ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಕುತಿಗೆ ಹೊಣಿಯಿದಕೋ ಭಕುತಿ ಪ ಹರಿಭಕುತಿಯ ಗುರು ಮೂರ್ತಿಲಿ ತಂದು | ಬೆರೆವದು ತನುಮನವಚನದಲೀ 1 ಆಚಾರ್ಯಮಾಂವಿಧಿ ಎಂದುದ್ದವಗೇ | ಸೂಚಿಸಿ ಹೇಳಿದ ಯದುವರನೀಗ2 ಸರ್ವಂ ವಾಸುದೇವೆನುತಿರಲಿಕ್ಕೆ | ಗುರ್ವಿನೊಳಗ ಅನುಮಾನವು ಬೇಕ3 ಬಲ್ಲವ ಬಲ್ಲವನೀ ಮಾತಿನ ಖೂನಾ | ಎಲ್ಲರಿಗಿದು ಅಗಮ್ಯದ ಸ್ಥಾನಾ4 ತಂದೆ ಮಹೀಪತಿ ಪ್ರಭು ದಯದಿಂದಾ | ಕಂದಗೆಚ್ಚರಿಸಿದ ಸುಖಸ್ವಾನಂದ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪೊಗಳಲಾಪೆನೆ ಪಾಮರ ಪ್ರಾಣಿ ಪ ಭವ ಒಂಭತ್ತು ಛಿದ್ರದ ನಾವೆಯಲಿ | ಅಂಬಿಗನಾಗಿಹ ಕರುಣದಲಿ 1 ದಶಮನಪರಿ ತನ್ನತಾಮರೆದಾ | ಸ್ವಸುಖ ನೀಡಿದ ನಿಜವಾದಾ2 ಹರಿಭಕುತಿಯ ಕೀಲವ ತೋರಿ | ಗುರುಮಹೀಪತಿ ಸ್ವಾಮಿ ಉದಾರಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಗಣಿತ ಬಂಟ ನೆನೆವರಿಗೆ ನಂಟಪ. ನಿನ್ನ ಬಲವತ್ತರ ಶಕ್ತಿಯಿಂದಲಿ ಕಲಿಯಬಣ್ಣಗೆಡಿಸಿದೆ ಪಿಡಿದು ಗದೆಯಿಂದ ಸದೆದುಇನ್ಯಾರು ನಿನಗೆ ಸರಿ ರಿಪುಕದಳಿಮತ್ತಕರಿಎನ್ನ ನೀ ರಕ್ಷಿಸಯ್ಯ ಪಿಡಿ ಬ್ಯಾಗ ಕಯ್ಯ 1 ಕುಂತಿಯ ಕುಮಾರ ಕೌರವಕುಲಕುಠಾರಅಂತರಂಗದಿ ಶುದ್ಧ ಎನ್ನ ಮನದೊಳಿದ್ದಸಂತಾಪಗಳ ಕೆಡಿಸೊ ಹರಿಭಕುತಿಯನು ಕೊಡಿಸೊ ಅ-ಚಿಂತ್ಯ ಬಲ ಶೌರ್ಯ ದುರ್ಜನಕುಮುದಸೂರ್ಯ 2 ದೇವ ನೀ ವಿಷದಲಡ್ಡುಗೆಯನುಂಡು ದಕ್ಕಿಸಿದ ಕಂಡುಭಾವಶುದ್ಧದಿ ಮರೆಹೊಕ್ಕೆ ದೊರೆಯೆ[ಆವಾವುದುಂಡರೆನಗೆ ದಕ್ಕುವಂತೆ ಮಾಡೊ]ದೇವ ನಿನಗೆಣೆಗಾಣೆ ಹರಿಪದಗಳಾಣೆ 3 ಮೋದ 4 ಯುಕುತಿಯಲಿ ಕೊಡಿಸೊ ವಾದಿಗಳೋಡಿಸೊದುರುಳದೈತ್ಯರವೈರಿ ಖಳಕುಲಕೆ ನೀ ಮಾರಿ ದು-ಸ್ತರಣ ಭವತಾರಿ ಸುಜನರಿಗುಪಕಾರಿಹರಿಭಕುತಿ ತೋರಿಸಿದಿ ಮುಕುತಿಪಥ ಸೇರಿಸಿದಿಪೊರೆಯಯ್ಯ ಹಯವದನ ಶರಣ ಇದು ಕರುಣ 5
