ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಧರೆಯೊಳಗಿಂಥಾ ಸೊಬಗ ಕಾಣೆನೋ ಪ ಕಂತುಪಿತ ತನ್ನ ಕಾಂತೇಯರೊಡಗೂಡಿ | ನಿಂತು ಮಜ್ಜನಗೊಂಡು ಸಂತಸವಾಂತಪರಿಅ.ಪ ನಂದಾವ್ರಜದಿ ಇಂದ್ರನೂ | ಕುಪಿತನಾಗಿ | ಅಂಧವೃಷ್ಟಿಯ ಕರೆಯಲು | ಸಿಂಧೂಶಯನ ಗಿರಿಯ | ಮಂದಹಾಸದಿ ನೆಗಹಿ | ಸುಂದರ ಗೋವ್ಗಳನೆ | ಚೆಂದಾದಿಂದಲೆ ಪೊರೆಯೆ | ಅಂದು ತೋರಿದುಪಕೃತಿಯ ನೆನೆದು ಗೋ | ವೃಂದಗಳೈ | ತಂದಿಂದಿರೆಯರಸಗೆ | ಮಿಂದು ಮಧುರಕ್ಷೀರಧಾರೆಯ ಕರೆಯಲು | ನಂದಕುವರಾನಂದವ ಬೀರಿದ 1 ಕಿರಿಯರೊಡನೆ ಕೂಡುತ | ಗೋಪಾಲನು | ಮುರಲಿನಾದವ ಗೈಯುತ | ಹರಿಣಾಕ್ಷಿಯರಮನೆ | ಹರುಷದಿಂದಲೇ ಪೊಕ್ಕು | ಪರಿಪರಿ ಲೀಲೆಯಿಂ | ಬೆರಗು ಮಾಡುತಲಿರೆ | ವರ ಧದಿಘೃತ ಭಾಂಡಗಳನೊಡೆದು | ಯದುವರನಾಲೈಸುತ ಬರುವರ ಸುಳಿವನು | ಸರಸದಿ ಕಂಡಾಕ್ಷಣದಿಂದೋಡಲು | ಸುರಿದುದು ಶಿರದಲಿ ದಧೀಘೃತಧಾರೆಯು 2 ಕರುಣಾಸಾಗರ ಹರಿಯು | ಮೋಹದಿ ವರ | ಭೈಷ್ಮಿಭಾಮೇರ ಕೂಡುತಾ | ಭರದಿ ಕುಣಿಯಲವರ ಶಿರದಿ ಮುಡಿದ ಸುರಗೀ | ಅರಳುಮಲ್ಲಿಗೆಯೊಳು | ಸೆರೆಬಿದ್ದ ಮಧುಪಗಳ | ನೆರೆದು ಝೇಂಕರಿಸುತ | ಹರುಷದಿ ಸುರಿಸಲು ಸುರ ಸಂದೋಹವು | ಪರಿ 3 ಅಂಗಳದೊಳು ಆಡುತ | ಮಂಗಳಮೂರ್ತಿ | ಸಂಗಡಿಗರ ಸೇರುತಾ | ಮುಂಗುರುಳ್ಗಳ ಮೇಲೆ | ಕೆಂದೂಳಿಯನೇ ಧರಿಸಿ | ಗೋಪಿ ರಂಗನ್ನಪ್ಪಿದಳು ಮುದದೀ || ಅಂಗನೆ ರುಕ್ಮಿಣಿ ಭಂಗಿಯ ನೋಡಲು | ಅಂಗಜ ಪಿತನನು | ಪಿಂಗದೆ ಬೇಡಲು | ಮಂಗಳಾಂಗಿ ಮನದಿಷ್ಟವ ಸಲಿಸಲು | ಸಿಂಗರಗೊಂಡನು | ಸಕ್ಕರೆ ಸುರಿಸುತೆ 4 ಸುರನದೀ ಜನಕ ತಾನೂ | ಕುಂಜವನದಿ | ಸರಸಿಜಾಕ್ಷೇರ ಕೂಡುತ | ಸರಸವಾಡುತಲಿರೇ | ಪರಮ ಸಂತೋಷದಿ | ತರುಲತೆಗಳು ಹರಿಯ ಚರಣ ಸೇವೆಯಗೈಯ್ದು | ಕದಳಿಗಳುದುರಿಸೆ | ಗಳಿತ ಫಲಂಗಳು | ಸರಸಿಜನಾಭನು ಕರುಣಿಸಿ ಭಕುತರ | ಶಿರಿಯಾಳಪುರದೊಳು ಮೆರೆದನು ವಿಭವದಿ 5 ವ್ಯಾಸರಾಜರ ಪೀಠದೀ | ರಂಜಿಪ ಲಕ್ಷ್ಮೀಶತೀರ್ಥರಿಂ ಸೇವಿಪ ಭವ | ಪರಿಪರಿ ನರಳುವ ದಾಸರ ಸಲಹಲಿನ್ನು | ಸಾಸಿರ ಶಂಖದಿ ಪೂಜೆಯಗೊಳುತಿರೆ | ದೇಶದೇಶದ ಜನರಾಲಿಸಿ ಬರುತಿರೆ | ಶ್ರೀಶಕೇಶವ ತನ್ನ ಮಹಿಮೆಯ ತೋರಿದ 6
--------------
ಶ್ರೀಶ ಕೇಶವದಾಸರು
ಚರಿತೆಯ ಪೇಳಬೇಕೆ ಪ ಕೊರತೆಗಳೆಣಿಸದೆ | ಸ್ಥಿರಸುಖದೊಳು ಬಾಳಿ ಅ.ಪ ಚದುರ ಚೆನ್ನಿಗ ಮುದ್ದು | ಪದುಮದಳಾಕ್ಷನ 1 ಕಾಲಿನೊಳೊದೆದೆಲ್ಲ | ಶ್ರೀಲೋಲನುಣಲೊಲ್ಲ 2 ಹರಿಣಾಕ್ಷಿಯರಿರೇನು | ಮರುಳರಂತೊರೆವಿರೆ 3 ಮೆಚ್ಚಿನ ಮಾತಿದು | ಸಚ್ಚರಿತವಿದೆಂದು 4 ಬಿಗಿವೆ ಸದಾನಂದ | ವಾಗಲಿ ನಿಮಗೆಲ್ಲ 5
--------------
ಸದಾನಂದರು
ತನುವೆನ್ನದು ಚೇತನವೆನ್ನದು ಎಂದು ಅನುದಿನ ಪೋಷಣೆಯನು ಮಾಡಿದೆ ಹರಿ ಪ ಚಿನುಮಯ ನಿನ್ನನು ನೆನೆವೆನೆಂದರೆ ಮನ ತನುಮಧ್ಯೆಯರ ತನುವಿನೊಳಿರುತಿಹುದು ಅನಘ ನಿನ್ನನು ನೋಡುವೆ ನಾನೆನ್ನಲು ದೃಷ್ಟಿ ಕನಕಾಂಗಿಯರ ಕುಂಭಸ್ತನದ ಮೇಲಿಹುದಯ್ಯ1 ಚರಣದ ಪೂಜೆಯೊಳಿರುವೆನೆಂದರೆ ಕರವರೆಡು ಕೋಮಲೆಯರನರಸುವುವು ಹರಿಕಥಾಶ್ರವಣದೊಳಿರೆ ಈ ಕಿವಿಗಳು ಹರಿಣಾಕ್ಷಿಯರ ಕಂಠಸ್ವರಕೆ ಮೋಹಿಪವಯ್ಯ 2 ದುರಿತದೂರನ ನಾಮ ಸ್ಮರಿಸದು ನಾಲಿಗೆ ಸರಸಿಜಾಕ್ಷಿಯರೊಳು ಸರಸೋಕ್ತಿ ಪಡೆದು ಚರಣಶ್ರೀತುಳಸಿಯನರಿಯದೆ ನಾಸಿಕ ತರುಣಿಯ ಮೈಗಂಪನರಸಿ ಹಿಗ್ಗುವದಯ್ಯ 3 ನಿನ್ನಂಘ್ರಿಗೆರಗದೆ ಕುನ್ನಿಶರೀರವಿ ದುನ್ನುತಸ್ತನವುಳ್ಳ ಕನ್ನೆಯರೊಳ್ ತನ್ನ ಸುರತಸುಖವನೆ ಚಿಂತಿಸುವದು ಎನ್ನಾಧೀನದೊಳಿಲ್ಲ ನೀನೆ ಬಲ್ಲೆ 4 ಎರವಿನ ಸಿರಿಯಂತೆ ಕರಣಕಳೇವರ ಬರಿದೆ ನನ್ನದು ಎಂದು ಮೆರೆದೆ ನಾನು ಹರಿ ನಿನ್ನದೇ ಸರಿ ದುರಿತಸುಕೃತಕೆನ್ನ ಗುರಿಮಾಡದೆ ಕಾಯೋ ವರದವಿಠಲ ಕೃಷ್ಣ 5
--------------
ವೆಂಕಟವರದಾರ್ಯರು
ತನುವೆನ್ನದು ಚೇತನವೆನ್ನದು ಎಂದು ಅನುದಿನ ಪೋಷಣೆಯನು ಮಾಡಿದೆ ಹರಿ ಪ ಚಿನುಮಯ ನಿನ್ನನು ನೆನೆವೆಂನೆಂzರÀಮನ ತನುಮಧ್ಯೆಯರತನು ವಿನೊಳಿರುತಿಹುದು ಅನಘ ನಿನ್ನನು ನೋಡುವೆ ನಾನೆನ್ನಲು ದೃಷ್ಟಿ ಕನಕಾಂಗಿಯರ ಕುಂಭಸ್ತನದ ಮೇಲಿಹುದಯ್ಯ 1 ಚರಣದ ಪೂಜೆಯೊಳಿರುವೆನೆಂದರೆ ಕರವೆರಡು ಕೋಮಲೆಯರ ನರಸುವುವು ಹರಿಕಥಾಶ್ರವನದೊಳಿರದೆ ಈ ಕಿವಿಗಳು ಹರಿಣಾಕ್ಷಿಯರ ಕಂಠ ಸ್ವರಕೆಮೋಹಿಪವಯ್ಯ 2 ದುರಿತದೂರನ ನಾಮಸ್ಮರಿಸದು ನಾಲಿಗೆ ಸರಸಿಜಾಕ್ಷಿಯರೊಳು ಸರಸ್ತೋಕ್ತಿಪಡೆದು ಚರಣ ಶ್ರೀ ತುಳಸಿಯ ನರಿಯದೆ ನಾಸಿಕ ತರುಣಿಯ ಮೈಗಂಪನರಸಿ ಹಿಗ್ಗುವದಯ್ಯ 3 ನಿನ್ನಂಘ್ರಿಗೆರಗದೆ ಕುನ್ನಶರೀರ ವಿದುನ್ನತಸ್ತನವುಳ್ಳ ಕನ್ನೆಯರೋಳ್ ತನ್ನ ಸುರತಸುಖವನ್ನ ಚಿಂತಿಸುವದು ಯನ್ನಾಧೀನದೊಳಿಲ್ಲ ನೀನೇ ಬಲ್ಲಿ 4 ಎರವಿನ ಸಿರಿಯಂತೆ ಕರಣಕಳೇವರ ಬರಿದೆ ನನ್ನದು ಎಂದು ಮೆರೆದೆ ನಾನು ದುರಿತ ಕೃತಕೆನ್ನ ಗುರಿಮಾಡದೆ ಕಾಯೋ ವರದ ವಿಠಲ ಕೃಷ್ಣ 5
--------------
ಸರಗೂರು ವೆಂಕಟವರದಾರ್ಯರು
ಯಾಕೆ ಪುಟ್ಟಿಸಿದಿ ನೀ ಸಾಕಲಾರದೆ ಜಗ-ದೇಕ ಕಾರಣಪುರುಷನೆ ಕೃಷ್ಣ ಪ ವಾಕು ಚಿಂತಿಸೆ ಇಂಥಕಾಕು ಮಾಡುವುದುಚಿತವೆ ಕೃಷ್ಣ ಅ.ಪ. ಒಡಲಿಗನ್ನವ ಕಾಣೆ ಉಡಲು ಅರಿವೆಯ ಕಾಣೆಗಡಗಡನೆ ನಡುಗುತಿಹೆನೋ ಕೃಷ್ಣಮಡದಿ ಮಾತೆಯರ ಬಿಟ್ಟು ಒಡಹುಟ್ಟಿದವರ ಬಿ -ಟ್ಟಡವಿ ಪಾಲಾದೆನಲ್ಲೋ ಕೃಷ್ಣಕುಡುತೆ ಕೊಡುವವರಿಲ್ಲ ನುಡಿಯ ಕೇಳುವರಿಲ್ಲಬಡತನವು ಕಂಗೆಡಿಸಿತೋ ಕೃಷ್ಣಕಡೆ ಹಾಯಿಸುವರ ಕಾಣೆ ನಡುಮಡುವಿನೊಳು