ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಸನು ಕಂಡೆನು ಕೇಳೌ ಘನ ಶ್ರೀ ಗುರು ಬಂದು ಶಾಸ್ತ್ರ ತತ್ವವ ಪೇಳ್ದಂ ಮನಸಿನ ಸಂಶಯವಳಿಯಿಸಿ ತನಯಗೆ ರಾತ್ರಿಯೊಳು ತೋರಿದಂ ಸತ್ಪಥಮಂ ಕಂದ ಕನಸನು ಕಂಡೆನು ಕೇಳೌ ಶ್ರೀಗುರುಭರದಿಂ ತಾ ಬಂದೂ ಪ ತನಯನ ಸಂಶಯವಳಿಯಿಸಿ ಪರತರ ಗತಿಯನು ತಾ ಕೊಡುವ ಅ.ಪ ಶ್ರೀಹರಿ ಪೂಜೆಯು ಸ್ತೋತ್ರವು ಚಿಂತನೆ-ಶ್ರೀಹರಿಮಂತ್ರವನೂ ಶ್ರೀಹರಿ ಲಾಂಛನ ಧರಿಸುತ ಸಂತತ ವಿಠಲನ ಭಜಿಸೆಂದು 1 ಬಂಧುರದೇಗುಲ ವರಕ್ಷೇತ್ರದೊಳಾನಂದವನೋಡುತಲೀ ನಿಂದಿಹ ಪರಿಪರಿ ಸಾಧುವೈಷ್ಣವರಿಗೊಂದನೆಮಾಡೆಂದ 2 ಸತ್ಯಪ್ರಬಂಧವು ಅಷ್ಟಾಕ್ಷರಿಜಪತತ್ವ ಸುದ್ವಯಮಂತ್ರ ನಿತ್ಯಹೃದಯದೊಳು ಸೋಹಂಭಾವದಿ ಭಕ್ತಿಯೊಳ್ಬೆರೆಯೆಂದ 3 ವರಮಹದೇವನ ಪುರಶ್ರೀರಂಗನಚರಣವ ಗುರಿಮಾಡೀ ಮರೆಯದೆ ಧ್ಯಾನಿಸು ನಾನೇ ನಿನ್ನನು ಪೊರೆಯುವೆನೆಂತೆಂದ 4
--------------
ರಂಗದಾಸರು
ಏನು ಮಾಡಿದರೆ ನಾ ನಿನ್ನ ಕಾಂಬೆಶ್ರೀನಿವಾಸನೆ ಭಕ್ತ ದೀನಜನ ಬಂಧೊ ಪ ಪರಮೇಷ್ಠಿ ಸುತನು ಕೊಟ್ಟ ಹರಿಮಂತ್ರ ತುಷ್ಟನಾಗುತ ನರಹರಿಯದೃಷ್ಟಿಯಿಂದ ಕಂಡವನಾ ಭೆಟ್ಟಿ ಸಾಧಿಸಲ್ಯಾ 1 ಹುಡುಗತನದಲಿ ತಂದೆ ತೊಡೆಯಾಸಿಗೆ ಬರೆ ತಾಯಿ-ನುಡಿದ ಮಾತನು ಕೇಳಿ ಅಡವಿಯೊಳಗೆಮೃಡ ಶಿಷ್ಟನುಪದೇಶವನು ನಂಬಿ ವೈಕುಂಠವನುಪಡೆದಿರುವ ಬಾಲಕನ ನಡತೆ ನಂಬಿರಲ್ಯಾ 2 ಐದು ಮಂದಿ ತನ್ನ ಕಾದುಕೊಳ್ಳದೆ ಇರಲುದುರುಳನೊಬ್ಬನು ರಾಜಬೀದಿಯೊಳಗೆಕೂದಲು ಹಿಡಿದೆಳೆದು ತರಲು