ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಯಸೋದು _ ಉತ್ತಮ ಸಂಗ - ಬಯಸೋದು ಪ ಬಯಸೂವುದುತ್ತಮ ಸಂಗ | ಭವಭಯ ಪರಿಹರಿಸೂವ ಸಂಗ | ಆಹಭಯ ದೂರಾಭಯಪ್ರದ | ದಯ ಪೂರ್ಣ ಹರಿಯ ಹೃ-ದಯ ವ್ಯಾಪ್ತವಾದಂಥ | ವಿಯದೊಳು ಕಾಂಬಂಧ ಅ.ಪ. ವಿಭವ | ಹೇತು ಇವರೆಂದು ಖ್ಯಾತಿಲಿ ಇರುವ | ಬೊಮ್ಮದಿವಿಜೇಡ್ಯ ವೈಕುಂಠನವ | ಮೃಗ್ಯನವರಿಂದನಾಗುತಲಿರುವ | ಆಹಅವನ ಪದ ಕಮಲದಿ | ಧೃವ ಚಿತ್ತ ಉಳ್ಳವರವರಿಗೆಂಬರು ವೈ | ಷ್ಣವಾಸ್ಯರೆಂದೆನುತಲಿ 1 ತಾಪ ಶಮನ | ಸೇವಿಪರ ಹೃದಯಾಂತಃಕರಣ | ಆಹದಿರುತ ತೋರಿಕೊಳ್ಳೆ | ತಾರೇಶನಂದದಿಪರಿತಾಪವಿನ್ನುಂಟಿ | ಮರಳಿ ಅಂಥವನಿಗೆ 2 ಶುದ್ಧಾಂತಃಕರಣರ ಭಕ್ತಿ | ಪಾಶಬದ್ದನಾಗಿಹ ಹರಿಮೂರ್ತಿ | ಇಂಥಶುದ್ಧರ ವಸ ಹರಿಕೀರ್ತಿ | ಇಂದದಗ್ದ ಪಾಪದ ಮೂಟೆ ಭರ್ತಿ | ಆಹಊಧ್ರ್ವ ಪುಂಡ್ರವು ಶಂಖ | ಮುದ್ರಾದಿ ಚಿನ್ಹಿತಶಬ್ದರಿವರು ಪ್ರ | ಸಿದ್ಧ ಭಾಗ್ವತರೆಂದು 3 ಕಾಮ ಕಾರ್ಮಾಅವಿದ್ಯದಿಂದ | ದೇಹಭೂಮಿಯೊಳುತ್ಪನ್ನದಿಂದ | ಜಾತಿಬ್ರಾಹ್ಮಣಾಹಂಭಾವದಿಂದ | ಶೂನ್ಯಶ್ರೀಮನೋಹರ ಜೀವರಿಂದ | ಆಹಸಾಮಸನ್ನುತ ಭಿನ್ನ | ನೇಮ ತಿಳಿದು ತಾರ-ತಮ್ಯವ ತಿಳಿದವ | ಪ್ರೇಮ ಭಕ್ತನವನು 4 ನೋವು ಸಂತೋಷಗಳೆಂಬ | ದ್ವಯಭಾವಗಳ್ಸಮತೇಲಿ ಉಂಬ | ಜ್ಞಾನಿದೇವ ದೇವಗೆ ಪ್ರಿಯನೆಂಬ | ಬುದ್ಧಿಲೋಪಿ ಅವರ ಭಜಿಸೆ ತುಂಬ | ಆಹಗೋವ ಪಾಲಕ ಗುರು | ಗೋವಿಂದ ವಿಠ್ಠಲಕಾವನು ಬೆಂಬಿಡದೆ | ಈ ವಿಧ ಭಕುತರ 5
--------------
ಗುರುಗೋವಿಂದವಿಠಲರು