ಕೈ ಬಿಡದೆ ದಡವನು ಸೇರಿಸೋ ಕೃಷ್ಣ 1 ಕೊಟ್ಟವರ ಸಾಲವನು ಕೊಟ್ಟು ತೀರಿಸದವರಪೊಟ್ಟೆಯೊಳು ಪುಟ್ಟಲಾಯ್ತೋ ಕೃಷ್ಣಎಷ್ಟು ಜನುಮದಿ ಮನಮುಟ್ಟಿ ಮಾಡಿದ ಕರ್ಮಕಟ್ಟೀಗ ಉಣಿಸುತಿಹುದೋ ಕೃಷ್ಣಸೃಷ್ಟಿಯೊಳಗೆನ್ನಂಥ ಕೆಟ್ಟ ಪಾಪಿಷ್ಠ ಜನಘಟ್ಟಿಸಲಿಲ್ಲವೇನೋ ಕೃಷ್ಣವಿಠ್ಠಲನೆ ನಿನ್ನ ಮನಮುಟ್ಟಿ ಭಜಿಸಿ ಹಿಂದೆಎಷ್ಟು ಜನ ಬದುಕಲಿಲ್ಲೋ ಕೃಷ್ಣ 2 ಆಳು ದೇಹವು ಗೇಣು ಕೀಳಾಗಿ ಪಲ್ಕಿರಿದುಖೂಳ ಜನರ ಮನೆಗೆ ಕೃಷ್ಣಹಾಳು ಒಡಲಿಗೆ ತುತ್ತು ಕೂಳಿಗೆ ಹೋಗಿ ಅವರವಾಲೈಸಲಾರೆನಲ್ಲೋ ಕೃಷ್ಣಬಾಳು ಈ ಪರಿಯಾದ ಮ್ಯಾಲೆ ಭೂಮಿಯಲಿ ಬಹುಕಾಲ ಕಳೆಯುವುದುಚಿತವೆ ಕೃಷ್ಣಆಲಸ್ಯ ಮಾಡದಲೆ ಈ ವ್ಯಾಳ್ಯದಲಿ ಅರಿತುಪಾಲಿಸಲು ಬಹು ಕೀರ್ತಿಯೋ ಕೃಷ್ಣ 3 ಸಿರಿ ಅರಸನೆಂದು ಶ್ರುತಿ ಸಾರುತಿದೆಬಂದುದೀಗೇನು ಸಿರಿಯೋ ಕೃಷ್ಣಒಂದೊಂದು ನಿಮಿಷ ಯುಗಕಿಂತಧಿಕವಾಗುತಿದೆಮುಂದೋರದ್ಹಾಂಗಾಯಿತೋ ಕೃಷ್ಣಸಂದೇಹವಿಲ್ಲ ಗೋವಿಂದ ಶ್ರೀಪದದಾಣೆತಂದೆ ನೀ ರಕ್ಷಿಸದಿರೆ ಕೃಷ್ಣಮುಂದೆ ಭಜಿಸುವರು ಹೀಗೆಂದು ವಾರುತೆ ಕೇಳಿಬಂದುದಪಕೀರ್ತಿ ಮಾತು ಕೃಷ್ಣ 4 ವತ್ಸರ ಈರೀತಿ ಕಾಲಕಳೆದೆನೋ ಕೃಷ್ಣವ್ಯರ್ಥವಾಯಿತು ಜನುಮ ಸಾರ್ಥಕಾಗದು ಕಣ್ಣುಕತ್ತಲೆಗವಿಸಿತಲ್ಲೋ ಕೃಷ್ಣಇತ್ತ ಬಾರೆಂತೆಂದು ಹತ್ತಿಲಿಗೆ ಕರೆದೊಂದುತುತ್ತು ಕೊಡುವರ ಕಾಣೆನೋ ಕೃಷ್ಣವಿಸ್ತರಿಸಲಾರೆ ಇನ್ನೆತ್ತ ಪೋಗಲೊ ನಿನ್ನಚಿತ್ತವ್ಯಾತಕೆ ಕರಗದೋ ಕೃಷ್ಣ 5 ಆರು ಗತಿ ನಿನಗಧಿಕರಾರು ಧಾರುಣಿಯೊಳಗೆತೋರಿಸೈ ಕರುಣನಿಧಿಯೆ ಕೃಷ್ಣಈರೇಳು ಲೋಕಕಾಧಾರವಾದವಗೆ ಬಲುಭಾರವಾದವನೆ ನಾನು ಕೃಷ್ಣಮೀರಿ ನುಡಿಯಲು ಹದಿನಾರೆರಡು ಪಲ್ಗಳುಬೇರು ಕಳಕಳಯಿತೋ ಕೃಷ್ಣತೋರು ಬಂಕಾಪುರದ ಧಾರುಣಿಪುರವಾಸವೀರ ನರಸಿಂಹದೇವ ಕೃಷ್ಣ 6 ಹರಿಯಾತ್ರೆ ಮಾಡಲಿಲ್ಲ ಹರಿಮೂರ್ತಿ ನೋಡಲಿಲ್ಲಹರಿದಾಸ ಸÀಂಗವಿಲ್ಲ ಕೃಷ್ಣಹರಿಸ್ಮರಣೆ ಮಾಡಲಿಲ್ಲ ಸುರನದಿಯ ಮೀಯಲಿಲ್ಲಧರಣಿ ಸಂಚರಿಸಲಿಲ್ಲ ಕೃಷ್ಣಅರಿತರಿತು ಮನ ವಿಷಯಕೆರಗಿ ಹರುಷವ ತಾಳಿಬರಿದಾಯಿತಾಯುವೆಲ್ಲ ಕೃಷ್ಣಮರುತಾಂತರ್ಗತ ಸಿರಿಯರಸ ಹರಿಯೆಂದುಹರುಷಾಬ್ದಿ ಮಗ್ನನಲ್ಲ ಕೃಷ್ಣ7 ಹರಿನಾರಾಯಣನೆಂದು ಕರವೆತ್ತಿ ಮುಗಿದೊಮ್ಮೆ ಮೈ ಮರೆದು ನಟಿಸಲಿಲ್ಲ ಕೃಷ್ಣಹರಿಸ್ಮರಣೆ ಸ್ಮರಿಸಿ ಸಿರಿತುಳಸಿ ಪುಷ್ಪವನುಕರವೆತ್ತಿ ನೀಡಲಿಲ್ಲ ಕೃಷ್ಣಸರ್ವಜ್ಞರಾಯರು ವಿರಚಿಸಿದ ಗ್ರಂಥವನುದರುಶನವೆ ಮಾಡಲಿಲ್ಲ ಕೃಷ್ಣಸ್ಮರಿಸಲಾರದ ಪಾಪ ಸ್ಮರಣೆಪೂರ್ವಕ ಮಾಡಿಸ್ಥಿರಭಾರನಾದೆನಲ್ಲೋ ಕೃಷ್ಣ 8 ದುರುಳಜನರೊಡನಾಡಿ ಹರಿಣಾಕ್ಷಿಯರ ಕೂಡಿಸರಿ ಯಾರು ಎಂದು ತಿರುಗಿ ಕೃಷ್ಣನಿರುತ ಕ್ಷುದ್ರವ ನೆನೆಸಿ ನೆರೆದೂರ ಮಾರಿ ಹೆಗ್ಗೆರೆಗೋಣನಂತೆ ತಿರುಗಿ ಕೃಷ್ಣಪರರ ಅನ್ನವ ಬಯಸಿ ಶರೀರವನೆ ಪೋಷಿಸಿಶಿರ ಒಲಿದು ಶಿಲೆಗೆ ಹಾಯಿದು ಕೃಷ್ಣಶರಣವತ್ಸಲನೆಂಬೊ ಬಿರುದು ಪಸರಿಸುವಂಥಕರುಣ ಇನ್ನೆಂದಿಗಾಹುದೊ ಕೃಷ್ಣ 9 ಉರಗ ಫಣಿ ತುಳಿಯಲೊಎರಡೊಂದು ಶೂಲಕ್ಹಾಯಲೊ ಕೃಷ್ಣಕೊರಳಿಗ್ಹಗ್ಗವ ಹಾಕಿ ಮರವೇರಿ ಕರಬಿಡಲೋಗರಗಸದಿ ಶಿರಗೊಯ್ಯಲೋ ಕೃಷ್ಣಕರುಣವಾರಿಧಿ ಎನ್ನ ಕರಪಿಡಿದು ಸಲಹದಿರೆಧರೆಯೊಳುದ್ಧರಿಪರ್ಯಾರೋ ಕೃಷ್ಣ 10 ಎಷ್ಟು ಹೇಳಲಿ ಎನ್ನ ಕಷ್ಟ ಕೋಟಿಗಳನ್ನುಸುಟ್ಟೀಗ ಬೇಯ್ಯುತಿಹವೋ ಕೃಷ್ಣಕಷ್ಟಬಟ್ಟ ಮಗನೆಂದು ದೃಷ್ಟಿ ನೀರೊರೆಸೆನ್ನಪೊಟ್ಟೆಯೊಳ್ಪಿಡಿವರ್ಯಾರೊ ಕೃಷ್ಣಕೃಷ್ಣನಾಮ ವಜ್ರಕ್ಕೆ ಬೆಟ್ಟ ದುರಿತವು ನೀಗಿಥಟ್ಟನೆ ಬಂದು ನೀನು ಕೃಷ್ಣಇಷ್ಟವನು ಸಲಿಸಿ ಗುಟ್ಟ್ಟಲಿ ಶ್ರೀರಂಗವಿಠಲ ಎನ್ನ ಕಾಯೋ ಕೃಷ್ಣ 11
--------------
ಶ್ರೀಪಾದರಾಜರು