ಶ್ರೀಧರನೆ ಎಂದೊದರಿಮೋದಿಸಿದ ಕಾಮಿನಿಯ ಹಾದಿ ಸೇರಿರಲ್ಯಾ 3 ಸತಿ ಸಹಾಯ ವೃಂದದಿ ಸಹಾಯ ಭೂತನಾಗಿಪ್ರೀತಿಯಲಿ ಲಂಕಾನಾಥನಾಗಿಹ ಮುನಿಪೋತ ರಾಕ್ಷಸನ ಸಖ ನೀತಿ ಸಾಧಿಸಲ್ಯಾ4 ಹೇ ಸುರಾರ್ಚಿತ ಮನುಜ ಕೇಸರಿಯ ಸುರಗೀತಾವಾಸುದೇವ ದ್ವಾರಕೀಶ ಕೃಪಾ ದಾಶರಥೆಶ್ರೀವೆಂಕಟೇಶ ಬದರಿನಿವಾಸ ದಾಸರ ಕಾಯೋಆದರದಿ ಇಂದಿರೇಶ ಕರುಣಾಬ್ಧಿ 5
--------------
ಇಂದಿರೇಶರು
ಸಿರಿವರನ ಕರುಣಕ್ಕೆ ಪಾತ್ರ ನಾನಾದೆ ಪರಮ ಹರಿಭಕ್ತನಾಗಿ ಬಾಗಿ ಶರಣೆಂದು ಪ ಪರಿಪರಿಯಿಂದೊರೆದ ಕುಲಗುರುವಿನ ವಾಕ್ಯಗಳ ತರದೆ ತುಸು ಗಣಿತಕ್ಕೆ ಮರಣಭೀತಿಲ್ಲದೆ ಹರಿಸರ್ವೋತ್ತಮನೆಂಬ ವರಮಂತ್ರ ಪಠಿಸಿದ ಪರಮಪ್ರಹ್ಲಾದರಿಗೆ ನಿರುತ ಶರಣೆಂದು 1 ಪನ್ನಂಗಶಯನ ಉನ್ನತ ಮಹಿಮೆಗಳ ತನ್ನೊಳಗೆ ತಾ ತಿಳಿದು ಭಿನ್ನ ಭೇದವಿಲ್ಲದೆ ಗನ್ನಗತಕನಾದ ಅಣ್ಣನಿಗೆ ಮಹ ನೀತಿ ಯನ್ನು ಪೇಳಿದ ವಿಭೀಷಣಗಿನ್ನು ಶರಣೆಂದು 2 ವನಧಿಯನ್ನು ಲಂಘಿಸಿ ದನುಜಕುಲ ಸಂಹರಿಸಿ ವನಜನಾಭನ ಸೇವೆ ಮನುಮುಟ್ಟಿ ಗೈದು ಜನನಮರಣವ ಗೆಲಿದು ಘನಪದವಿ ಗಳಿಸಿದ ಹನುಮರಾಯರ ಪದಕೆ ಮಣಿದು ಶರಣೆಂದು 3 ತರಳತನದಲಿ ನಿಖಿಲ ಧರೆಭೋಗಗಳ ತೊರೆದು ಹರಿಮಂತ್ರ ಜಪಮಾಡಿ ಸ್ಥಿರಪದವ ಪಡೆದ ಪರಮಕಂಟಕ ಗೆಲಿದವರಿಗರಿತು ಶರಣೆಂದು 4 ನಿತ್ಯನಿರ್ಮಲ ನಿಖಿಲಕರ್ತ ಶ್ರೀರಾಮನಡಿ ಭಕ್ತರೆನಿಸಿದ ಮಹ ನಿತ್ಯಾತ್ಮರ ಸತ್ಯಪಾದಗಳೆನ್ನ ನೆತ್ತಿಯೊಳ್ಪೊತ್ತು ನಿಜ ಚಿತ್ತದಿಂ ನೆನೆನೆನೆದು ನಿತ್ಯಶರಣೆಂದು 5
--------------
ರಾಮದಾಸರು