ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವದೇವತೆಗಳ ಸ್ತುತಿ ಅಂಬುಧಿಶಯನ ಪೀತಾಂಬರಧರ ಕಮಳಾಂಬಕ ಸಿರಿರಮಣ ನಂಬಿದ ಭಕ್ತರ ಬೆಂಬಿಡದಿಹನೆಂಬುದಕೆ ಸಹಜಗುಣ ಪ ಒರಲುತ್ತಾ ಸಭೆಗೆ ಬರಲು ಒತ್ತಿ ಮುದ್ದಿಸುತಿರಲು ಪೊರೆದೆಯೋ ಧ್ರುವನ1 ಹರಿನಾಮವನು ಬರೆಯೆ ವಿರಚಿಸೆ ಕೇಳದಿರೆ ದುರುಳಬಾಧಿಸೆ ಮಗನ ಮೂರ್ತಿ ವರವಿತ್ತು ಪೊರೆದೆಯೋ ಪ್ರಹ್ಲಾದನ 2 ಶಾಪವನೀಯ ಲಗಸ್ತ್ಯನಿಂದ್ರದ್ಯುಮ್ನ ಭೂಪತಿ ಗಜವಾಗಲು ಕೋಪದಿ ನೆಗಲ್ವಿಡಿಯೊ ಗುಪಿತದಿ ಮೊರೆಯಿಡಲು ಸೀಳ್ದು ಪೊರೆದೆಯೋ ಗಜವ 3 ಮರ್ಮವನರಿತು ಬರಲು ಅನ್ನವನೀಯೆನಲು ಪೊರೆದೆಯೋ ಪಾಂಡುವರ 4 ಹರಿವಾಸವರವ ಮಾಡಲು ನರಿಯೆ ಬಂದು ವರವಿತ್ತು ಪೊರೆದೆಯೋ ವೇಣುಗೋಪಾಲ 5
--------------
ಕವಿ ಪರಮದೇವದಾಸರು
ನೂರೆಂಟು ನೆನೆದು ಫಲವೇನು ಈರೇಳು ಜಗದೊಡೆಯಹರಿಯನೊಮ್ಮೆ ನೆನೆ ಮನವೆ ಪ. ಧನದಾಸೆಗಳಲದಿರು ಭವದುಃಖ ಬಳಲದಿರುಜನಾರ್ದನನ ಮರೆಯದಿರು ಈ ತನುವ ಪೊರೆಯದಿರುಅನಘಜನರೊಡನಾಡು ದಿನದಿನ ಶುಭವಕೂಡುಇನಿತು ಜನಮವೆ ಸಾಕು ಇನ್ನು ಮುಕುತಿಯೆ ಬೇಕು 1 ಸಾಕು ದುರ್ಜನÀರಾಟ ಸಾಕು ಸತಿಯರ ಬೇಟಸಾಕು ಸವಿಯನ್ನದೂಟ ಸಾಕು ಘನಕೂಟಸಾಕು ದೇಶಕೆವೋಟ ಸಾಕು ಸಲೆ ಭವನೋಟಸಾಕದೆಲ್ಲ ಖಳಕೂಟ ಸಾಕುಮನೆ[ಮಠ] 2 ಕೇಳು ಹರಿಮಹಿಮೆಯನು ಪೇಳು ಹರಿನಾಮವನುಬಾಳು ಬಂದಷ್ಟರಿಂದ ತಾಳು ಹಸಿತೃಷೆಗಳಶ್ರೀಲಲನೆಯಾಳ್ದ ಹಯವದನ ಸಿರಿನರಹರಿಯಆಳುತನವನು ಬೇಡು ಕೀಳು ಬುದ್ಧಿಯ ದೂಡು 3
--------------
ವಾದಿರಾಜ
ಸೋತುಹೋದೆ ನಾನು ಶ್ರೀಹರಿ ಸೋತುಹೋದೆ ನಾನು ಪ ಪತಿತ ಪಾವನ ಮೂರ್ತಿಯ ಪ್ರೀತಿಯ ಸತತ ಪಡೆಯಲು ಕೆಲಸವ ಮಾಡಿ ಅ.