ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀಚನಲ್ಲವೇ ಇವನು ನೀಚನಲ್ಲವೇ ಪ ಕೀಚಕಾರಿಪ್ರಿಯನ ಗುಣವ ಯೋಚಿಸದಲೆ ಯಾಚಿಸುವÀನು ಅ.ಪ. ಶ್ರೀಕಳತ್ರನಂಘ್ರಿ ಕಮಲವೇಕಚಿತ್ತದಲ್ಲಿ ಮನೋ ವ್ಯಾಕುಲಗಳ ಬಿಟ್ಟು ಸುಖೋದ್ರೇಕದಿಂದ ಭಜಿಸದವನು 1 ಲೋಕವಾರ್ತೆಗಳಲಿ ಏಡ ಮೂಕರೆನಿಸಿ ವಿಷಯಗಳವ ಲೋಕಿಸದಲೆ ಶ್ರೀಶಗಿವು ಪ್ರತೀಕವೆಂದು ತಿಳಿಯದವನು 2 ಜನನಿ ಜನಕರಂತೆ ಜನಾರ್ದನನು ಸಲಹುತಿರಲು ಬಿಟ್ಟು ಧನಿಕರ ಮನೆಮನೆಗಳರಸಿ ಶುನಕನಂತೆ ತಿರುಗುವವನು 3 ಹರಿಕಥಾಮೃತವ ಬಿಟ್ಟು ನರ ಚರಿತ್ರೆಯಿಂದ ದ ರ್ದುರಗಳಂತೆ ಹರಟೆ ದಿವಸ ಬರಿದೆ ಕಳೆಯುತಿಪ್ಪ ಮನುಜ4 ಕರ್ಮ ತೊರೆದು ಪರರ ಗೃಹಗಳಲ್ಲಿ ಸಂಚರಿಸುತ ನಿಂದಿಸುವ ಮನುಜ5 ಬಹಳ ದ್ರವ್ಯದಿಂದ ಗರುಡ ವಾಹನನಂಘ್ರಿ ಭಜಿಸಿ ಅನು ಗ್ರಹವ ಮಾಡು ಎಂದು ಬೇಡಿ ಐಹಿಕಸುಖವ ಬಯಸುವವನು 6 ಕರಣ ಜನ್ಯ ಪುಣ್ಯಪಾಪವೆರಡು ಹರಿಯಧೀನವೆಂದು ಸ್ಮರಿಸುತಲತಿ ಭಕುತಿಯಿಂದ ಹರುಷಪಡದಲಿಪ್ಪ ಮನುಜ 7 ಜೀವನ ಕರ್ತೃತ್ವ ಬಿಟ್ಟು ದೇವನೊಬ್ಬ ಕರ್ತೃ ರಮಾ ದೇವಿ ಮೊದಲುಗೊಂಡು ಹರಿಯ ಸೇವಕರೆಂದರಿಯದವನು 8 ವಾತಜನಕನೆನಿಪ ಜಗನ್ನಾಥವಿಠ್ಠಲನ ಪದಾಬ್ಜ ಭವ ವೈತರಣಿಯ ದಾಟದವನು 9
--------------
ಜಗನ್ನಾಥದಾಸರು
ಬದುಕಿದೆನು ಬದುಕಿದೆನು ಭವದುರಿತ ಹಿಂಗಿತುಪದುಮನಾಭನ ಪಾದದೊಲಿಮೆ ಎನಗಾಯಿತು ಪಹರಿಯ ತೀರ್ಥ ಪ್ರಸಾದವು ಎನಗೆ ದೊರೆಕಿತು |ಹರಿಕಥಾಮೃತವೆನ್ನ ಕಿವಿಗೊದಗಿತು ||ಹರಿದಾಸರುಗಳೆನ್ನ ಬಂಧು ಬಳಗವಾದರು |ಹರಿಯ ಶ್ರೀ ಮುದ್ರೆಯೆನಗೆ ಆಭರಣವಾಯ್ತು 1ಮುಕ್ತರಾದರು ಎನ್ನ ನೂರೊಂದು ಕುಲದವರು |ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು ||ಸುಕೃತಿದೇಹಕ್ಕೆನ್ನ ಮನವು ತಾನೆಳಸಿತ್ತು |ಅಕಳಂಕ ಹರಿನಾಮ ದಿವ್ಯಕೊದಗಿತ್ತು 2ಇಂದೆನ್ನ ಸಂತತಿಗೆ ಸಕಲ ಸಂಪದವಾಯ್ತು |ಮುಂದೆನ್ನ ಜನ್ನ ಸಾಫಲ್ಯವಾಯ್ತು ||ತಂದೆ ಶ್ರೀಹರಿಪುರಂದರವಿಠಲ ರಾಯನೇ |ಬಂದೆನ್ನ ಹೃದಯದೊಳು ನೆಲೆಯಾಗಿ ನಿಂತ 3
--------------
ಪುರಂದರದಾಸರು