ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಿನ್ನೇಶದೂತರು ಎಳಿಯಾರೆ ಪ ಹಿಂದಿನ ದುಃಖವ ನೆನಸಿಕೊ | ನೀನು | ಬಂದದೆ ಒಂದೊಂದು ಗುಣಿಸಿಕೊ | ಮುಂದೀಗ ಎಚ್ಚತ್ತು ನೋಡಿಕೊ | ಇದು ಸಂದೇಹವೆನದೆ ನಿಜವಾಗಿ ತಿಳಿದಕೊ 1 ಗರ್ಭಯಾತನೆ ಬಲು ಹೇಸಿಕೆ | ವಳಗೆ | ನಿರ್ಬಂಧವಾಗಿ ಬೆಳೆದು ಮೇಲಕೆ | ದೊಬ್ಬುವರು ನಿನ್ನ ಕೆಳಿಯಿಕೆ | ಬಿದ್ದು ಅಬ್ಬಬ್ಬ ಐಯ್ಯಯ್ಯವೆಂದು ಅಳಲೇಕೆ2 ಬಾಯಿಗೆ ಬಜೆ ಬೆಣ್ಣೆ ಕೊಡುವರು | ತಾಯಿ | ಬಳಗವೆಲ್ಲ ಸಂತೋಷಬಡುವರು | ಆಯಿತು ಮಗುವೆಂದು ನುಡಿವರು | ಇವನ ಆಯುಷ್ಯ ಕಡಿಮೆಯೆಂದದು | ಅರಿಯದೆ ಕೆಡುವರು 3 ಚಿಕ್ಕಂದು ಎತ್ತಿ ಮುದ್ದಾಡಿ ಬೆಳಸಿ | ಅಕ್ಕರದಿಂದಲಿ ನೋಡಿ ಕೊಂಡಾಡಿ | ಫಕ್ಕನೆ ಕುಲಗೋತ್ರರ ಕೂಡಿ | ಒಬ್ಬ | ರಕ್ಕಸಿಯ ತಂದು ನಿನಗೆ ಜತಿ ಮಾಡಿ 4 ನೆಲೆ ಇಲ್ಲದ ಮಮತೆಯೊಳು | ಮುಳುಗಿ | ತಲೆಕೆಳಗಾಗಿ ನಡೆದು ಹಗಳಿರುಳು | ಕುಲನಾಶಕನೆಂಬೊದು ಬಾಳು | ಬಿಡು | ತಿಳಿಯ ಪೇಳುವೆನು ಎತಾರ್ಥವ ಕೇಳು5 ದುರ್ವಾಸನೆ ನಾರುವ ಬೀಡು | ಇದು | ಸ್ಥಿರವಲ್ಲ ಎಂದಿಗು ಹಂಬಲ ಬಿಡು | ಹರಿದಾಸರ ಸಂಗ ಮಾಡು | ಇನ್ನು | ಹರಿನಾಮಗಳ ಕೊಂಡಾಡು 6 ಆವಾವ ಜನ್ಮದಲಿ ನೀನು | ಒಮ್ಮೆ | ದೇವ ಎಂದೆನಲಿಕ್ಕೆ ನಾಲಿಗಿತ್ತೇನು | ಈ ಉತ್ತಮವಾದ ಈ ತನು | ಬಂತು | ಕೋವಿದನಾಗಿ ಶ್ರೀ ಹರಿಯನ್ನು ಕಾಣು7 ಆ ಮರ ಈ ಮರ ಎನಲಾಗಿ | ಅವನ | ತಾಮಸದ ಜ್ಞಾನ ಪರಿಹಾರವಾಗಿ | ಸ್ವಾಮಿಯ ದಯದಿಂದ ಮಹಯೋಗಿ | ಎನಿಸಿ | ಭೂಮಿಯೊಳಗೆ ಬಾಳಿದನು ಚನ್ನಾಗಿ 8 ಸಿರಿ | ರಂಗ ಯೆನಲಾಗಿ ಕಾಯ್ದ ಶ್ರೀಪತಿ | ವಿಜಯವಿಠ್ಠಲ ನಂಬು 9
--------------
ವಿಜಯದಾಸ