ಆವ ಭಯವಿಲ್ಲ ಪರಾವರೇಶನ ಸಕಲ ಪ ಭಾವಜ್ಞ ಜನರಿಗಿನ್ನು ಅ.ಪ. ದೇಶಕಾಲೋಚಿತ ಧರ್ಮ ಗಿರ್ಮಗಳು ಸ ನ್ಯಾಸ ಮೊದಲಾದಾಶ್ರಮೋಚಿತ ಸುಕರ್ಮಗಳು ಮಾಸೋಪವಾಸ ವ್ರತ ನೇಮ ಗೀಮಗಳು ಸದ್ ಪ್ರದೋಷನ ಧ್ಯಾಯಗೀಯ ಶ್ವಾಸ ಬಂಧನ ಉಪನ್ಯಾಸ ತೀರ್ಥಾಟನೆ ರ ಮೇಶನ ಗುಣಗಳಟ್ಟಹಾಸದಲಿ ನೆನೆವುತ ನಿ ರಾಶೆಯಿಂದಿಪ್ಪ ಹರಿದಾಸ ದಾಸರಿಗೆ 1 ಸ್ನಾನ ಜಪ ದೇವತಾರ್ಚನೆ ವೈಶ್ಯದೇವ ಬಲಿ ವಿಧಿ ನಿಷೇಧಗಳು ವಿ ಸಂಹನನ ವೈರಾಗ್ಯ ಶಕ್ತಿ ಶ್ರೀನಿವಾಸನ ಪರಮ ವಿಮಲ ಲೋಕೈಕ ಕ ಲ್ಯಾಣ ಗುಣ ರೂಪ ಕ್ರಿಯೆಗಳನು ಜಡ ಚೇತನದಿ ಧೇನಿಸುತ ಮನದಿ ಹಿಗ್ಗುತ ತುತಿಸಿ ನಲಿವ ಸುಮ ಹಾನು ಭಾವರಿಗೆ ಈರೇಳು ಲೋಕದೊಳು ಇನ್ನು2 ಮಲಿನರಾಗಿಹರು ನೋಳ್ಪರಿಗೆ ಪ್ರತಿ ದಿನದಲ್ಲಿ ಸುಲಭರಂತಿಹರು ದುರ್ಗಮರಾಗಿ ತೋರುವರು ಅಳುವರೊಮ್ಮೊಮ್ಮೆ ಪರವಶರಾಗಿ ಮೈ ಮರೆದು ನಲಿವರೊಮ್ಮೊಮ್ಮೆ ನಗುತಾ ಜಲಜಾಕ್ಷನಮಲ ಮಂಗಳ ಗುಣವ ಕೇಳಿ ಗಂ ಟಲ ಶಿರಗಳುಬ್ಬಿ ಚಪ್ಪಳೆಗಳಂ ಬಾರಿಸುತ ಮುಳುಗಿ ಸುಖ ವನಧಿಯೊಳು ತನು ಪುಳಕೋತ್ಪವದಿ ಇಳೆಯೊಳಗೆ ಸಂಚರಿಪ ಕಲುಷವರ್ಜಿತಂಗೆ 3 ನೋಡುವುದೆ ಹರಿಮೂರ್ತಿ ಕೇಳುವುದೆ ಹರಿಕೀರ್ತಿ ಆಡುವುದೆ ಹರಿವಾರ್ತೆ ಮಾಡುವುದೆ ಹರಿಪೂಜೆ ನೀಡುವುದೆ ಅವಧಾನ ಬೇಡುವುದೆ ಪುರುಷಾರ್ಥ ಕೂಡುವುದೆ ಸಾಯುಜ್ಯವು ದಾಡಿಯಿಂದಲಿ ದನುಜರಳಿದು ಧರಣಿಯನು ತಂದ ಕ್ರೋಢರೂಪನೆ ಲೋಕಕ್ಕೆಲ್ಲ ಆನಂದ ನಾಡಾಡ ದೈವದಂತಿವನಲ್ಲವೆಂದು ಕೊಂ ಡಾಡುತವನಿಯೊಳು ಸಂಚರಿಸುವ ವಿಪಶ್ಚಿತರಿಗೆ 4 ಕುಟಿಲರಹಿತನು ಧರ್ಮಾರ್ಥ ಮುಕುತಿ ಸಂ ಸುರನದಿ ಮುಖ್ಯ ತೀರ್ಥ ವೆಂ ಕಟ ಶೈಲ ಮೊದಲಾದ ಕ್ಷೇತ್ರದಲಿ ಸತ್ಕರ್ಮ ಹಟದಿಂದ ಮಾಳ್ಪರೆಲ್ಲಾ ವಟ ಪತ್ರಶಯನನೊಲುಮೆಯನೆ ಬಯಸುವ ಜಾಂಡ ಕಟಹದ್ಭಹಿವ್ರ್ಯಾಪ್ತನಾದ ಶ್ರೀ ಜಗನ್ನಾಥ ವಿಠಲನಾವ ದೇಶದಿ ಕಾಲದಲ್ಲಿ ಪಾ ಸಟೆಯಿಲ್ಲವೆನುತ ಲಾಲಿಸುತಿಪ್ಪರಿಗೆ5
--------------
ಜಗನ್ನಾಥದಾಸರು
ಮಾರುತೀ ಕೊಡು ಭಕುತಿ ನುಡಿಸು ಕೀರ್ತಿ ಪ ತೋರೊ ನಿನ್ನೊಳು ಇಹ ನಿರ್ಮಲ ಮೂರುತಿಯಅ.ಪ ಶ್ರವಣಮಾಡಲು ಭಕುತಿ ಆವಕಾಲಕು ಇತ್ತು ತವಪದದಾಸರ ದಾಸ್ಯ ಕೊಡಿಸೋ ದೇವ 1 ಕೀರ್ತನದೊಳು ಹರಿಕೀರ್ತಿ ಕೊಂಡಾಡೆ ಸಂ ಕೀರ್ತನ ಭಕುತಿಗೆ ಕರ್ತದಾತ ನೀನೆ2 ಸ್ಮರಣೆಯು ಹರಿಯಲ್ಲಿ ನಿರುತವು ನಿನ್ನಲ್ಲಿ ಕರುಣಿಸಿ ಪೊರೆಯೊ ಗುರುವರ ಸುಂದರ 3 ಪಾದ ಸೇವೆಯ ಕೊಡು ಸಾದರದಿಂದಲಿ ಶ್ರೀಧರನಾ ಕೃಪಾಪಾತ್ರನೆಂದೆನಿಸಯ್ಯ 4 ಅಚ್ಯುತನಿಗೆ ನೀನಚ್ಚುಮೆಚ್ಚಾಗಿಹೆ ನಿಚ್ಚದಿ ಹರಿಪಾದರ್ಚನೆ ಮಾಡಿಸಯ್ಯ 5 ವಂದನಾಭಕುತಿ ಎನ್ನಿಂದ ನೀ ಮಾಡಿಸಿ ನಂದನಂದನಗಾನಂದಪಡಿಸೊ ದೇವ 6 ದಾಸಭಕುತಿ ಭಾಗ್ಯ ಆಶಿಸುವೆನು ನಿನ್ನ ವಾಸುದೇವನ ನಿಜದಾಸನೆ ಸರ್ವದಾ 7 ಸಖ್ಯಭಕುತಿ ಕೊಡೋ ಮುಖ್ಯಪ್ರಾಣೇಶನೆ ಮುಖ್ಯಕಾರಣ ಹರಿಯ ಮುಖ್ಯ ಪ್ರೇಮಪಾತ್ರ 8 ಆತ್ಮನಿವೇದನ ಭಕುತಿಯನ್ನು ಪರ ಮಾತ್ಮನಲ್ಲಿತ್ತು ನಿರ್ಮಲಾತ್ಮನೆಂದೆನಿಸೊ 9 ನವವಿಧ ಭಕುತಿಯ ಕೊಟ್ಟು ಸಲಹೋ ದೇವ ಅವಕಾಲಕು ಪವಮಾನ ನೀನೆ ಗತಿ 10 ಸಂಕಟ ಹರಿಪ ಶ್ರೀ ವೇಂಕಟೇಶನ ದೂತ ಭಂಟನೆಂದೆನಿಸೆನ್ನ ಸಂಕಟ ಹರಿಸಯ್ಯ11
--------------
ಉರಗಾದ್ರಿವಾಸವಿಠಲದಾಸರು