--------------
ವಾದಿರಾಜ
ದಾಸನಾಗು ಹರಿಯ ದಾಸನಾಗು ಮೋಸಹೋಗದೆ ಭವಕೆ ಬ್ಯಾಸರಾಗು ಪ ಭಾನುಮಂಡಲ ಕಂಡು ಶ್ವಾನನುಬ್ಬರಿಪಂತೆ ಭೂನಾಥನಡಿವಿಡಿದು ಬಾಳ್ವೆ ನಿನಗೆ ಹೀನಮಾನವ ಕಂಡಣಕೆ ನುಡಿದರು ಸರಿಯೆ ಜ್ಞಾನನಿಧಿ ಹರಿಭಕುತಿಯ ಲೆಕ್ಕಿಸದೆ ಮಾಡು1 ಕಾಳುವೆಗ್ಗಳವಾಗೆ ಸುಮತಿ ಸಂಗ್ರಹಿಪಂತೆ ಬಾಳುವೆಯೊಳ್ಹರಿಸೇವೆ ಬಲು ಅಗ್ಗವಂತೆ ಕೀಳು ಜನರಲ್ಲಿ ಲೌಕಿಕತೆ ಮರುಳಾಗಿ ಸಂತೆ ಕೇಳುವವರಾರು ಹರಿಭಕುತಿ ಮಾಡುವವರು2 ಮಾರಿಗಾಹುತಿಯಾಗ್ವ ಕುರಿಮೇಕೆ ತೆರನಂತೆ ಘೊರ ಜವನನು ಮರೆತು ಕೊಬ್ಬುವವರಂತೆ ಶೇರು ನರಸಿಂಹವಿಠ್ಠಲನಂಘ್ರಿಕಮಲವಾ ಆರಾರು ಬಾಧೆಯಿಲ್ಲದೆ ಗತಿಯ ಕೊಡುವಾ 3
--------------
ನರಸಿಂಹವಿಠಲರು
ದೇಶಾಧಿಪತಿ ನರಹರಿಯೆ ನಿನ್ನಯ ಪಾದದಾಸರ ದಾಸನೆಂದೆನಿಸಬೇಕೆನ್ನ ಪ ರಜತಮೋಗುಣ ಪ್ರವರ್ತಕ ಮೂಲಾಂತರದಿಂಯಜಮಾನತನದಹಂಕಾರವನು ಒಲ್ಲೆಭುಜ ಚಕ್ರ ಧರಿಸಿ ಸಾತ್ತ್ವಿಕರ ಪಾದಾಂಬುಜರಜ ಭಜಕರ ಭಜಕನೆಂದೆನಿಸೆನ್ನ1 ಸಿರಿಗಂಧ ಕುಂಕುಮ ಸಾದು ಜವ್ವಾಜಿ ಕ-ಸ್ತೂರಿ ತಿಲಕವನಿಡುವುದ ನಾನೊಲ್ಲೆಸಿರಿ ಊಧ್ರ್ವಪುಂಡ್ರ ದ್ವಾದಶನಾಮವಿಡುವವರಪರಿಚಾರಕರ ಪರಿಚಾರಕನೆನಿಸೆನ್ನ 2 ಸ್ವಾದು ಕಲ್ಪಿತವಾದ ಭಕ್ಷ್ಯ ಭೋಜ್ಯಗಳನುಆದರದ ಅಮೃತಾನ್ನ ಉಣುವುದನೊಲ್ಲೆಬೋಧೆಯನು ಹೇಳುವ ಕೇಳುವ ಹರಿದಾಸರಪಾದತೀರ್ಥ ಪ್ರಸಾದವನುಣಿಸೆನ್ನ3 ಕಾಲ ಕರ್ಮದೊಳುಪೇಕ್ಷೆಯ ಮಾಡಿ ಹರಿಭಕುತಿಶೀಲರಹಿತ ಬ್ರಾಹ್ಮಣನಾಗಲೊಲ್ಲೆಕೀಲನರಿತು ಹರಿಭಕುತಿಯನು ಮಾಳ್ಪ ಪರಚಾಂ-ಡಾಲನ ಮನೆ ಬಾಗಿಲ ಕಾಯಿಸೆನ್ನ 4 ಕ್ರೂರಶಾಸ್ತ್ರವನೋದಿ ಕುರಿ ಕೋಣವನೆ ಕಡಿದುಘೋರ ನರಕದಿ ಬೀಳುವುದನು ನಾನೊಲ್ಲೆವಾರಿಜಾಕ್ಷ ನಿನ್ನ ಚರಣ ಸೇವಕರ ಮನೆಯದ್ವಾರಪಾಲಕನೆಂದೆನಿಸೆನ್ನ 5 