ಒಟ್ಟು 13 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಲ್ಪದೇಹವು ಹುಟ್ಟಿ ಮಾಯ ಕಲ್ಪನೆಗೊಳಗಾಗಿ ಸ್ವಲ್ಪವನ (ಸ್ವಲ್ಪವು) ಶ್ರೀಹರಿ ನಾಮಸ್ಮರಿಸಿ ಸದ್ಗತಿ ಕಾಣುವ ಸಾಧನೆ ಇಲ್ಲದ್ಹೋಯಿತು ಪ ಜನುಮ ಜನುಮದಲಿ ಸಂಸಾರ ಜಲಧಿಯೊಳಗೆ ಮುಳುಗಿ ಘನ ಪುರುಷನ ಮಹಿಮೆ ಕಾಣದೆ ಗಾಢಾಂಧ ಕಾರದಲಿ ದಿನಗಳ ಕಳೆದು ದೇವರ ಭಜಿಸದೆ ಜನುಮಗಳಳಿದೂ ಚರಿಸುವದಾಯಿತು 1 ಭ್ರಾಂತಿಯ ಘನವಾಗಿ ಪ್ರಪಂಚ ಬದ್ಧನಾಗಿ ಕಾಂತೇರ ಮೋಹಕ್ಕೆ ಸಿಲುಕಿ ಕಾಲವುಕಳೆದಿನ್ನು ಚಿಂತನೆ ಮಾಡದೆ ಮುಕ್ತಿ ಸೇರದಂತಾಯಿತು 2 ಪನ್ನಗಶಯನನ್ನಾ ಪರಿಪರಿ ಭಕುತಿಲಿ ಮನದಿಂದ ವರ್ಣಿಸಿ ಜಿವ್ಹದಲಿ ಹರಿಪದವನ್ನೇ ಕಾಣದಲೆ ಇನ್ನು ಶ್ರೀ ವ್ಯರ್ಥವು ಹೋಯಿತು 3
--------------
ಹೆನ್ನೆರಂಗದಾಸರು
ಏನಿದ್ದರೇನಯ್ಯ ಜ್ಞಾನವಿಲ್ಲದಿರೆ ಶ್ರೀನಾಥನಂ ನೆನೆಯದಿಹ ಹೀನಮಾನವಗೇ ಪ. ಗುರುವ ಸೇವಿಸಲಿಲ್ಲ ಹರಿಯ ಧ್ಯಾನಿಸಲಿಲ್ಲ ಅರಿತವರ ಸಂಗತಿಯೊಳ್ವೆರಯಲಿಲ್ಲವಲ್ಲಾ 1 ಹರಿಕತೆಯ ಭಕ್ತಿಯೊಳು ಪ್ರಕಟಮಾಡಿಸಲಿಲ್ಲ ಪರಿಪರಿಯ ಭೋಗದಿಂ ಮರುಳಾದೆನಲ್ಲ 2 ಬಂದೇ ದಾನವಿರದ ಧನವೇಕೆ ಪೇಳು ತಿಂದುಂಡು ಮಲಗುವಾನರಜನ್ಮ ಹಾಳು3 ಕರ ಚರಣ ಮೊದಲಾದ ಕರಣಂಗಳಂ ಪಡೆದು ಹರಿಪದವ ಪೊಂದುವಾ ಪರಿಯುಂಟೆ ಪೇಳು 4 ಆನಂದ ಸಾಮ್ರಾಜ್ಯ ನಿನಗಹುದು ಕೇಳು 5
--------------
ನಂಜನಗೂಡು ತಿರುಮಲಾಂಬಾ
ಕರುಣಿಸಮ್ಮಾ ತಾಯೆ ಕರುಣಿಸಮ್ಮಾ ಪ. ಕರುಣಿಸಮ್ಮಾ ಭರದಿ ವರಪ್ರಸಾದವ ತ್ವರದಿ ವರ ಶಂಕರನ ಜಾಯೆ ತ್ವರಿತದಿ ಕಾಯೆ ಅ.ಪ. ಇಷ್ಟ ಮೂರುತಿ ಶಿವನ ದಿಟ್ಟ ತೊಡೆಯಲಿ ಮೆರೆವ ದಿಟ್ಟ ರೂಪವ ತೋರೆ ದಿಟ್ಟ ಸುಂದರಿಯೆ ಪಾದ ಎನ್ನ ದಿಟ್ಟತನದಲಿ ಭಜಿಪ ಇಷ್ಟಕೊಡು ಮಾತೆ 1 ಭಜಿಪರ ಮನದಾತೆ ಸುಜನರಾಪ್ತೆಯೆ ನಿನ್ನ ಭಜಿಪ ಮನವನು ಇತ್ತು ಕಾಪಾಡು ತಾಯೆ ನಿನ್ನ ಸುಜನ ಸಂಗವನಿತ್ತು ದುರ್ಜನ ಸಂಗವ ಬಿಡಿಸಿ ಪಾದ ಭಜಿಪ ಭಾಗ್ಯವ ನೀಡೆ 2 ಭಾಗ್ಯದೇವತೆ ನೀನು ಸೌಭಾಗ್ಯ ಮಾಂಗಲ್ಯದಾ ಭಾಗ್ಯವನು ಕೊಟ್ಟು ಕಾಪಾಡು ತಾಯೆ ಕಾಯೆ ಯೋಗ ಮೂರುತಿ ಶ್ರೀ ಶ್ರೀನಿವಾಸ ಸಹೋದರಿಯೆ ಅನುರಾಗದಿಂ ಹರಿಪದವ ಭಜಿಪ ಭಾಗ್ಯವನಿತ್ತು 3
--------------
ಸರಸ್ವತಿ ಬಾಯಿ
ಪಾದ - ಮೋದದಿ ಭಜಿಸಿದ ಮನುಜನೆ ಬಲು ಧನ್ಯನೋ ಪ ಬೋಧ ಪಾದ ಸೇವಕರಾದ ಮಹಸುಸ್ವಾದಿ ಪುರದೊಳು | ವೇದ ವಿನುತನ ಸ್ತುತಿಸಿ ಮೋದಿಪ ಅ.ಪ. ವಾಗೀಶ ಮುನಿಪ ಸದಾಗಮಜ್ಞನ ವರ | ವೇಗದಿಂದಲಿ ಫಲಿಸಲುಜಾಗು ಮಾಡದೆ ಗೌರಿ ತತ್ಪತಿ | ರಾಗ ರಹಿತರು ನಿನ್ನನೊಪ್ಪಿಸೆ |ರೋಗಹರ ಹಯವದನ ಪದವನು | ರಾಗದಿಂದಲಿ ಭಜಿಪ ಯತಿ 1 ತಿಮಿರ ತಾಮರಸ ಬೋಧ ಶಾಸ್ತ್ರವ | ಪ್ರೇಮದಿಂದಲಿ ಪೇಳ್ದಯತಿವರ 2 ಮೂರ್ತಿ ಪ | ರಾಕ್ರಮನಿಂ ತರಿಸೀಚಕ್ರಿಯನೆ ನಿಲಿಸ್ಯುತ್ಸವದಿ ಸುರಪನ | ವಿಕ್ರಮದ ಆಳ್ಬಂದು ಕರೆಯಲು |ಉತ್ಕ್ರಮಣ ತೊರೆದವರ ಕಳುಹುತ | ವಿಕ್ರಮನ ಪದಕೆರಗಿನಿಂದ3 ನಿಗಮವೇದ್ಯನ ಬಗೆಬಗೆಯಲಿ ಸಂಸ್ಕøತ | ಮಿಗಿಲು ಪ್ರಾಕೃತ ಪದ್ಯದೀಸುಗುಣಮಣಿಮಯ ಮಾಲೆಗಳ ಪ | ನ್ನಗನಗೇಶನ ಕೊರಳೂಳರ್ಪಿಸಿ |ಚಿಗಿ ಚಿಗಿದು ಆನಂದದಿಂದಲಿ | ದೃಗು ಜಲದಿ ಹರಿಪದವ ತೊಳೆದ 4 ಸುರನದಿ ನದಿಧರರಾದಿ ಸ್ಥಾಪಿಸುತಲ್ಲಿ | ಎರಡೆರಡೊಂದು ವೃಂದಾವನವಾ | ಸ್ಥಿರಪಡಿಸಿ ಶ್ರೀವ್ಯಾಸ ಸಮ್ಮುಖ | ವರ ನರೇಯಣ ಭೂತಬಲದಲಿಇರಿಸಿ ಗುರು ಗೋವಿಂದ ವಿಠಲನ | ನಿರುತ ಧ್ಯಾನಾನಂದಮಗ್ನ5
