ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಾದರೊಂದು ದಿನ ನಿಂದು ನೋಡುವೆ ನಿನ್ನ ಸುಂದರ ಪದಾಂಬುಜವ ಇಂದಿರೇಶ ಪ ಬಂದ ಸುಖ ದು:ಖಗಳ ಒಂದಾಗಿ ತಿಳಿಯುತಲಿ ತಂದೆ ಗೋವಿಂದ ಸಲಹೆಂದು ನಂಬಿರುವಾಗ ಅ.ಪ ಮಾ ಮನೋಹರಾ ನಿನ್ನ ನಾಮ ಭಜನೆಯ ಗೈದು ಕಾಮಿತಾರ್ಥಂಗಳನು ನಾ ಮರೆಯುತೇ ನಾಮಾಳ್ಪ ಕರ್ಮಗಳ ನೇಮದಿಂದಲಿ ಗೈದು ರಾಮಾರ್ಪಣಾ ಎಂದು ಪ್ರೇಮದಿಂದರ್ಪಿಸಲು 1 ಬಂದ ಅಭ್ಯಾಗತರಿಗೊಂದು ಪಿಡಿ ಅನ್ನವನು ಎಂದೀಯಲೀವೆಯೋ ಅಂದು ಹರಿದಿವಸ ಎಂದೀಯಲಾರೆಯೋ ಅಂದೆನಗುಪೋಷ್ಯವನು ಸಂದೇಹವಿಲ್ಲದೀಯೆಂದು ನಂಬಿರುವಾಗ2 ದೊರೆಯದಿಹ ವಸ್ತುಗಳು ಹರಿಸಮರ್ಪಣವೆಂಬೆ ದೊರೆತ ವಸ್ತುಗಳೆಲ್ಲ ಹರಿಕರುಣವೆಂಬೆ ಗರುಡವಾಹನ ನಿನ್ನ ಶರಣು ಹೊಕ್ಕಿರುವಾಗ ಕೊರತೆ ಏನಿಲ್ಲ ಮಾಂಗಿರಿ ರಂಗವಿಠಲ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತತ್ವವಿವೇಚನೆ ಅಂತರಂಗದ ಕದವು ತೆರೆಯಿತಿಂದು ಪ ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ಅ.ಪ ಏಸುದಿನವಾಯಿತೊ ಬೀಗಮುದ್ರೆಯ ಮಾಡಿ | ವಾಸವಾಗಿದ್ದರೋ ದುರುಳರಿಲ್ಲಿ || ಮೋಸವಾಯಿತು ಇಂದಿನ ತನಕ ತಮಸಿನ | ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ 1 ಹರಿಕರುಣವೆಂಬಂಥ ಕೀಲಿ ಕೈ ದೊರಕಿತು | ಗುರುಕರುಣವೆಂಬಂಥ ಶಕ್ತಿಯಿಂದ || ಪರಮ ಭಾಗವತರ ಸಹವಾಸದಲಿ ಪೋಗಿ | ಹರಿ ಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ 2 ಸುತ್ತಲಿದ್ದವರೆಲ್ಲ ಪಲಾಯನವಾದರು | ಭಕ್ತಿಕಕ್ಕಡವೆಂಬ ಜ್ಞಾನದೀಪ || ಜತ್ತಾಗಿ ಹಿಡಿಕೊಂಡು ದ್ವಾರದೊಳಗೆ ಪೊಕ್ಕೆ | ಎತ್ತನೋಡಿದರತ್ತ ಶೃಂಗಾರಸದನ 3 ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು | ಪರ ದಾರಿಗೆ ಪ್ರಾಣ ಜಯವಿಜಯರು || ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ | ಸರಸಿಜನಾಭನ ಅರಮನೆಯ ಸೊಬಗು 4 ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ | ರಮೆಧರೆಯರಿಂದಲಾಲಿಂಗಿತ್ವದಿ || ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ- | ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ 5
--------------
ವಿಜಯದಾಸ
ತಾನಾಗಿ ದೊರಕುವುದು ಹರಿದರುಶನ ಪ ಶ್ರೀನಾಥವಿಠಲನಲಿ ದೃಢಭಕ್ತಿವುಳ್ಳವಗೆ ಅ.ಪ ಅರುಣೀಯದೊಳೆದ್ದು ಹರಿಕೃಷ್ಣ ಎನುವವಗೆ ಹರಿಹರಿ ಹರಿ ಎಂದು ಸ್ನಾನಗೈವವಗೆ ಹರಿಯ ದ್ವಾದಶನಾಮ ಪಠಣೆಯಿಂಮಣಿವವಗೆ ಗರುಡವಾಹನ ಕೃಷ್ಣ ಗೋಪಾಲಯೆನುವವಗೆ1 ನಿತ್ಯಕರ್ಮವಗೈದು ಫಲವ ಬಯಸದ ಕತ್ರ್ಯವ್ಯಗಳ ಗೈದು ಫಲ ಕೃಷ್ಣಗರ್ಪಿಪ ನರಗೆ ಉತ್ಸಾಹದಿಂದ ಅಭ್ಯಾಗತರ ಪೂಜಿಪಗೆ ಸತ್ಯದೈವವು ಎಂದು ಗೋಸೇವೆ ಗೈವವಗೆ 2 ಕುಳಿತು ನಿಲುವೆಡೆಗಳೊಳು ಹರಿಕೃಷ್ಣ ಎನುವವಗೆ ಇಳೆಯೊಳಿಹ ನರರೆಲ್ಲ ಭ್ರಾತರೆಂದವಗೆ ಉಳಿವು ಅಳಿವುಗಳೆಲ್ಲ ಹರಿಕರುಣವೆಂಬವಗೆ ಜಲಜನಾಭನ ದಿವ್ಯ ನಾಮಗಳ ಭಜಿಸುವಗೆ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾತು ಶ್ರೀಹರಿ ಮಾತು ಬಳಿಸರೀಗ ಪ ಮಾತÀು ಕೇಳಿದರೆ ಪ್ರೀತಿಯಣ್ಮದು ಸೋತು ನಡೆದರೆ ಕಾತರ ಪೋಪುದು ರೀತಿ ನೀತಿ ಬೆಳಗೆ 1 ಮದನನದು ತಾಪವು ಕನಸಿನೊಳಿರದು ಮನದಘ ಮಹಿಮಹಿಮನ ಮನೆ ಯೆನಿಪುದು ಜನನ ಮರಣವಿಲ್ಲಾ 2 ನರಸಿಂಹ ವಿಠಲನ ಕರುಣವೆ ಸ್ಥಿರವು ದುರಿತಗಣಗಳು ಸರಿದೋಡುವವು ಹರಿಕರುಣವ ಒಲವು3
--------------
ನರಸಿಂಹವಿಠಲರು
ಸ್ಮರಿಸುವುದು ಗುರು ಸಂತತಿಯನೂ ಪ ನಿತ್ಯ | ಗುರುವರ್ಯ ಸಂತತಿಯ ಹರಿಕರುಣವೂ ದೊರಕಿ | ಸರ್ವ ಆಮಯ ಹರವು ಪರಮ ಪುರುಷಾರ್ಥಕ್ಕೆ ವರ ಮಾರ್ಗವೆಂದೆನಿಪ ಸದ್ಭಕ್ತಿ ಜ್ಞಾನಪ್ರದವು ಅ.ಪ. ಆದಿ ಮೂರುತಿ ಹಂಸ | ಪಾದಾನುವರ್ತಿ ವಿಧಿಆದಿವಿಧಿ ಸುತರು ಸನ | ಕಾದಿ ಪದ ಪದ್ಮಗಳಮೋದದಿಂ ಭಜಿಪ ದೂ | ರ್ವಾಸ ತತ್ಕರಜ ಸುಜ್ಞಾನ ನಿಧಿಗಳ ಪಾದವ ||ಆದರದಿ ಗರುಡವಾಹನ ತೀರ್ಥ ಕೈವಲ್ಯರಾದರಿಸಿ ಜ್ಞಾನೇಶ ತತ್ಕರಜ ಪರತೀರ್ಥಪಾದಾಬ್ಜ ಸೇವಿಸುವ ಸತ್ಯ ಪ್ರಾಜ್ಞ ಕರಜ ಪ್ರಾಜ್ಞ ತೀರ್ಥರು ಯತಿಗಳ 1 ಅಚ್ಯುತ ಮಾಧವ ತೀರ್ಥ | ಆಕ್ಷೋಭ್ಯ ತೀರ್ಥರೂತತ್ಕರಜ ಪರವಾದಿ | ಗಜಸಿಂಹ ಜಯತೀರ್ಥಯತಿಗಳಾ ವಿದ್ಯಾಧಿ | ರಾಜ ಸತ್ಕವೀಂದ್ರರು ವಾಗೀಶ ರಾಮಚಂದ್ರ 2 ಅತ್ಯಂತ ಮಹಿಮರೆನೆ | ವಿಭುದೇಂದ್ರ ವಿದ್ಯೆನಿಧಿಮತ್ತವರ ಕರಜಾತ | ರಘುನಾಥ ರಘುವರ್ಯಭೃತ್ಯ ವೇದವ್ಯಾಸ | ತೀರ್ಥ ವಿದ್ಯಾಧೀಶ ವೇದನಿಧಿ ಸತ್ಯವ್ರತರ ||ಸತ್ಯನಿಧಿ ಸತ್ಯನಾಥಾಖ್ಯ ಸತ್ಯಾಭಿನವಸತ್ಯ ಪೂರ್ಣಾಖ್ಯ ಯತಿ | ಸತ್ಯ ವಿಜಯಾರ್ಯ ವರಸತ್ಯ ಪ್ರಿಯ ತೀರ್ಥಾಖ್ಯ | ಸತ್ಯ ಬೋಧಾಖ್ಯಮಹ ಸತ್ಯ ಸಂಧಾಖ್ಯ ಮುನಿಯ 3 ಸತ್ಯವರ ಸತ್ಯಧರ್ಮಾಖ್ಯ ಸತ್ಯಸಂಕಲ್ಪಸತ್ಯ ಸಂತುಷ್ಟಾಖ್ಯ | ಸತ್ಯ ಪರೆಯಣ ತೀರ್ಥ ಸತ್ಯ ಕಾಮಾಖ್ಯ ಯತಿ | ಸತ್ಯೇಷ್ಟ ಕರಜರೆನೆ ಸತ್ಯ ಪರಾಕ್ರಮ ತೀರ್ಥರ || ಸತ್ಯ ವೀರಾಖ್ಯಯತಿ | ಸತ್ಯಧೀರಾಖ್ಯರಂತತ್ಕರಜ ಶಿರಿಸತ್ಯ | ಜ್ಞಾನಾಖ್ಯ ಅಗ್ನ್ಯಂಶದುಸ್ತಿಮಿರ ಮಾಯ್ಮತದ | ಮಾರ್ತೆಂಡರೆಂದೆನಿಪ ಶಿರ ಸತ್ಯ ಧ್ಯಾನಾಖ್ಯರ4 ನಿತ್ಯ ಗುರು ಗೋವಿಂದ ವಿಠಲ ತಾ ಪೊರೆವ ಸತ್ಯ 5