ಸಂಸಾರವನು ಮಾಡಿ ಸಕಲ ಜನರೂ ಪ ಕಂಸಾರಿ ಶ್ರೀಕೃಷ್ಣ ಕೈಪಿಡಿದು ಸಲಹುವನು ಅ.ಪ. ಬುದ್ಧಿಯೆಂದೆಂಬ ಕನ್ನಿಕೆಯ ಮದುವೆಯ ಮಾಡಿಸದ್ಧರ್ಮದಭಿಮಾನದಿಂದ ಬೆಳಸೀ ||ಶುದ್ಧ ಭಕ್ತಿಗಳೆಂಬ ಮಕ್ಕಳನು ಪಡೆದು ಬಹುಅದ್ಭುತ ಭವಾಬ್ಧಿಯನು ದಾಟಿರಯ್ಯಾ 1 ಚಾರು ಸುಜ್ಞಾನವೆಂಬುವ ಮುದ್ದು ಮಗನ್ಹಡೆದುವೈರಾಗ್ಯವೆಂಬ ಭಾಗ್ಯವನೆ ಬೇಡೀ ||ಸಾರ ಹರಿನಾಮಗಳ ರಸ ಪದಾರ್ಥಗಳುಣಿಸಿಕಾರುಣ್ಯದಲಿ ಬೆಳೆಸಿರಯ್ಯ ಮಕ್ಕಳನೂ 2 ಯಮ ನಿಯಮ ಅಷ್ಟಾಂಗ ಅಣಿಮಾದಿಗಳುಕ್ಷಮೆ ದಮಾದಿಗಳೆಂಬ ಬಂಧು ಬಳಗಾ ||ಮಮತೆ ಪೆರ್ಚಿಸಿಕೊಂಡು ಬೀಗತನ ಮೊದಲಾದಅಮರಿಕೆಯ ಸಂಬಂಧವನೆ ಮಾಡಿರಯ್ಯಾ 3 ಶೀಲ ಸನಕಾದಿಗಳು ಮುನಿ ದೇವತಾದಿಗಳುತಾಳಿ ತಮ್ಮೊಳಗೆ ಸಮ ವಿಷಯರಾಗಿ ||ಆಲಂಪಟಗಳ್ಹಚ್ಚಿಕೊಂಡು ಭವನಿಧಿ ದಾಟಿಸಾಲೋಕ್ಯ ಮೊದಲಾದ ಮುಕ್ತಿಗೈದಿದರೂ 4 ಸತಿ ಸುತರು ಭಾಗ್ಯವೆ ನಿಮಗೆಹರಿಯಿತ್ತ ಕಾಲಕ್ಕು ಹೃದಯದೊಳಗೇ ||ಮರೆಯಲಾಗದು ಹಿಂದೆ ಸಂಸಾರದಾ ಬಾಧೆ ದುರಿತಾರಿ ವ್ಯಾಸ ವಿಠ್ಠಲ ಬ್ಯಾಗ ಒಲಿವಾ 5
--------------
ವ್ಯಾಸವಿಠ್ಠಲರು
ಹೊಟ್ಟೆಪಾಡಿನ ಕೃತ್ಯವಲ್ಲವಿದು ವಿಠ್ಠಲನ ಸೇವೆ ಪ. ಶ್ರೇಷ್ಠ ಗುರುಗಳ ಆಜ್ಞೆಯಿಂದ ಮನ ಮುಟ್ಟಿ ನಡೆಸುವ ದಾಸವೃತ್ತಿಯು ಅ.ಪ. ವಂದನೆ ನಿಂದ್ಯಗಳನ್ನು ಗಮನಿಸದೆ ಇಂದಿರೇಶನ ಪದಕರ್ಪಿಸುತ ಮಂದಭಾಗ್ಯರ ಮಾತನೆ ಗಣಿಸದೆ ಬಂದ ಭಯಗಳ ದೂರೋಡಿಸುತಲಿ 1 ಆಶಪಾಶಗಳ ನಾಶಗೈಸಿ ಮನ ಕ್ಲೇಶಪಡದೆ ಸಂತೋಷಿಸುತ ವಾಸುದೇವ ಆನಂದಪೂರ್ಣ ಸ ರ್ವೇಶ ನಿನಗೆ ನಾ ದಾಸನೆಂತೆಂಬುದು 2 ಗೆಜ್ಜೆ ಕಾಲಿಗೆ ಕಟ್ಟಿ ತಾಳವ ಲಜ್ಜೆಯ ತೊರೆದು ಬಾರಿಸುತ ಮೂರ್ಜಗದೊಡೆಯ ಜಗಜ್ಜನ್ಮಾಧಿಕಾರಣನೆಂದು ಘರ್ಜಿಸುತಲಿ ಸಂಚಾರಮಾಳ್ಪುದೆ 3 ಇಂದು ನಾಳೆಗೆಂಬೋ ಮಂದಬುದ್ಧಿಯ ಬಿಟ್ಟು ಬಂದದರಿಂದಾನಂದಿಸುತ ತಂದೆ ಮುದ್ದುಮೋಹನದಾಸರ ಪದ ದ್ವಂದ್ವವ ಭಜಿಸುತ ಮುಂದೆ ಸಾಗುವುದು 4 ಗುರುಗಳ ಕರುಣದಿ ಅಂಕಿತ ಪಡೆಯಲು ದೊರೆವುದು ದಾಸತ್ವದ ಸಿದ್ಧಿ ಅರಿಯದೆ ವೇಷವ ಧರಿಸಿ ಮೆರೆದರೆ ಸಿರಿವರ ಮೆಚ್ಚನು ಗುರುವು ಒಲಿಯನು 5 ಉಚಿತ ಧರ್ಮಕರ್ಮಗಳನೆ ಮಾಡುತ ಖಚಿತ ಜ್ಞಾನ ಮನದಲಿ ತಿಳಿದು ವಚನದಿ ಹರಿನಾಮಗಳನೆ ನುಡಿಯುತ ಶುಚಿರ್ಭೂತರಾಗಿ ಆನಂದಪಡುವುದು 6 ದುಷ್ಟರ ತೊರೆದು ಶಿಷ್ಟರೊಳಾಡುತ ಶ್ರೇಷ್ಠವಾದ ದಾಸತ್ವದಲಿ ಬಿಟ್ಟು ಪ್ರಪಂಚವ ಸೃಷ್ಟೀಶ ಗೋಪಾಲ ಕೃಷ್ಣವಿಠಲನು ಶ್ರೇಷ್ಠದಿ ಭಜಿಪುದು 7
--------------
ಅಂಬಾಬಾಯಿ
ಅಂದೆ ನಿರ್ಣಯಸಿದರು ಕಾಣೋ |ಇಂದಿರಾಪತಿ ಪರದೈವತವೆಂಬುದ ಪಅಂದು ಚತುರ್ಮುಖ ನಾರದನಿಗೆ ತನ್ನ |ತಂದೆ ಶ್ರೀಹರಿ ಪರದೈವವೆಂದು ||ಸಂದೇಹಗಳ ಪರಿಹರಿಸಿಹ ದ್ವಿತೀಯದಸ್ಕಂಧದೊಳಯ್ದನೆಯ ಅಧ್ಯಾಯದಲಿ 1ಅಂದು ಕಪಿಲದೇವ ದೇವಹೊಲೆಗೆ ತಾನು |ಚೆಂದದ ತತ್ತ್ವವನೆಲ್ಲ ಬೋಧಿಸಿದ ||ಅಂದದಲರ್ಜುನ - ಉದ್ದವರಿಗೆ ಅಂದಾ - |ನಂದದಿ ಗೀತಾಶಾಸ್ತ್ರವನೊರೆದನೆಂದು 2ವೇದೈಶ್ಚ ಸರ್ವೋರಹಮೇವ ವೇದ್ಯಃ |ವೇದವಿಧಾಯಕ ನಾಮದವನು ||ವೇದಾಕ್ಷರಗಳು ಹರಿನಾಮಗಳೆಂದು |ವೇದಾಂತ ಸಿದ್ಧಾಂತಗಳಲಿ ಪೇಳಿದರೆಂದು 3ರಾಜಸ -ತಾಮಸ ಪೌರಾಣಗಳಿವು |ರಾಜಸ -ತಾಮಸ ಜೀವರಿಗೆ ||ರಾಜಸ -ತಾಮಸ ಗತಿಗೋಸ್ಕರ ಮುನಿ - |ರಾಜ ವ್ಯಾಸನು ಮೋಹಕವೆಂದು ಪೇಳಿದ 4ಬಿಡು ಪಾಷಂಡಮತದ ದುರ್ಬುದ್ಧಿಯ |ಬಿಡದೆಮಾಡು ವೈಷ್ಣವಸಂಗವ ||ಧೃಡಭಕ್ತಿಯಿಂದ ಶ್ರೀಹರಿಯ ಪೂಜಿಸಿದರೆ |ಮೃಡಪ್ರಿಯ ಪುರಂದರವಿಠಲನೊಲಿವನೆಂದು 5
--------------
ಪುರಂದರದಾಸರು