ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತೆಯಾತಕೊ ಮಾನವಾ ಭಜಿಸು ಶ್ರೀ- ಕಾಂತಾಖ್ಯ ಸುರಕಾಮಧೇನುವಾ ಅಂತಪಾರಗಳಿಲ್ಲದಾಸೆ ಕಡಲೊಳು ಬಿದ್ದು ಭ್ರಾಂತಿಗೊಳಿಸದೆ ಮನವ ಬಳಲಿಸದಿರು ತನುವ ಪ. ಸಂಸಾರವೆಂಬುವುದು ಸುಖ ದುಃಖ ಮಿಶ್ರಿತವು ಕಂಸಾರಿವಶದೊಳಿಹವು ಶೋಣಿತ ಪೂಯ ಕೇಶ ಕ್ರಿಮಿ ದಂಶ ಪೂರಿತ ದೇಹವು ಹಿಂಸೆಯಾಗುವ ಮೊದಲೇ ಹರಿಕೃಪಾಸುಧೆಯ ಲೇ- ಶಾಂಶ ಸಂಪಾದಿಸಿ ನಿಜಾಂಶ ಸುಖವನು ಸೇರು 1 ಹಿಂದಿನನುಭವ ಗ್ರಹಿಸು ಹರಿಯ ಮಹಿಮೆಯ ಸ್ಮರಿಸು ಮಂದ ಭಾವನೆ ವಾರಿಸು ಮುಂದಾಹದೇನೆಂದು ಕುಂದದಿರು ಧೈರ್ಯದಿಂ- ದಿಂದಿರೇಶನ ಪೂಜಿಸು ತಂದೆ ತಾಯಿಗಳು ತಮ್ಮ ಕಂದನನು ಪೊರೆವ ಪರಿ- ಯಿಂದ ಸಲಹೆಂದು ಗೋವಿಂದನಲಿ ಮೊರೆಯಿರಿಸು 2 ದೃಢ ಭಕುತಿಯಿಂದ ತನ್ನಡಿಯ ಸೇರಿದ ಜನರ ಬಿಡನು ಭಕ್ತಾರ್ತಿಹರನು ಪುಡಿಮಾಳ್ಪದುರಿತಗಳ ಪೂರ್ವದಲಿ ಪೊರೆದಂತೆ ಕೊಡವನಖಿಳಾರ್ಥಗಳನು ಮೃಡವಂದ್ಯ ಶೇಷಾದ್ರಿ ಒಡೆಯನಿರಲ್ಯಾಕೆ ಕಂ- ಗೆಡುವಿ ಎಂದಿಗು ನಿನ್ನ ಕಡೆ ಹಾಯಿಸುವ ಹರಿಯು 3
--------------
ತುಪಾಕಿ ವೆಂಕಟರಮಣಾಚಾರ್ಯ
ವಿಘ್ನೇಶಾ - ಪಾಲಿಸೊ - ಎನ್ನ - ವಿಘ್ನೇಶಾ ಪ ವಿಘ್ನೇಶ ಪಾಲಿಸೊ ಯೆನ್ನಾ | ದೋಷಭಗ್ನವ ಗೈಸಯ್ಯ ಮುನ್ನಾ | ಆಹಲಗ್ನವಾಗಲಿ ಯೆನ್ನ ಮನ ಆದೀಂದ್ರಿಯಗಳುಯಜ್ಞೇಶ ಶ್ರೀಹರಿ ಪದದ್ವಯ ವನಜದಿ ಅ.ಪ. ಶಿರಿವ್ಯಾಸ ಹೃದ್ಗತ ಅರ್ಥಾ | ನೆರೆಅರಿತು ಲಿಖೀಸಿದೆ ಗ್ರಂಥಾ | ನೋಡುಕರುಣಾಳು ಹರಿಕೃಪಾ ಪಾತ್ರಾ | ಬಾಗಿಶರಣೆಂಬೆ ತಿಳಿಸ್ಯದರರ್ಥಾ | ಅಹತಾರಕಾಂತಕನನುಜ | ವೀರ ವೈಷ್ಣವ ನಿನ್ನಪರಮಾನುಗ್ರಹವನ್ನ | ಕರುಣಿಸಿ ಕಾಯೆನ್ನ 1 ಚಾರುದೇಷ್ಣನ ನಾಮದಲ್ಲೀ | ಅವತಾರ ಮಾಡಿದೆ ರುಕ್ಮಿಣೀಲಿ | ಸಿರಿಅರಸನಾಜ್ಞೆಯ ಪೊತ್ತು ಅಲ್ಲೀ | ದೈತ್ಯದುರುಳರ ತರಿದ್ಯೋಧುರದಲ್ಲೀ | ಅಹಧರೆಯ ಭಾರವ ನಿಳುಹಿ | ಮೆರೆದಂಥ ಗುರುವರಪರಮ ಕಾರುಣ್ಯದಿ | ಹರಿಸೆನ್ನ ಭವತಾಪ 2 ಶೇಷಶತ ದೇವೋತ್ತಮಾ | ಬಾಪುಶ್ರೀಶನ ನಾಭಿಯೆ ಧಾಮಾ | ವಿಶ್ವೋಪಾಸಕ ಖೇಶ ನಿಸ್ಸೀಮಾ | ಪ್ರಾಣಾವೇಶಯುತನೆ ಗುಣಧಾಮಾ | ಅಹಮೂಷಕ ವರವಾಹ ಭೇಶ ಗರ್ವಹರಶ್ರೀಶನ್ನ ಹೃದಯಾವ | ಕಾಶದಲಿ ತೋರೊ 3 ಪರಿ | ಶುದ್ಧ ಭಕ್ತಿಯನಿತ್ತು 8 ಸಿರಿ ರಮಣನಾ | ಗುರು ಗೋವಿಂದ ವಿಠಲಾಭಿಧನ್ನಾ | ನಿಲ್ಲಿಸಿಅವಿರತವನ ಧ್ಯಾನವನ್ನಾ | ಆಹಗೈವಂಥ ಸೌಭಾಗ್ಯ | ಪಾಲಿಸೊ ವಿಘ್ನೇಶಶ್ರೀವರನಂಘ್ರಿ ಸರೋಜ | ಭೃಂಗನೆ ಕರುಣೀ 5
--------------
ಗುರುಗೋವಿಂದವಿಠಲರು
ಶ್ರೀ ವಿಷ್ಣು ತೀರ್ಥ ಅಣು ವಿಜಯ ಅರಣ್ಯಕಾಚಾರ್ಯ ಶ್ರೀವಿಷ್ಣು ತೀರ್ಥಾರ್ಯರ ಚರಣಸರಸೀರುಹದಿ ಶರಣಾದೆ ಸತತ ಹೊರ ಒಳಗೆ ಪ್ರಜ್ವಲಿಪ ಅನಘಗುಣ ಪರಿಪೂರ್ಣ ಸಿರಿವರ ಹರಿಕೃಪಾ ಪ್ರಸಾದವೊದಗಿಸುವ ಪ ಪಾದ ಸೇವಿಸಿದ ಫಲವಾಗಿ ಭಾಗೀರಥಿ ಬಾಳಾಚಾರ್ಯರಲಿ ಜನಿಸಿ ವೇಂಕಟರಾಮಾರ್ಯ ಐಜಿಯವರ ಸುಪವಿತ್ರ ಮುಖ ಪಂಕಜದಿಂದ ಕಲಿತರು ಸಚ್ಛಾಸ್ತ್ರ 1 ಜಯತೀರ್ಥ ನಾಮದಲಿ ಮೊದಲೆರಡು ಆಶ್ರಮ ನಿಯಮದಿ ಚರಿಸಿ ಈ ವೈರಾಗ್ಯ ನಿಧಿಯು ಸತ್ಯಸಂಧರಸುತ ಸತ್ಯವರ ತೀರ್ಥರಿಂ ತುರೀಯಾಶ್ರಮಕೊಂಡ ವಿಷ್ಣು ತೀರ್ಥಾರ್ಯ 2 ಏನು ಧನ್ಯರೋ ಸತ್ಯಧರ್ಮತೀರ್ಥರು ಮತ್ತು ಸೂರಿ ಈರ್ವರಿಗೆ ಅನಘಮಧ್ವಸ್ಥ ಶ್ರೀ ಹಂಸ ವೇದವ್ಯಾಸ ತಾನೇ ಸತ್ಯವರ ದ್ವಾರ ಉಪದೇಶ ಕೊಟ್ಟ 3 ಪೂರ್ವಾಶ್ರಮ ನಾಮ ಜಯತೀರ್ಥಾಂಕಿತದಲ್ಲಿ ತತ್ವಪ್ರಕಾಶಿಕ ಸುಧಾ ಟಿಪ್ಪಣಿಯ ಭಾಗವತ - ಸಾರೋ ದ್ಧಾರವ ಶೋಡಶಿ ಚತುರ್ದಶಿ ಬರೆದಿಹರು 4 ತತ್ವಬೋಧಕ ಸ್ತೋತ್ರ ಬಿನ್ನಹ ರೂಪವು ಆಧ್ಯಾತ್ಮ ರಸರಂಜಿನಿ ಅಮೃತಫÉೀಣ ಭಕ್ತಿಯಲಿ ಪಠಿಸಲು ಅಪರೋಕ್ಷ್ಯ ಪುರುಷಾರ್ಥ ಸಾಧನವಾಗಿಹುದನ್ನು ರಚಿಸಿಹರು ಇವರು 5 ಹದಿನಾರು ಪ್ರಕರಣ ಶೋಡಶಿ ಎಂಬುzರÀಲಿ ಹದಿನಾಲ್ಕು ಪ್ರಕರಣ ಚತುರ್ದಶಿಯಲ್ಲಿ ಬಂಧ ಮೋಕ್ಷಾಂತ ಶೋಡಶಿಯಲ್ಲಿಹುದು ಭಕ್ತಿ ಶುಚಿಯಲಿ ಪಠನೀಯ ರಹಸ್ಯವು 6 ಬಂಧಕವು ಬಂಧ ನಿವೃತ್ತಿಯು ಬಿಂಬ ಪ್ರತಿಬಿಂಬ ಭಾವವು, ಬಿಂಬಸಂಸ್ಥಾಪನವು ಅವಸ್ಥಾತ್ರಯ ನಿರ್ಮಾಣ ಆರನೆಯದು 7 ಪ್ರಾಣವ್ಯಾಪಾರವು ಭೋಜನ ಪ್ರಕರಣವು ಇಂದ್ರಿಯ ವ್ಯಾಪಾರವು ತತ್ವಕಾರ್ಯಹತ್ತು ತನು ಅಧಿಷ್ಠಾನ ರಥಾಧಿ ಪ್ರಕರಣವು ಹನ್ನೆರಡಲಿ ಬೋಧ್ಯ ಜಾಗೃತ್ ಪ್ರಕರಣವು 8 ಸ್ವಪ್ನವು ಸುಷುಪ್ತಿಯು ಗಮನಾಗಮನವು ಶುಭ ಮೋಕ್ಷ ಪ್ರಕರಣ ಷೋಡಶವು ಇನ್ನು ಚತುರ್ದಶಿಯಲಿ ಜೀವಹೋಮ ಮೊದಲಾಗಿ ರತ್ನಗಳು ಗುರು ಪ್ರಸಾದ ಲಾಭ ಪರ್ಯಂತ 9 ಜೀವಹೋಮ - ಉಪನಯನ ಸೂರ್ಯಗತಿ ಯಜ್ಞ ಪವಿತ್ರತಮ ವೇದಾಧ್ಯಯನ ಭಿಕ್ಷಾಟನ ವೈಶ್ವಾನರ ಪ್ರಿಯ ಭೋಜನ ಪಾಪಲೇಪ ಜೀವ ಪ್ರಯಾಣ ಮಾರ್ಗವು ನವಮ 10 ಹತ್ತನೆಯದು ಬ್ರಹ್ಮಯಜ್ಞಲಯ ಚಿಂತನಾಕ್ರಮ ಶುದ್ಧಯಜ್ಞ `ಸ್ವರೂಪಯಜ್ಞ' ಸುಲಭಪೂಜಾ ಹದಿನಾಲ್ಕಲಿ ಗುರುಪ್ರಾಸಾದ ಲಾಭದಲಿ ಆದಿತ್ಯಗ ಮಧು ಸುಖ ಪೂರ್ಣ ವಿಷಯ 11 ಯೋಗ್ಯ ಆಧಿಕಾರಿಗೆ ಮಾತ್ರ ಈಸೌ - ಭಾಗ್ಯಪ್ರದ ಜ್ಞಾನ ಪುಷ್ಠಿಕರಣ ಯುಗುಳ ಮಾತ್ರೆಗಳನ್ನ ವಿನಿಯೋಗಿಸುವುದು ಅಯೋಗ್ಯರಿಗೆ ಸರ್ವಥಾ ಕೊಡಕೂಡದು 12 ಕೃತ ಕೃತ್ಯ ಧನ್ಯಮನದಿಂದಲಿ ಈ ಮಹಾನ್ ಐದಿಹರಿಪುರಲಯವ ಚಿಂತನೆಮಾಡಿ ಹದಿನೇಳ್ ನೂರಿಪ್ಪತ್ತೆಂಟು ಶಕ ಮಾಘ ತ್ರಯೋದಶಿ ಕೃಷ್ಣದಲಿ ಕೃಷ್ಣನ ಸೇರಿದರು 13 ಮತ್ತೊಂದು ಅಂಶದಿ ವೃಂದಾವನದಿಹರು ಭಕ್ತಿಯಿಂ ಸ್ಮರಿಸಿದರೆ ಬಂದು ಸಲಹುವರು ಮಾದನೂರು ಕ್ಷೇತ್ರಸ್ಥ ವೃಂದಾವನ ಸೇವೆ ಭಕ್ತಿಯಲಿ ಮಾಳ್ಪರು ದೇಶ ದೇಶ ಜನರು 14 ಬೃಹತೀಸಹಸ್ರ ಪ್ರಿಯ ಮಹಿದಾಸ ಜಗದೀಶ ಬ್ರಹ್ಮಪಿತ ಭಕ್ತಪಾಲಕ ಪರಮ ಹಂಸ `ಮಹಿಸಿರಿ' ಶ್ರೀ ಪ್ರಸನ್ನ ಶ್ರೀನಿವಾಸನ ಮಹಾಭಕ್ತಿ ಶ್ರೀ ವಿಷ್ಣು ತೀರ್ಥಾರ್ಯರೇ ಶರಣು 15 ಪ || ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಶ್ರೀಪಾದರಾಜರು ಕಾಪಾಡು - ಕಾಪಾಡು ಶ್ರೀ ಪಾದರಾಯ ಪ ಪಾಪೌಘಗಳನಳಿದು ಶ್ರೀಪತಿಯ ತೋರೀ ಅ.ಪ. ನಾಡಿನೊಳು ಪೆಸರಾದ ಮೂಡಲಾದ್ರಿಗೆ ಪೋಪಮೂಡಬಾಗಿಲ ಕಾಯ್ವ ಪ್ರಾಣನಾಶ್ರಯಿಸೀ |ಮೂಡಬಾಗಿಲ ಪುರದಿ ನರಸಿಂಹ ಕ್ಷೇತ್ರದಲಿ |ಈಡು ಇಲ್ಲದೆ ಮೆರೆವ ಯತಿ _ ಸಾರ್ವಭೌಮಾ 1 ಹತ್ತಾರು ನಾಲ್ಕಾದ ಶಾಕಪ್ರತಿ ದಿನದಲ್ಲಿಉತ್ತಮೋತ್ತಮಗಿತ್ತು ಉಂಬ ಮಹಿಮಾ |ಕೃತ್ರಿಮ ಸ್ವಭಾವ ನೃಪ ಪರಿಕಿಸಲು ಪೋಗೆ ಹರಿಮತ್ತೊದಗಿಸಿದ ವ್ಯಾಳ್ಯಕ್ಕೆ ಹರಿಕೃಪಾ ಪಾತ್ರ 2 ವಿಪ್ರ ಬ್ರಹ್ಮತ್ಯವನು ಶಂಖದುದಕದಿ ಕಳೆಯೆಅಪ್ರಬುದ್ಧರು ನಗಲು ಗೆರೇಣ್ಣೆ ವಸನಾ |ಕ್ಷಿಪ್ರ ಶುದ್ದಿಯಗೈದೆ ಪ್ರೋಕ್ಷಿಸುತ ಶಂಖದಲಿಅಪ್ರಮೇಯನ ಕರುಣ ನಿನ್ನೊಳೆಂತುಂಟೋ 3 | ಅಹವು ರಾತ್ರಿಗಳಭಿಧ ಆದಿತ್ಯ ಸಂಸ್ಥಿತನುಅಹರ್ನಿಶೀ ನರನಾಡಿ ಸ್ಥಿತನಾಗಿಹಾ |ಬೃಹತಿ ನಾಮಕಗನ್ನ ಋಗ್ರಹಸ್ಯವನರುಪಿಬೃಹತಿ ಸಾಸಿರಗಳಿಪ ಸಂಧಾನವಿತ್ತೂ 4 ವಾದಿಗಳ ಎದೆಶೂಲ ವಾದ ಗ್ರಂಥದಿ ಪೂರ್ಣಬೋಧ ಶಿಷ್ಯರ ಹಿತವ ಕಾದು ಜಗದೀ |ವೇದ ವೇದ್ಯನು ಗುರು ಗೋವಿಂದ ವಿಠ್ಠಲನಪಾದ ಧೃವ ಧ್ಯಾನದಲಿ ಮೆರೆಯುತಿಹ ಗುರುವೇ 5
--------------
