ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೇ ಅಚ್ಚುತ ನೀನೇಮಾಧವ|ಹರಿಗೋವಿಂದನು ನೀನೆ ||ನೀನೆಗತಿಯೆಂದು ನಂಬಿದ ದಾಸಗೆ |ಅಭಯಕೊಟ್ಟಾತನು ನೀನೆಪಜಲದೊಳು ಪೊಕ್ಕು ಮೈನಡುಗಿಸಿ ಭಾರವ |ತಳೆದಾತನು ನೀನೆ ||ಇಳೆಯ ಕದ್ದ ಸುರನ ದಾಡೆಯಿಂದ ಸೀಳಿ ಕಂಬ |ದೊಳು ಉದ್ಭವಿಸಿದೆ ನೀನೆ 1ಬಲಿಯ ಪಾತಾಳಕೆ ತುಳಿದೆಯೊ ನೀನು ಕೊ-|ಡಲಿಯ ಪಿಡಿದವನು ನೀನೆ ||ಜಲಧಿಯ ದಾಟಿ-ಅಸುರರ ಕಡಿದು |ಲಲನೆಯ ತಂದಾತ ನೀನೆ 2ಗೊಲ್ಲರ ಮನೆಯಲಿ ಬೆಣ್ಣೆಯ ಕದ್ದು |ಕಳ್ಳನೆನಿಸಿದವ ನೀನೆ ||ಬಲ್ಲಿದತ್ರಿಪುರದಿ ಬತ್ತಲೆ ನಿಂತು |ಒಳ್ಳೆ ಹಯವ ಹತ್ತಿದೆ ನೀನೆ 3ಪಾಂಡವರಿಗತಿ ಪ್ರಿಯನೆಂದೆನಿಸಿದ |ಪುಂಡರೀಕಾಕ್ಷನು ನೀನೆ |ಪುಂಡಲೀಕ ಪುರುಷೋತ್ತಮ ಮೂರುತಿ |ಪುರಂದರವಿಠಲನು ನೀನೆ 4
--------------
ಪುರಂದರದಾಸರು