ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾರಿ ಒಳ್ಳೇದಾಗಿರಬೇಕೂ ಹರಿದಾಸನಾದ ಮೇಲೆ ಪ ಯಾರೇ ಬಂದರೂ ಸರಿ ಯಾವ ಕಾಲದಲ್ಲಿಯು ಪಾರಗಾಣದಂಥಾ ಈ ಸಂಸಾರವಾರ್ಧಿ ದಾಟುವದಿಕ್ಕೆ ಅ.ಪ ಜ್ಞಾನ ಭಕ್ತಿ ದಾನಧರ್ಮ ವೈರಾಗ್ಯದಿ ಸದ್ಗುಣಂಗಳು ತಾನೆ ತಾನಾಗೆಲ್ಲವು ಸ್ವಾಧೀನವಾಗಿರಬೇಕಾದರೆ 1 ಓದಿದರ್ಥ ಮನಕೆ ತಿಳಿದು ನಿರತವು ಸಾಧನವು ಮಾಡುತ ಅ- ನಾದಿ ಸಿದ್ಧವಾದ ತತ್ವದ ಹಾದಿ ಕಾಣಬೇಕಾದರೆ 2 ತಾಮಸಾದಿ ದುರ್ಗುಣ ನಿರ್ನಾಮವಾಗಿ ಪ್ರೇಮದಿಂ ಗುರುರಾಮವಿಠಲನ್ನ ನೆನೆವದಕ್ಕೆ 3
--------------
ಗುರುರಾಮವಿಠಲ
ಪುರಂದರ ದಾಸರಾಜಾಪದಾಸರಾಜ ಹರಿದಾಸಪೀಠ ಸಂ-ಸ್ಥಾಪಿಸಿ ಘೋಸಿ ಬೆಳೆಸಿದ ಧೀರಾ 1ವ್ಯಾಸರಾಯರಿಂದ ದಾಸದೀಕ್ಷೆಯನುನೀ ಸ್ವೀಕರಿಸಿದಿ ಭೂಸುರವಂದ್ಯಾ 2ಶ್ರೀನಿವಾಸ ನವಕೋಟಿ-ನಾರಾಯಣದಾನ ಧರ್ಮದಲಿ ಬಲು ಜಿಪುಣಾ 3ಭೂಸುರ ವೇಷದಿ ದೇಶಾವರಿಗೆಶ್ರೀಶ ಬಂದರೆ ಷಣ್ಮಾಸ ಕಾಡಿದೆಯ 4 ಸಾಪಾದ ಪೈಸಾಗಳ ರಾಶಿ ಸುರು' ನೀಒಂದು ಪೈಸೆ ಆರಿಸಿಕೊ ಎಂದಿ 5ಸೋತು ಶ್ರೀಹರಿಯು ನಿನ್ನ ಸತಿಗೆ ಮೊರೆುಡೆಪತಿವ್ರತೆ ಕೊಟ್ಟಳು ರತ್ನದ ಮೂಗುತಿ 6ಭೂಪತಿ'ಠಲನು ಚಮತ್ಕಾರ ತೋರಿಸಿದಾಕ್ಷಣ ನೀ ಹರಿದಾಸನಾದೆಯೊ 7
--------------
ಭೂಪತಿ ವಿಠಲರು
ಭಾರತೀಶ ಹರಿದಾಸನಾದನಿಲ್ಲೀ ವೀಣೆಯ ಧರಿಸುತಲೀ ಪ. ಭಾರಿಭಾರಿಗವತಾರ ಮಾಡಿ ಬಳಲೀ ಆನಂದದಲ್ಲೀ ಅ.ಪ. ತ್ರೇತೆಯಲ್ಲಿ ಶ್ರೀ ರಾಮದೂತನಾಗಿ ತನುಸುಖವ ನೀಗಿ ಪ್ರೀತಿ ಭಕ್ತಿಯಲಿ ರಾಮ ಕಾರ್ಯಕಾಗಿ ತನುವಪ್ಪಿಸಿ ಬಾಗಿ ಖ್ಯಾತಿ ಪಡೆದು ಶರಧಿಯ ಲಂಘಿಸಿ ಪೋಗಿ ಸೀತೆಯ ಕಂಡೆರಗಿ ವೀಹೋತ್ರಗೆ ಪುರವಪ್ಪಿಸಿ ತಿರುಗೀ ರಾಮರ ಕಂಡೆರಗಿ 1 ಕುಂತಿಯ ಜಠರದಿ ಜನಿಸಿ ಭೀಮನೆನಿಸೀ ಬಕಮುಖರನೆ ಜೈಸಿ ಸಂತೋಷದಿ ಸೌಗಂಧ ಸತಿಗೆ ಸಲಿಸೀ ಕೌರವರ ಸಂಹರಿಸೀ ಅಂತರಂಗದಲಿ ಕೃಷ್ಣನಂಘ್ರಿ ಭಜಿಸಿ ಪಾಂಡವರನೆ ಮೆರಸೀ ಕಂತುಪಿತನ ಕಡುಕೃಪೆಯ ಪಡೆದು ಸುಖಿಸೀ ಮೇಲ್ತೋರದೆ ಸ್ಮರಿಸೀ 2 ಮೂರನೆ ರೂಪದಿ ಮುನಿಯಾಗವತರಿಸೀ ದುರ್ಮತಗಳ ಜೈಸೀ ಸಾರತತ್ವಮತ ಸಜ್ಜನರಿಗೆ ತಿಳಿಸೀ ಸರ್ವೋತ್ತಮ ಹರಿ ಎನಿಸೀ ಆರು ಅರಿಯದಂತೆ ದಾಸತ್ವವಚರಿಸೀ ದುರ್ಮತಗಳ ಜೈಸೀ ತೋರಿ ತೋರದಂತೆ ಸದ್ಗ್ರಂಥದಿ ತಿಳಿಸೀ ಯತಿ ಕುಲಜರೋಳ್ ನಿಲಿಸೀ 3 ಮೀಸಲ ದಾಸ್ಯವ ಮೂರವತಾರದಲ್ಲಿ ಚರಿಸಲು ಕಲಿಯಲ್ಲೀ ವ್ಯಾಸ ಮುನಿಯು ಬಹಿರಂಗಪಡಿಸೆ ಚಲ್ಲೀ ನಾರದ ಮುನಿಯಲ್ಲೀ ಪುರಂದರ ಗುರುವೆನಿಸುತಲೀ ಮೆರೆಯಲು ಜಗದಲ್ಲೀ ಮೀಸಲು ಉಳಿಯದೆ ಪೋಯಿತೆಂದು ಇಲ್ಲೀ ದಾಸ ತಾನಾಗುತಲೀ 4 ದಾಸತನದ ಆನಂದವನನುಭವಿಸೇ ದೇವತೆಗಳು ಬಯಸೇ ಭೂಸುರ ಜನ್ಮದಿ ಭೂಮಿಯಲವತರಿಸೇ ಹರಿದಾಸರಾಗಿ ಸುಖಿಸೇ ವಾಸುದೇವಗೆ ತಾ ನಿಜದಾಸನು ಎನಿಸೇ ಮಾರುತಿ ಇದ ಬಯಸೇ ಶ್ರೀಶ ಗೋಪಾಲಕೃಷ್ಣವಿಠಲದಾಸಾ ಬೆಳಗಾವಿ ವಾಸಾ 5
--------------
ಅಂಬಾಬಾಯಿ
ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು ವಿಷ್ಣುನರಿತವನೆ ವೈಷ್ಣವನು| 1 ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ ಯುಕ್ತಿ ತಿಳಿದವನೆ ವೈಷ್ಣವನು 2 ಹರಿ ಪರಂದೈವೆಂದು ಹರಿಯ ಕೊಂಡಾಡುತಲಿ ಹರಿಯ ನೆನೆಯುವನೆ ವೈಷ್ಣವನು 3 ಹರಿ:ಓಂ ತತ್ಸದಿತಿಯೆಂಬ ಹರಿವಾಕ್ಯವನು ಅರಿತವನೆ ಪರಮ ವೈಷ್ಣವನು 4 ಹರಿಧ್ಯಾನ ನೆಲೆಗೊಂಡು ಹರಿನಾಮ ಬಲಗೊಂಡು ಹರಿಯ ಸ್ಮರಿಸುವವನೆ ವೈಷ್ಣವನು 5 ಪರದೆ ಇಲ್ಲದೆ ಪಾರ ಬ್ರಹ್ಮಸ್ವರೂಪನು ಗುರುತ ಕಂಡವನೇ ಪರಮ ವೈಷ್ಣವನು6 ಗುರುಕೃಪೆಯಿಂದ ಪರಗತಿ ಸಾಧನವು ಮುಟ್ಟಿ ಅರಿತು ಬೆರೆದನೆ ಪರಮ ವೈಷ್ಣವನು 7 ಮೂಲ ಮೂರುತಿಗ್ಯಾಗಿ ಮೇಲಗಿರಿಯನೇರುವ ಕೀಲ ತಿಳಿದವನೆ ವೈಷ್ಣವನು 8 ಉಂಟಾಗಿ ಇರುಳ್ಹಗಲಿ ಗಂಟ್ಹಾಕಿ ಹರಿಪಾದ ಬಂಟನಾದವನೆ ವೈಷ್ಣವನು 9 ಕಂಟಕ ನೀಗಿ ಮೂರು ಬಲೆಯನು ದಾಟಿ ಮೀರಿ ನಿಂದವನೇ ವೈಷ್ಣವನು 