ಗುರುಗೋವಿಂದವಿಠಲರು
ಸೂತ್ರನಾಮಕಪ್ರಾಣ ಜಗತ್ರಾಣ ಸೂತ್ರನಾಮಕ ಜಗಸೂತ್ರನೆ ಹರಿಕೃಪಾ ಪಾತ್ರ ನೀನಹುದೋ ಸರ್ವತ್ರದಿ ನೀನೆ ಪ ದೇವಾ ನೀನಿಲ್ಲದಿರೆ ಜಗವೆಲ್ಲವು ತಾ ನಿರ್ಜೀವ ಜೀವ ಕೋಟಿಗಳೆಲ್ಲ ಕಾವ ಪಾವನಾತ್ಮಕ ಸಂಜೀವ ಲವಕಾಲ ಬಿಡದೆ ಎಮ್ಮೊಳಿರುವ ಭೋ ದೇವ ಅ.ಪ ಸಾಟಿ ಯಾರೆಲೆ ತ್ರಿಕೊಟಿರೂಪನೆ ನಿಶಾಚರ ಕುಲಕೆ ಕುಠಾರಿ ಅಜಾಂಡ ಖರ್ಪರದಿ ಸೃಷ್ಟಿಯೊಳು ಸಂಚಾರಿ ಪಟುತರ ತ್ರಿವಿಕ್ರಮ ಚಟುಲ ಮೂರುತಿ ಮನತಟದಲಿ ಭಜಿಸಿದ ಶ್ರೇಷ್ಠನೆ ನಿಜಪರಮೇಷ್ಠಿಪದವನು ತೊಟ್ಟು ಪಾಲಿಪೆ ನಿಂದು ಬ್ರಹ್ಮಾಂಡ ಪೊತ್ತು ಅಂದು ಜಗಭಾರ ವಹಿಸಿದೆಯೊ ದಯಾಸಿಂಧು ಎಂದೆಂದೂ 1 ಸರುವ ತತುವೇಶರ ವ್ಯಾಪಾರ ಧೀರ ನೀ ನಡೆಸೆ ಜಗಸಂಸಾರ ಕಾರಣನು ಜಗಕಾರ್ಯ ಕಾ ವೈರಾಗ್ಯ ಐಶ್ವರ್ಯ ನಿನ್ನಯ ಗುಣ ಸ್ವರೂಪತನುಕರಣೇಂದ್ರಿಯ ಕರ್ಮಫಲವನು ಜೀ ವರುಗಳಿಗುಣಿಪ ಅನಿಲರೂಪನೆ ತನುಗೋಳಕದಲಿ ನೀ ನೆಲ ಅಂದು ಸೃಷ್ಟಿಯೊಳು ಬಂದೂ ಪೊಂದಿ ಸರ್ವರೊಳು ನಿಂದು ಹಿಂದೂ ಇಂದೂ ಇನ್ನು ಮುಂದೂ ಕರುಣಾಸಿಂಧು ಎಂದೆಂದೂ 2 ಪ್ರಾಣಪ್ರಾತರ ಸಾಯಂಬೀತೆರ ಅಭಿಧಾನ ಗುಣಸ್ತವನ ಮಾಳ್ಪರೆಲ್ಲ ಸುರ ಗಣಾ ಮಣಿದು ಬೇಡುವರೆಲ್ಲ ಅನುದಿನಾ ಎಣೆಯುಂಟೆ ನೀನಮಿತ ಗುಣಗಣಾ ಶ್ರೀ ಮುಖ್ಯ ಪ್ರಾಣಾ ಜಗಬಂಧಕೆ ಮಹಾರಜ್ಜು ರೂಪ ನೀ ಚಿತ್ಸುಖಮಯ ವಪುಷ ಖಗಪ ಶೇಷ ಶಿವ ಶಕ್ರಾದೀ ಜಗ ಬದ್ಧವು ಕೇಶ ನಖಾಗ್ರ ಪರ್ಯಂತ ಚಿತ್ಸುಖ ಗಭೇದ ನೀ ಛಂದ ಶಾಸ್ತ್ರದಿ ತನು ತ್ವಗ್ರೋಮ ಉಷ್ಣಿಕ್ ಗಾಯತ್ರಿ ನರ ಮಾಂಸನುಷ್ಟುಪ್ ಅನುಷ್ಟಪು ಅಸ್ತಿಮಜ್ಜಾ ಜಗತೀ ಪಂಕ್ತಿ ಬೃಹತಿನಾಮಕ ಘನ್ನಾ ಉರಗಾದ್ರಿವಾಸ ವಿಠಲನ್ನ 3
--------------
ಉರಗಾದ್ರಿವಾಸವಿಠಲದಾಸರು