ಗುರುವೇ ನೀ ಕರುಣಿಸದಿರಲಿನ್ಯಾರು ಕರುಣಿಪರೋ ಪ
ಕರಿಗಿರಿಪುರ ತಂದೆ ಮುದ್ದು ಮೋಹನ್ನ ಅ.ಪ.
ಮೊರೆಹೊಕ್ಕ ಜನರ ಕೈ ಬಿಡುವರೇನೋಚರಣ ಯುಗ್ಮಕೆ ನಿನ್ನ ನಮಿಸುವೆನೋ |ಭಾರ ವಹಿಸಿ ಬೇಗ ಸಲಹಬೇಕೋ |ಜರೆಯು ನುಂಗುವ ಮುನ್ನ ಪೊರೆಯ ಬೇಕೋ 1
ಭವ ರೋಗವ ಕಳೆಯೋಉನ್ನತ ಪದವಿಗೇರುವ ದಾರಿ ತೋರೋ |ಘನ್ನ ಮಹಿಮ ನಿನ್ನ ಹೊರತು ಮತ್ಯಾರೋಎನ್ನ ಅಂಕಿತ ನಾಮ ಹರಿಯನ್ನ ತೋರೋ 2
ಹಂಬಲ ಕೊಡು ಎನಗೆ ಹರಿಪಾದದಲ್ಲೀನಂಬಿ ತುತಿಪೆನಯ್ಯ ತವ ಪಾದದಲ್ಲೀ |ಬಿಂಬ ಗುರು ಗೋವಿಂದ ವಿಠ್ಠಲನಲ್ಲಿಹಂಬಲ ಸ್ಥಿರವಾಗಿ ನಿಲಿಸೋ ನೀನಲ್ಲೀ 3