10 ಆಶಿಯನೆ ಜರಿದು ನಿರಾಶೆಯನು ಬಲಿದು ಹರಿದಾಸನಾದವನೆ ವೈಷ್ಣವನು 11 ದ್ವಾದಶನಾದವನು ಸಾಧಿಸಿ ಕೇಳುತಲಿ ಭೇದಿಸಿದವನೆ ವೈಷ್ಣವನು 11 ಅನುದಿನ ಘನಸುಖವು ಅನುಭವಿಸುವನೆ ವೈಷ್ಣವನು 12 ವಿಷ್ಣುಭಕ್ತಿಯ ಸುಖವು ಮುಟ್ಟಿ ಮುದ್ರಿಸಿ ಪುಷ್ಟವಾಗಿದೋರುವನೆ ವೈಷ್ಣವನು 13 ವಿಷ್ಣುಮೂರ್ತಿಯ ಧ್ಯಾನ ದೃಷ್ಟಾಂತ ಮಹಿಪತಿಗೆ ಕೊಟ್ಟಾ ಗುರು ಪರಮ ವೈಷ್ಣವನು 14
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿದಾಸನಾದರೆ ಹ್ಯಾಂಗಿರಲಿ ಬೇಕು ನರಲೋಕದ ಚಿಂತೆ ಬಿಟ್ಟುಕೊಡಬೇಕು ಪ ಇಂದ್ರಿಯಗಳನ್ನೆಲ್ಲ ಗ್ರಹಿಸಬೇಕು ಬಂದದೆಲ್ಲ ಬರಲಿ ಈಗಲೇ ಎನಬೇಕು ಅಂದವರು ಎನಗೆ ಬಂಧುಗಳು ಎನಬೇಕು 1 ಸ್ನಾನವನು ಬಿಟ್ಟು ಹರಿಕಥೆಯ ಕೇಳಲಿ ಬೇಕು ಮಾನಾಭಿಮಾನಕ್ಕೆ ಹರಿತಾನೆ ಎನಬೇಕು ಏನಾದರಾಗಲಿ ಸುಖಬಡಲಿಬೇಕು 2 ಇರಳು ಹಗಲು ಹರಿಸ್ಮರಣೆ ಮಾಡಲಿ ಬೇಕು ಪರಲೋಕದ ಗತಿ ಬಯಸಬೇಕು ಗುರುಹಿರಿಯರಿಗೆ ವಂದನೆಯ ಮಾಡಲಿ ಬೇಕು ದುರುಳರನ ಕಂಡರೆ ದೂರಾಗಬೇಕು 3 ತಾವರೆಮಣಿ ತುಲಸಿಸರವ ಧರಿಸಲಿಬೇಕು ಭಾವಶುದ್ಧನಾಗಿ ತಿರುಗಬೇಕು ಕೋವಿದರೆ ಸಂಗಡ ಕೂಡ್ಯಾಡುತಿರಬೇಕು ಪಾವಕನಂತೆ ಇಂಪವ ಕಾಣಬೇಕು 4 ಅನ್ನಪಾನಾದಿಗಳಿಗವಸರ ಬೀಳದಿರಬೇಕು ಕಣ್ಣಿದ್ದು ಕುರುಡನೆಂದೆನಿಸಬೇಕು ಚೆನ್ನಾಗಿ ವಾಯುಮತದಲ್ಲಿ ನಿಂದಿರಬೇಕು ತನ್ನೊಳಗೆ ತಾ ತಿಳಿದು ನಗುತಲಿರಬೇಕು 5 ಬಿಂಬ ಮೂರುತಿಯ ಹೃದಯದಲಿ ನಿಲಿಸಲಿ ಬೇಕು ಡಂಭಕ ಭಕುತಿಯ ಜರಿಯ ಬೇಕು ಡಿಂಬುವನು ದಂಡಿಸಿ ವ್ರತವ ಚರಿಸಲಿ ಬೇಕು ನಂಬಿ ನರಹರಿಪಾದವೆನುತ ಸಾರಲಿ ಬೇಕು6 ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು ಮರುತನೆ ಜಗಕೆ ಗುರುವೆನಲಿ ಬೇಕು ಪುರಂದರದಾಸರೇ ದಾಸರೆಂದನ ಬೇಕು ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು 7
--------------
ವಿಜಯದಾಸ