ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸ್ವತಿದೇವಿ ಫಣಿ ವೇಣಿ ನಮಿಪೆ ನಿನ್ನ ಮನಶುಕವಾಣಿ ಸುಮನಸರೊಡೆಯನ ಗಮನದೊಳಿಡುತೆ ಪವನ ಮತದಲಿಡು ತಾಯೆ ಕಾಯೆ ಪ. ವಾಣಿ ಬ್ರಹ್ಮನ ರಾಣಿಯೆನೀ ಗಾಣಿಸು ಮನದಿ ಸುವಾಣಿಯನು ಮಾಣದೆ ಜಪಸರ ಕಲ್ಯಾಣಿಯು ನೀನು ಸತಿ ಜಾಣೆ ಭಾರತಿಯೆ 1 ವಾರಿಜಭವ ಸತಿಮತಿ ತೋರುತ ಮನದಿ ನೀರೆ ಎನ್ನ ಮನ ಸೂರೆಗೊಳುತಲಿ ಸಾರುತ ಹರಿನಾಮಾಮೃತವನು ಕೊಡು ಮಾರಮಣ ಸ್ತುತಿ ಮಾಡಿಸುತ 2 ಅಸುರ ಮರ್ದನ ಹರಿ ನಿನವಶದಲ್ಲಿಹನೆ ಸುಸ್ವರದ ಮಧುರದಿ ಪಾಡುತಲಿರುವೆ ವಶವಲ್ಲದಲಾನಂದದಿಂದ ಶ್ರೀ ಶ್ರೀನಿವಾಸನ ಕುಸುಮಶರನಪಿತನ್ವಶದಲಿ ನಿಲಿಸೆ 3
--------------
ಸರಸ್ವತಿ ಬಾಯಿ
ಹರಿನಾಮಾಮೃತವನು ಸುರಿದು ಪರಿಪಕ್ವರಾಗಿ ಜರೆಮರಣೆಂದೆಂಬ ಉರುಲನು ಗೆಲ್ಲಿರೊ ಪ ತರಳತನದಿ ಸುರಿದು ಪರಮ ಪ್ರಹ್ಲಾದನು ಪರಮಕಂಟಕ ಗೆಲಿದು ವರಮೋಕ್ಷಕೈದಿದ ನಿರುತದಿಂ ವಿಭೀಷಣ ಸುರಿದು ಈ ಅಮೃತ ಸ್ಥಿರಪಟ್ಟವೇರಿದ್ದು ಅರಿವಿಟ್ಟು ನೋಡಿ 1 ಅಮೃತ ಕರಿ ತನ್ನ ಭಾವದಿ ಪರಮಾಪತ್ತು ಗೆಲಿದದ್ದರಿದು ಸ್ಮøತಿಯಿಂದ ಅಮೃತ ನರನು ಧರೆಯನೆಲ್ಲ ತಿರುಗುತ ಪರತರಧುರವ ಜೈಸಿದರಿದು 2 ಸೇವಿಸಿಅಮೃತ ಪಾವನೆನಿಸಿ ಯುವತಿ ಕೇವಲಮಾನದಿಂ ಬುವಿಯೊಳ್ಬಾಳಿದಳು ದೇವ ಶ್ರೀರಾಮನ ಪಾವನ ನಾಮಾಮೃತ ಭಾವದೊಳ್ಸವಿಯುತ ಕೇವಲರೆನಿಸಿರೊ 3
--------------
ರಾಮದಾಸರು
ದಾರಿ ಏನಿದಕೆ ಮುರಾರಿ - ನೀ ಕೈಯ ಹಿಡಿಯದಿದ್ದರೆ-|ದಾರಿ ಏನಿದಕೆ ಮುರಾರಿ? ಪಕಷ್ಟ-ಕರ್ಮಂಗಳ ಎಷ್ಟಾದರು ಮಾಳ್ಪೆ |ಎಷ್ಟಾದರೂ ನುಡಿದೆ ಗುರುಹಿರಿಯರ ||ದುಷ್ಟರ ಸಂಗವ ಬಹಳ ಮಾಡಿದರಿಂದ |ಶಿಷ್ಟರ ಸೇವೆಯೆಂದರಾಗದೆನಗೆ 1ಪರರ ದೂಷಣೆ ಪರಪಾಪಂಗಳನೆಲ್ಲ |ಪರಿಪರಿಯಲ್ಲಿ ಆಡಿಕೊಂಬೆ ನಾನು ||ಹರಿನಾಮಾಮೃತವ ಹೇಳದೆ ಕೇಳದೆ |ಹರಟೆಯಲ್ಲಿ ಹೊತ್ತುಗಳೆದೆ ನಾ ಹರಿಯೆ 2ಪಾತಕಕರ್ಮಗಳ ಮಾಡಿದಜಾಮಿಳಗೆ |ಪ್ರೀತಿಯಿಂದಲಿ ಮುಕ್ತಿ ಕೊಡಲಿಲ್ಲವೆ? ||ನೂತನವೇಕಿನ್ನುಸೂರ್ಯಮಂಡಲ |ರೀತಿಯಾದನು ಸಿರಿಪುರಂದರವಿಠಲ 3
--------------
ಪುರಂದರದಾಸರು
ಮಾನವಜನ್ಮ ದೊಡ್ಡದು - ಇದ |ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಪ.ಕಣ್ಣು ಕೈಕಾಲ್ಕಿವಿ ನಾಲಗೆ ಇರಲಿಕ್ಕೆ |ಮಣ್ಣುಮುಕ್ಕಿ ಮರುಳಾಗುವರೆ ||ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು |ಉಣ್ಣದೆ ಉಪವಾಸವಿರುವರೇನೋ 1ಕಾಲನವರು ಬಂದು ಕರಪಿಡಿದೆಳೆವಾಗ |ತಾಳು ತಾಳೆಂದರೆ ಕೇಳುವರೆ ? ||ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ |ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ 2ಏನು ಕಾರಣ ಯದುಪತಿಯನು ಮರೆತಿರಿ |ಧ್ಯಾನ್ಯ - ಧನ -ಸತಿ - ಸುತರಿವು ನಿತ್ಯವೆ? ||ಇನ್ನಾದರು ಶ್ರೀ ಪುರಂದರವಿಠಲನ |ಚೆನ್ನಾಗಿ ಭಜಿಸಿ ನೀವ್ ಸುಖಿಯಾಗಿರಯ್ಯ 3
--------------
ಪುರಂದರದಾಸರು