ಪ. ನಿತ್ಯದಿ ಭಜಿಸುತ ಹರಿನಾಮವನು ಸತ್ಯಧರ್ಮದಿ ನಡೆಯುತಲೀ ಭ್ಯತ್ಯರಂದದಿ ಸೇವೆಯ ಮಾಡುತ ನಿತ್ಯನೆನಾ ಧನ್ಯಾತ್ಮನಾಗದೆ 1 ಪರಮಾತ್ಮನ ಕೀರ್ತನೆಯನು ಮಾಡುತ ಹರುಷದಿ ದಾಸನಾಗುತಲೀ ಹರಿಯ ಸಾಸಿರ ನಾಮವ ಸ್ಮರಿಸುತ ಶರಣಾಗತ ಪರಿಪಾಲನ ನೋಡಿದೆ 2 ಹೊನ್ನು ಹÉಣ್ಣು ಮಣ್ಣಿಗೋಸುಗ ಜನ್ಮವ ಮೋಹದಿ ನವಿಸದಲೇ ಚಿನ್ಮಯ ರೂಪನ ಪೂಜೆಯ ಮಾಡುತ ಚನ್ನಕೇಶವ ಪಾದವ ಸೇರದೆ 3
--------------
ಕರ್ಕಿ ಕೇಶವದಾಸ
ಸ್ಮರಿಸಿ ಸುಖಿಸೆಲೋ ಮಾನವಾ ಪ ಸರಸಿಜಾಸನ ಸತತ ನೆನೆವ ಹರಿನಾಮವನು ಅ.ಪ ಜವರಾಯ ಕಿಂಕರರ ಹಿಮ್ಮೆಟ್ಟಸಿದ ನಾಮ ಧ್ರುವರಾಯಗೊಲಿದ ಘನವು ಈ ನಾಮ ನವನೀತರೂಪದಿಂದ ಘನವ ತಾಳ್ದಿಹ ನಾಮ ಸುವಿಲಾಸದಿಂ ಪಾರ್ಥಗೊಲಿದಿರ್ಪನಾಮವನು 1 ಸನಕಾದಿ ಮುನಿಗಳು ಸತತ ಭಜಿಸುವ ನಾಮ ಅನಿಲಜಾತನಿಗೊಲಿದ ಪರಮನಾಮ ವನಚಾರಿಯಾಗಿದ್ದ ಶಬರಿಗೊಲಿದ ನಾಮ ವನಚರರ ಗರುವವನು ಮುರಿಯುವ ನಾಮ 2 ಪಾಂಚಾಲಿಗಕ್ಷಯದ ವರವನಿತ್ತಾ ನಾಮ ಪಾಂಚಜನ್ಯವ ಸಿರಿಯೊಳೆಸೆಯುತಿಹ ನಾಮ ವಂಚಕರ ಹೃದಯಗಳ ಭೇದಿಸುತ್ತಿಹನಾಮ ಚಂಚಲೆಯರುತ್ಸಾಹದಿಂ ಭಜಿಪ ನಾಮವನು 3 ದುರುಳದೈತ್ಯರ ಮನವ ಕದಡಿ ಕಲಕುವ ನಾಮ ಶರಣಾಗತಾವಳಿಯ ಪೊರೆಯುತಿಹನಾಮ ತರಳಪ್ರಹ್ಲಾದ ತಾ ಪಿತಗೊರೆವ ನಾಮವನು 4 ಮಾಂಗಿರೀ ವರಾಗ್ರದೊಳು ಮರೆಯುತಿಹ ಸಿರಿನಾಮ ಶೃಂಗಾರ ಶ್ರೀ ಪಾಂಡುರಂಗ ನಾಮ ಗಂಗಾಧರಾನುತ ಸುಖದಾತ ಶ್ರೀನಾಮ ಮಂಗಳಕರ ರಾಮದಾಸನುತ ನಾಮವನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹುಚ್ಚಾದೇನಣ್ಣಾ | ಮುಚ್ಚುಗೊಂಡು ನಾನು ಪ ಮರುಳು ಬೀಜಾಕ್ಷರನು1 ಕುಣಿದು ಕೂಗುವೆ ಹರಿನಾಮವನು 2 ಹಿಂದಾದಾ ನೆನೆಯದೆ ಮುಂದ ಹಂಬಲಿಸದೇ | ಬಂದದನುಂಡು ಕುಳ್ಳಿರುವೆನು 3 ಗಂಡು | ಜರಿದು ಬಲ್ಲವಿಕೆ ಹಮ್ಮವನು 4 ಗುರು ಮಹಿಪತಿ ಬೋಧಾ | ಹರಿಸೀ ಸಂಶಯ ಬಾಧಾ | ಮರೆಸಿತು ಅನ್ಯ ದಾರಿಯನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು