ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಸತ್ಯಬೋಧರು ನೋಡಿ ಧನ್ಯನಾದೆ ಸತ್ಯಬೋಧರಾಯಾ ಬೇಡಿದೊರುವ [ಬೇಡಿದ ವರವ] ನೀಡುವ ಪರಮದಯಾಕರನಾ ಪ ರಘುರಾಮನ ಸೇವೆಯನ್ನು ಮಾಡ್ದ ಮಹಿಮನಾ ಪೊಗಳಿ ಪಾಡುವರಿಗೆ ಮುಕ್ತಿ ಪಥವ ತೋರ್ವನಾ 1 ವಿಷವ ಮೆದ್ದು ಹರಿಕೃಪೆಯಿಂ ಜೀರ್ಣಿಸಿದವನಾ ಆಶೀರ್ವದಿಸಿ ಖಂಡೆರಾಯನುದ್ಧರಿಸಿದವನಾ 2 ವರಭೂಸುರರಾಡಿದ ನಿಂದೆಯನು ನುಡಿಯನಾ ತ್ವರದಿ ಕೇಳಿ ತೋರಿದನು ಇವನು ಸೂರ್ಯನಾ 3 ಕೊಡು ಭಕುತಿಯನು ನಿನ್ನೊಳು ಗುರುಸತ್ಯಬೋಧನೆ ಬಿಡಿಸೊ ನಿನ್ನ ಅಡಿಗೆ ಕಟ್ಟಿಕೊಳೈ ಕೊರಳನೆ 4 ಹರಿವಾಯುಗಳಲಿ ಕೊಡು ನೀ ನಿಜ ಭಕುತಿಯನೆ ವರದ ಶ್ರೀ ಹನುಮೇಶವಿಠಲನಡಿ ಸೇವಕನೇ 5
--------------
ಹನುಮೇಶವಿಠಲ
ಕಮಲೋದ್ಭವನ ತಾಯೇ | ನಮಿಸುವೆನ್ನನು ಕಾಯೇ ಕಮಲಾಕ್ಷ ಹರಿ ಪ್ರೀಯೆ | ಚಿತ್ಪ್ರಕೃತೇ ಪ ಓಂಕಾರ ವಾಚ್ಯನ | ಶಂಕೆ ಇಲ್ಲದೆ ಭಜಿಸೇಸಂಖ್ಯೆ ರಹಿತ ರೂಪಳೇ |ಯಂಕಾಮಯೇ ತಂತಮು | ಗ್ರಂ ಕೃಣೋಮೆಂದು ಬಿಂಕದಿ ಶ್ರುತಿ ಪೇಳ್ವುದೇ 1 ಆಪಾಂಗ ವೀಕ್ಷಣ ಸೃಷ್ಠಿ | ವ್ಯಾಪಾರಂಗಳ ಹರಿಕೃಪೆಯಿಂದ - ಗೈಯ್ಯುವಳೇ |ಅಪವಿತ್ರರಿಗೆ ಯೋಗ್ಯ | ವಿಪರೀತ ಮತಿಯಿತ್ತು ಕುಪಥಾಂಧಂತದು ಪ್ರಾಪಕೇ 2 ಕಂಬು ಚಕ್ರಾಂಕಿತನ | ಅಂಬುಜಾಕ್ಷನ ಹೃದಯಾಂಬರದಲಿ - ತೋರಿಸೇ |ಇಂಬಿಟ್ಟು ಮನ ಬಯಕೆ | ತುಂಬಿಸುವುದು ಅನ್ಯಹಂಬಲ ನೀ ಕೊಡದೇ3 ಸನ್ನುತ | ಮೋಕ್ಷದಾಯಕ ಪರಮಾಕ್ಷರ ಶ್ರೀ ಹರಿಯ |ಈಕ್ಷಿಪ ಸುಖ ಕೊಡು | ಪೇಕ್ಷಿಸದಲೆ ತಾಯೆಲಕ್ಷಣವಂತೇ - ಗುಣವಂತೇ 4 ಕರವೀರ ಪುರದರಿಸಿ | ಶರದಿ ಸಂಭವೆ ಎನಿಸಿವರವ ನೀಡುತ ಪೊರೆವೇಗುರು ಗೋವಿಂದ ವಿಠ್ಠಲ | ಚರಣ ನೀರೇರುಹಕರುಣಿಸಿ ಸಲಹೇ - ಮಾತೇ 5
--------------
ಗುರುಗೋವಿಂದವಿಠಲರು
ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ ವಾರಿಯನು ಧರಿಸುವ ನಾರಿ ಗೌರಿ ಕೌಮಾರಿಪ ಬಾಣ ಕುಂಭನೆಂಬೊ ದಾನವರೀರ್ವರು ಕ್ಷೋಣಿಯೊಳು ಬಂದಲ್ಲಿ ತಪವ ಮಾಡಿ ಕಮಲ ಗರ್ಭನವೊಲಿಸಿ ವೇಗದಲಿ ಏನು ವರ ಬೇಡೆನಲು ನಗುತಲವನು ಸುರಿದನು 1 ಸಂಬಂಧಿಗಳೆಮ್ಮ ಕೊಲ್ಲಲ್ಲಿ ಉಳಿದವರ ಬಗಿಯದಂತೆ ವರವನು ಪಾಲಿಸೆನಲು ನಗುತ ಲೋಕೇಶ ದುರುಳರಿಗೆ ಸಲೆ ಇತ್ತಾ 2 ಚತುರ್ದಶ ಲೋಕವನು ಗೆದ್ದು ತ್ರಿದಶರಾ ಮಿತಿಯಿಲ್ಲದೆ ಮಾನಭಂಗ ಮಾಡಿ ಪತಿತರು ಈ ತೆರದಲಿರುತಿರಲು ವಿಬುಧರು ಚತುರ ಮುಖಗೆ ಮೊರೆಯಿಡಲು ಹರಿಗೆ ಬಿನ್ನೈಸಿ3 ತಿಳಿದು ಕುಂಡಲನೊಲಿದು ದ್ವಾಪಾರಾಂತ್ಯದಲಿ ಖಳ ಕಂಸನೆಂಬುವನು ಪುಟ್ಟಿ ತನ್ನ ಬಲದಲಿ ತನ್ನ ಅನುಜೆಯರ ಶರೆಯುಯಿಟ್ಟು ಬಳಲಿಸುವವಳಿಗೊಲಿದು ಅವತಾರ ಮಾಳ್ಪ ಯುದಕುಲದಲಿ 4 ಎನ್ನ ಕೂಡಲೀ ದುರ್ಗಿ ಜನಿಸಿ ಬರಲು ಅವ ಳನ್ನ ಕೊಲ್ಲುವೆನೆಂದು ಕಂಸ ಮುನಿಯೆ ತನ್ನ ಶಕ್ತಿಯಿಂದಾ ಗಗನಕ್ಕೆ ಪಾರಿ ಬರಲು ಘನ್ನ ಘಾತುಕರನ್ನ ಮಡುಹಿ ಬಿಡುವಳೆನಲು 5 ಇಂತು ಪೇಳಲಿ ಅಜನು ಸಂತೋಷದಿರಲಿತ್ತ ದಂತಿ ಗಮನಳು ಉದುಭವಿಸಿ ಬಂದು ಪಿಂತೆ ಮಾಡಿದ ತಪಸು ಸಿದ್ಧಿಸಿತು ಎನಗೆನುತ ಅಂತಕರಾಗಿದ್ದ ಖೂಳರ ಸದೆ ಬಡಿದು 6 ಹರಿಕೃಪೆಯಿಂದ ದಕ್ಷಿಣ ಶರಧಿಯಲಿ ನಿಲ್ಲಲು ಪರಮ ಮುನಿ ಅಗಸ್ತ್ಯ ಪೂಜಿಸಿದನು ಶರರಾಜ ಬಂದು ಮದುವೆನೈದಲು ಪರಮೇಷ್ಠಿ ಹರನ ಸಹಿತಲಿ ನಡೆತಂದಾ 7 ಬರಲಾಕ್ಷಣದಲ್ಲಿ ಕಲಿಯುಗ ಪ್ರಾಪುತವಾಗೆ ಮರಳೆನಿಂದರು ವರ ಸುಧೇಂದ್ರವೆಂಬೊ ಪುರದಲ್ಲಿ ಪೂಜೆಗೊಳ್ಳುತಲ್ಲಿರಲು ಇತ್ತ ಸುಂ ದರ ಕನ್ಯಾಮಣಿಯಾಗಿ ದಶದಿಶಿಗೆ ಪೊಳೆಯುತಿರೆ8 ಅಂದಾರಭ್ಯನಾಗಿ ಕನ್ಯಾಕುಮಾರಿ ಎನಿಸಿ ಬಂದು ನವತೀರ್ಥದಲಿ ಯಾತ್ರೆ ಜನರು ಮಿಂದಾಗಲೆ ಮನದಂತೆ ಭಕುತಿಯನಿತ್ತು ಪೊಂದಿಸುವೆ ವಿಜಯವಿಠ್ಠಲನ ಪಾದದಲ್ಲಿ9
--------------
ವಿಜಯದಾಸ