುರಸೇರಿ ರಕ್ಕಸಿಯದೆಡೆಯಲಿ ಜನನಿಗೊಂದಿಸಿ ಲಕ್ಷಣದುಂಗುರವ ತೋರಿ ರಕ್ಷಸದಕ್ಷರವನಳಿದಾ 1 ಯದುಕುಲದೊಳುದಯಿಸೆÉ ಹರಿಯು ತದನರಿತು ವಾಯು ಉದಭವಿಸಿ ಭೀಮಾಭಿಧಾನದಿ ಮುದಗೊಳಿಸಲಿಳೆಗೆ ಕುದಿಯುವ ಬಕ ಹಿಡಿಂಬರರಳಿದು ಕೀಚಕನ ಸದೆದು ಅಧಮಕಾರವ ಕುಲವನಳಿದು ವಧಿಸಿzಖಿಲ ಬಲವ ತೋರಿ ಮುದವ ಬೀರಿ ಧರೆಯ ಜನಕೆ ಯಶವ ಗಳಿಸಿದವನ ಇಹಕೆ ಚರಕೆ2 ಗುರುವಾಗವತರಿಸಿ ಧರೆಯ ಸುಜನರು ಕರುಣಾಬ್ಧಿ ಹರಿಯು ಧರೆಯೊಳುಡುಪಿ ಪುರದಿ ಜನಿಸಲಿ ಸುರರಿಗೆ ತಿಳಿಯಲು ಹರಿಯ ಮತವ ಸೃಜಿಸಲಿಳೆಯಲು ತದಾಜ್ಞೆಯ ಕೇಳಲು ಭರದಿ ಮಧ್ವನಾಮ ಪಡೆದು ಹರಿಮತವ ಪಿಡಿಯ ಬೋಧಿಸಲು ನರಸಿಂಹವಿಠಲನ ಸ್ಮರಣೆಯಗೈದು ನರಜನ್ಮ ಸಾರ್ಥಕವು ಪರಮಪದವ ಗೈದು 3
--------------
ನರಸಿಂಹವಿಠಲರು
ವಾಯು ಕುಮಾರ ಸುಜನೋದ್ಧಾರ ಮಾ ರಮಣ ಪ್ರಿಯ ಭಕುತವರ ಪ ಪಾರಾವಾರದಂತಿಹ ಈ ಘೋರ ಸಂಸಾರದ ಪಾರವಗಾಣಲುಪಾಯವ ತೋರೊಅ.ಪ ಇನಕುಲ ತಿಲಕನ ಅನವರತದಿ ದರು ಶನದಲಿ ಹಿಗ್ಗುವ ಅನುಭವವು ಸನಕ ಸನಂದನ ಮುನಿಜನಗಳಿಗುಂಟೆ ವಿನಯದಿ ಬೇಡುವೆ ಅನುಗ್ರಹವ 1 ಈ ಮಹಿಯೊಳು ಬಲ ಭೀಮನೆಂಬ ದಿವ್ಯ ನಾಮದಿ ಪರಿಪರಿ ಸೇವಿಸುತ ಸತ್ಯ ಭಾಮಾಕಾಂತನ ಪ್ರೇಮ ಪಾತ್ರನೆಂದು ಕಾಮಿಸುವೆನು ನಿನ್ನ ವರ ದಯುವ 2 ವರ ಯತಿ ವೇಷದಿ ಹರಿಮತವನು ಬಲು ಹರಡುತ ಧರೆಯೊಳು ಸುಜನರಿಗೆ ನರ ಹರಿ ಲೋಕಕೆ ಮಾರ್ಗವರುಹಿದ ಗುರುಗಣ ಗುರು ಮಧ್ವರಾಯ ಪ್ರಸನ್ನನಾಗೊ 3
--------------
ವಿದ್ಯಾಪ್ರಸನ್ನತೀರ್ಥರು
ವಿದ್ಯಾಮರವೇ ಉದ್ಯೋಗದ ಮರವೇ ಪ ಅಂಜನಾ ದೇವಿಯ ನೀ ಜಠರದಿ ಜನಿಸಿ ಕಂಜರಾಕ್ಷ ಶ್ರೀರಾಮಭದ್ರನ ಭೃತ್ಯನೆನಿಸಿ ಸಂಜೀವಿನಿಯ ತಂದೆ ಅಂಜದಾರ್ಣವ ದಾಂಟಿ ತಂದೆ ರಂಜಿಪ ಮುದ್ರಿಕೆಯ ಅವನಿಜಾತಳಿಗಿತ್ತು ಬಂದೆ1 ಹೆಸರಾದ ಕೌರವ ಬಲವ ಸವುರಿ ನೀ ಉಸುರಿಲ್ಲದವರನು ನೆಗಹಿ ನೀ ಮಿಸುಕದೆ ಅಸುರರ ಅಸುವ ಪೀಡಿಸಿದೆ ಅಸುನಾಥ ಹರಿಸಿ ನೀನತುಳ ತೋಷವನಿತ್ತೆ 2 ಧರೆಯೊಳು ನೀ ವರ ಕಾಪ್ಯಪುರದಿ ಜನಿಸಿ ಹರಿಮತವ ಹರಹಿ ಹರಿಸಿ ರೂಹುಗೊಳಿಸಿ ಹರಿಪರಬ್ರಹ್ಮನೆಂದರಿಯೆ ಜಗಕ್ಕೆ ಕೋರಿ ನರಸಿಂಹವಿಠಲನನುಗಾಲ ತೋರುವನು ದಾರಿ 3
--------------
ನರಸಿಂಹವಿಠಲರು