--------------
ಗುರುಗೋವಿಂದವಿಠಲರು
ಮರೀಬೇಡ ಮಾಧವನ ಅರಿವಿಟ್ಟು ಭಜಿಸೋ ಸ್ಥಿರವಲ್ಲ ಧರೆಭೋಗ ಮೆಚ್ಚಿ ಕೇಡಬೇಡ ಪ ಕೂಡು ನಿಸ್ಸಂಗದೊಳು ಆಡು ಸುಸಂಗದೊಳು ಮಾಡು ನಿಜವರ್ತನಗಳು ಬೇಡು ಬಡತನದೊಳು ದೂಡು ದುವ್ರ್ಯಸನಗಳು ತೋಡು ದುರ್ಗುಣಗಳು ನೋಡು ನಿಜಭಕ್ತರೊಳು ನೀಡು ಮನ ಹರಿಯೊಳು 1 ಹೀರು ಮಹಗರುವವ ತೂರು ಮದ ಮತ್ಸರವ ತೂರು ದುಷ್ಕøತ್ಯವ ಕಾರು ಬಲುವಿಕಾರವ ಮೀರು ಧರೆಭೋಗವ ತೋರು ನಿಜಧ್ಯಾನವ ಏರು ಸನ್ಮಾರ್ಗವ ಸೇರು ಹರಿಪದವ 2 ಕುಂದುಗಳನೊರೆಯದಿರು ನಿಂದೆಗಳನಾಡದಿರು ಬಂಧನಕ್ಕೆ ಬೀಳದಿರು ಮಂದತ್ವದೂರು ತಂದೆ ಶ್ರೀರಾಮನಡಿಗೊಂದಿ ವೈಕುಂಠಪದ ಚಂದದಿಂ ಪಡಕೊಂಡಾನಂದದಲಿ ಸೇರು 3
--------------
ರಾಮದಾಸರು
ಸುಳಾದಿ ಧ್ರುವತಾಳ ಹರಿಪದವ ನೆನೆವಂಗೆ ನರಕದ ಭಯವಿಲ್ಲ ಹರಿಪದವ ನೆನೆವಂಗೆ ಮಾಯೆಯ ಭಯವಿಲ್ಲ ಹರಿಪದವ ನೆನೆವಂಗೆ ವಿಷದ ಭಯವಿಲ್ಲ ಹರಿಪದವ ನೆನೆವಂಗೆ ಭವದ ಭಯವಿಲ್ಲ ಹರಿಪದವ ನೆನೆವಂಗೆ ಜನನದ ಭಯವಿಲ್ಲ ಹರಿಪದವ ನೆನೆವಂಗೆ ಮರಣದ ಭಯವಿಲ್ಲ ಬರಿಯ ಮಾತೇ ಅಲ್ಲ ಅಕುತೋಭಯನೆಂದು ವರದ ಹಯವದನನ ಪದಪದುಮವ ನಂಬು 1 ಮಠ್ಯÀತಾಳ ಧ್ರುವನ ನೋಡು ಸುರಲೋಕದಿ ಭುವಿ ವಿಭೀಷಣನ್ನ ನೋಡಿರೊ ಅವನಿಯ ಕೆಳಗೆ ಬಲಿಯ ಉತ್ಸಹವ ನೋಡಿ ಮನುಜರೆಲ್ಲರು ಭುವನ ತೃತೀಯದವರೆ ಸಾಕ್ಷಿ ಹಯವದನನ ಭಜಕರಿಗೆ 2 ತ್ರಿಪುಟತಾಳ ಹತ್ತಾವತಾರದಿ ಭಕ್ತರ ಭಯಗಳ ಕಿತ್ತು ಭೃತ್ಯರ ಕಾಯ್ವ ಕಥೆÉಯ ಕೇಳ್ವರು ಮತ್ತೆ ಮೃತ್ಯುಗಳ ಭೀತÀನೆಂಬುವುದ್ಯಾಕೆ ಹೆತ್ತ ತಾಯಿಯಿಂದ ತತ್ವವ ಕೇಳಯ್ಯ ಕರ್ತೃ ಹಯವದನನೆ ಭಕ್ತರ ಭಯಕ್ಕೆ ಕತ್ತಲೆಗಿನನಂತೆ ಹತ್ತು ಎಂಬುದು ನಂಬು3 ಝಂಪೆತಾಳ ಕರಿಯ ಕಾಯ್ದವನ ಪಾದವ ನಂಬು ಉರಿಯ ನುಂಗಿದವನ ಪಾದವ ನಂಬು ಸಿರಿ ಹಯವದನನೆ ಭಕ್ತರ ಭಯ ಸಂ- ಹರಣನೆಂಬುದಕ್ಕಿನ್ನು ಸಂಶಯವಿಲ್ಲ 4 ರೂಪಕÀತಾಳ ದ್ರೌಪದಿಯ ಭಯ ಪರಿಹರಿಸಿದವನಾರೈ ಆ ಪರೀಕ್ಷಿತನ ಭವಭಂಜನನಾರೈ ತಾಪಸರಿಗಸುರರಿಂದ ಬಂದ ಪರಿಪರಿಯ ಆಪತ್ತುಗಳನೆಲ್ಲ ಖಂಡಿಸಿದನಾರೈ ಶ್ರೀಪತಿ ಹಯವದನನೊಬ್ಬನೆ ತನ್ನವರ ತಾಪತ್ರಯವ ಬಿಡಿಸಿ ತಕ್ಕೈಸಿಕೊಂಬ 5 ಅಟ್ಟತಾಳ ವಿಷನಿಧಿಯನೊಂದು ದಾಟಿ ವ್ಯಸನಗಳನೆಲ್ಲ ಖಂಡಿಸಿ ಬಿಸಜವನಿತೆಯ ಕಂಡು ಬಂದ ಅಸಮ ಹನುಮನ ನೋಡಯ್ಯ ಕುಸುಮವನು ತರಪೋಗಿ ಅಸುರರ ಕುಸುರಿದರಿದುದ ನೋಡಯ್ಯ ಬಿಸಜಾಕ್ಷ ಹಯವದನ ತನ್ನ ಹೆಸರುಗೊಂಡರೆ ಭಕ್ತರ ವಶÀಕ್ಕಿಪ್ಪುದು ಪಾರ್ಥನ ಯಶವ ಪಸರಿಸಿದ ಅಚ್ಚುತ 6 ಪೂರ್ವಕಾಲದಿ ತೀರದ ಕಥೆಗಳ ನಿ- ವಾರಿಸಿ ಜರಿದುದ ನರರೆಲ್ಲ ಕಾಣರೆ ಶರೀರವೆರಸಿದವರಿಗೆ ಸ್ವರ್ಗಗತಿಯುಂಟೆ ಕರುಣಾಕರ ಕೃಷ್ಣನ ಕಂಡವರಿಗೆ ಭಯವುಂಟೆ ಈರೇಳು ಲೋಕದೊಳಗೆ ಈ ಹಯವದನನಂತೆ ಶರಣಾಗತಜನರ ಸಲಹುವರುಳ್ಳರೆ 7 ಜತೆ ಸುರಾಸುರಚಕ್ರವರ್ತಿ ಅಸುರಮದಭೇದನ್ನ ಸಿರಿ ಹಯವದನನ್ನ ಚರಣವೆ ಗತಿಯೆನ್ನು
--------------
ವಾದಿರಾಜ
ಗುರುಪದವ ನಂಬಿ ಹರಿಪದವ ಕಾಂಬೆಮರುತ ಸಂತತಿಗೆ ನಮಿಸುವೆ ನಮಿಸುವೆ ಪ.ಹರಿಪದಕೆ ಅಚ್ಛಿನ್ನ ಭಕುತಿ ಪರಿಪೂರ್ಣ ಶ್ರೀಹರಿಕಾರ್ಯದಲಿ ಧುರಂಧರನೆನಿಸುವಹರಿಭೃತ್ಯಜನಕೆ ಹಿತಕಾರಿ ಔದಾರಿ ಜಗದ್ಗುರು ಪರಮಹಂಸ ಮಧ್ವತ್ರಿರೂಪಿಯ 1ತತ್ವಸಾಗರ ತಿಮಿಂಗಿಲ ಪದ್ಮನಾಭಮುನಿಕರ್ತಮೂಲರಾಮ ಮೆಚ್ಚಿದ ನರಹರಿಯಮತ್ರ್ಯ ಮಾಯಿಜನ ತುಹಿನರವಿಭಮಾಧವಾಭಿಜÕ ಅಕ್ಷೋಭ್ಯತೀರ್ಥೆನಿಪ ಮಲ್ಲರ 2ಸುಖತೀರ್ಥಗಂಭೀರ ವಾಕ್ಯವಾರಿಧಿಚಂದ್ರಅಕಳಂಕ ಜಯವರ್ಯ ಯತಿಸಮೂಹಮಕುಟಮಣಿ ವಿದ್ಯಾಧಿರಾಜ ನಿರ್ಮಲಕಾಯಸುಕವೀಂದ್ರ ವಾಕ್ಸಿದ್ಧ ವಾಗೀಶರ 3ಗುರುಭಕುತಿ ನಿಸ್ಸೀಮ ರಾಮಚಂದ್ರಾಖ್ಯಯತಿಗುರುಆಜ್ಞಾಪಾಲ ವಿದ್ಯಾನಿಧಿಗಳದುರುವಾದಿಗಜಮೃಗಪ ರಘುನಾಥ ತೀರ್ಥಶ್ರುತಿಪರಮಾರ್ಥ ಪರಿಚರ್ಯ ರಘುವರ್ಯರ 4ವೈರಾಗ್ಯ ವೈಭವಾನ್ವಿತ ರಘೋತ್ತಮ ಮುನಿಪವೈಷ್ಣವ ತತ್ವಜÕ ವೇದವ್ಯಾಸರಕೈವಲ್ಯಮಾರ್ಗಜÕ ವಿದ್ಯಾಪತಿಯು ಹೊನ್ನಮೈಯ ಮರುತಂಶ ವಿದ್ಯಾಧೀಶರ 5ವೇದಾಮೃತಾಬ್ಧಿಯೊಳು ಮಗ್ನ ವೇದನಿಧಿಗಳಸಾಧುನಿಕರಲಲಾಮ ಸತ್ಯವ್ರತರಬಾದರಾಯಣರಾಮಪಾದರತ ಸತ್ಯನಿಧಿಮೇದಿನಿಗೆ ಕಲ್ಪತರು ಸತ್ಯನಾಥರ 6ಶ್ರೀ ಸತ್ಯನಾಥರತ್ನಾಕರಕರೋದ್ಭವಕುಮುದಅಶೇಷಯಾಚಕ ಸುಖದ ಸುಗುಣಶ್ರೀ ಸತ್ಯಾಭಿನವ ಮುನಿ ಭಾಗವತೇಢ್ಯಜÕಶಾಶ್ವತ ಪರೋಕ್ಷ ಗುರುಪದನಿಷ್ಠರ 7ದುಷ್ಟ ಪರವಾದಿ ನರಕುಲಿಶ ಜಿತಕಾಮ ತಪೋನಿಷ್ಠ ವಿದ್ಯೋನ್ನತ ವಿಚಾರಶೀಲಶಿಷ್ಟ ಜನಪಾಲಶ್ರುತಿಜಲಾಭ್ಧಿ ಕಲ್ಲೋಲಇಷ್ಟಾರ್ಥದಾತ ಸತ್ಯಾಧೀಶರ 8ಕೃಷ್ಣ ಪಾದಾಸಕ್ತ ಗುರುಕೃಪಾಸಂಯುಕ್ತಇಷ್ಟಾರ್ಥದಾತ ಸತ್ಯಾಧಿರಾಜರಸೃಷ್ಠೇಶ ಪ್ರಸನ್ನವೆಂಕಟಪತಿಯಅನವರತತುಷ್ಟೀಕರಿಸುವ ವಾಯುಮತ ಮಹಿಮರ 9
--------------
ಪ್ರಸನ್ನವೆಂಕಟದಾಸರು
ನಂಬೊ ನಂಬೊ ಹರಿಪದವ ನಂಬೊ ಪ.ಮಾತುಳನಚಂದನಪ್ರೀತಿಲಿ ಕೊಟ್ಟ ಮನಸೋತವಳಂಗಪುನೀತಮಾಡಿದನಂಘ್ರಿಯ1ಅಜಾಮಿಳ ಸಹಜ ತನುಜನ ಕರೆಯಲಾಗಿನಿಜಭಟರಟ್ಟಿದ ಸುಜನೇಶನಂಘ್ರಿಯ 2ನಂಬಿದರವಗುಣಕುಂದನೋಡದೆಹೊರೆವತಂದೆ ಪ್ರಸನ್ನವೆಂಕಟೇಶನಂಘ್ರಿಯ 3
--------------
ಪ್ರಸನ್ನವೆಂಕಟದಾಸರು