ಪಟ್ಟೆಪಟ್ಟಾವಳಿ ದಿವ್ಯ ದುಕೂಲ ಮಿಂ-ಚಿಟ್ಟ ವಸ್ತ್ರ ಉಡುವುದನೊಲ್ಲೆನೆಟ್ಟನೆ ಕಾವಿ ಕಾಷಾಯಾಂಬರಗಳನುಉಟ್ಟವರ ಬಂಟನೆಂದೆನಿಸೆನ್ನ 6 ಅರ್ಥ ವಿಷಯಂಗಳ ಫಲಾಪೇಕ್ಷೆಯಿಂ ಪುಣ್ಯತೀರ್ಥಯಾತ್ರೆಯ ಮಾಡಲೊಲ್ಲೆದೈತ್ಯ ಮರ್ದನ ಬಾಡದಾದಿಕೇಶವ ನಿನ್ನಕೀರ್ತನಗೈವರ ಸ್ತುತಿಕನೆನಿಸೆನ್ನ 7
--------------
ಕನಕದಾಸ
ಭೃಂಗ ಜಯ ಶರಣು ಶ್ರೀ ಸುಜ್ಞಾನ ಭಕುತಿ ವೈರಾಗ್ಯಪರನೆ ಜಯ ಶರಣು ದಾಸೋತ್ತಮರ ಮಣಿಯ ನಿನಗ್ಯಾರೆಣಿಯೆ ಗುರು ಪುರಂದರದಾಸರೆ ನಿಮಗೆ ಪ ಪಾಕಶಾಸನಪುರದ ಚಿನಿವಾರ ವರದಪ್ಪ ನಾ ಕುಮಾರನಾಗಿ ಜನಿಸಿ ಸಂಸಾರದೊಳು ಸಂಚರಿಸಿ ಲೌಕಿಕವನ್ನೆ ತೊರೆದು ಈ ಕಲಿಯುಗದಲ್ಲಿ ತುಂಗಾತೀರ ಪಂಪಾ ರಾಕಾಬ್ಜನಂತೆ ಪೊಳೆವ ನಿಧಿಗೆ ಬಂದು ನಿ ರಾಕರಿಸಿ ದುಸ್ಸಂಗ ವೈಷ್ಣವರಾಗಿ ಪತಿಕರಿಸಿ ಹರಿಭಕುತಿಯಾ 1 ಕಾಮಕ್ರೋಧ ಲೋಭ ಮದ ಮತ್ಸರ ಡಂಭ ಈ ಮರಿಯಾದಿಗಳ ಮರ್ಮವನೆ ಕಡಿದು ನಿ ಸಿರಿ ಕೈಕೊಂಡು ಆ ಮಹಾ ರಚನೆಯಲ್ಲಿ ಸೀಮೆಯೊಳು ಪ್ರಾಕೃತದ ಗೀತೆಯಲಿ ಕೊಂಡಾಡಿ ತಾಮರಸ ಸದೆ ಬಡಿದು ಮಧ್ವಸಿದ್ಧಾಂತ ಲ ಹುಯಿಸಿ ಕಾವನೈಯನ ಕುಣಿಸಿದ 2 ಸಿರಿ ವಿಠ್ಠಲನ್ನ ಮೃದು ಪದ್ಮಗಂಧವನು ಮಧುಪÀನಂತೆ ಸೇವಿಸುತ್ತ ಬುದ್ಧಿ ಪೂರ್ವಕದಿಂದಲಿ ಶುದ್ಧ ಮಂದರನೆಲ್ಲ ಎಂದೆಂದಿಗೂ ಬಿಡದೆ ಪೊದ್ದರ್ದ ಪಾಪಗಳು ತಿರುಗಗೊಡದಲೆ ಕಾಲಿ ಮಾರ್ಗದ ಪದ್ಧತಿಯ ಸ್ಥಿತಿ ಪೇಳಿದ 3 ವರದಪ್ಪನೇ ಸೋಮ ಗುರುರಾಯ ದಿನಕರನು ಗುರು ಮಧ್ವಪತಿಯೆ ಭೃಗು ಅಭಿನವನೆ ಜೀವ ಉಪದೇಶಿಸಿ ಪರಮ ಜ್ಞಾನಿಗಳ ಮಾಡಿ ಶರಧಿ ತೆರೆಯಂತೆ ಹರಿಗುಣಗಳನ್ನು ಪೊಗಳುತಿಹ ತರಳರನು ನೋಡಿ ಗುರು ವ್ಯಾಸಮುನಿರಾಯರಿಗೆ ಕರಣ ಚರಿತೆಯಲಿ ನಲಿದಾಡಿದ 4 ಫೃತದ ಬಿಂದಿಗೆ ತಂದ ಅತಿಥಿಯ ವೋಗರನುಂಡ ಸತಿಯಳೆಂದಾ ನುಡಿಗೆ ಚತುರ ಭಾಗ್ಯವನಿತ್ತ ಹಿತನಾಗಿ ದೃಢನೋಡಿದ ಯತಿಯ ಪಂಕ್ತಿಗೆ ಭಾಗೀರಥಿ ನದಿಯ ತರಸಿದ ಸುತನಾಗಿ ನೀರು ನಿಶಿತದಲಿ ತಂದ ಅ ಪ್ರತಿ ದೈವತಾ ಕಿಂಕರ 5 ವಜ್ರ ಪ್ರಹರವಿದು ಸಜ್ಜನರ ದಿವ್ಯ ಚರಣಾಬ್ಜಕ್ಕೆ ಭೃಂಗವಿದು ಹೆಚ್ಚು ಲಜ್ಜೆಯನು ತೊರೆದು ನಿತ್ಯ ಹೆಜ್ಚ್ಚಿ ಹೆಜ್ಚಿಗೆ ಬಿಡದೆ ದಾಸರ ಕರುಣವೆಂಬ ವಜ್ರ ಕವಚವ ತೊಟ್ಟು ನುಡಿದವನ ನುಡಿ ಸತ್ಯ ಅಬ್ಜಭವನೊಡನೆ ಗತಿಗೆ 6 ಎಂತು ವರ್ಣಿಸಲಿ ಎನಗಳವಲ್ಲ ಧರೆಯೊಳಗೆ ಸಂತತಿ ನೆಲಸಿದಂತೆ ಕಾವ್ಯವನೆ ಸ್ಥಾಪಿಸಿ ದಾಸರನ ಸಂತರಿಸಿ ಧರೆಗೆ ತೋರಿ ಸಿರಿ ವಿಠಲನ ಸ್ಮರಿಸುತ ಸು ಪಂಥವನು ಹಿಡಿದು ಸದ್ಗತಿಯಲ್ಲಿ ಸೇರಿದರು ಚಿಂತೆಯೊಳಗಿಟ್ಟ ಗುರುವೆ 7
--------------
ವಿಜಯದಾಸ
ಸದಾ ಹರಿಭಕುತಿಯ ಶರಣರಿಗೀವುದು ಮುಕುತಿ ಪ ವೃತ ತಪದಾನದ ಹೊಕಬವನರಿಯದ | ಶೃತಿ ಸ್ಮøತಿ ವಾಕ್ಯದ ಸುಮತಿ 1 ಯಮನಿಯಮದ ನಿಜ ಯೋಗವನರಿಯದ | ಶಮದಮ ಜ್ಞಾನದ ವಿರತಿ 2 ಗುರು ಮಹಿಪತಿ ಪ್ರಭು ನಂಬುಗೆ ಅಲ್ಲದೇ | ಅರಿಯರು ಸಾಧನ ಯುಗತಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಭಕುತಿಯುಳ್ಳವರ ಶರೀರವೆ ಕುರುಕ್ಷೇತ್ರ - ಇವರು |ನರರೆಂದು ಬಗೆವವರೆ ನರವಾಸಿಗಳು ಪ.ಸದಮಲನ ಧ್ಯಾನಿಸುವ ಹೃದಯ ಕಾಶೀಪುರವು |ಮಧುವೈರಿಗೊಲಿದ ಮನ ಮಣಿಕರ್ಣಿಕೆ ||ಪದುಮನಾಭನ ಪಾಡಿ ಪೊಗಳುವಾತನ ದಿವ್ಯ |ವದನವು ಅಯೋಧ್ಯೆ ಪುರವಾಗಿ ಇಹುದು 1ನರಹರಿಯ ನೀಕ್ಷಿಸುವ ನಯನ ದ್ವಾರಾವತಿಯು |ಹರಿಯ ನಿರ್ಮಾಲ್ಯ ವಾಸಿಪ ಮೂಗು ಮಥುರೆ ||ಕರುಣಾಕರನ ಕಥೆಯ ಕೇಳ್ವ ಕಿವಿ ಕೇದಾರ |ಸಿರಿಧರೆಗೆ ಎರಗುವಾ ಶಿರವೆ ಬದರಿ 2ಚಕ್ರಧರಗೆ ಪೋಪಚರಣ ಮಾಯಾವತಿ ತ್ರಿ - |ವಿಕ್ರಮನ ಪೂಜಿಸುವ ಕರಿವೆ ಕಂಚಿ ||ಅಕ್ರೂರಗೊಲಿದಸಿರಿ ಪುರಂದರವಿಠಲನಸತ್ಕøಪೆಯು ಉಳ್ಳವರ ಅಂಗಸಾಯುಜ್ಯವು 3
--------------
ಪುರಂದರದಾಸರು