ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಿ ಪಿಡಿಯಾ ಕೈಯ್ಯಾ | ಗುರುರಂಗವೊಲಿದರಾಯ ಪ ನಂಬಿದೆ ನಿನ್ನ ಚರಣ | ಬೆಂಬಿಡದೆ ಕಾಯೋ ಸತತ ಸ್ತಂಭದಲಿ ನೆಲಸಿದಂಥ | ಕುಂಭಿಣಿಪ | ದಾಸವರ್ಯ 1 ದೀನರ್ಗೆ ದಿವಿಜಧೇನು | ನೀನೆಂದು ಕ್ಷೋಣಿ ತಳದಿ ಜ್ಞಾನಿಗಳು ಪೇಳಿದಂಥ ವಾಣಿಯನು ಸತ್ಯಮಾಡೊ 2 ನಿನ್ನ ಸ್ಥಳವು ಪುಣ್ಯಕ್ಷೇತ್ರ | ನಿನ್ನಲ್ಲಿ ಸಕಲ ತೀರ್ಥ ನಿನ್ನ ಕವನ ಮಧ್ವಶಾಸ್ತ್ರ | ನಿನ್ನವನು ನಿಜಕೃತಾರ್ಥ3 ಹರಿದಾಡುವಂಥ ಮನಸು | ಹರಿಯಲ್ಲಿ ಸ್ಥಿರವಗೊಳಿಸೊ ಹರಿನಾಮ ಸುಧೆಯ ಕುಡಿಸೊ | ಹರಿವರನ ಮತವ ಪಿಡಿಸೊ 4 ಮತಿಭ್ರಷ್ಟನಾಗಿ ನಿನ್ನ ಕೃತಿಗಳನು ಪಾಡದ್ಹೋಗಿ ಕ್ಷಿತಿ ಭಾರನಾದೆ ಮುಂದೆ ಗತಿ ತೋರಿ ಸಲಹೊ ತಂದೆ 5 ಹೆತ್ತವರು ಸುತನ ದೋಷ | ಕೃತ್ಯಗಳ ಕ್ಷಮಿಸದಿಹರೆ ಚಿತ್ತೈಸು ಎನ್ನ ಮಾತ | ಉತ್ತಮರ ಸಂಗವಿತ್ತು 6 ತಳೆದೇಳು ಜನುಮಗಳಲಿ | ಇಳೆಯೊಳಗೆ ಚರಿಪ ಸಮಯ ಸುಳಿದಾಡು ಮತ್ತೊಮ್ಮೆ ಘೋರ ಕಲಿಬಾಧೆ ತಪ್ಪಿಸಯ್ಯ 7 ಮಾನವಿಯ ಸ್ಥಾನದಲ್ಲಿ | ನೀನಿರಲು ನಿನ್ನ ಮರೆದು ಮೋದ 8 ಕಂದರ್ಪಜನಕ ಶಾಮಸುಂದರ ಮೂರ್ತಿಹೃದಯ ಮಂದಿರದಿ ತೋರೋದಾತ ವಂದಿಸುಎ ನಿನ್ನ ಪದಕೆ 9
--------------
ಶಾಮಸುಂದರ ವಿಠಲ
ಹರಿದಾಡುವಂಥ ಮನವ ನಿಲಿಸುವುದು ಬಲುಕಷ್ಟ ಪ ಉರಿಯನಪ್ಪಲು ಬಹುದು ಗರಳವನು ಕುಡಿ ಬಹುದು ಕರಿಯ ದಾಡೆಗೆ ಸಿಕ್ಕು ಮರಳಿ ಜೀವಿಸ ಬಹುದು 1 ಗಗನ ಕೇಣಿಯ ಸಾರ್ಚಿ ಮುಗಿಲ ಮುಟ್ಟಲು ಬಹುದು ಅಗಜೆಯರಸನ ಉರಿಯ ನಯನ ಕಾನಲು ಬಹುದು ಹೊಗರು ಧೂಮವ ಹಿಡಿದು ಹಸುಬೆ ತುಂಬಲು ಬಹುದು 2 ಮಳಲ ಗಾಣಕೆಯಿಕ್ಕಿ ತೈಲಗಾಣಲು ಬಹುದು ಹುಲಿಯ ಹಿಡಿದು ಕಟ್ಟಿ ಹಾಲ ಕರೆಯಲು ಬಹುದು ಬಿಳಿಗಲ್ಲ ಬೆಣ್ಣೆವೋಲ್ ಜಗಿದು ನುಂಗಲು ಬಹುದು 3 ಅಸಿಯ ಧಾರೆಯ ಮೇಲೆ ನಾಟ್ಯ ವಾಡಲು ಬಹುದು ವಿಷದ ಉರುಗನ ಕೂಡೆ ಸರಸವಾಡಲು ಬಹುದು 4 ಮರುತ ಸುತನ ಕೋಣೆ ವಾಸ ಲಕ್ಷ್ಮೀಶನ ದುರಿತ ನಾಶನವಹುದು ಮರಳಿ ಜನ್ಮಕೆ ಬಾರದಂಥ ಪದವಿಯಹುದು5
--------------
ಕವಿ ಪರಮದೇವದಾಸರು
ಹರಿದಾಡುವಂಥ ಮನವ ನಿಲಿಸುವುದು ಬಹುಕಷ್ಟ ಪ.ಕಾಶಿಗೆ ಹೋಗಲುಬಹುದುದೇಶ ತಿರುಗಲುಬಹುದುಆಶೆ ಸುಟ್ಟು ತಾನಿರಬಹುದು 1ಜಪವ ಮಾಡಲುಬಹುದುತಪವ ಮಾಡಲುಬಹುದುಉಪವಾಸದಲ್ಲಿ ತಾನಿರಬಹುದು 2ಸ್ನಾನ ಮಾಡಲುಬಹುದುದಾನ ಮಾಡಲುಬಹುದುದ್ಯಾನದಿ ಪುರಂದರವಿಠಲನ ಚರಣದಿ 3
--------------
ಪುರಂದರದಾಸರು