ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿನ ದಿನವೆ ಸುದಿನ | ಗೋ ವಿಂದನ ಸ್ಮರಣೆಯ ಗೈದುದರಿಂದ ಪ ನಾಳೆ ಏಕಾದಶಿ ಹರಿದಿನವೆನಲಾ ವೇಳೆಗೆ ವುಳಿವೆವೋ ಅಳಿವೆವೋ ಅರಿಯೆವು ತಾಳವಾದ್ಯತಂಬೂರಿಗಳಿಲ್ಲವೆಂ ದಾಲೋಚಿಸೆ ಹರಿಭಜನೆಯು ದುರ್ಲಭ 1 ಗೀತವಿದ್ಯಾಕೋವಿದರಿಹರೆನ್ನುತ ಯಾತರ ದಾಸರ ಪದಗಳು ಎನುತಲಿ ಮಾತನಾಡಿ ಕಾಲವ ಕಳೆದೊಡೆ ಇ ನ್ನಿತರ ಕಾಲವು ದೊರಕುವುದಿಲ್ಲ2 ದಾಸರ ಪದದೊಳಗಿರುವ ಮಹತ್ವವು ಲೇಶವಿಲ್ಲ ಸಂಗೀತ ಸ್ವರದೊಳು ಭಾಸುರಾಂಗ ಮಾಂಗಿರಿಪತಿ ಸಲಹುವ ದಾಸರಪದ ತಾಳಗಳಿಗೊಲಿವಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಮೋದವಿಠಲದಾಸರ ಸ್ತೋತ್ರ ಮೋದವಿಠಲದಾಸರಾಯ ನಿನ್ನ ಪಾದವನಂಬಿದೆ ಪಾಲಿಪುದಯ್ಯ ಪ ಭೇದಮತಾಬ್ಧಿ ಪಾಠಿನ ಆದು - ರ್ವಾದಿಮಾಯಿಗಳಿಗೆ ಗಂಟಲಗಾಣ ಸಾಧುಜನರ ಪಂಚಪ್ರಾಣನೆನಿಪ ಮೇದಿನಿಯೊಳು ಹರಿಭಕ್ತ ಪ್ರವೀಣ 1 ಗುರುಪ್ರಾಣೇಶದಾಸರಲಿ ಜ್ಞಾನ ವರ ಉಪದೇಶವ ಕೊಂಡು ಭಕ್ತಿಯಲಿ ವರದೇಂದ್ರಾರ್ಯರ ಸನ್ನಿಧಿಯಲಿ ಸತತ ಹರಿಭಜನೆಯ ಮಾಳ್ಪ ನಲಿನಲಿಯುತಲಿ 2 ಸ್ನಾನಸಂಧ್ಯಾದ್ಯನುಷ್ಠಾನವನು ಙÁ್ಞನಪೂರ್ವಕದಿ ಚರಿಸುವ ನಿಧಾನ ಹೀನಜನಗಳಲ್ಲಿ ಮೌನ ನಿರುತ ಶ್ರೀನಿವಾಸನ ಮನದಲಿ ಮಾಳ್ಪ ಧ್ಯಾನ 3 ಬಾಲ್ಯತನದಿ ನಿಮ್ಮಾಜ್ಞ್ಞವನು ಮೀರಿ ಕಾಲಕಳೆದೆ ದುರ್ವಿಷಯದಿ ನಾನು ಶ್ರೀಲೋಲನಂಘ್ರಿ ಮರೆದೆನು ಮುಂದೆ ಪಾಲಿಸೆನ್ನಯ ಮೊರೆ ಶರಣು ಬಂದಿಹೆನು 4 ಶ್ರೀ ಮರುನ್ಮತಙÁ್ಞನವನು ನಮ್ಮ ಸ್ವಾಮಿ ವರದÉೀಶವಿಠಲನ ದಾಸ್ಯವನು ಆ ಮುನಿವರನ ಸೇವೆಯನು ಕೊಟ್ಟು ನೀ ಮುದದಲಿ ಕರುಣಿಸು ಸುರಧೇನು5
--------------
ವರದೇಶವಿಠಲ
ಇರಬೇಕು - ಹರಿದಾಸರ ಸಂಗವರಜ್ಞಾನಿಗಳ ದಯ ಸಂಪಾದಿಸಬೇಕು ಪ.ಅತಿಜ್ಞಾನಿಯಾಗಿ ಹರಿಕಥೆಯ ಕೇಳಬೇಕುಯತಿಗಳ ಪಾದಕ್ಕೆ ಎರಗಬೇಕುಸತಿ ಸುತರಿದ್ದು ಮಮತೆಯನು ಬಿಡಬೇಕುಗತಿಯೆಂದು ಬಿಡದೆ ಹರಿಯ ಪೋಪರಸಂಗ 1ನಡೆ ಯಾತ್ರಿಯನಬೇಕು ನುಡಿ ನೇಮವಿರಬೇಕುಬಿಡದೆ ಹರಿಯ ಪೂಜೆಯ ಮಾಡಬೇಕುಅಡಿಗಡಿಗೆ ಬಂದು ಹರಿಗಡ್ಡ ಬೀಳಬೇಕುಬಿಡದೆ ಹರಿಭಜನೆಯ ಮಾಡುವರ ಸಂಗ 2ಹರಿ - ಹರ -ವಿರಂಚಿಯರ ಪರಿಯ ತಿಳಿಯಬೇಕುತರತಮದಿ ರುದ್ರ - ಇಂದ್ರಾದಿಗಳಅರಿಯದಿದ್ದರೆ ಗುರುಹಿರಿಯರ ಕೇಳಬೇಕುಪರಮಾನಂದದಲಿ ಓಲಾಡುವರ ಸಂಗ 3ಷಟ್ಕರ್ಮ ಮಾಡಬೇಕು ವೈಷ್ಣವನೊಲಿಸಬೇಕು ಉ -ತ್ಕಷ್ಟ ವೈರಾಗ್ಯಬೇಕು ದುಷ್ಟಸಂಗ ಬಿಡಬೇಕುವಿಷ್ಣುವಿನ ದಾಸರ ದಾಸನಾಗಲುಬೇಕುಎಷ್ಟು ಕಷ್ಟಬಂದರೂ ಹರಿಯ ಭಜಿಪರ ಸಂಗ 4ಏಕಾಂತ ಕುಳ್ಳಿರಬೇಕು ಲೋಕವಾರ್ತೆ ಬಿಡಬೇಕುಲೋಕೈಕನಾಥನ ಭಜಿಸಬೇಕುಸಾಕು ಸಂಸಾರವೆಂದುಕಕ್ಕುಲತೆ ಬೀಡಬೇಕುಶ್ರೀಕಾಂತಪುರಂದರವಿಠಲರಾಯನ ಸಂಗ5
--------------
ಪುರಂದರದಾಸರು