ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಯ ಭವಹರ ಹರಿಪ್ರೀಯಾ ಪ ಅಂಗಜ ಸಮಕಾಯಾ ರಂಗನಾಥನ ಪ್ರೀಯ ಭವ ಭಯ ಅಂಗಜ ನಿಚಯಾ 1 ನಮಿಸುವೆ ತವಪಾದ ವನಜಕೆ ನಾ ಸದಾ ಅನಘ ಚರಿತನೇ ಬುಧಾ ವಿನಮಿತ ಕಾಮದಾ 2 ಮಾನವ ಅರಿಶಿರಿ ಗೋವಿಂದ ವಿಠಲನ್ನ ಪಾವನ ಪಾದದ ಸೇವೆನೀಯೊ 3
--------------
ಅಸ್ಕಿಹಾಳ ಗೋವಿಂದ
ಜಯಜಯತು ಶುಭಕಾಯ ಜಯಜಯತು ಹರಿಪ್ರೀಯಜಯತು ಜೀಯ ಮಧ್ವಾಖ್ಯಮುನಿರಾಯಪ. ರಾಮಾವತಾರದಲಿ ಹನುಮಂತನಾಗಿ ನೀತಾಮಸನ ಪುರವ ಅನಲಗಾಹುತಿಯನಿತ್ತೆಭೂಮಿಜೆಯ ಕುಶಲವನು ರಘುನಾಥಗರುಹಿದೆಸ್ವಾಮಿಕಾರ್ಯವ ವಹಿಸಿ ಖಳರ ನೀ ತರಿದೆ 1 ದ್ವಾಪರಾಂತ್ಯದಲಿ ಶ್ರೀಕೃಷ್ಣನಂಘ್ರಿಯ ಭಜಿಸಿಪಾಪಿಮಾಗಧ ಬಕ ಕೀಚಕಾದಿಗಳಕೋಪದಿಂದಲಿ ತರಿದು ಕುರುಕುಲವ ನೀನಳಿದೆ ಪ್ರ-ತಾಪದಿಂದಲಿ ಮೆರೆದೆ ಖಳರ ನೀ ಮುರಿದೆ 2 ಮಾಯಿಗಳು ಹೆಚ್ಚಿ ಮತವೆಲ್ಲ ಸಂಕರವಾಗಿತಾಯಿಗಳಿಲ್ಲದ ಶಿಶುಗಳಂತೆ ಸುಜನರಿರಲುನೀಯವತರಿಸಿ ಮತವೆಲ್ಲ ಉದ್ಧರಿಸಿ ನಾ-ರಾಯಣನೆ ಮೂಜಗಕೆ ಪರದೈವವೆಂದೊರೆದೆ 3 ದುರುಳ ವಾದಿಗಳಿಗುತ್ತರವ ಕೊಡಬೇಕೆನುತಸರುವ ಶಾಸ್ತ್ರಾಮೃತವ ಸೃಜಿಸಿ ವಾಕ್ಯಗಳ ಕ್ರೋಡಿಸಿದರುಶನ ಗ್ರಂಥಗಳ ರಚಿಸಿ ಶಿಷ್ಯರಿಗಿತ್ತೆಪರಮ ತತ್ವದ ಖಣಿಯೆ ಗುರುಶಿರೋಮಣಿಯೆ 4 ನಿನ್ನ ಮತವೇ ವೇದಶಾಸ್ತ್ರಗಳ ಸಮ್ಮತವುನಿನ್ನ ಮತವೇ ಇಹಪರಕೆ ಸಾಧನವುಪನ್ನಂಗಶಯನ ಶ್ರೀ ಹಯವದನದಾಸರೊಳುನಿನ್ನ ಪೋಲುವರುಂಟೆ ಮಧ್ವಮುನಿರಾಯ 5
--------------
ವಾದಿರಾಜ
