ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧೀಂಧೀಂಧೀಂಧಿಂ ಧೀರು | ಮಜರೆ ಸಂಭ್ರಮದ | ಅಂದು ಶ್ರೀಕೃಷ್ಣ ರುಕ್ಮಿಣಿಯ ಪಾಣಿ | ಗ್ರಹಣ | ದಿಂದ ದ್ವಾರಕೆಯ ಹುಗುವ ಸಮಯದಲಿ ಪ ಚಪಳ ವಾಜಿಗಳು | ಬೆರೆಬೆರೆದು ಕುಣಿವಾಟಾದಿಂದಾ ಇಡಿಯೇ | ತೆರೆಹಿಲ್ಲ | ಸಿಂಧು ಗುರಿ ಪತಾಕೆಗಳ ಹೊಳೆವ | ರೂಪಿಯೇ | ಮೆರೆವ ತಮ್ಮಟ ಭೇರಿನಾದ ಕಹಳೆಗಳಿಂದ | ಹರಿಪದದಿ ಪ್ರತಿ ಶಬ್ದವು ನುಡಿಯೇ 1 ಭಟ್ಟರು ಗಾಯಕವಂದಿ ಬಿರುದು ಕೊಂಡಾಡು ತಲಿಹ | ನಟನೆ ದಿವ್ಯಾಂಗ-ನೆಯರಾ ಮುಂದ | ಘಟನೇ ಪುಟುವೆರಸೀ ಸ್ವಸ್ತಿ ವಚನಾದಿಂದ ನಟನುಗ್ರಶೇನ ತಾಯಿ | ತಂದಿ ದಂಪತಿಗಳ ಕುಟಿಲೀರ್ವ ಸಾಂಬ ಕೃತ ವವರ್ಮನಾ | ರ್ಭಟೆಯ ಬಲರಾಮ ನೋಡನೀ ವೃಂದ 2 ಹೃದಯ ಮಧ್ಯದ ಪದಕದಂತೆ ಬರಿತಿಹ ನಡುವೆ ವಧು ಇದಿರು ಗೊಂಬುವ ಸಂಭ್ರಮದ ಪಟ್ಟಣದಲಾರು ತುದಿ ಮೊದಲ ಬಣ್ಣಿಸುವಾ ಸಿರಿಯಾ | ವದಗಿ ಮುಂದಕ ಹೋಗಿ ಮಂಗಳಾರುತಿಗಳನು ಸುದತಿಯರು ತಂದೆ ತ್ತಲು ತ್ವರಿಯು | ಮುದದಿಂದ ಗೃಹ ಪ್ರವೇಶವ ಮಾಡಿದನು ಸರ್ವಾ | ವಿದಿತ ಮಹಿಪತಿ ನಂದನಾ ಧೂರೆಯು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನದೀದೇವತೆಗಳು ಕಂಗಳಿಂದಲಿ ನಿನ್ನ ಕಂಡೆ ನಾನೀಗ ಹಿಂಗಿತೇ ಎನ್ನ ಅಘದ್ಹಿಂಡು ಕಾವೇರಿ ಪ. ಮಂಗಳಾಂಗಿಯೆ ಶ್ರೀ ರಂಗನಾಥನ ಪದ ಭೃಂಗಳೆನಿಸಿ ಜನರ ಪಾವನಗೈವೆ ತುಂಗವಿಕ್ರಮ ಹರಿಗೆ ಮೂಲರೂಪಳಾಗಿ ಅಂಗ ಶುದ್ಧಿಯಗೈವೆ ಪಾಪಿಗಳ ಸತತ 1 ಎಲ್ಲೆಲ್ಲಿ ನೋಡೆ ಶ್ರೀರಂಗನ್ನ ಸೇವಿಸುವೆ ಪುಲ್ಲಲೋಚನೆ ನಿನ್ನ ಬಗೆಯರಿವೆನೆ ಬಲ್ಲ ಭಕ್ತರು ಬಂದು ನಿನ್ನಲ್ಲಿ ಸ್ನಾನವಗೈದು ಉಲ್ಲಾಸದಿಂದ ಆನಂದಪಡುತಿಹರೆ 2 ನೊರೆಸುಳಿಗಳಿಂದ ಭೋರ್ಗರೆಯುತ್ತ ಹರಿ ಇರುವ ಅರಮನೆಯೆ ವೈಕುಂಠವೆಂದು ಸೂಚಿಸುತ ಹರಿಸದನ ಸುತ್ತಿರುವೆ ವಿರಜೆ ನಾನೆಂದೆನುತ ಅರುಹುವಾ ತೆರದಿ ಬಹು ರಭಸದಿಂ ಪರಿವೆ 3 ನಿನ್ನ ಧ್ವನಿ ಇಂಪೆಂದು ಆನಂದದಿಂದಾಲಿಸುತ ಚನ್ನ ಶ್ರೀರಂಗ ತಾ ಪವಡಿಸಿಹನೆ ಘನ್ನ ಮಹಿಮಳೆ ಸಕಲ ಜೀವರಾಶಿಯ ಪೊರೆವೆ ಎನ್ನ ಮನ ಹರಿಪದದಿ ನಲಿವಂತೆ ಮಾಡೆ 4 ನಿನ್ನನೇ ವಿರಜೆ ಎಂತೆಂದು ಭಾವಿಸಿ ಈಗ ಎನ್ನ ಗುರುಗಳ ದಯದಿ ಸ್ನಾನಗೈದೆ ಇನ್ನು ಶ್ರೀ ವೈಕುಂಠದೊಡೆಯನಾ ತೋರಮ್ಮ ಘನ್ನ ಶ್ರೀ ಗೋಪಾಲವಿಠ್ಠಲನ 5
--------------
ಅಂಬಾಬಾಯಿ