ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ಬಂದ ದೇವಕಿ ಕಂದ ಧ್ರುವ ದೇವ ಬಂದ ದೇವತಿಗಳ ಪ್ರಿಯ ಭುವನತ್ರಯಕಾಗಿಹ್ಯಾಶ್ರಯ 1 ಮಾಧವ ಮುರಾರಿ ಸಾಮಜ ವರದ ಸದಾ ಸಹಕಾರಿ 2 ಉರಗ ಶಯನ ಹರಿಕರುಣಾನಂz ಗರಡುವಾಹನ ಗೋಪಾಲ ಗೋವಿಂದ 3 ಸರ್ವಾನಂದ ಶ್ರೀ ಹರಿ ಸಿರಿಲೋಲ ಸಾರ್ವಭೌಮ ಸದಾ ಕೃಪಾಲ 4 ಲೇಸಿಲೆ ಹೊರೆವ ಮಹಿಪತಿ ಪ್ರಾಣೇಶ ಭಾಸ್ಕರ ಕೋಟಿ ಸುತೇಜ ಪ್ರಕಾಶ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೋಷ ದೂರಿಸೈಯ್ಯಾ ಎನಗೆ ನೀ ತೋಷವೀವುದಯ್ಯಾ ಪ ಆಸವ ಶ್ರೀತುಲಸೀವಾಸನಿಲಯ ಸ- ರ್ವೇಶಹರಿಯ ದುರ್ವಾಸ ವಿಠಲರಾಯ ಅ.ಪ. ರಾಘವ ರಘುಕುಲ ಸೋಮನ ಸದಯ ಸ- ರ್ವಾಘ ಹರಿದ ನಿಖಿಳಾಗಮಗಳೊಡೆಯ 1 ಯಾದವ ಯದುಕುಲ ತಿಲಕಾವ್ಯಯ ಮಧು- ಸೂದನ ತ್ರಿದಶನು ವೇದ್ಯದಾಸ ವಂದ್ಯಾ 2 ನರಹರಿಕರುಣಾರ್ಣವ ಶರಣರ ಗುರು ಕರುಣವಿರಿಸು ನರಸಿಂಹವಿಠಲರಾಯ 3
--------------
ನರಸಿಂಹವಿಠಲರು
ಯಾಕೆ ನಿನಗೆ ಮನವೆ ವ್ಯಥೆಯು ಎಷ್ಟು ಲೋಕನಾಯಕ ಶ್ರೀಲೋಲ ಲಕ್ಷ್ಮಯ್ಯಾ ರಮಣ ಶ್ರೀಕಪರೇಯಾ ನಿನ್ನನ್ನೇ ಸ್ಮರಿಸುವುದು ಬಿಟ್ಟೂ ಪ ಹಲವು ಹಂಬಲಿಸಿದರೇನು ಫಲಾ ವ್ಯರ್ಥಾ ಬಳಲುವದೊಂದೇ ಅಲ್ಲದೆ ಬಾಧೆಯಿಂದಾ ಅಜ ಬ್ರಹ್ಮಾಂಬರದ ವರ-----ಆರಾರಿಗ್ವಶನಲ್ಲಾ ನಳಿನಾನಾಭನಾ ದಿವ್ಯನಾಮಾ ಭಜನೆಯ ತೊರೆದು 1 ಹರಿಶ್ಚಂದ್ರಾ ನಳರಾಜಾ-------ದಶರಥ ಮೊದಲು ಪುರಾಕೃತ ಕರ್ಮಾದಿ ಭಂಗಾ ಬಡಲಿಲ್ಲೇನೋ ಅರಿತೂನೀ ಹೃದಯಾದಿ ಅನ್ಯಚಿಂತನೆ ಹಿಡಿದು ಪರಮಾತ್ಮ ಪರಬ್ರಹ್ಮನ ಪಾದಧ್ಯಾನವೇ ಬಿಟ್ಟು 2 ಧರೆಯೊಳಾಧಿಕನಾದ ಧೋರಿ 'ಹೊನ್ನವಿಠಲನ’ ಚರಣವೇ ಗತಿಯೆಂದು ಚಿತ್ತಾದಲೆ ಸ್ಥಿರವಾಗಿ ಪೂಜಿಸಿ ಸೇವೆಯನೆ ಮಾಡಿ ಪರಮಹರುಷದಿಂದ ಪಡೆಯಾದೆ ಹರಿಕರುಣಾ 3
--------------
ಹೆನ್ನೆರಂಗದಾಸರು
ಲಕ್ಷ್ಮೀ ವೆಂಕಟೇಶ ವಿಠಲ | ರಕ್ಷಿಸೋ ಇವಳಾ ಪ ವಿಶ್ವ ವ್ಯಾಪಕನೇ ಅ.ಪ. ಪುಟ್ಟಿ ಸತ್ಕುಲದಲ್ಲಿ | ತೊಟ್ಟು ಸತ್ಸಿದ್ಧಾಂತ ಇಷ್ಟ ಪಡುತಿಹಳಯ್ಯ | ಕಷ್ಟದಾಸತ್ವಾಇಷ್ಟ ಮೂರುತಿ ನೀನು | ತೈಜಸೀ ರೂಪದಲಿಸ್ಪಷ್ಟ ತೋರಿದ ಹರಿಯೆ | ಇತ್ತೆ ಉಪದೇಶಾ 1 ಮರುತ ಮತದಲಿ ದೀಕ್ಷೆ | ಹಿರಿಯರನು ಸರಣೆಯಲಿನಿರುತ ಆಸಕ್ತಿಯನು | ಕರುಣಿಸುತ ಭವದಾಶರಧಿಯನೆ ದಾಟಿಸುವ | ಮಾರ್ಗವನೆ ತೋರೊ ಹರಿಕರುಣಾಂಬುನಿಧಿಯೆಂದು | ಮೊರೆ ನಿನಗೆ ಇಡುವೇ 2 ಕಷ್ಟ ನಿಷ್ಠೂರಗಳ | ಸುಷ್ಠುಸಮತೆಲಿ ಉಂಬಶ್ರೇಷ್ಠ ಮತಿಯನೆ ಇತ್ತು | ರಕ್ಷಿಸೋ ಇವಳಾ |ಅಷ್ಟ ಸೌಭಾಗ್ಯಗಳ | ಕೊಟ್ಟು ಕಾಯಲಿ ಬೇಕೊಕೃಷ್ಣ ಮೂರುತಿ ಹರಿಯೆ | ಭಕ್ತ ವತ್ಸಲ್ಲಾ 3 ಪರಮಾರ್ಥ ಸಾಧನಕೆ | ಗುರು ಕರುಣಬೇಕೆಂಬವರಮತಿಯ ಕರುಣಿಸುತ | ಪೊರೆಯ ಬೇಕಿವಳಾಗರುಡ ಗಮನನೆ ದೇವ | ಸರ್ವಾಂತರಾತ್ಮಕನೆಕರುಣದಿಂ ಕೈ ಪಿಡಿದು | ಉದ್ಧರಿಸೋ ಇವಳಾ 4 ಪಾವಮಾನಿಯ ಪ್ರೀಯ | ಭಾವದಲಿ ಮೈದೋರಿಜೀವಿಯನು ಉದ್ಧರಿಸೋ | ದೇವ ದೇವೇಶಾಗೋವತ್ಸದನಿ ಕೇಳಿ | ಆಪು ಪೊರೆವಂತೆ ತೋರಿಗೋವಿದಾಂಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸಿರಿದೇವಿ ವರಬೇಗ ಕರುಣಿಸೊ ದಯದಿಂದ ಶರಣಾಗತ ಪರಿಪಾಲನೆಂಬಿ ಘನ ಬಿರುದಿಹದೊರೆ ನರಹರಿಕರುಣಾಕರ ಪ. ಕರಿರಾಜ ಮೊರೆಯಿಡುವ ಸ್ವರವ ಕೇಳುತಲಂದು ಸಿರಿಯೊಳಗುಸುರದೆ ಗರುಡನ ಪೆಗಲೇರಿ ಸರಸಿ ತಡಿಗೆ ಬಂದು ಕರಿಯನುದ್ಧರಿಸಿದಿ 1 ಘೋರ ಕಿಂಕರರಿದಿರು ಸಾರೆಜಾಮಿಳ ಭಯದಿ ನಾರಾಯಣನೆಂದು ಬೇಡಿದ ಮಾತ್ರದಿ ವಾರಿಜಭವಪಿತ ಪಾರಗಾಣಿಸಿದಿ 2 ತರಳ ಪ್ರಹ್ಲಾದನನು ಹಿರಣ್ಯಕನು ಬಾಧಿಸಲು ಹರಿ ನೀನೆ ಗತಿಯೆನುತಿರೆ ಕಂಭದಿ ಇರವ ತೋರಿ ಬಹು ಪರಿಯಲಿ ಸಲಹಿದಿ 3 ದುರುಳ ಸೀರೆಯ ಸೆಳೆಯೆ ಹರಿಕೃಷ್ಣ ಸಲಹೆನೆ ಸೀರೆಯ ಮಳೆ ಗರದಂದದಲಿತ್ತು ಪರಿಪಾಲಿಸಿದೆ 4 ಎನ್ನ ದುಷ್ಕøತದಿಂದ ನಿನ್ನ ನಾಮದ ಮಹಿಮೆ ಭಿನ್ನವಾಗುವದೆ ನಿನ್ನ ಪದಾಂಬುಜ ವನ್ನು ನಂಬಿದ ಮೇಲಿನ್ನುದಾಸೀನವೆ 5 ಪಾಕಶಾಸನನಘವ ನೀಕರಿಸಿ ಸಲಹಿದನೆ ಭೀಕರವಾಗದೆ ಸಾಕು ಸಾನುಭವ ಕೃಪಣ ದಯಾಕರ ಮೂರುತಿ 6 ಒಳಗೆ ನೀ ತಳಿಸುತಲಿ ಗಳಿಸಿ ಪಾಪಗಳೆನಗೆ ತಳಮಳಗೊಳಿಸುತ ಬಳಲಿಪದುಚಿತವೆ ಉಳುಹಿನ್ನಾದರು ನಳಿನನಾಭ ಹರಿ 7 ಬಡವ ಮಾನವನೊಬ್ಬ ಪಡೆಯ ತನ್ನವರನ್ನು ಕೆಡಲು ಬಿಡನು ಜಗದೊಡೆಯ ನೀ ಎನಗಿರೆ ತಡವ ಮಾಡಿ ಕಂಡ ಕಡೆಯಲಿ ಬಿಡುವುದೆ 8 ನಿನ್ನ ಕಥಾಮೃತಸಾರವನ್ನೆ ಶಿರದಿ ಧರಿಸಿ ಇನ್ನು ಬಳಲಿದರೆ ನಿನ್ನ ಘನತೆಗಿದು ಚೆನ್ನಾಗುವುದೆ ಪ್ರಸನ್ನ ಮುಖಾಂಬುಜ 9 ಮಾನಾಮಾನವ ತೊರೆದು ನಾನಾ ದೇಶದಿ ತಿರಿದು ಶ್ರೀನಿವಾಸ ನಿನ್ನಾನನ ದರುಶನ- ವನು ಮಾಡಿದ ಮೇಲೇನಿದು ತಾತ್ಸಾರ 10 ಆಶಾಪಾಶವ ಬಿಡಿಸಿ ಮನದಾಸೆಗಳ ಪೂರೈಸಿ ದಾಸದಾಸನೆಂಬೀ ಸೌಖ್ಯವನಿತ್ತು ಪೋಷಿಸು ಶೇಷಗಿರೀಶನೆ ತವಕದಿ 11
--------------
ತುಪಾಕಿ ವೆಂಕಟರಮಣಾಚಾರ್ಯ