ಶ್ರೀ ಪ್ರಾಣೇಶದಾಸಾರ್ಯರ ಸ್ತುತಿ ತೆರಳಿದರು ಪರಮ ತೋಷದಲಿ ಹರಿಪರಕೆ |ಹರಿಪ್ರೀಯರಾದ ಪ್ರಾಣೇಶದಾಸರು ತ್ವರದಿ ಪ ನಿರುತದಲಿ ಹರಿಪೂಜೆ |ಮರಿಯದಲಿ ಮಾಡಿ ಬಲು |ಸ್ಥಿರ ಬುದ್ಧಿ ಪೂರ್ವಕದಲಿ |ಗುರುಗಳಲಿ ಸರ್ವಜ್ಞರಾಯರಿಂದಧಿಕ ಮ ||ತ್ತಿರಲುಂಟೆ ಎಂದು ತಿಳುಹಿ |ದುರುಳ ಜನರನುಸರಿಸದಲೆ ಕವಿಗಳೊಡನಾಡಿ |ಚರಿಸಿ ದೇಶಗಳಲ್ಲಿ ಮೆರೆದು ಖ್ಯಾತಿಯ ಪಡದು 1 ಭಾಗವತ ಶ್ರೇಷ್ಟ ಜಗನ್ನಾಥ ದಾಸಾಖ್ಯರಡಿ |ಜಾಗುಮಾಡದಲರ್ಚಿಸಿ |ಭೋಗಿವರ ಶಯನ ಪ್ರಾಣೇಶವಿಠಲಾಂಕಿತವ ||ಆ ಗುರುಗಳಿಂದ ಕೊಂಡು |ರಾಗದ್ವೇಷಗಳೆಂಬ ಅರಿಗಳನು ಸಂಹರಿಸಿ |ರಾಗದಲಿ ಹರಿಕಥನ ಕವನ ರೂಪದಿ ಪೇಳಿ2 ಪ್ರಾಣಮತವನನುಸರಿಸಿ ಆಚರಣಿಯನು ಮಾಡಿ |ಪ್ರಾಣಿಗಳಿಗೆ ತಿಳಿಸದೆ |ಕ್ಷೋಣಿಯೊಳಗಿನ್ನು ಇರಸಾಕೆಂದು ಆ |ಚಿತ್ರಭಾನು ಆಶ್ವಯುಜ ಶುದ್ಧ ಸಪ್ತಮಿಯಲಿ ||ಜ್ಞಾನಪೂರ್ವಕ ಲಯ ಚಿಂತನೆಯ ಮಾಡಿ ಗುರು |ಪ್ರಾಣೇಶ ವಿಠಲನಿದ್ದಾ ಪುರಕೆ ಜವದಿಂದ3
--------------
ಗುರುಪ್ರಾಣೇಶವಿಠಲರು
ಶ್ರೀ ಮಧ್ವಾಚಾರ್ಯರ ಸ್ತೋತ್ರ ಪದ ನಮೋ ನಮೋ ಹರಿಪ್ರೀಯ ನಮೋ ನಮೋ ಸುರಗೇಯನಮೋ ನಮೋ ಗುರುರಾಯ ಮಧ್ವ ಮುನಿ ಜೀಯಾ ಪ ಧರೆಗೆ ಭಾರವಾಗಿ ಚರಿಸುತಿರೆ ಮಾಯಿಗಳುಧರಿಸಲಾರದೆ ಧರಣಿ ಸರಸಿಜೋದ್ಭವಗೆಮೊರೆಯಿಡಲು ಅಜನಾಗ ಹರಸುರರ ಸಹವಾಗಿಹರಿಯ ಸದನವ ಸಾರಿ ಅರುಹಿದನು ಇದನೆಲ್ಲ 1 ಕಾವನಯ್ಯನು ವಸುಧೆ ಭಾವವನು ತಿಳಿದನಿಲದೇವನೇ ನಿನಗೆ ಆಜ್ಞೆಯನೀಯಲುದೇವ ನೀ ನವತರಿಸಿ ಪಾವನವ ಮಾಡಿ ಸ-ಜ್ಜೀವಿಗಳ ಪೊರೆದರ ದುರ್ಜೀವಿಗಳ ನೀ ಮುರಿದೆ 2 ಕಾಮವನು ಕಡಿದು ಸನ್ನೇಮವನೆ ಹಿಡಿದು ಬಹುಸೀಮೆಯೊಳು ವಾದಿಗಳ ಸ್ತೋಮ ತರಿದುಹೇಮಕಚ್ಚುಲ ವೇಣುಗೋಪಾಲ ವಿಠಲನನಾಮಸುಧೆ ಸುಜನರಿಗೆ ಪ್ರೇಮದಲಿ ಸಮಿಯಿತ್ತೆ 3
--------------
ವೇಣುಗೋಪಾಲದಾಸರು
ಶ್ರೀಮಹಾಲಕ್ಷಮಿತಾಯೇ | ಶ್ರೀ ಮಹಾಮಾಯೆ | ಹೇಮಾಯಾ ಕರುಣಾಬ್ದಿಯೇ | ಕಾಮಿತ ಫಲನೀಯೇ | ಸಾಮಜಗಮನಿಯೇ | ಹೇಮಾಯಾ ಕೋಟಿ ಸಮಕಾಯೇ | ಶುಭಚರಿಯ | ಬಹುಪರಿಯೇ | ಹರಿಪ್ರೀಯೇ | ಅರಿಯೇ ಪ ಶರಧಿಸುತವನೇ | ಸರಸಿಜಸದನೆ | ಸುರಚಿರದವರಾನೆ | ಕರಿಸರ್ಪವೇಣೆ | ದುರಿತಾದೌಘಪಹರಣೆ | ಕರುಣದಾಗಾರೆ ಶರಣೆ | ನೆರೆನಿನ್ನನಂಬಿದೆನೆ ಮಾತೆ | ಅದ್ಭುತೆ | ರವಿನಮಿತೆ | ಪ್ರಖ್ಯಾತೆ | ದಾತೆ 1 ಹೊಳೆವ ಸೌಂದರ್ಯ ಸಲಹೆ | ಸಲೆಕುಲದೈವೆ | ಸುಜನ ಸೇವೆ | ಮಲಿನರ ಭಾವೆ | ಹಲವು ಮಾತೇನು ಫಲವೇ | ಬಲುನಾಹಂಬಲಿಸುವೆ | ಒಲಿದು ಕರುಣಿಸು ಭಾಗ್ಯವಂತೆ | ಗುಣವಂತೆ | ಬಹುಶಾಂತೆ | ದಯವಂತೆ ಕಾಂತೆ 2 ಕರವೀರ ಪುರಧೀಶೆ | ಶರಣರುಲ್ಹಾಸೆ | ಸುರಮುನಿಜನತೋಷೆ | ಶಿರಸ್ವಪ್ರಕಾಶೆ | ಪರತರ ಸುವಿಲಾಸೆ | ಗುರುಕೃಷ್ಣಸುತನೀಶೆ | ವರಕೊಲ್ಹಾಸುರನ ವಿನಾಸ | ಜಗದೀಶೆ | ಮೃದುಭಾಷೆ | ಅವಿನಾಶೆ | ಈಶೆ 3 ಅಂಕಿತ-ಗುರುಕೃಷ್ಣಸುತ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸುರನರ ವರಗುರು | ಸುರನರ ಪ. ಸುರನರ ವರಗುರು ನಿನ್ನಾ | ದಿವ್ಯ ಚರಣಕ್ಕೆ ಎರಗುವೆ ನಿನ್ನಾ | ಆಹ ಕರುಣದಿಂದೀಕ್ಷಿಸಿ ವರಮತಿ ಪಾಲಿಸಿ ಹರಿಯ ಶ್ರೀ ಚರಣಕ್ಕೆ ಎರಗಿಸು ಮನವನೂ ಅ.ಪ. ಹಣ್ಣೆಂದು ನುಂಗೆ ಪೋದುದಕೇ | ಓದಿ ತಣ್ಣಗೆ ಮಾಡಿದ ಮನಕೇ | ಹರಿ ಯನ್ನು ಓಲೈಸಲು ಮರಕೇ | ಅಡರಿ ಹೆಣ್ಣನ್ನೆ ತೊರೆದನು ವ್ರತಕೇ | ಆಹ ಸಣ್ಣ ರೂಪದಿ ಪುರವನ್ನು ಶೋಧಿಸಿ | ಮುಡಿ ಹೊನ್ನು ಸಲ್ಲಿಸಿ ವಾರ್ತೆಯನ್ನು ಪೇಳಿದ ಧೀರ 1 ರಕ್ಕಸಿಯೊಳು ಪ್ರೇಮದಾಟಾ | ದನುಜ ಗಿಕ್ಕಿದ ಕೂಳಿಗಾರಾಟ | ಅಣ್ಣ ತಕ್ಕೊಂಡ ಎಡೆಯಲ್ಲಿ ಊಟ | ಬಲು ಸೊಕ್ಕಿದರೊಡನೆ ಕಾದಾಟ | ಆಹ ಮಕ್ಕಳ ಕೊಯ್ದವ ನಿಕ್ಕಿದಸ್ತ್ರಕೆ ತಲೆ ಇಕ್ಕದೆ ಪುರವಾಳ್ದ ರಕ್ಕಸಾಂತಕ ದೂತ 2 ಗುರುವಿಗೆ ವರೆದು ತತ್ವಾರ್ಥ | ಮತ್ತೆ ಧರೆಯಲ್ಲಿ ಚರಿಸಿದ ವ್ಯಾಪ್ತಾ | ಮುನಿ ವರರೊಳು ಬಲು ಶ್ರೇಷ್ಠನೀತಾ | ಪೇಳ್ದ ಪರಿಶುದ್ಧ ವೇದ ಭಾವಾರ್ಥ | ಆಹ ಸುರರುಷಿ ಪೂಜಿಪ ಹರಿಗಿರಿಯಲಿ ಸತ್ಯ ವರಸೂನು ಚರಣದಿ ಗುರುಭಕ್ತಿರತ ವ್ರತ 3 ದುಡಿದು ಸ್ವಾಮಿಗೆ ಪ್ರತಿಫಲವಾ | ಬೇಡ ಕೊಂಡ ವ್ರತವಾ | ಗಿರಿ ವಡೆದನು ಕೈ ಜಾರೆ ಶತವಾ ಮಾಡಿ ಗೋಪಿ ಚಂದನವಾ | ಆಹ ಕಡಲ ತೀರದಿ ತನ್ನ ವಡೆಯನ್ನ ನಿಲ್ಲಿಸಿ ಅಡರಿದ ಹಿಮಗಿರಿ ದೃಢಕಾಯ ಹರಿಪ್ರೀಯ 4 ಎಷ್ಟು ವರ್ಣಿಸಲಳವಿವನಾ | ಮಹ ಗುಟ್ಟು ಮಂತ್ರವ ಸಾಧನವನಾ | ಮೂರು ಬಟ್ಟೆ ಮಾಡುವ ನಂಬಿದವನಾ | ಜ್ಞಾನ ಕೊಟ್ಟು ಕಾಯುವ ಕರುಣಿ ಮಾನ್ಯಾ | ಆಹ ದಿಟ್ಟ ಗೋಪಾಲಕೃಷ್ಣವಿಠ್ಠಲ ಬ್ರಹ್ಮನ ಪಟ್ಟ ಕಟ್ಟುವನೆಂದು ಘಟ್ಟಿ ಮನದಲಿಪ್ಪ 5
--------------
ಅಂಬಾಬಾಯಿ