--------------
ಗುರುಗೋವಿಂದವಿಠಲರು
ಹೊಂದಿ ಬದುಕಿರೋ ಮನವೆ ಇಂದಿರೇಶನ ಎಂದೆಂದಗಲದೆ ದ್ವಂದ್ವ ಶ್ರೀಪಾದವ ಹೊಂದಿ ಸುಖಿಯಾಗೋ ತಂದೆ ಸರ್ವೇಶನ ಧ್ರುವ ಮುಚ್ಚಿಕೊಂಡು ಮುಕುತಿ ಸಾಧನ ಹುಚ್ಚುಗೊಂಡು ಸಚ್ಚಿದಾನಂದನ ಬಚ್ಚಿಟ್ಟುಕೊಂಡು ನಿಜ ನೆಚ್ಚಿಕೊಂಡಿರೋ ನೀ ಅಚ್ಯುತಾನಂತನ 1 ಹರಿಚರಣ ಕಮಲವ ಕಂಡು ಹರಿನಿಜಧ್ಯಾನ ನೆಲೆಗೊಂಡು ಹರಿಕರುಣವ ಪಡಕೊಂಡು ಹರಿನಾಮಾಮೃತ ಸವಿದುಂಡು 2 ಶ್ರೀಹರಿಸೇವೆ ಮಾಡಿಕೊಂಡು ಇಹಪರ ಸುಖ ಸೂರೆಗೊಂಡು ಬಾಹ್ಯಾಂತ್ರಪೂರ್ಣ ಮನಗಂಡು ಮಹಿಪತಿ ಸ್ವಾಮಿ ವಾಲ್ವೈಸಿಕೊಂಡು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವ್ಯಾಪಾರವೆನಗಾಯಿತುಶ್ರೀಪತಿಯ ಪಾದಾರವಿಂದ ಸೇವೆಯೆಂಬ ಪಹರಿಕರುಣವೆಂಬಂಗಿಗುರುಕರುಣಮುಂಡಾಸುಹರಿದಾಸರ ದಯವೆಂಬ ಒಲ್ಲಿ ||ಪರಮಪಾಪಗಳೆಂಬ ಪಾಪೋಸವನೆ ಮೆಟ್ಟಿದುರುಳಾತ್ಮರಾದವರ ಎದೆ ಮೇಲೆ ನಡೆವಂಥ 1ಬಿಳಿಯ ಕಾಗದ ಹೃದಯ ಬಾಯಿ ಕಲಮದಾನಿನಾಲಗೆಯೆಂಬ ಲೆಕ್ಕಣಿಕೆ ||ಶ್ರೀಲೋಲನ ದಿವ್ಯನಾಮವೆಂಬುವ ಲೆಕ್ಕಶೀಲದಿ ಬರೆದು ಶ್ರೀಹರಿಗೆ ಒಪ್ಪಿಸುವಂಥ 2ನುಡಿನುಡಿಗಾನಂದ ಬಾಷ್ಪ ರೋಮಾಂಚನಮುಡುಪಿನೊಳಗೆ ಇಟ್ಟ ಕೈಜೀತವು ||ಕಡಿಮೆ ಸಂಬಳಕೆಲ್ಲ ಮುಕ್ತಿಸಾಧನವನ್ನುಕೊಡುವ ತೆರನಂತೆ ಚೀಟಿ ಬರೆಸಿಕೊಟ್ಟ 3ಹಿಂದಿನ ಸಂಸಾರ ಆಗಮನದ ಭಯಎಂದೆಂದಿಗದರ ಚಿಂತೆಯು ಬಿಟ್ಟಿತು ||ಮುಂದಿನ ಸಂಸಾರ ಸ್ಥಾನ ಭಾರಕೆಲ್ಲಸಂದಾಯವನು ಮಾಡಿ ಕತಬಿ ಹರಿಸಿಕೊಟ್ಟ 4ಕಂಡಕಂಡವರ ಕಾಲುಗಳಿಗೆರಗಿ ನನ್ನಮಂಡೆದಡ್ಡುಗಟ್ಟಿ ಬಳಲಿದೆನೊ ||ಪುಂಡರೀಕಾಕ್ಷಶ್ರೀಪುರಂದರವಿಠಲನುಕಂಡು ವೀಳೆಯ ಕೊಟ್ಟು ತನ್ನ ಸೇವೆಗೆ ಇಟ್ಟ 5
--------------
ಪುರಂದರದಾಸರು