ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂರಿಗೊಳಗಹುದೇನೆಲೊ ಬರಿ ದೂರಿಗೊಳಗಹುದೇನೆಲೊ ಹರಿಧ್ಯಾನವನು ನೀ ಮಾಡದೇ ಪ ಅಪರೂಪ ಜನ್ಮವು ಬಂದಿದೆ ಕಪಿಚೇಷ್ಟೆಗಳು ನಿನ್ನ ಹೊಂದಿದೆ ಜಪ ಶಾಸ್ತ್ರದೊಳು ಹೀಗೆಂದಿದೆ 1 ಕಟಪತನಗಳದ್ಯಾತಕೋ ಯಿದು ತ್ರಿಪುಟಿಯೊಳಗದು ನೀತಿಕೋರ ನ ಪರನಾಗಲಿದ್ಯಾಕೊ ನೋಡದ ಗುಪಿತದಿಂದಲಿ ಭಜಿಸದೆ 2 ನಾನು ನನ್ನದು ಎಂಬುವೇ ಅಲ್ಲಿ ಗೇನು ಬಂದರು ತಿಂಬುವೇ ಹಾನಿಗೊಳಗಾಗಿ ನಮ್ಮಯ ಶ್ರೀನಿವಾಸನ ಭಜಿಸದೆ 3 ಎಂಟುಗೇಣಿನ ದೇಹವು ಅದು [ಕುಂಟು]ಸೋಹಮಸ್ಮಿಯ ಭಾವವು ಕಂಟಕಾಂತಕ ತಲಸಿಮದ್ಗುರು ವುಂಟು ನಿನ್ನೊಳಗರಿಯದೆ 4
--------------
ಚನ್ನಪಟ್ಟಣದ ಅಹೋಬಲದಾಸರು
ಶ್ರೀ ರಮಣಪತಿ ವಿಠಲ ನೀ ಕರುಣಿಸೋ |ಮಾರಪಿತ ಮರುತ ಮನೆಮಂದಿರ ನಿವಾಸಾ ಪ ಉದಯದಲಿ ಎದ್ದು ಹರಿಧ್ಯಾನವನು |ಮುದದಿಂದ ಬ್ಯಾಸರದೆ ನಿರುತ ಮಾಡಿ |ಸದಮಲ ಶ್ರೀ ಮುದ್ರಿಊಧ್ರ್ವಪುಂಡ್ರವ |ಪದುಮಾಕ್ಷಿ ಶ್ರೀತುಲಸಿಸರಗಳಿಂದಾ 1 ಸಿರಿ ಬೊಮ್ಮ ಪಂಚಭೇದ ಜ್ಞಾನದ, ತತ್ವವಿಚಾರ |ಹರಿದಾಸ ಸಹವಾಸ ಸರ್ವದಾ ಕೊಟ್ಟು 2 ಶ್ರೀಶ ಪ್ರಾಣೇಶ ವಿಠ್ಠಲರಾಯನೇ ನಿನ್ನ |ದಾಸತ್ವವನೆ ಕೊಟ್ಟು ಉದ್ಧರಿಪದೋ ||ಲೇಸಾಗಿ ಪ್ರಾರ್ಥಿಸದೆ ಎನ್ನ ಭಿನ್ನಪವು ಉ |ದಾಸಿಸದೆ ನೀ ಕರುಣಿಸೆಂದು ದಿನದೇ 3
--------------
ಶ್ರೀಶಪ್ರಾಣೇಶವಿಠಲರು