ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದನಂದನ ಪದ್ಮಾನಂದನ ವಂದ್ಯನೇ| ತಂದೆ ಮಹಿಪತಿಸುತ ಪ್ರಭುವೇ ಮುಕುಂದ ಕೃಷ್ಣ ಪ ಸಿರಿಯಾ ಸೌಖ್ಯ ದಿಂದುಬ್ಬಿ ಮದದಿಂದ| ಸರಿಯನಗಾರು ಇಲ್ಲೆಂಬ ತಾಮಸದಿಂದ| ಮರದೆನೋ ಹರಿನಿಮ್ಮಾ ಸ್ಮರಣೆಯಾ ಮರವಿಂದ| ತಿರುಗಿ ದಣಿದೆ ನಾನು ನಾನಾಯೋನಿಗಳಿಂದ| ತರಹರಿಸಲಾರೆ ತಾಪತ್ರಯದುಃಖಗಳಿಂದ| ಶಿರಿಕೃಷ್ಣ ಸಲಹೆನ್ನ ಪರಮ ಕರುಣದಿ|1 ಮುನ್ನ ಮಾಡಿದಪರಾಧ ಸಕಲವ ನೀನು ಕ್ಷಮೆಯನುಮಾಡಿ ಚಿನ್ನ ಕಿಂಕರನೆಂದು ದಯದಲಿ ಅಭಯಕರವನು ನೀಡಿ ನಿನ್ನ ಸ್ಮರಣೆಯಕೊಟ್ಟು ಕರುಣ ಕಟಾಕ್ಷದಿಂದಲಿ ನೋಡಿ ಚಿನ್ನ ಶ್ರೀಕೃಷ್ಣ ಭವದಿಂದುದ್ಧರಿಸಯ್ಯಾ ತಾರಿಸಯ್ಯಾ ನೀನು2 ಪತಿತ ಪಾವನ ನೆಂಬಾಬಿರುದು ಸಾರುತಿದೆ ಗತಿಗೆಟ್ಟ ಅಜಮಿಳನ ತಾರಿಸಲಿಲ್ಲವೇ ಪಾಷಾಣ ಉದ್ದರಿಸಲಿಲ್ಲವೇ ಕ್ಷಿತಿಯೊಳೆನ್ನ ತಾರಿಸುವದೊಂದರಿದೇ ಶ್ರೀಕೃಷ್ಣಾ3 ಕರಿರಾಜನಂದದಿ ಹರಿತವಸ್ಮರಣೆ ಮಾಡಲರಿಯೇ ಶರಣ ಪ್ರಲ್ಹಾದನಂತೆ ಕರೆಯ ಬರಿಯೇ ನರೆನಂತೆ ನಾನಿನ್ನ ವಲಿಸಿಕೊಳ್ಳಲರಿಯೇ ತರಳ ಧ್ರುವನಂತೆ ಧ್ಯಾನಿಸಲರಿಯೇ ಶಿರಿಕೃಷ್ಣಾ ಗತಿಯಂಬದುವಿನಾ ಮತ್ತೊಂದರಿಯೇ 4 ನಿನ್ನ ನಾಮವನು ಕೊಂಡಾಡುವೆ ಪೊಗಳುವೆ ಚನ್ನಾಗ್ಯನುದಿನದಲನವರತಾ ತನ್ನಯಕರುವಿಗೆ ಕರುಣಿಪಗೋಪಂತೆ ಎನ್ನ ನೀಸಲಹುದು ಶಿರಿಕೃಷ್ಣರೇಯಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸೋ ಹರಿ ದಯಪಾಲಿಸೋ ಪಾಲಿಸೋ ಬಿನ್ನಹ ಲಾಲಿಸೋ ಸುಜನರೊಳ್ ಹೋಲಿನೆನ್ನಗುಣವ ಜಾಳಿಸಿ ಸುಗುಣವ ಪ ಅಂಗಜ ಪಿತ ನಿನ್ನ ನರಿದು ನೆನೆಯಲು ಭಂಗವಳಿದು ನಾರಿಗೊಲಿದೆ ನೀ ಲಾಂಗ ನಿನ್ನ ಪಾದಂಗಳ ದಿವ್ಯನಾ ಮಂಗಳ ಎನ್ನೊಳು ಹೊಂದಿ ಹಿಂಗದಂಥ ಭಯವ 1 ನೆರೆ ನಂಬಿದೆನು ಕಾಯೋ ಬೇಗ ಬಂದು ಸ್ಮರಿಪೆ ನಿಮ್ಮಂಘ್ರಿಯ ನೀಗಕೇಳ್ ಉರಗ ವೈರಿಯನೇರಿ ಮೆರೆವ ಶ್ರೀ ಹರಿನಿಮ್ಮ ಚರಣಾರವಿಂದವ ಮರಯದಂತೆ ಭಯವ ಪಾಲಿಸೋ 2 ಧರೆಯೊಳಗತಿಶಯವೆನಿಸಿ ನರ ಸರಿಸಿಜೋದ್ಭವ ನಯ್ಯ ಹರನ ರಾಣಿಯ ಪಿತ ನಿರುತ ನಿಮ್ಮ ಧ್ಯಾನ ಮರೆಯನ ಭಕ್ತಗೆ 3
--------------
ಕವಿ ಪರಮದೇವದಾಸರು
ನೀ ದಯದಿ ನೋಡಿದರೆ ನಾ ಧನ್ಯ ಶ್ರೀರಂಗನೀ ಮುಖವ ತಿರುವಲು ನಾ ಪರದೇಶಿ ವಿಮಲಾಂಗ ಪವನಜಾಕ್ಷ ನೀ ಕೊಡಲು ಧನವಂತನೆನಿಸಿಹ್ಯದೀಜನರೊಳಗೆ ಘನವಂತನೆನಿಸಿಕೊಂಬೆಅನುಗಾಲ1ಹರಿನಿಮ್ಮ ವರಚರಣಕರುಣವಿರೆ ಧರೆಮೇಲೆದುರುವಾದಿಗಳ ಜೈಸಿ ನಿರುತನೆನಿಪಿಅನವರತ2ವರವೇದಸ್ಮøತಿಶಾಸ್ತ್ರ ಸ್ಥಿರದರಿವು ನಿಜಜ್ಞಾನವರಮುಕ್ತಿ ಲಭ್ಯತವಕರುಣದಿಂ ಶ್ರೀರಾಮ 3
--------------
ರಾಮದಾಸರು